Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.08.2024
Share:

By Village Missionary Movement

Tuesday, 13-Aug-2024

ಧೈನಂದಿನ ಧ್ಯಾನ(Kannada) – 13.08.2024

 

ಕಾಳಜಿಯ ಹೃದಯ 

 

"ಸ್ವಾವಿುಯು ಆಕೆಯನ್ನು ಕಂಡು ಕನಿಕರಿಸಿ - ಅಳಬೇಡ ಎಂದು ಆಕೆಗೆ ಹೇಳಿ" - ಲೂಕ 7:13

  

ಜರ್ಮನಿಯಲ್ಲಿ ಅತ್ಯಂತ ಬಡ ಕುಟುಂಬವೊಂದು ಇತ್ತು. ಅವರಿಗೆ ಒಬ್ಬ ಮಗನಿದ್ದನು. ಅವನು ಚಿಕ್ಕವನಿದ್ದಾಗ ಅವನ ಹೆತ್ತವರು ತೀರಿಕೊಂಡರು. ಹುಡುಗ ಅನಾಥನಾದ. ಅವನು ಗಿಟಾರ್ ನುಡಿಸುವ ಮತ್ತು ಚೆನ್ನಾಗಿ ಹಾಡುವ ಸಾಮರ್ಥ್ಯ ಹೊಂದಿದ್ದನು. ತಣ್ಣನೆಯ ರಾತ್ರಿಯಲ್ಲಿ ಗಿಟಾರ್ ನುಡಿಸುತ್ತಾ ಏಕಾಂಗಿಯಾಗಿ ನಡೆದುಕೊಂಡು ಹೋಗುತ್ತಿದ್ದ. ಅವನ ಬೆರಳುಗಳು ನುಡಿಸಿದ ಮಧುರವಾದ ಧ್ವನಿಯನ್ನು ಕೇಳಿದ ವೃದ್ಧ ದಂಪತಿಗಳು ಅವನನ್ನು ತಮ್ಮ ಮನೆಗೆ ಕರೆದು ಊಟ ಮತ್ತು ಬಟ್ಟೆಗಳನ್ನು ನೀಡಿದರು. ಈತ ಅನಾಥನೆಂದು ತಿಳಿದು ಅವನನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಆರೈಕೆ ಮಾಡಿ ಪದವೀಧರನನ್ನಾಗಿ ಮಾಡಿದರು. ಅವನೇ ದೇವತಾಶಾಸ್ತ್ರವನ್ನು ಅಧ್ಯಯನ ಮಾಡಿ ಧಾರ್ಮಿಕ ಸುಧಾರಣೆಯ ನಕ್ಷತ್ರ ಎಂದು ಕರೆಯಲ್ಪಟ್ಟ ಮಾರ್ಟಿನ್ ಲೂಥರ್. ಚಿಕ್ಕ ಹುಡುಗನಾಗಿದ್ದ ಮಾರ್ಟಿನ್ ಲೂಥರ್ ಮೇಲೆ ಆ ದಂಪತಿಗಳು ತೋರಿದ ಕಾಳಜಿಯಿಂದಾಗಿ ಸುಧಾರಣೆಯ ಮಹಾನ್ ನಕ್ಷತ್ರವಾಗಿ ಸಭೆಗಳಲ್ಲಿ ಉದಯವಾದರು.  

  

ಕರ್ತನಾದ ಯೇಸು ತನ್ನ ಜೀವಿತದ ದಿನಗಳಲ್ಲಿ ಜನರನ್ನು ಕಂಡಾಗ ಕನಿಕರಪಟ್ಟನು. ಅವರು ಕರುಣಾಮಯಿಯಾಗಿ ಅದ್ಭುತಗಳನ್ನು ಮಾಡಿದರು. ಯೇಸು ಸಹಾನುಭೂತಿಯುಳ್ಳವನಾಗಿದ್ದನೆಂದು ಅನೇಕ ಘಟನೆಗಳು ತೋರಿಸುತ್ತವೆ. ಅದರಲ್ಲಿ ನಾಯಿನೆಂಬ ಊರಿನ ವಿಧವೆಯ ಘಟನೆಯೂ ಒಂದು. ಅವಳು ಗಂಡಸತ್ತವಳಾಗಿದ್ದಳು ಮತ್ತು ಒಬ್ಬ ಮಗನನ್ನು ಹೊಂದಿದ್ದಳು. ಅವನೂ ತೀರಿಕೊಂಡ. ಮಗನನ್ನು ಶವವಾಗಿ ಹೊತ್ತೊಯ್ಯುತ್ತಿರುವುದನ್ನು ಕಂಡು ಕಣ್ಣೀರು ಸುರಿಸಿದರು. ಯೇಸು ಬಂದು ಚಟ್ಟವನ್ನು ಮುಟ್ಟಿ ಸತ್ತ ಹುಡುಗನನ್ನು ಮತ್ತೆ ಜೀವಂತವಾಗಿ ಎಬ್ಬಿಸಿದರು, ಮನುಮರುಗಿ, ಯುವಕನೇ, ಎದ್ದೇಳು ಎಂದು ಹೇಳಿ ಸತ್ತ ಯುವಕನನ್ನು ಜೀವಂತವಾಗಿ ಎಬ್ಬಿಸಿದರು. ಸತ್ತವನು ಎದ್ದು ಕುಳಿತು ಮಾತನಾಡಲು ಪ್ರಾರಂಭಿಸಿದನು. ಇದರಲ್ಲಿ ಒಂದನ್ನು ಗಮನಿಸಿ, ಮಗುವಿಗಾಗಿ ತಾಯಿಯೋ ತಂದೆಯೋ ಯೇಸುವಿನ ಬಳಿಗೆ ಬರಲಿಲ್ಲ. ಆದರೆ ಯೇಸು, ತಾಯಿಯ ಕಣ್ಣೀರನ್ನು ನೋಡಿ, ಮನಮರುಗಿ ಹುಡುಕಿ ಹೋಗಿ ಅದ್ಭುತವನ್ನು ಮಾಡಿದರು. ಇದು ಯೇಸುವಿನ ಸಹಾನುಭೂತಿ ಮತ್ತು ಕಾಳಜಿಯ ಮನೋಭಾವವನ್ನು ನಮಗೆ ತೋರಿಸುತ್ತಿದೆ.

 

ಪ್ರಿಯರೇ! ಇತರರಿಗೆ ಸಹಾನುಭೂತಿ ತೋರಿಸುವಲ್ಲಿ ನಾವು ಸಹ ಯೇಸುವಿನಂತೆ ಆಗಬೇಕು. ಕಾಳಜಿಯನ್ನು ತೋರಿಸುವಲ್ಲಿ ನಾವು ಅವರ ಮಾದರಿಯನ್ನು ಅನುಸರಿಸಬೇಕು. "ಕಾಳಜಿಯ ಹೃದಯ ಒಂದು ದೊಡ್ಡ ಸದ್ಗುಣವಾಗಿದೆ". ತಂದೆಯಾದ ದೇವರು ನಮ್ಮ ಬಗ್ಗೆ ಕಾಳಜಿಯಿಂದ ತನ್ನ ಒಬ್ಬನೇ ಮಗನನ್ನು ಈ ಜಗತ್ತಿಗೆ ಕಳುಹಿಸಿದರು. ನಾವು, ಅವರ ಸ್ವಾರೂಪ್ಯದಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ, ಈ ಕಾಳಜಿಯುಳ್ಳ ಹೃದಯ ಮತ್ತು ಗ್ರಹಿಕೆ ತುಂಬಾ ಅಗತ್ಯ! ಇದನ್ನು ಆಶೆಯಿಂದ ಕೇಳಿ ಪಡೆಯೋಣ.

- Mrs. ರೂಬಿ ಅರುಣ್

 

ಪ್ರಾರ್ಥನಾ ಅಂಶ:

ಮೊರಾಯ್ ಸಿಟಿ ಮೈದಾನದಲ್ಲಿ ದೇವರ ಆಳ್ವಿಕೆ ಇರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet