Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.08.2024
Share:

By Village Missionary Movement

Wednesday, 28-Aug-2024

ಧೈನಂದಿನ ಧ್ಯಾನ(Kannada) – 28.08.2024

 

ಮನರಮ್ಯವಾಗಿರಲು ಪ್ರಾರ್ಥನೆ

 

"…ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವದನ್ನು ಕಲಿತುಕೊಂಡಿದ್ದೇನೆ" - ಫಿಲಿಪ್ಪಿ 4:11

  

ನಮ್ಮ ಪ್ರೀತಿಯ ಪರಿಶುದ್ಧ ದೇವರೇ! ನೀವು ಮನುಷ್ಯನಿಗೆ ನೀಡಿದ ಅನೇಕ ಗುಣಗಳಲ್ಲಿ ಮನರಮ್ಯವೂ ಒಂದು. ಅದಕ್ಕಾಗಿ ನಿಮಗೆ ಕೋಟ್ಯಾನು ಕೋಟಿ ಕೃತಜ್ಞತೆ ಸಲ್ಲಿಸುತ್ತೇವೆ. ಪೌಲನು ತನ್ನ ಜೀವನದಲ್ಲಿ ಯಾವಾಗಲೂ ಮನರಮ್ಯವಾಗಿರಲು ಕಲಿತುಕೊಂಡದ್ದಾಗಿ ಹೇಳುತ್ತಾರೆ. ಆದರೆ ನಿಮ್ಮ ಸಹಾಯವಿಲ್ಲದೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಯೋಬನು ತನ್ನ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದರೂ ಸಹ, ಅವರು ಕರ್ತನನಾಮಕ್ಕೆ ಸ್ತೋತ್ರ ಎಂದು ಹೇಳಿದರು. ದೇವರು ನಮಗೆ ಏನನ್ನು ಕೊಟ್ಟರೂ ನಾವು ಅದನ್ನು ಹೃದಯಪೂರ್ವಕವಾಗಿ ಸ್ವೀಕರಿಸಬೇಕು ಎಂಬುದನ್ನು ಆತನ ಜೀವನದಿಂದ ಕಲಿಯುತ್ತೇವೆ. ಮತ್ತು ಅಪೊಸ್ತಲನಾದ ಪೌಲನು ನಾವು ಯಾವಾಗಲೂ, ಎಲ್ಲದರಲ್ಲೂ ಮತ್ತು ಎಲ್ಲಾ ಸಂದರ್ಭಗಳಲ್ಲಿ, ನಿಮಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಕಲಿಸಿಕೊಡುತ್ತಿದ್ದಾರೆ. ಇದುವೇ ನಿಮ್ಮ ಚಿತ್ತ ಎಂದು ನಮಗೆ ತಿಳಿದಿದೆ. ನಾವು ಎಲ್ಲಾ ಪರಿಸ್ಥಿತಿಯಲ್ಲಿ ಸಂತೋಷದಿಂದಲೇ ಬದುಕಬೇಕೆಂದು ಬಯಸುತ್ತೀರಿ.   

 

ಇಂತಹ ಜೀವನ ನಡೆಸಲು ನಮಗೆ ನಿಮ್ಮ ಮಗನಾದ ಯೇಸು ಕ್ರಿಸ್ತನ ಕೃಪೆ ಕಡ್ಡಾಯವಾಗಿ ಬೇಕು. ಆತನು ನಮ್ಮನ್ನು ಬಲಪಡಿಸಿದರೆ ಮಾತ್ರವೇ ನಾವು ಎಲ್ಲವನ್ನೂ ಮಾಡಲು ಸಾಧ್ಯ. ಎಲ್ಲಾ ಸಂದರ್ಭಗಳಲ್ಲಿಯೂ ನಮ್ಮನ್ನು ಬಲಪಡಿಸುವವರು ಆತನು ಮಾತ್ರವೇ. ಪವಿತ್ರಾತ್ಮನು ಯಾವಾಗಲೂ ನಮ್ಮನ್ನು ಆಳಬೇಕು.

 

ಅಪೊ. ಪೌಲನಿಗೂ ಸಹ ಒಂದು ಮುಳ್ಳು ಕೊಡಲ್ಪಟ್ಟಿತ್ತು. ಆದರೆ ಅದರೊಂದಿಗೆ ನೀವು ಅವರಿಗೆ ನಿಮ್ಮ ಕೃಪೆಯನ್ನೂ ಕೊಟ್ಟಿದ್ದಿರಿ. ಅದರ ಮೂಲಕ ಅವರು ನಿಮ್ಮಿಂದ ನಿಮ್ಮ ಪ್ರಸನ್ನತೆಯನ್ನು, ದಯೆಯನ್ನು ಮತ್ತು ಶಕ್ತಿಯನ್ನು ಪಡೆದುಕೊಂಡರು. ನಮ್ಮ ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳು, ಹೊರೆಗಳು, ಕಣ್ಣೀರು ಮತ್ತು ವಿರೋಧಗಳು ಅಂತಿಮವಾಗಿ ದೇವರ ಮಕ್ಕಳಾದ ನಮಗೆ ಒಳ್ಳೆಯದಾಗಿಯೇ ಮುಕ್ತಾಯಗೊಳಿಸುತ್ತೀರಾ ಎಂದು ಅರಿತಿದ್ದೇವೆ. 

 

ಸತ್ಯವೇದವು ನಮಗೆ ಅನೇಕ ಸಾಮ್ಯಗಳನ್ನು ಬೋಧಿಸುತ್ತದೆ. ಅಪೊಸ್ತಲನಾದ ಪೌಲನನ್ನು ಸೆರೆಯಲ್ಲಿ ಬಂಧಿಸಿದಾಗಲೂ, ಮನರಮ್ಯವಾಗಿ ಪೂರ್ಣಹೃದಯದಿಂದ ನಿಮ್ಮನ್ನು ಸ್ತುತಿಸಿ ಹಾಡುವ ಕೃಪೆಯನ್ನು ಅವರಿಗೆ ಕೊಟ್ಟಿರಿ. ಪೇತ್ರನು ಯಾವುದೇ ಚಿಂತೆಯಿಲ್ಲದೆ ಜೈಲಿನಲ್ಲಿ ಮಲಗಲು ಕೃಪೆಯನ್ನು ನೀಡಿದಿರಿ. ನೌಕಾಘಾತ ಸಂಭವಿಸಿದಾಗಲೂ, ಪೌಲನು ತಾನು ಮನರಮ್ಯವಾಗಿರುವುದಲ್ಲದೇ ತನ್ನೊಂದಿಗೆ ಇದ್ದವರನ್ನು ಸಹ ಪ್ರೋತ್ಸಾಹಿಸಿ, ಸುರಕ್ಷಿತವಾಗಿ ದಡಕ್ಕೆ ಬಂದು ಸೇರಲು ಕೃಪೆ ತೋರಿದರು. ಯೋಸೇಫನು ಸಹ ಎಲ್ಲಾ ಸಂದರ್ಭಗಳಲ್ಲಿ ಮನರಮ್ಯವಾಗಿ ವರ್ತಿಸಿದರು. ನಿಮ್ಮ ಕೃಪೆ ಅವರೊಂದಿಗಿತ್ತು. ಕೊನೆಗೆ ನೀವು ಆತನನ್ನು ಹೆಚ್ಚಿಸಿ ಘನಪಡಿಸಿದ್ದೀರಿ. ನಾವು ಸಹ ಇಂತಹ ಮನರಮ್ಯದೊಂದಿಗೆ ಬಾಳಲು ಬಲ ಕೊಡಬೇಕಾಗಿ ಬೇಡಿಕೊಳ್ಳುತ್ತೇವೆ. ಯೇಸು ಕ್ರಿಸ್ತನ ಮಧುರವಾದ ಹೆಸರಿನಲ್ಲಿ ನಾವು ಕೇಳಿಕೊಳ್ಳುತ್ತೇವೆ ನಮ್ಮ ಪ್ರೀತಿಯ ತಂದೆಯೇ! ಆಮೆನ್.

- K.M. ಪ್ರಸಾದ್

 

ಪ್ರಾರ್ಥನಾ ಅಂಶ:

ಮೋಕ್ಷ ಪ್ರಯಾಣ ಪತ್ರಿಕೆಯನ್ನು ಓದುವ ವ್ಯಕ್ತಿಗಳು ದೇವರಿಗಾಗಿ ಕಾರ್ಯಮಾಡುವವರಾಗಿ ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet