Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.08.2024
Share:

By Village Missionary Movement

Tuesday, 27-Aug-2024

ಧೈನಂದಿನ ಧ್ಯಾನ(Kannada) – 27.08.2024

 

ತಿಳಿಸಿರಿ 

 

"…ಕರ್ತನು ನಿನ್ನ ಮೇಲೆ ಕರುಣೆಯಿಟ್ಟು ಎಂಥಾ ಮಹತ್ಕಾರ್ಯಗಳನ್ನು ಮಾಡಿ ದ್ದಾನೆಂದು ಅವರಿಗೆ ಹೇಳು ಅಂದನು" - ಮಾರ್ಕ 5:19

  

ಪೊಲೀಸ್ ಅಧಿಕಾರಿಯೊಬ್ಬರಿಗೆ "ತಪ್ಪಿಹೋದ ಮಗು" ಎಂಬ ಸುವಾರ್ತೆಯ ಕೈಪ್ರತಿಯೊಂದು ಸಿಕ್ಕಿತು. ದೇವರು ತನ್ನ ಒಬ್ಬನೇ ಮಗನನ್ನು ಲೋಕಕ್ಕೆ ಕೊಟ್ಟ ಅದ್ಭುತವಾದ ಸಂದೇಶ ಅದರಲ್ಲಿತ್ತು. ಅದನ್ನು ಕೇವಲವಾಗಿ ನೋಡಿದ ಅವರು ಎಂದಿನಂತೆ ಹಿಸುಕಿ ಕಸದ ಬುಟ್ಟಿಗೆ ಎಸೆದುಬಿಟ್ಟರು. ಅಂದು ಸಂಜೆ ತನ್ನ ಮನೆಯ ಎರಡನೇ ಮಹಡಿಯಲ್ಲಿ ತನ್ನ ಒಂದೂವರೆ ವರ್ಷದ ಮಗುವನ್ನು ಮುದ್ದಾಡುತ್ತಾ ಆಟವಾಡುತ್ತಿದ್ದರು. ಮಹಡಿಯ ಮುಂಭಾಗದಲ್ಲಿ ಅವರು ನಿಂತಾಗ, ಅವರ ಕೈಯಲ್ಲಿದ್ದ ಮಗು ಇದ್ದಕ್ಕಿದ್ದಂತೆ ಜಿಗಿಯಿತು. ಅದು ಹೇಗೋ ಅವರ ಬಿಗಿ ಹಿಡಿತದಿಂದ ಜಾರಿ ಕೆಳಗೆ ಬೀಳತೊಡಗಿತು. ತಕ್ಷಣ ಅವರೂ ಕೆಳಗೆ ಜಿಗಿದರು. ಪೊಲೀಸ್ ತರಬೇತಿಯಿಂದಾಗಿ ಮಗುವನ್ನು ಸುಲಭವಾಗಿ ಹಿಡಿದುಕೊಂಡರು. ಅವರು ಕೆಳಗೆ ಮಲಗಿ ತನ್ನ ಮಗುವನ್ನು ಕಾಪಾಡಿದರು. ಮಗುವಿಗೆ ಯಾವ ಹಾನಿಯೂ ಆಗದಂತೆ ಸುರಕ್ಷಿತವಾಗಿ ಕಾಪಾಡಲಾಯಿತು. ಆದರೆ ಅವರಿಗೋ ಎಡಗೈ ಮತ್ತು ಕಾಲಿನ ಮೂಳೆ ಮುರಿದು ಆಸ್ಪತ್ರೆಗೆ ದಾಖಲಿಸಲಾಯಿತು. ಆ ಸಂಜೆ ಕೆಲವು ಸಹೋದರಿಯರು ಆಸ್ಪತ್ರೆಯಲ್ಲಿ ಸೇವೆ ಮಾಡಲು ಬಂದರು. ಅವರು "ತಪ್ಪಿಹೋದ ಮಗು" ಎಂಬ ಅದೇ ಕೈಪ್ರತಿಯನ್ನು ಅಧಿಕಾರಿಯ ಕೈಯಲ್ಲಿ ಇಟ್ಟು ಸುವಾರ್ತೆಯನ್ನು ಸಾರಿದರು. ಈಗ ಅವರು ಈ ಹಸ್ತಪ್ರತಿಯ ಸತ್ಯವನ್ನು ಅರಿತುಕೊಳ್ಳಲು ಸಾಧ್ಯವಾಯಿತು. ದುಷ್ಟನಾದ ನಾನೇ ನನ್ನ ಮಗುವಿಗಾಗಿ ಇದನ್ನು ಮಾಡಿದಾಗ, ಪರಿಶುದ್ಧವಾದ ದೇವರು ಈ ಭೂಮಿಗೆ ಮನುಷ್ಯನಾಗಿ ಬಂದು ಪಾಪಿಗಳಾದ ನಮಗಾಗಿ ತನ್ನ ಪ್ರಾಣವನ್ನು ಕೊಟ್ಟರು ಎಂಬುದು ಖಚಿತವಾದ ಸತ್ಯ ಎಂದು ಅವರು ತನ್ನೊಳಗೆ ಭಾವಿಸಿದರು. ಅದೇ ದಿನದಲ್ಲಿ ಅವರು ರಕ್ಷಣೆ ಹೊಂದಿದರು. 

  

ಹೊಸ ಒಡಂಬಡಿಕೆಯಲ್ಲಿ, ಮಾರ್ಕನು ಬರೆದ ಸುವಾರ್ತೆಯ ಪುಸ್ತಕದಲ್ಲಿ ಅಶುದ್ಧ ಆತ್ಮದಿಂದ ಬಳಲುತ್ತಿರುವ ವ್ಯಕ್ತಿಯ ಬಗ್ಗೆ ನಮಗೆ ಗೊತ್ತು. ಯಾರಿಂದಲೂ ಅವನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಅವನು ಯೇಸುವಿಗೆ ನಮಸ್ಕರಿಸಿದ ನಂತರ, ಯೇಸು ಆ ಮನುಷ್ಯನನ್ನು ಅಶುದ್ಧಾತ್ಮದಿಂದ ಗುಣಪಡಿಸಿದರು. ಯೇಸು ಅವನಿಗೆ ನಿನ್ನ ಮನೆಗೂ ಸ್ನೇಹಿತರ ಬಳಿಗೂ ಹೋಗಿ ಕರ್ತನು ನಿನ್ನ ಮೇಲೆ ಕರುಣೆಯಿಟ್ಟು ಎಂಥಾ ಮಹತ್ಕಾರ್ಯಗಳನ್ನು ಮಾಡಿ ದ್ದಾನೆಂದು ಅವರಿಗೆ ಹೇಳು ಅಂದನು. 

 

ನನಗೆ ಪ್ರಿಯವಾದವರೇ! ಅಶುದ್ಧ ಆತ್ಮವುಳ್ಳ ಈ ಮನುಷ್ಯನಂತೆ, ನಾವು ಪ್ರತಿದಿನ ಕೆಲವು ರೀತಿಯ ಅನಾರೋಗ್ಯದಲ್ಲಿ ಅಥವಾ ಯೇಸುವಿನಿಂದ ದೂರವಾಗಿ ಅಥವಾ ಯೇಸು ಇಲ್ಲದೆಯೋ ಜೀವಿಸುತ್ತಿದ್ದೆವು. ಆದರೆ ನಾವು ಯಾರೋ ಒಬ್ಬರ ಮೂಲಕ ಯೇಸುವನ್ನು ತಿಳಿದುಕೊಂಡಿದ್ದೇವೆ. ಕಾರಣ ಅವರು ನಮಗೆ ಯೇಸುವನ್ನು ತಿಳಿಸಿದರು. ಪುನಃ ಪುನಃ ಸುವಾರ್ತೆಯನ್ನು ಹೇಳಿದರ ನಿಮಿತ್ತವಾಗಿ ಪೊಲೀಸ್ ಅಧಿಕಾರಿಯು ರಕ್ಷಿಸಲ್ಪಟ್ಟರು. ದೇವರು ನಮ್ಮ ಜೀವನವನ್ನು ಮಾರ್ಪಡಿಸಿ ಹೆಚ್ಚೆಚ್ಚಾಗಿ ಉಪಕಾರಗಳನ್ನು ಮಾಡುತ್ತಾ ನಮ್ಮನ್ನು ಆಶೀರ್ವದಿಸುತ್ತಲೇ ಇದ್ದಾರೆ. ಆತನನ್ನು ತಿಳಿಯದವರಿಗೆ ಸುವಾರ್ತೆ ಸಾರುವುದು ನಮ್ಮ ಮೇಲೆ ಬಿದ್ದ ಕರ್ತವ್ಯವಲ್ಲವೇ? ನಾವು ಪಡೆದ ಮನೋಲ್ಲಾಸವನ್ನು ಸಂತೋಷವಾಗಿ ಸುವಾರ್ತೆಯಾಗಿ ಸಾರೋಣವಾ? ಬನ್ನಿ! ಸುವಾರ್ತೆ ಸಾರೋಣ. ಎಲ್ಲರನ್ನೂ ಪರಲೋಕದ ಪ್ರಜೆಗಳಾಗಿ ಮಾರ್ಪಡಿಸೋಣ!

- Mrs. ಶಕ್ತಿ ಶಂಕರರಾಜ್

 

ಪ್ರಾರ್ಥನಾ ಅಂಶ:

ಸೇವಾಕ್ಷೇತ್ರದಲ್ಲಿ ಒಂದು ಗಂಟೆ ಮಿಷನರಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet