Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.08.2024
Share:

By Village Missionary Movement

Monday, 05-Aug-2024

ಧೈನಂದಿನ ಧ್ಯಾನ(Kannada) – 05.08.2024

 

ತಗ್ಗಿಸಿಕೊಳ್ಳುವುದರಿಂದಾಗುವ ಪ್ರಯೋಜನಗಳು

 

"ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು" - 1 ಪೇತ್ರ 5:6

  

ಮಂಗವೊಂದು ಕೆಲಸ ಕೇಳಲು ಒಬ್ಬ ವ್ಯಕ್ತಿಯ ಬಳಿಗೆ ಹೋಗಿ, "ನೀವು ಕೊಡುವ ಯಾವ ಕೆಲಸವನ್ನಾದರೂ ನೀವು ಹೇಳುವ ಹಾಗೆ ಮಾಡುತ್ತೇನೆ" ಎಂದಿತು. ತಕ್ಷಣ ಆ ವ್ಯಕ್ತಿ ಕೋತಿಗೆ, "ಒಂದು ಬಾಳೆಹಣ್ಣು ಕೊಟ್ಟು ನಾನು ಸ್ನಾನ ಮುಗಿಸಿ ಬರುವವರೆಗೆ ಇಟ್ಟುಕೊಂಡಿರು. ನಂತರ ನಾನು ನಿನಗೆ ಒಳ್ಳೆಯ ಕೆಲಸ ಕೊಡುತ್ತೇನೆ" ಎಂದು ಹೇಳಿ ಸ್ನಾನಕ್ಕೆ ಹೋದನು. ಹೋದವನು ಮತ್ತೆ ಬರುತ್ತಾನೆ, ಬರುತ್ತಾನೆ ಎಂದು ಕಾದು ಕಾದು ಸುಸ್ತಾಯಿತು ಕೋತಿ. ಮಂಗಗಳಿಗೆ ಬಾಳೆಹಣ್ಣು ಎಂದರೆ ತುಂಬಾ ಇಷ್ಟ ಅಲ್ವಾ? ಅವನು ಬರುವುದು ಆಲಸ್ಯವಾದದ್ದರಿಂದ ಬಾಳೆಹಣ್ಣನ್ನು ಸುಲಿದು ಕೆಲಸವೂ ಬೇಡ ಏನೂ ಬೇಡ ಎಂದು ಬಾಳೆಹಣ್ಣು ಸುಲಿದು ತಿಂದು ಓಡಿ ಹೋಯಿತು.

 

ಯೇಸು ಕ್ರಿಸ್ತನು ನಮಗೆ ಒಳ್ಳೆಯತನ, ಸೌಕರ್ಯ, ಶ್ರೇಷ್ಠತೆ, ಉನ್ನತಿ ಮತ್ತು ಇನ್ನೂ ಅನೇಕ ಆಶೀರ್ವಾದಗಳನ್ನು ನೀಡಲು ಸಮರ್ಥರಾಗಿದ್ದಾರೆ. ಆದರೆ ಆತನ ಬಲವಾದ ಹಸ್ತಕ್ಕೆ ನಮ್ಮನ್ನು ನಾವು ಒಪ್ಪಿಸಬೇಕು ಮತ್ತು ಅವರು ಕೊಡುವವರೆಗೂ ತಾಳ್ಮೆಯಿಂದಿರಬೇಕು ಎಂಬುದು ಅವರ ಆಜ್ಞೆಯಾಗಿದೆ. ಆದರೆ ಹೆಚ್ಚಿನ ಜನರು ಅದನ್ನು ಪಡೆಯುವವರೆಗೂ ತಾಳ್ಮೆಯಿಂದ ಇರುವುದಿಲ್ಲ.

  

ಇಸ್ರಾಯೇಲ್ ಜನರು ದೇವರ ಕೋಪದಿಂದ ನಾಶವಾಗುವುದನ್ನು ನಾವು ನೋಡುತ್ತೇವೆ. ದೇವರು ಇಸ್ರಾಯೇಲ್ಯರನ್ನು ಅಪರಿಚಿತರ ಕೈಗೆ ಒಪ್ಪಿಸಿಕೊಟ್ಟಿದ್ದು ಯಾವಾಗ? ಅವರು ತಮ್ಮ ಪ್ರವಾದಿಗಳ ಮೂಲಕ ಹೇಳಲ್ಪಟ್ಟ ದೇವರ ಮಾತಿಗೆ ವಿಧೇಯರಾಗದೇ ಹೋದದ್ದರಿಂದಲೇ! ನಾವು ದೇವರನ್ನು ಮೆಚ್ಚಿಸಲು ಬಯಸಿದರೆ, ನಮ್ಮ ದೇಹದ ಎಲ್ಲಾ ಅಂಗಗಳನ್ನು ಪಳಗಿಸಲು ಮರೆಯಬಾರದು. ಇಸ್ರಾಯೇಲ್ಯರು ತಮ್ಮ ಬಾಯಿಯ ಮಾತುಗಳಿಂದ ಕೋಪವನ್ನುಂಟು ಮಾಡಿದರು.

  

ಯೆರೆಮಿಯ 14:10 ಹೇಳುವಂತೆ ಇವರು [ನನ್ನನ್ನು ಪ್ರಯಾಣಿಕನು ಎಂದ] ಹಾಗೆಯೇ ಅಲೆಯುವದಕ್ಕೆ ಇಷ್ಟಪಟ್ಟಿದ್ದಾರೆ, ಕಾಲನ್ನು ಹಿಂದೆಗೆಯಲಿಲ್ಲ; ಆದಕಾರಣ ಯೆಹೋವನಾದ ನಾನು ಇವರನ್ನು ಕಟಾಕ್ಷಿಸೆನು; ಈಗಲೇ ಇವರ ಅಪರಾಧವನ್ನು ಮನಸ್ಸಿಗೆ ತಂದುಕೊಂಡು ಇವರ ಪಾಪಗಳಿಗೆ ದಂಡನೆಯನ್ನು ವಿಧಿಸುವೆನು ಎಂದು ಹೇಳಿದ್ದಾರೆ.

 

ತಗ್ಗಿಸಿಕೊಂಡು ನಡೆಯಬೇಕಾದ ಹಾಗರಳು ತಗ್ಗದೆ ಹೋದುದರಿಂದ ಸಾರಳು ಅವಳನ್ನು ಕಠಿಣವಾಗಿ ನಡೆಸಿಕೊಳ್ಳಬೇಕಾಯಿತು. ಆದ್ದರಿಂದ ಹಾಗರಳು ಓಡಲು ಪ್ರಾರಂಭಿಸಿದಳು. ಆದರೆ ದೇವದೂತನು ಅವಳನ್ನು ನೋಡಿ , ನಿನ್ನ ಯಜಮಾನಿಯ ಬಳಿಗೆ ಹಿಂತಿರುಗಿ ಹೋಗಿ ಅವಳ ಕೈಕೆಳಗೆ ತಗ್ಗಿಸಿಕೊಂಡಿರು ಎಂದರು. ಆದರೆ ಕೊನೆಯವರೆಗೂ ಅವಳು ತನ್ನನ್ನು ತಗ್ಗಿಸಿಕೊಳ್ಳದ ಕಾರಣ ಆಕೆಯನ್ನು ಹಾಗೂ ಮಗುವನ್ನು ಓಡಿಸಿದರು.

 

ನನ್ನ ಪ್ರೀತಿಯ ದೇವರ ಮಕ್ಕಳೇ! ಯಾವ ಯಾವ ಕಾರ್ಯಗಳನ್ನು ದೇವರ ಇಚ್ಛೆಯ ಪ್ರಕಾರ ಮಾಡದೇ ನಿಮ್ಮ ಇಷ್ಟದಂತೆ ಮಾಡುತ್ತಿದ್ದೀರಿ. ಇದು ತಗ್ಗಿಸಿಕೊಳ್ಳುವಿಕೆ ಇಲ್ಲದ್ದನ್ನು ತೋರಿಸುತ್ತದೆ. ತಗ್ಗಿಸಿಕೊಳ್ಳದವರ ಸ್ಥಿತಿ ಹಾಗರಳ ಹಾಗೆ ಶೋಚನೀಯವಾಗಿ ಇರುತ್ತದೆ. ಆದ್ದರಿಂದ, ದೇವರ ತ್ರಾಣವುಳ್ಳ ಹಸ್ತದ ಕೆಳಗೆ ತಗ್ಗಿಸಿಕೊಳ್ಳೋಣ. ಪ್ರಯೋಜನಗಳನ್ನು ಪಡೆದುಕೊಳ್ಳೋಣ. ಆಮೆನ್!

- Pr. S.L. ಇಮ್ಮಾನುವೇಲ್

 

ಪ್ರಾರ್ಥನಾ ಅಂಶ:

ಶಿಬಿರಕ್ಕೆ ಅಗತ್ಯವಾಗಿರುವ ನೀರು, ಬಿಸ್ಕತ್ತು ಮತ್ತು ಆಹಾರ ಇವುಗಳ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet