Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.09.2024
Share:

By Village Missionary Movement

Wednesday, 25-Sep-2024

ಧೈನಂದಿನ ಧ್ಯಾನ(Kannada) – 25.09.2024

 

ಭಯ

 

"ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಶಿಕ್ಷಣಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ" - 2 ತಿಮೊಥೆ 1:7

 

ಪ್ರಪಂಚದ ಜನರು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅನೇಕ ವಿಷಯಗಳಿಗೆ ಹೆದರುತ್ತಾರೆ. ಕತ್ತಲೆಯ ಭಯ, ಸಂಚಾರದ ಭಯ, ಅನಾರೋಗ್ಯದ ಭಯ, ಕೆಲಸದ ಭಯ, ಭವಿಷ್ಯದ ಭಯ, ಸಾವಿನ ಭಯ. ದೇವರ ಭಕ್ತನಾದ ಹೊವಾರ್ಡ್ ಎಂಬವರು "ಕ್ರಿಸ್ತನ ಸತ್ಯವೇದದ ಬೋಧನೆಯೇ ನಮ್ಮನ್ನು ಭಯ, ದ್ವೇಷ ಮತ್ತು ಮೋಸದ ಅತ್ಯಂತ ಶಕ್ತಿಶಾಲಿ ದುಷ್ಟರಿಂದ ನಮ್ಮನ್ನು ಕಾಪಾಡುತ್ತದೆ" ಎಂದು ಹೇಳುತ್ತಾರೆ. ಒಬ್ಬ ಯೌವನಸ್ಥ ಸೇವಕರು ಅನಾರೋಗ್ಯದ ಕಾರಣದಿಂದಾಗಿ ತನಗೆ ಬಂದ ವಿಪರೀತ ನೋವು ಮತ್ತು ಸಂಕಟದಿಂದ ಮುಳುಗಿದ್ದರು. ಎಷ್ಟೋ ಔಷಧಗಳನ್ನು ಸೇವಿಸಿದರೂ ಪ್ರಯೋಜನವಾಗಿಲ್ಲ. ಒಂದು ರೀತಿಯ ಭಯ ಅವರನ್ನು ಆವರಿಸಿತು. ಈ ಖಾಯಿಲೆ ಹೋಗದಿದ್ದರೆ ಹೇಗೆ! ಎಷ್ಟೋ ದಿನಗಳ ಕಾಲ ದೈಹಿಕ ನೋವಿನಿಂದ ನರಳಬೇಕಾಗಬಹುದು ಎಂದು ಹೆದರುತ್ತಿದ್ದರು. ಅವರು ತಕ್ಷಣ ಪ್ರಾರ್ಥಿಸಿದರು. ಯೇಸುವೇ ನನ್ನನ್ನು ಬಿಡುಗಡೆ ಮಾಡಿ ಅಥವಾ ನಿನ್ನ ಬಳಿಗೆ ಕರೆದುಕೊಂಡು ಹೋಗಿ ಎಂದು ತನ್ನನ್ನು ಸಂಪೂರ್ಣವಾಗಿ ಒಪ್ಪಿಸಿ ಕೊಟ್ಟು ಪ್ರಾರ್ಥಿಸಿದರು. ಅವರು ದೈಹಿಕ ನೋವನ್ನು ಸಹಿಸಿಕೊಳ್ಳಲು ಬಲಹೊಂದಿದರು. ಆಮೇಲೆ ಕೆಲವೇ ದಿನಗಳಲ್ಲಿ ಕಾಯಿಲೆಯಿಂದ ಮುಕ್ತಿ ಸಿಕ್ಕಿತು. 

  

ಅದೇ ರೀತಿ ಸತ್ಯವೇದದಲ್ಲಿ ಅರಸನಾದ ಹಿಜ್ಕೀಯನು ಅಸ್ವಸ್ಥನಾಗಿದ್ದನು. ಪ್ರವಾದಿಯಾದ ಯೆಶಾಯನ ಮೂಲಕ, ನೀನು ಸಾಯುತ್ತೀಯ ನಿನ್ನ ಮನೆಯ ಕಾರ್ಯಗಳನ್ನು ಕ್ರಮಪಡಿಸು ಎಂದು ಹೇಳಿದರು. ಆದರೆ ಹಿಜ್ಕೀಯನು ಇದನ್ನು ಕೇಳಿದಾಗ, ಪ್ರವಾದಿಯಾದ ಯೆಶಾಯನ ಬಳಿಯೋ ಅಥವಾ ತನ್ನೊಳಗೋ ಅಳಲಿಲ್ಲ, ಆದರೆ ಗೋಡೆಯ ಕಡೆಗೆ ತಿರುಗಿ ಕರ್ತನನ್ನು ನೋಡಿ ಅತ್ತರು. ದೇವರು ತಕ್ಷಣವೇ ಕಾರ್ಯನಿರ್ವಹಿಸಿದರು. ತನ್ನ ಖಾಯಿಲೆಗೆ ಔಷಧಿಯನ್ನೂ ಹೇಳಿ ಅನಾರೋಗ್ಯದ ಹಾಸಿಗೆಯನ್ನು ಬದಲಾಯಿಸಿದರು. ಸಾಂಕೇತಿಕವಾಗಿ, ತಿರುಗುವ ಗಡಿಯಾರವನ್ನು ಹಿಂದಕ್ಕೆ ಬರುವ ಹಾಗೆ ಮಾಡಿ ದೊಡ್ಡ ಕಾರ್ಯಗಳನ್ನು ಮಾಡುತ್ತಿದ್ದಾರೆ. ನಾವು ಜಗತ್ತಿನಲ್ಲಿ ಇರುವಾಗ ಭಯ ಉಂಟಾಗುವುದು ಸಹಜ. ಆದರೆ ಭಯ ಬಂದ ಕೂಡಲೇ ಸಮಸ್ಯೆಯನ್ನು, ಗೊಂದಲವನ್ನು, ಅನಾರೋಗ್ಯವನ್ನು ನೋಡದೇ ಅದನ್ನು ಮನುಷ್ಯರಿಗೆ ಹೇಳಿ ಪ್ರಲಾಪಿಸುತ್ತಾ ಅಳದೇ ತಕ್ಷಣ ದೇವರ ಮೊರೆ ಹೋದರೆ ಅದಕ್ಕೆ ಪರಿಹಾರ ಸಿಗುತ್ತದೆ. ನಮ್ಮ ದೇವರ ಶಕ್ತಿಯ ಮುಂದೆ ನಮ್ಮನ್ನು ಹೆದರಿಸುವಂಥದ್ದು ಯಾವುದೂ ಇಲ್ಲ.

 

ಇದನ್ನು ಓದುತ್ತಿರುವ ಪ್ರಿಯರೇ, ಕತ್ತಲೆಯನ್ನು ಬೆಳಕಾಗಿಸುವ ದೇವರು ನಮ್ಮೊಂದಿಗಿದ್ದಾರೆ. ಅವರನ್ನು ನಿಮ್ಮ ಪಕ್ಕದಲ್ಲಿ ಇಟ್ಟುಕೊಂಡು ಭಯದ ಕತ್ತಲೆಯಲ್ಲಿ ಬದುಕಬೇಕಾದ ಅಗತ್ಯವಿಲ್ಲ. ಆದ್ದರಿಂದ ಆತನನ್ನು ಹಿಡಿದುಕೊಂಡು ಕತ್ತಲೆಯನ್ನು ಬೆಳಕಾಗಿಸಿ. ಭಯವನ್ನು ಹೋಗಲಾಡಿಸಿ. ನಾವು ಆತನನ್ನು ಅಂಟಿಕೊಂಡಾಗ ದೇವರು ತನ್ನ ಶಕ್ತಿಯನ್ನು ನಮ್ಮ ಜೀವನದಲ್ಲಿ ತೋರಿಸುತ್ತಾರೆ. ಪ್ರಕೃತಿಗೂ ಮೀರಿದಂತಹ ವಿಧದಲ್ಲಿ ಕಾರ್ಯಮಾಡುತ್ತಾರೆ ಭಯಪಡಬೇಡ ಎಂಬ ಅನೇಕ ವಾಗ್ದಾನಗಳು ಸತ್ಯವೇದದಲ್ಲಿವೆ. ಆ ವಾಗ್ದಾನದೊಂದಿಗೆ ಭಯ ಉಂಟಾದಾಗ ದೇವರ ಪಾದದಲ್ಲಿ ಬೀಳುವಾಗ, ದೇವರು ಭಯವನ್ನು ತೆಗೆದುಹಾಕುತ್ತಾರೆ. ಹಲ್ಲೇಲೂಯಾ!

- Mrs. ಜಾಸ್ಮಿನ್ ಪಾಲ್ 

 

ಪ್ರಾರ್ಥನಾ ಅಂಶ:

ನಮ್ಮ ಕಚೇರಿಯ ಸೇವೆಗಳಿಗಾಗಿ ಕಚೇರಿ ಸೇವಕರ ಜ್ಞಾನಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet