By Village Missionary Movement
Saturday, 28-Sep-2024ಧೈನಂದಿನ ಧ್ಯಾನ(Kannada) – 28.09.2024
ತ್ಯಾಗಕ್ಕೆ ಪ್ರತಿಫಲವಿದೆ
"ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರ ವಾಗಿ ತೋಚದೆ ಕ್ರೂರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆ ಹೊಂದಿದವರಿಗೆ ಸಮಾಧಾನ ವುಳ್ಳ ನೀತಿಯ ಫಲವನ್ನು ಕೊಡುತ್ತದೆ." - ಇಬ್ರಿಯ 12:11
ಸತ್ಯವೇದದಲ್ಲಿ ಅನೇಕರು ಶಿಕ್ಷೆಯನ್ನು ಅನುಭವಿಸಿ, ತ್ಯಾಗದ ಪಾತ್ರೆಗಳಾಗಿ ಬದುಕಿ ಆಶೀರ್ವಾದವನ್ನು ಪಡೆದದ್ದನ್ನು ಅರಿತಿದ್ದೇವೆ. ನವೋಮಿ ತನ್ನ ಜೀವನದಲ್ಲಿ ಶಿಕ್ಷೆಯನ್ನು ಅನುಭವಿಸಿ, ಮಹಾನ್ ತ್ಯಾಗದ ಹಾದಿಯಲ್ಲಿ ಸಾಗಿದಳು. ಕೊನೆಯಲ್ಲಿ ನವೋಮಿ ಬಹಳವಾಗಿ ಆಶೀರ್ವಾದವನ್ನು ಪಡೆದುಕೊಂಡದ್ದನ್ನು ನೋಡುತ್ತೇವೆ. ಮಾರಾ ನೀರು ಮಧುರವಾದಂತೆ, ನವೋಮಿ ಎಂಬ ಸಮೃದ್ಧಿಯು, ಮಾರಾ ಹಾಗೆ ಕಹಿಯಾಗಿ ಮಾರ್ಪಟ್ಟು ನಂತರ ಸಿಹಿಯಾಗಿ ಮಾರ್ಪಟ್ಟಿತು. ಯೋಬನ ಜೀವನವು ತ್ಯಾಗದ ಗಡಿಯಾಗಿತ್ತು. ನಂತರ ಯೋಬನು ತನ್ನ ಜೀವಿತದಲ್ಲಿ ಎರಡರಷ್ಟು ಪ್ರತಿಫಲವನ್ನು ಪಡೆದದ್ದನ್ನು ನೋಡುತ್ತೇವೆ.
ಮಿಷನರಿಗಳ ಪಿತಾಮಹ ಎಂದು ಹೊಗಳಲ್ಪಟ್ಟ ವಿಲಿಯಂ ಕೇರಿಯ ಜೀವನದ ಹಾದಿಯಲ್ಲಿ, ಅವರ ಬೈಬಲ್ ಭಾಷಾಂತರ ಪ್ರತಿಗಳು, ಮುದ್ರಣಾಲಯಗಳು, ಗುಡಾರ ಮತ್ತು ಇತರ ಅನೇಕ ವಸ್ತುಗಳು, ಹಣ, ಮಗು ಮತ್ತು ಹೆಂಡತಿಯನ್ನು ಕಳೆದುಕೊಂಡರು, ಆದರೂ ಅವರು ಸೋತುಹೋಗದೆ ದುಡಿದು, ಅನೇಕ ಪಾಡುಗಳನ್ನು ಅನುಭವಿಸಿ ತ್ಯಾಗದ ಕುರಿಯಾಗಿ ಬದುಕಿ ಎಂದಿಗೂ ಕಾಲದಿಂದ ಮರೆಯಲ್ಪಡದವರಾಗಿ ಕ್ರೈಸ್ತ ಇತಿಹಾಸದಲ್ಲಿ ಸ್ಥಾನ ಪಡೆದಿದ್ದಾರೆ. ಸತ್ತ ನಂತರವೂ ಮಾತನಾಡುವ ಹೇಬೆಲನ ರಕ್ತದ ಹಾಗೆ ವಿಲಿಯಂ ಕೇರಿ ಸತ್ತರೂ ಅವರ ಚರಿತ್ರೆಯನ್ನು ಮಾತನಾಡಲಾಗುತ್ತಿದೆ.
ಥಾಮಸ್ ಅಲ್ವಾ ಎಡಿಸನ್ ನೂರಕ್ಕೂ ಹೆಚ್ಚು ಆವಿಷ್ಕಾರಗಳ ಸಂಶೋಧಕ. ಅವರ ನಿರಂತರ ಖ್ಯಾತಿಗೆ ಹಿನ್ನೆಲೆ ಅವರ ತ್ಯಾಗದ ಫಲ ಮತ್ತು ಅವರು ಮಾಡಿದ ಅಪರೂಪದ ಸಂಶೋಧನೆಗಳು. ನಮ್ಮ 20 ಲಕ್ಷ ಡಾಲರ್ ಮೌಲ್ಯದ ವಸ್ತುಗಳು ಹೋಗಿಬಿಟ್ಟವೆ ಎಂದು ಅವರ ಪತ್ನಿ ಗೋಳಾಡಿದರು. ಆದರೆ ಎಡಿಸನ್ ತನ್ನ ಹೆಂಡತಿಗೆ, "ಈ ಬೆಂಕಿಯಲ್ಲಿ ನಮ್ಮ ಎಲ್ಲಾ ತಪ್ಪುಗಳು ಸುಟ್ಟು ಬೂದಿಯಾಗಿವೆ" ಮೊದಲು ದೇವರಿಗೆ ಕೃತಜ್ಞತೆ ಹೇಳು. ದೇವರು ಇದನ್ನು ನಮ್ಮ ಹಿತಕ್ಕಾಗಿಯೇ ಅನುಮತಿಸಿದ್ದಾರೆ. ಎಂತಹಾ ಒಂದು ನಷ್ಟ ಬಂದರೂ ಅದು ತನ್ನೊಳಗೆ ಒಂದು ಒಳ್ಳೆಯದನ್ನು ಇಟ್ಟಿರುತ್ತದೆ ಆದ್ದರಿಂದ ನಾವು ಮೊದಲಿನಿಂದ ನಮ್ಮ ಕೆಲಸವನ್ನು ಪ್ರಾರಂಭಿಸೋಣ ಎಂದು ಹೇಳಿದರು. ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಕರ್ತನಾದ ಯೇಸುಕ್ರಿಸ್ತನ ತ್ಯಾಗವು ಪ್ರಪಂಚದಲ್ಲೇ ಶ್ರೇಷ್ಠವಾದದ್ದು. ಅವರನ್ನೇ ನೋಡುತ್ತಾ ಮುನ್ನಡೆಯೋಣ. ಆದ್ದರಿಂದ ನಿಮ್ಮ ಜೀವನದಲ್ಲಿನ ನೋವುಗಳು, ವೈಫಲ್ಯಗಳು ಮತ್ತು ಕಹಿ ಅನುಭವಗಳನ್ನು ನೆನೆಸಿ ನೆನೆಸಿ ಹಿಂಜಾರಿಹೋಗದೇ ಮುನ್ನಡೆಯೋಣ.
ಶಿಲುಬೆಯಿಲ್ಲದೆ ವಿಮೋಚನೆ ಇಲ್ಲ!
ಕೆಂಪು ಸಮುದ್ರವಿಲ್ಲದೆ ಕಾನಾನ್ ಇಲ್ಲ!
ಪರೀಕ್ಷೆಯಿಲ್ಲದೆ ಸಾಧನೆ ಇಲ್ಲ!
ನೋವಿಲ್ಲದೆ ಗೆಲುವಿಲ್ಲ!
- Bro. ಸಮುವೇಲ್ ಮೋರಿಸ್
ಪ್ರಾರ್ಥನಾ ಅಂಶ:
ಸಭೆ ಇಲ್ಲದ ಸಹ ಸೇವಕರಿಗೆ ಸಭೆಗಳನ್ನು ನಿರ್ಮಿಸಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482