Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.08.2024
Share:

By Village Missionary Movement

Monday, 12-Aug-2024

ಧೈನಂದಿನ ಧ್ಯಾನ(Kannada) – 12.08.2024

 

ಉಪದ್ರವ

 

"…ನಾನು ಶ್ರಮೆಪಟ್ಟದ್ದು ನನಗೆ ಒಳ್ಳೇದು." - ಕೀರ್ತನೆ 119:71

  

ಹಡಗು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಿಂದ ಚೀನಾಕ್ಕೆ ಹೊರಟಿತ್ತು. ಸಾಯಂಕಾಲ ಸಮಯದಲ್ಲಿ ಒಬ್ಬ ಕ್ರೈಸ್ತ ಗುರು ಮತ್ತು ಒಬ್ಬ ವ್ಯಾಪಾರಿ ಹಡಗಿನ ಡೆಕ್‌ನಲ್ಲಿ ಮಾತನಾಡುತ್ತಿದ್ದರು. ವ್ಯಾಪಾರಿ ಕೇಳಿದರು "ನೀವು ಯಾವ ವ್ಯಾಪಾರಕ್ಕಾಗಿ ಚೀನಾಕ್ಕೆ ಹೋಗುತ್ತಿದ್ದೀರಿ?" ಎಂದು. "ನಾನು ಯೇಸುವನ್ನು ಪ್ರಕಟಿಸಲು ಹೋಗುತ್ತಿದ್ದೇನೆ" ಎಂದರು ಆ ಗುರು. ಒಂದು ನಿಮಿಷ, ಆ ವ್ಯಾಪಾರಿ ಅಲುಗಾಡಿಬಿಟ್ಟನು, ಚೀನಾಕ್ಕೆ ಮಿಷನರಿಗಳು ಹೋಗುವುದು ವ್ಯರ್ಥ. ಒಮ್ಮೆ ಮರ್ಫಿ ಎಂಬ ಗುರು ಹೋಗಿದ್ದರು. ಒಂದು ದಿನ ಅವರನ್ನು ಎತ್ತಿಕೊಂಡು ಹೋಗಿ ಅವರ ಕೈಯ ಮೂರು ಬೆರಳುಗಳನ್ನು ಕತ್ತರಿಸಿಬಿಟ್ಟರು. ಅವರು ಈಗ ಅಮೇರಿಕಾದಲ್ಲಿದ್ದಾರೆ. ಇದೆಲ್ಲಾ ನಿಮಗೆ ಗೊತ್ತಿದ್ದರೆ ನೀವು ಚೀನಾಕ್ಕೆ ಹೋಗುವ ಧೈರ್ಯ ಮಾಡುತ್ತಿರಲಿಲ್ಲ ಎಂದರು. ಗುರುಗಳು ಸದ್ದಿಲ್ಲದೆ ಮುಗುಳ್ನಕ್ಕರು. ನಂತರ ಅವರು ಅನೇಕ ವಿಷಯಗಳನ್ನು ಹಂಚಿಕೊಂಡರು. ಸ್ವಲ್ಪ ಸಮಯದ ನಂತರ ಅವರಿಗೆ ಚಹಾ ಕೊಡಲಾಯಿತು. ಆಗ ಟೀ ತೆಗೆದುಕೊಂಡ ಗುರುಗಳ ಕೈ ನೋಡಿ ವ್ಯಾಪಾರಿ ಬೆರಗಾದ. ಏಕೆಂದರೆ ಅವರ ಕೈಯಲ್ಲಿ ಮೂರು ಬೆರಳುಗಳಿರಲಿಲ್ಲ. ಹೌದು, ಆ ದಿನ ಚೀನಾಕ್ಕೆ ಹೋಗಿದ್ದ ಮರ್ಫಿ ಇವರೇ! ತನ್ನ ಬೆರಳುಗಳನ್ನು ಕತ್ತರಿಸಿದ್ದರೂ, ಅವರು ಮತ್ತೆ ಭಯವಿಲ್ಲದೆ ಸಂಕಟದ ಮಧ್ಯೆಯೂ ದೇವರು ಕೊಟ್ಟ ಜವಾಬ್ದಾರಿಯನ್ನು ಮಾಡಲು ಹೊರಟರು.

  

ಪೌಲ ಮತ್ತು ಸೀಲರನ್ನು ಸುವಾರ್ತೆ ಸಾರಿದ್ದಕ್ಕಾಗಿ ಸೆರೆಮನೆಗೆ ಹಾಕಲಾಯಿತು. ಆದರೂ ಅವರು ಜೈಲಿನಲ್ಲಿ ದೇವರನ್ನು ಹಾಡಿ ಸ್ತುತಿಸಿದರು. ಆಗ ಅವರನ್ನು ಕಟ್ಟಿದ್ದ ಕಟ್ಟುಗಳೆಲ್ಲವು ಕಳಚಿಬಿದ್ದವು. ಇವರನ್ನು ಕಾವಲು ಕಾಯುತ್ತಿದ್ದ ಜೈಲರ್ ಕೈದಿಗಳು ತಪ್ಪಿಸಿಕೊಂಡರು ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದರು. ಈ ಸಮಯದಲ್ಲಿ ಜೈಲರ್‌ಗೆ ಸುವಾರ್ತೆಯನ್ನು ಸಾರಲಾಯಿತು. ಜೈಲರ್ ಕೂಡ ರಕ್ಷಿಸಲ್ಪಟ್ಟರು. ಜೈಲಾಧಿಕಾರಿಯ ಮನೆಯವರೆಲ್ಲರೂ ಸುವಾರ್ತೆಯನ್ನು ಕೇಳಿದರು ಮತ್ತು ರಕ್ಷಣೆಯನ್ನು ಪಡೆದರು. ಜೈಲಿನ ಹೊರಗೆ ಸುವಾರ್ತೆ ಸಾರಿದವರು ಜೈಲಿನೊಳಗೂ ಅದೇ ಕೆಲಸವನ್ನು ಮಾಡಿ ರಕ್ಷಣೆಯನ್ನು ಸಾರಿದರು.

 

ಪ್ರಿಯರೇ! ನಾನು ಯಾರನ್ನು ಕಳುಹಿಸಲಿ; ಯಾವನು ನಮ ಗೋಸ್ಕರ ಹೋಗುವನು ಎಂಬ ಪ್ರಶ್ನೆಯನ್ನು ದೇವರು ತನ್ನ ಬಳಿ ಕೇಳುತ್ತಿರುವುದನ್ನು ಗ್ರಹಿಸುವ ಯಾರಿಂದಲೂ ಮೌನವಾಗಿರಲು ಸಾಧ್ಯವಿಲ್ಲ? ಆದುದರಿಂದಲೇ ಪೌಲನ ಜೀವನದಲ್ಲಿ ಎಷ್ಟೇ ಸಂಕಟ ಬಂದರೂ ಸೇವೆ ಮಾಡುವುದರಲ್ಲಿ ಆಯಾಸವಾಗಲಿಲ್ಲ. ಸಂಕಟವನ್ನು ನೋಡದೆ ನಾನು ಚಾಟಿ ಹೊಡೆತ ತಿಂದರೇನು? ನನ್ನ ಬೆರಳು ಹೋದರೆ ಏನು? ಎಂದು ನಾವು ಉತ್ಸಾಹದಿಂದ ಆತನಿಗಾಗಿ ಓಡುವಾಗ ದೇವರು ಖಂಡಿತವಾಗಿಯೂ ನಮ್ಮನ್ನು ನೋಡಿ ಸಂತೋಷಪಡುತ್ತಾರೆ. ಹಾಗಾಗಿ ನಮಗೆ ಸಂಭವಿಸುವ ಉಪದ್ರವಗಳನ್ನು ದೊಡ್ಡದಾಗಿ ಪರಿಗಣಿಸದೆ ನನ್ನ ಗುರಿ ಭೂಮಿಗೆ ಸಂಬಂಧಪಟ್ಟದ್ದಲ್ಲ, ಅದಕ್ಕಿಂತ ಮಿಗಿಲಾದ ಜೀವ ಕಿರೀಟವೇ ಎಂದು ಭಾವಿಸಿ ಸೇವೆ ಮಾಡೋಣ. ಇಂದೇ ಹೊರಡೋಣವಾ? ಕರ್ತನು ನಮ್ಮೊಂದಿಗಿದ್ದಾರೆ!

- T. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಈ ಶಿಬಿರದಲ್ಲಿ ಕೆಲಸ ಮಾಡುವ ಪೂರ್ಣಾವಧಿ ಸೇವಕರ ಶಾರೀರಿಕ ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet