By Village Missionary Movement
Thursday, 22-Apr-2021ಧೈನಂದಿನ ಧ್ಯಾನ(Kannada) – 22.04.2021
ಮಾಡಿದ್ದು ಹೇಳಲ್ಪಡುತ್ತದೆ
"ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವದೋ ಅಲ್ಲಲ್ಲಿ ಈಕೆ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ ಹೇಳುವರೆಂದು ನಿಮಗೆಸತ್ಯವಾಗಿ ಹೇಳುತ್ತೇನೆ ಎಂದು ಹೇಳಿದನು...." - ಮತ್ತಾಯ 26:13
1743 ನೇ ವರ್ಷ ಡೇವಿಡ್ ಬ್ರೆನಾಯ್ಡ್ ರವರು ತನ್ನ 25ನೇ ವಯಸ್ಸಿನಲ್ಲಿ ಸ್ಕ್ಯಾಟ್ಲ್ಯಾಂಡ್ ಮಿಷಿನರಿ ಸಂಘದಿಂದ ಅಮೆರಿಕಾಗೆ ಮಿಷಿನರಿಯಾಗಿ ಕಳುಹಿಸಲ್ಪಟ್ಟರು. ಆಂಗ್ಲೋ ಇಂಡಿಯನ್ ರ ಮಧ್ಯದಲ್ಲಿ ರಾತ್ರಿ-ಹಗಲು ಸೇವೆ ಮಾಡಿದರು. ಮೊಣಕಾಲಿನಲ್ಲೇ ಎಷ್ಟೋ ರಾತ್ರಿಗಳನ್ನು ಕಳೆದರು. ಕೆಲವು ದಿನಗಳ ನಂತರ ಅವರು T.B. ರೋಗದಿಂದ ಬಾಧಿಸಲ್ಪಟ್ಟರು. ಇದರ ನಿಮಿತ್ತವಾಗಿ ಆಗಾಗ ರಕ್ತ ವಾಂತಿ ಮಾಡುತ್ತಾ, ಬಹಳ ಬಲಹೀನರಾಗಿದ್ದಾಗಲೂ ಅವರು ತನ್ನೊಳಗಿದ್ದ, ಬಲವಾದ ಪರಿಶುದ್ಧಾತ್ಮದಿಂದ ಅನೇಕ ಆಂಗ್ಲೋ ಇಂಡಿಯನ್ ರನ್ನು ಕರ್ತನ ಪ್ರೀತಿಯ ಕಡೆಗೆ ಕರೆತಂದ ಪಾತ್ರೆಯಾಗಿ ಕಾರ್ಯ ನಿರ್ವಹಿಸಿದರು. ಅವರ ಸೇವೆ ಕೇವಲ 4 ವರ್ಷಗಳೇ. ಅವರು ತನ್ನ 29 ನೇ ವಯಸ್ಸಿನಲ್ಲಿ ಕರ್ತನಲ್ಲಿ ನಿದ್ರಿಸಿದರೂ ಅವರ ಸೇವೆಯನ್ನು, ಅವರನ್ನು ಇಂದಿಗೂ ನೆನೆಸಿಕೊಳ್ಳುವಂತೆ ಅವರ ಜೀವನವಿತ್ತು. ಅವರು ಬರೆದಿರುವ ಡೈರಿಯಲ್ಲಿದ್ದ ಕಾರ್ಯಗಳನ್ನೆಲ್ಲ ಕೂಡಿಸಿ ಹೊರಬಂದ ಪುಸ್ತಕ ಇಂದಿನವರೆಗೂ ಅನೇಕರನ್ನು ತಟ್ಟಿ ಎಬ್ಬಿಸುತ್ತಲೇ ಇದೆ. ಅದರ ಮೂಲಕ ಅನೇಕರು ಪ್ರಾರ್ಥಿಸಲು ತಮ್ಮನ್ನು ಒಪ್ಪಿಸಿಕೊಟ್ಟರು, ಸೇವೆಯನ್ನು ಉತ್ಸಾಹದಿಂದ ಮಾಡಲು ಪ್ರಾರಂಭಿಸಿದವರು ಅನೇಕಾನೇಕ.
ಪರಿಶುದ್ಧ ಗ್ರಂಥದಲ್ಲಿ ಒಂದು ಸ್ತ್ರೀ ಬಹು ಬೆಲೆಯುಳ್ಳ ಸುಗಂಧ ತೈಲದ ಭರಣಿಯನ್ನು ತೆಗೆದುಕೊಂಡು ಬಂದು, ಯೇಸುಕ್ರಿಸ್ತನ ತಲೆಯ ಮೇಲೆ ಹೊಯಿದಳು. ಆಗ ನಮ್ಮ ದೇವರಾದ ಯೇಸುಕ್ರಿಸ್ತನು ಹೀಗೆ ಹೇಳುತ್ತಾರೆ " ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವದೋ ಅಲ್ಲಲ್ಲಿ ಈಕೆ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ ಹೇಳುವರೆಂದು" ನಿಮಗೆ ಸತ್ಯವಾಗಿ ಹೇಳುತ್ತೇನೆ ಎಂದು ಹೇಳಿದನು.
ಇದನ್ನು ಓದುತ್ತಿರುವ ನನ್ನ ಪ್ರಿಯರೇ! ಡೇವಿಡ್ ಬ್ರೆನಾಯ್ಡ್ ಲೋಕದಲ್ಲಿ ಸೇವೆ ಮಾಡಿದ ದಿನಗಳು ಬಹಳ ಕಡಿಮೆ. ಆದರೆ ಅವರ ಸೇವೆಯ ಬಗ್ಗೆ ಇನ್ನೂ ಅನೇಕರಿಗೆ ಹೇಳಲ್ಪಡುವಂತ ಅವರ ಜೀವನ ಚರಿತ್ರೆಯಿದೆ. ಅವರ ಜೀವನ ಇಂದಿಗೂ ಅನೇಕ ಯೌವನಸ್ಥರನ್ನು ಸೇವೆಗೆ ಒಪ್ಪಿಸಿ ಕೊಡುವಂತೆ ಸವಾಲಾಗಿದೆ. ಅವರು ಜೀವಿಸಿದ ಜೀವನ ಇಂದಿಗೂ ಕ್ರೈಸ್ತವ್ಯದಲ್ಲಿ ಮಾತನಾಡಲ್ಪಡುತ್ತಿದೆ. ಸುಗಂಧ ತೈಲವನ್ನು ಸುರಿದ ಸ್ತ್ರೀಯ ಬಗ್ಗೆ ಅನೇಕ ಸಾವಿರಾರು ವರ್ಷಗಳಾಗಿದ್ದರೂ ನಾವು ಇಂದಿಗೂ ಮಾತನಾಡುತ್ತಿದ್ದೇವೆ. ನಮ್ಮ ಜೀವನ, ನಮ್ಮ ಕಾರ್ಯಗಳು ಮತ್ತೊಬ್ಬರಿಗೆ ಪ್ರಯೋಜನವನ್ನುಂಟು ಮಾಡುವಂತೆ ಇರಲಿ. ಈ ಲೋಕದಲ್ಲಿರುವ ಮನುಷ್ಯರಿಂದ ನಾವು ಮಾತನಾಡಲ್ಪಡದೇ ಹೋದರೂ, ಪರಲೋಕದಲ್ಲಿ ನಮ್ಮ ದೇವರಿಂದ ಹೇಳಲ್ಪಡುತ್ತದೆ.
- ಪೊನ್ ಶೇಖರ್
ಪ್ರಾರ್ಥನಾ ಅಂಶ:-
ಮೋಕ್ಷ ಪ್ರಯಾಣ ದೈನಂದಿನ ಧ್ಯಾನ ಪತ್ರಿಕೆಯನ್ನು ಪ್ರತೀ ತಿಂಗಳು ಮುದ್ರಿಸುವುದಕ್ಕೂ, ಹೊರಪಡಿಸುವುದಕ್ಕೂ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482