Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.08.2024
Share:

By Village Missionary Movement

Tuesday, 06-Aug-2024

ಧೈನಂದಿನ ಧ್ಯಾನ(Kannada) – 06.08.2024

 

ಶೋಧನೆ 

 

"ಯಾವನು ಯೆಹೋವನಲ್ಲಿ ನಂಬಿಕೆಯಿಟ್ಟಿದ್ದಾನೋ ಯಾವನಿಗೆ ಯೆಹೋವನು ಭರವಸವಾಗಿದ್ದಾನೋ ಅವನು ಧನ್ಯನು…" - ಯೆರೆಮಿಾಯ 17:7

 

ಶಾಲೆಯಲ್ಲಿ ಉತ್ತಮ ಓಟಗಾರ ಎಂಬ ಖ್ಯಾತಿ ಪಡೆದಿದ್ದನು ರಾಜನ್. ಅವನು ಶಾಲೆಗೆ ಅನೇಕ ಉಡುಗೊರೆಗಳನ್ನು ತಂದನು. ಅದೇ ಶಾಲೆಯಲ್ಲಿ ಪೀಟರ್ ಎಂಬ ಹೊಸ ವಿದ್ಯಾರ್ಥಿ ಸೇರಿಕೊಂಡ. ಪೀಟರ್ ಯಾವುದೇ ಸ್ಪರ್ಧೆಗೆ ಹೋದರೂ ಮೊದಲು ಮೊಣಕಾಲೂರಿ ಪ್ರಾರ್ಥಿಸಿ ನಂತರವೇ ಹೋಗುತ್ತಿದ್ದ. ಮೊದಲ ಬಹುಮಾನವನ್ನು ಗೆದ್ದು ಬಿಡುತ್ತಿದ್ದ. ರಾಜನ್ ಎರಡು ಬಾರಿ ಪೀಟರ್ ಎದುರು ಸೋತುಹೋದ. ಇದರಿಂದ ಕೋಪಗೊಂಡ ರಾಜನ್, "ಈ ಬಾರಿಯ ಟ್ರೋಫಿ ನನ್ನದೇ" ಎಂದು ಕೂಗಿದನು. ಪಂದ್ಯದ ದಿನ ಮೊದಲು ಓಡಿದವನು ರಾಜನ್. ಆದರೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗೆದ್ದವರು ಪೀಟರ್ ಎಂದು ಅವನ ಹೆಸರನ್ನು ಘೋಷಿಸಿದಾಗ ರಾಜನ್ ಆಘಾತಕ್ಕೊಳಗಾದನು. ಕಾರಣ, ತನಗೆ ಗುರುತು ಮಾಡಿದ ಎರಡನೇ ಟ್ರ್ಯಾಕ್‌ ಅನ್ನು ಬಿಟ್ಟು ನಾಲ್ಕನೇ ಟ್ರ್ಯಾಕ್‌ನಲ್ಲಿ ಓಡಿ ಮೋಸ ಮಾಡಿ ಗೆಲ್ಲಲು ಯೋಚಿಸಿದ್ದ ರಾಜನ್, ನಾಚಿಕೆಯಿಂದ ತಲೆ ತಗ್ಗಿಸುವಂತಾಯಿತು.  

 

ಸತ್ಯವೇದದಲ್ಲಿಯೂ ಸಹ, ತನ್ನನ್ನು ಸಮೃದ್ಧಿಯಾದ ಕಾನಾನ್ ದೇಶಕ್ಕೆ ಕರೆತಂದ ದೇವರು, ನಿಶ್ಚಯವಾಗಿಯೂ ಬರಗಾಲದಲ್ಲಿಯೂ ಪೋಷಿಸುತ್ತಾರೆ ಎಂಬ ನಂಬಿಕೆ ಇಲ್ಲದೆ ಹೋದದ್ದರಿಂದಲೇ ಅಬ್ರಹಾಮನು ಐಗುಪ್ತಕ್ಕೆ ಹೋಗಿ ಅನೇಕ ಶೋಧನೆಗಳಿಗೆ ಒಳಗಾದನು. ಹಾಗೆಯೇ ಮೋಶೆಯು ಲಕ್ಷಾಂತರ ಜನರನ್ನು ಐಗುಪ್ತದಿಂದ ಹೊರತಂದು ಕಾನಾನ್‌ಗೆ ಪ್ರವೇಶಿಸುವ ಮೊದಲು, ಅವರು ಬಂಡೆಯನ್ನು ನೋಡಿ ಮಾತನಾಡಬೇಕಾದ ದೇವರ ಆಜ್ಞೆಯನ್ನು ಮರೆತು ಮೊದಲು ಮಾಡಿದಂತೆಯೇ ಬಂಡೆಯನ್ನು ಹೊಡೆದರು. ಬಂಡೆಯಿಂದ ನೀರು ಬಂದರೂ ಅವರ ಅಜಾಗರೂಕತೆಯಿಂದ ಕಾನಾನನ್ನು ಸ್ವತಂತ್ರಿಸಿಕೊಳ್ಳಲಾಗಲಿಲ್ಲ.   

 

ಹಾಗೆಯೇ ನಾವು ಸಹ ನಮ್ಮ ಆಲೋಚನೆಗಳ ಪ್ರಕಾರವೇ ಬದುಕಲು ಪ್ರಯತ್ನಿಸಬಾರದು. ಯೇಸು ತನ್ನ ಕಣ್ಣಿಗೆ ಕಂಡಂತೆ ತೀರ್ಪುಮಾಡಲಿಲ್ಲ, ಕಿವಿಗೆ ಬಿದ್ದಂತೆ ನಿರ್ಣಯಿಸಲಿಲ್ಲ. (ಯೆಶಾಯ 11:3) ನಾವು ಸಹ ಶೋಧನೆಗಳು ಬರುವ ಸಮಯದಲ್ಲಿ ನಮ್ಮ ಸ್ವಂತ ಆಲೋಚನೆಗಳ ಪ್ರಕಾರ ಅಲ್ಲ, ಕರ್ತನನ್ನೇ ನಮ್ಮ ನಂಬಿಕೆಯಾಗಿಸಿಕೊಳ್ಳೋಣ. ಅವರೇ ಶೋಧನೆಯ ಸಮಯದಲ್ಲಿ ತಪ್ಪಿಸಿಕೊಳ್ಳುವ ದಾರಿಯನ್ನು ಸಿದ್ಧಮಾಡುತ್ತಾರೆ. ಶೋಧನೆಯನ್ನು ಜಯಿಸುವ ಬಲವನ್ನೂ ಕೊಡುತ್ತಾರೆ. ಇಹಲೋಕದಲ್ಲಿ ನೂರರಷ್ಟು ಆಶೀರ್ವಾದಗಳನ್ನು ಮತ್ತು ಪರಲೋಕದಲ್ಲಿ ಪರಮ ಕಾನಾನನ್ನು ಸ್ವತಂತ್ರಸಿಕೊಳ್ಳುವಂತೆ ಮಾಡುತ್ತಾರೆ.

- Mrs. ಜಾಸ್ಮಿನ್ ಪಾಲ್ 

 

ಪ್ರಾರ್ಥನಾ ಅಂಶ:

ಶಿಬಿರದಲ್ಲಿ ಭಾಗವಹಿಸುವ ಯೌವನಸ್ಥರು ತಾವು ತೆಗೆದುಕೊಳ್ಳುವಂತಹ ನಿರ್ಧಾರಗಳಲ್ಲಿ ದೃಢವಾಗಿ ನಿಲ್ಲುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet