Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.09.2024
Share:

By Village Missionary Movement

Monday, 02-Sep-2024

ಧೈನಂದಿನ ಧ್ಯಾನ(Kannada) – 02.09.2024

 

FILL UP

 

"ಸಭೆಯು ಆತನ ದೇಹವಾಗಿದೆ; ಎಲ್ಲವನ್ನೂ ಎಲ್ಲಾ ಸಂಬಂಧದಲ್ಲಿ ವ್ಯಾಪಿಸುವಾತನಿಂದ ಅದು ಪರಿಪೂರ್ಣತೆಯುಳ್ಳದ್ದಾಗಿದೆ" - ಎಫೆಸ 1:23 

 

ನಮ್ಮ ಶಾಲಾ ದಿನಗಳಲ್ಲಿ, ಪ್ರಶ್ನೆ ಪತ್ರಿಕೆಯಲ್ಲಿ ಬಿಟ್ಟ ಸ್ಥಳವನ್ನು ತುಂಬಿ ಎಂಬ ಪ್ರಶ್ನೆ ಬರುತ್ತದೆ. ಅದರಲ್ಲಿ ಉತ್ತರ ಬರೆಯಲು ಚಿಕ್ಕ ಸಾಲನ್ನು ಹಾಕುತ್ತಾರೆ. ಕೇವಲ ಒಂದು ಪದವನ್ನು ಬರೆದರೆ ಆ ಸ್ಥಳ ಭರ್ತಿಯಾಗುತ್ತದೆ. ಆ ಜಾಗ ತುಂಬಿದರೆ ವಾಕ್ಯ ಪೂರ್ಣವಾಗುತ್ತದೆ. ಹೀಗೆಯೇ ದೇವರು ಎಲ್ಲವನ್ನೂ ಎಲ್ಲವುಗಳಿಂದ ತುಂಬಿಸುತ್ತಾರೆ. ಆತನು ನಮ್ಮ ಸ್ಥಾನದಲ್ಲಿ ನಮ್ಮನ್ನು ತುಂಬಿದ್ದಾರೆ. ನಾವು ಇವುಗಳಿಂದ ತಪ್ಪುವಾಗ ಅಥವಾ ಅದರಿಂದ ದೂರವಾದಾಗ, ದೇವರು ನಮ್ಮನ್ನು ಆ ಸ್ಥಳದಿಂದ ತೆಗೆದುಹಾಕುತ್ತಾರೆ. ನಾವು ದೇವರ ಚಿತ್ತಕ್ಕೆ ವಿರುದ್ಧವಾಗಿ ಹೋದಾಗ, ಅವರು ತಕ್ಷಣವೇ ಆ ಸ್ಥಳವನ್ನು ಬೇರೆಯವರಿಂದ ತುಂಬಿಸುತ್ತಾರೆ. ಅದೇನೆಂದರೆ, ಸೌಲನು ದೇವರಿಗೆ ಅವಿಧೇಯನಾಗುತ್ತಾನೆ ಮತ್ತು ದೇವರು ಪಶ್ಚಾತ್ತಾಪಪಡುವಂತೆ ಮಾಡುತ್ತಾನೆ. ತಕ್ಷಣವೇ ದೇವರು ಅವನನ್ನು ರಾಜತ್ವದಿಂದ ದೂರ ತಳ್ಳುತ್ತಾರೆ. ಆ ಸ್ಥಾನವನ್ನು ಬೇರೊಬ್ಬರೊಂದಿಗೆ ತುಂಬಲು ಬಯಸಿ, ಅವರು ದಾವೀದನನ್ನು ಆರಿಸುತ್ತಾರೆ. ಸೌಲನ ಖಾಲಿಯಾದ ಸ್ಥಳವನ್ನು ತುಂಬಲು ದಾವೀದನನ್ನು ಅಭಿಷೇಕಿಸುತ್ತಾರೆ.  

 

ಹಾಗೆಯೇ ರಾಜನು ಔತಣಕ್ಕೆ ಆಹ್ವಾನಿಸಿದಾಗ ವಷ್ಟಿಯು ಬರಲು ನಿರಾಕರಿಸುತ್ತಾಳೆ. ರಾಜನಿಗೆ ಅವಿಧೇಯಳಾಗಿದ್ದಕ್ಕಾಗಿ, ಅವಳನ್ನು ತನ್ನ ರಾಜ ಸ್ಥಾನದಿಂದ ತೆಗೆದುಹಾಕಲಾಗುತ್ತದೆ. ಆ ಸ್ಥಾನವನ್ನು ತುಂಬಲು ಪ್ರಾಂತ್ಯದ ಅತ್ಯಂತ ಸುಂದರ ಮಹಿಳೆಯರನ್ನು ಆಹ್ವಾನಿಸಲಾಗಿತ್ತು. ಅದರಲ್ಲಿ ಎಸ್ತೇರಳನ್ನು ಆಯ್ಕೆ ಮಾಡಿ ವಷ್ಟಿಯ ಸ್ಥಾನದಲ್ಲಿ ತುಂಬಿದರು. ಈ ಸ್ಥಳವು ಎಸ್ತೇರಳ ಸೌಂದರ್ಯ, ಸ್ಥಾನಮಾನ ಮತ್ತು ಜ್ಞಾನದ ಸ್ಥಳವಲ್ಲ. ವಷ್ಟಿಯು ಅವಮಾನಿಸಿ ದೂರ ತಳ್ಳಿದ್ದರಿಂದ ಖಾಲಿಯಾದ ಜಾಗದಲ್ಲಿ ತುಂಬಿಸಲ್ಪಟ್ಟವಳು. ಹಾಮಾನನಿಂದ ಒಂದು ದೊಡ್ಡ ಅಪಾಯಕಾರಿ ವಿಷಯ ಬರುತ್ತದೆ. ಆಗ ಮೊರ್ದೆಕೈ ನೀನು ಇಂಥ ಸಂದರ್ಭಕ್ಕಾಗಿಯೇ ಪಟ್ಟಕ್ಕೆ ಬಂದಿರಬಹುದು, ಯಾರು ಬಲ್ಲರು ಎಂದು ಹೇಳುತ್ತಾರೆ. ಮತ್ತು ನೀನು ಈಗ ಸುಮ್ಮನಿದ್ದು ಬಿಟ್ಟರೆ ಬೇರೆ ಕಡೆಯಿಂದ ಯೆಹೂದ್ಯರಿಗೆ ಸಹಾಯವೂ ವಿಮೋಚನೆಯೂ ಉಂಟಾದಾವು ಎಂದರು. ಇದರರ್ಥ ನೀನು ತಳ್ಳಲ್ಪಡಬಹುದು ಬೇರೆಯವರಿಂದ ತುಂಬಲ್ಪಡಬಹುದು ಎನ್ನುತ್ತಾರೆ.

 

ಇದನ್ನು ಓದುತ್ತಿರುವ ಪ್ರಿಯರೇ! ನೀವು ಈಗ ಇರುವ ಸ್ಥಾನ ಮತ್ತು ಅವಕಾಶವು ನಿಮ್ಮ ಜ್ಞಾನಕ್ಕೂ ಮತ್ತು ಅರ್ಹತೆಗೂ ಸಿಕ್ಕಿದ್ದಲ್ಲ. ಯಾರೋ ಒಬ್ಬರು ಆ ಸ್ಥಳವನ್ನು ದುರ್ಬಳಕೆ ಮಾಡಿಕೊಂಡಿರುವ ಕಾರಣ ನಿಮಗೆ ನೀಡಲಾಗಿದೆ. ಅದನ್ನು ದುರುಪಯೋಗ ಪಡಿಸಿಕೊಂಡರೆ ಇಲ್ಲಿಂದ ಕಿತ್ತೊಗೆದು ಬೇರೆಯವರಿಗೆ ಕೊಡುವುದು ದೇವರಿಗೆ ಹಗುರವಾದ ಸಂಗತಿ ಎಂಬುದನ್ನು ಮರೆಯಬೇಡಿ. ಆದುದರಿಂದ ನಮಗೆ ಕೊಡಲ್ಪಟ್ಟಿರುವ ವಿಷಯದಲ್ಲಿ ಸತ್ಯವೇದವನ್ನು ಓದಿ, ಪ್ರಾರ್ಥಿಸಿ ದೇವರೊಂದಿಗೆ ನಮಗಿರುವ ಸಂಬಂಧದಲ್ಲಿ ನೆಲೆಗೊಂಡು ದೇವರಿಗೆ ಭಯಪಡುವ ಭಯದೊಂದಿಗೆ ಜಾಗರೂಕರಾಗಿರೋಣ ದೇವರು ನಮ್ಮನ್ನು ಇಟ್ಟಿರುವ ಸ್ಥಳವನ್ನು ಭಯಭಕ್ತಿಯಿಂದ ಉಳಿಸಿಕೊಳ್ಳೋಣ. ಈ ಆಲೋಚನೆ ನಮ್ಮಲ್ಲಿ ಇದ್ದರೆ, ಹೆಮ್ಮೆ, ಅಹಂಕಾರ ಮತ್ತು ನಿರ್ಲಕ್ಷ್ಯವು ಉದ್ಭವಿಸುವುದಿಲ್ಲ. ಎಚ್ಚರವಾಗಿದ್ದು ಕಾರ್ಯಮಾಡೋಣ. ಕರ್ತನಲ್ಲಿ ನೆಲೆಗೊಳ್ಳೋಣ  

- Bro. K. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಈ ತಿಂಗಳ ಸೇವೆಗಳಿಗಾಗಿ, ಸೇವಕರ ಪ್ರಯಾಣ ಭದ್ರತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino