Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.08.2024 (Kids Special)
Share:

By Village Missionary Movement

Sunday, 11-Aug-2024

ಧೈನಂದಿನ ಧ್ಯಾನ(Kannada) – 11.08.2024 (Kids Special)

 

ನೀನೂ ಸಾಧಿಸಬಹುದು

 

"ದೇವರೇ, ನಮ್ಮನ್ನು ಕಟಾಕ್ಷಿಸಿ ಆಶೀರ್ವದಿಸು; ಪ್ರಸನ್ನ ಮುಖದಿಂದ ನಮ್ಮನ್ನು ನೋಡು" - ಕೀರ್ತನೆ 67:1

 

ಮುದ್ದು ಪುಟಾಣಿಗಳೇ! ನೀವು ಪ್ರತಿ ವಾರ ಕಥೆ ಕೇಳ್ತಾ ಇದೀರಲ್ಲಾ ಅದು ನಿಮಗೆ Useful - ಆಗಿ ಇದೆಯಾ? ಅದನ್ನು ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಟ್ಟುಬಿಡಬಾರದು. ನೀವು ಕೇಳುವ ಒಳ್ಳೆಯ ವಿಷಯಗಳನ್ನು ಅನುಸರಿಸಲು ಯೇಸಪ್ಪ ನಿಮಗೆ ಸಹಾಯ ಮಾಡುತ್ತಾರೆ. Ok ಪುಟಾಣಿಗಳೇ, ಕಥೆ ಕೇಳಲು ನೀವು ರೆಡಿ ತಾನೇ!

 

ಕಯಲ್ ಕ್ರೀಡೆಯಲ್ಲಿ ತುಂಬಾ ಉತ್ಸಾಹಿ. ಅವಳು ಯಾವಾಗಲೂ ಬಾಸ್ಕೆಟ್‌ಬಾಲ್ ಆಡುವುದರಲ್ಲಿ ಮತ್ತು ಅಭ್ಯಾಸಕ್ಕೆ ಹೋಗುವುದರಲ್ಲಿ ಬಿಜಿಯಾಗಿರುತ್ತಾಳೆ. ಅಂದು ಅವಳು ಬೆಳಿಗ್ಗೆ ಎದ್ದಾಗಿನಿಂದ ಟಿವಿ ನೋಡುತ್ತಿದ್ದಳು ಮತ್ತು ಟಿವಿಯನ್ನು ಆಫ್ ಮಾಡಲೇ ಇಲ್ಲ. ಸಂಜೆ ಬಾಸ್ಕೆಟ್ ಬಾಲ್ ಅಭ್ಯಾಸಕ್ಕೆ ಹೋಗುವುದನ್ನೂ ಸಹ ಮರೆತಳು. ಅಮ್ಮನಿಗೆ ಇನ್ನು ಸುಮ್ಮನಿರಲಾಗಲಿಲ್ಲ. "ನೀನು ಯಾಕೆ ಅಭ್ಯಾಸಕ್ಕೆ ಹೋಗಲಿಲ್ಲ?" ಎಂದು ಕೇಳಿದರು. ಇಲ್ಲ ಅಮ್ಮ ಅದೆಲ್ಲಾ ನನಗೆ ಸೆಟ್ ಆಗಲ್ಲ ಎಂದಳು ಕಯಲ್. ಏನಾಯ್ತು ಏಕೆ? ಎಂದು ತಾಯಿ ತಾಳ್ಮೆಯಿಂದ ಕೇಳಿದರು. ನಿನ್ನೆ ನಮ್ಮ ಶಾಲೆಯಲ್ಲಿ ಲಾಂಗ್ ಜಂಪ್ ಸೆಲೆಕ್ಷನ್ ಇಟ್ಟಿದ್ರಲ್ಲಾ? ಹಾಗೆ ಹೇಳುವಾಗಲೇ ಅವಳ ಕಣ್ಣುಗಳಲ್ಲಿ ಕಣ್ಣೀರು ಬಂತು. ನಾನು ಕೂಡ ಭಾಗವಹಿಸಿದ್ದೆ. ಎಲ್ಲರನ್ನು ಸಾಲಿನಲ್ಲಿ ನಿಲ್ಲಿಸಿ ಲಾಂಗ್ ಜಂಪ್ ಮಾಡಲು ಹೇಳಿದರು ಸರ್. ನಾನು ತುಂಬಾ ವೇಗವಾಗಿ ಓಡಿ ಕೆಳಗೆ ಬಿದ್ದೆ. ಎಲ್ಲಾ ಮಕ್ಕಳು ನಕ್ಕರು ಎಂದು ಹೇಳಿ "ಓ" ಎಂದು ಅಳಲು ಪ್ರಾರಂಭಿಸಿದಳು.

 

ಪುಟಾಣಿಗಳೇ, ನೀವು ಸಹ ಶಾಲೆಯಲ್ಲಿ ನಡೆದ ವಿಷಯಗಳನ್ನು ಅಪ್ಪ-ಅಮ್ಮನೊಂದಿಗೆ ಹಂಚಿಕೊಳ್ಳುತ್ತೀರಾ? Very good. ಮುಂದೆ ಕಯಲ್ ಹೇಳಿದ್ದೇನು ಗೊತ್ತಾ? ಈ ಆಟ ಹುಡುಗಿಯರಿಗೆಲ್ಲಾ ಸೆಟ್ ಆಗಲ್ಲಾ ಅಮ್ಮ? ನಾನು ಸುಮ್ಮನೆ ಓದಿಕೊಂಡು ಟಿವಿ ನೋಡುತ್ತಾ ಮನೆಯಲ್ಲಿಯೇ ಇರುತ್ತೇನೆ ಅಮ್ಮ. ಹೌದಾ ಸರಿ, ಅಮ್ಮ ಕೇಳೋದಕ್ಕೆ ಉತ್ತರ ಹೇಳು. ನೀನು ಬೆಳಿಗ್ಗೆಯಿಂದ ಈ ಟಿವಿಯನ್ನು ನೋಡುತ್ತಿದ್ದೀಯಲ್ಲಾ, ಇದನ್ನು ಕಂಡುಹಿಡಿದವರು ಯಾರು ಎಂದು ನಿನಗೆ ಗೊತ್ತಾ? ಎಂದು ತಾಯಿ ಕೇಳಿದರು. "ಜಾನ್ ಯೋಗಿ ಬಿಯರ್ಡ್" ಎಂದು ಬೇಗನೆ ಉತ್ತರಿಸಿದ ಕಯಲ್‌ಳ ಕೆನ್ನೆಯನ್ನು ತಟ್ಟಿ "ಸೂಪರ್" ಎಂದರು ಅಮ್ಮ. ಅವರು TV ರಿಸರ್ಚ್ ಮಾಡುತ್ತಿದ್ದಾಗ ಒಂದು ಸಾವಿರ ವೋಲ್ಟ್ ವಿದ್ಯುತ್ ನಿಂದ ಹಠಾತ್ತನೆ ವಿದ್ಯುತ್ ಪ್ರವಹಿಸಿ ಕೈ ಸುಟ್ಟು ಕರಕಲಾಯಿತು. ಅದಕ್ಕಾಗಿ ಭಯದಿಂದ ಆ ಸಂಶೋಧನೆಯನ್ನು ಬಿಟ್ಟು ಬಿಡಲಿಲ್ಲ. ಅವರು ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರೆಸಿದರು. ಮುಂದಿನ ಮೂರು ವರ್ಷಗಳಲ್ಲಿ ಅವರು ಸ್ಪಷ್ಟ ದೂರದರ್ಶನ ಪೆಟ್ಟಿಯನ್ನು ಕಂಡುಹಿಡಿದರು ಮತ್ತು ಅದನ್ನು ಜಗತ್ತಿಗೆ ನೀಡಿದರು. ಕಷ್ಟಪಟ್ಟು ಬಂದವರು ಮಾತ್ರ ಸಾಧನೆ ಮಾಡಬಲ್ಲರು ಎಂಬ ಅಮ್ಮನ ಆಶಾವಾದದ ಮಾತುಗಳು ಕಯಲ್‌ಗೆ ಹೊಸ ಉತ್ಸಾಹವನ್ನು ನೀಡಿತು. ಅದನ್ನು ಸಾಧಿಸಬಲ್ಲೆ ಎಂಬ ನಂಬಿಕೆ ಚಿಗುರೊಡೆಯತೊಡಗಿತು.

 

ಮುದ್ದು ಪುಟಾಣಿಗಳೇ! ಕಯಲ್ ಅಮ್ಮನ ಮಾತು ನಿಮ್ಮನ್ನೂ ಹುರಿದುಂಬಿಸಿದೆ ಎಂದು ಭಾವಿಸುತ್ತೇನೆ. ದೇವರ ಕೃಪೆಯಿಂದ ನೀವೂ ಸಾಧಿಸಬಹುದು. Ok

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet