Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.04.2021
Share:

By Village Missionary Movement

Friday, 30-Apr-2021

ಧೈನಂದಿನ ಧ್ಯಾನ(Kannada) – 30.04.2021

ತಿರುಗಿ ಬಾ

"...ಕಳೆದುಹೋದದ್ದು ಸಿಕ್ಕುವ ತನಕ ಅದನ್ನು ಹುಡುಕಿಕೊಂಡು ಹೋಗದೆ ಇದ್ದಾನೇ?" - ಲೂಕ 15:4

ಒಬ್ಬ ಕುರುಬನ ಬಳಿ ನೂರಕ್ಕೂ ಹೆಚ್ಚಾದ ಕುರಿಗಳು ಇದ್ದವು. ತನ್ನ ಹಿಂಡಿನ ಮೇಲೆ ಬಹಳ ಎಚ್ಚರಿಕೆಯಿಂದ ಇದ್ದ ಅವರಿಗೆ ಕೆಲ ತಿಂಗಳ ಮುಂಚೆ ಹುಟ್ಟಿದ ಕುರಿಮರಿಯ ಮೇಲೆ ಬಹಳ ಇಷ್ಟ. ಅದಕ್ಕೆ ಡಾಲಿ ಎಂದು ಹೆಸರಿಟ್ಟು ಮುದ್ದಾಗಿ ಕರೆಯುತ್ತಿದ್ದರು. ಆದರೆ ಅದು ಮಾತ್ರ ಚೇಷ್ಟೆಯ ಕುರಿಯಾಗಿ ಬೆಳೆಯಿತು. ಕುರುಬನಿಗೆ ತಿಳಿಯದೆ ತನಗೆ ಇಷ್ಟವಾದ ಸ್ಥಳಕ್ಕೆಲ್ಲಾ ಹೋಗಿ ಜಾಲಿಯಾಗಿ ಸುತ್ತಿ ಬಿಟ್ಟು ಸಾಯಂಕಾಲ ಹಿಂಡಿನೊಳಗೆ ಬಂದು ಸೇರಿಕೊಳ್ಳುತ್ತಿತ್ತು. ಇದರಂತೆ ಒಂದು ದಿನ ಗುಂಪಿನಿಂದ ತಪ್ಪಿಸಿಕೊಂಡು ಹೋಗಿ ಒಂದು ದೊಡ್ಡ ಅಪಾಯದಲ್ಲಿ ಸಿಕ್ಕಿಕೊಂಡಿತು. ಕೂಗುತ್ತಾ ಗೋಳಾಡಿತು, ಅದು ಯಾರ ಕಿವಿಗೂ ಕೇಳಲಿಲ್ಲ. ಸಂಜೆ ಕತ್ತಲಾಗುವ ಸಮಯದಲ್ಲಿ ಡಾಲಿಯನ್ನು ಹುಡುಕಿದ ಕುರುಬನು ಅದನ್ನು ಕಾಣದೆ ಅಲ್ಲಿ ಇಲ್ಲಿ ಹುಡುಕಾಡುತ್ತಾ ಅದರ ಹೆಸರನ್ನು ಹೇಳಿ ಕೂಗಿಕೊಂಡೇ ಹೋದನು. ಕುರುಬನ ಶಬ್ಧವನ್ನು ಕೇಳಿದ ಡಾಲಿ ನಾನು ಇಲ್ಲೇ ಇದ್ದೇನೆ ನನ್ನನ್ನು ಕಾಪಾಡಿ ಎಂಬಂತೆ ದುರಂತ ಶಬ್ದದಿಂದ ಕಿರುಚಿತು. ಕುರುಬನು ಅದನ್ನು ಕಂಡು ಹಿಡಿದು ಹೆಗಲ ಮೇಲೆ ಹೊತ್ತುಕೊಂಡು ಹೋದನು. ನನ್ನನ್ನು ಕ್ಷಮಿಸಿಬಿಡಿ ಎಂಬಂತೆ ಕುರುಬನ ಮುಖವನ್ನು ನೋಡಿತು.

ಸತ್ಯವೇದದಲ್ಲಿ ಒಬ್ಬ ತಂದೆಯ ಇಬ್ಬರು ಕುಮಾರರಲ್ಲಿ, ಕಿರಿಯವನು ತನ್ನ ಸ್ನೇಹಿತರನ್ನು ಮತ್ತು ಲೌಕಿಕ ಸಂತೋಷವನ್ನು ಕಂಡು ಅದನ್ನು ಅನುಭವಿಸಲು ತನ್ನ ತಂದೆಯ ಬಳಿ ಆಸ್ತಿಯಲ್ಲಿ ತನ್ನ ಪಾಲನ್ನು ತೆಗೆದುಕೊಂಡು ತನ್ನ ಮನೆಯನ್ನು ಬಿಟ್ಟು ಹೊರಟು ಹೋದನು. ಆದರೆ ತಂದೆ ಮಾತ್ರ ತನ್ನ ಮಗ ಎಂದಾದರೂ ಒಂದು ದಿನ ಬರುತ್ತಾನೆ ಎಂದು ಕಾಯುತ್ತಲೇ ಇದ್ದರು. ಕಿರಿಯ ಮಗನು ತನ್ನ ಸ್ನೇಹಿತರೊಂದಿಗೆ ಲೌಕಿಕ ಸಂತೋಷವನ್ನು ಅನುಭವಿಸಿದನು. ಒಂದು ದಿನ ತನ್ನ ಹಣವೆಲ್ಲಾ ಖಾಲಿಯಾಯಿತು, ಸ್ನೇಹಿತರು ಕೈಬಿಟ್ಟು ಹೊರಟುಹೋದರು. ಅವನು ತನ್ನ ಆಹಾರಕ್ಕೂ ಕೂಡ ದಾರಿಯಿಲ್ಲದೆ ಇರುವಾಗ ತಂದೆಯ ಹಾರೈಕೆ, ಸಂರಕ್ಷಣೆಯನ್ನು ನೆನಪಿಸಿಕೊಂಡು ತಂದೆಯ ಬಳಿ ಬಂದನು. ಅವನು ಮಗನ ರೀತಿಯಲ್ಲಿ ಅಲ್ಲದೇ ಕೊಳೆಯ ವಸ್ತ್ರಗಳೊಂದಿಗೆ, ಕರೆ ಹಿಡಿದ ದುಃಖ ಮುಖದೊಂದಿಗೆ ಬಂದನು. ಆದರೂ ತಂದೆ ಓಡಿಬಂದು ಅವನನ್ನು ತಬ್ಬಿಕೊಂಡು, ಮುತ್ತಿಟ್ಟು ಅವನಿಗೆ ವಸ್ತ್ರವನ್ನು ಬದಲಾಯಿಸಿ ಉಂಗುರವನ್ನು ಹಾಕಿ ಪುನಃ ತನ್ನ ಮಗನಾಗಿ ಅಂಗೀಕರಿಸಿದರು.

ಇದನ್ನು ಓದುತ್ತಿರುವ ಪ್ರಿಯರೇ! ಆ ಕುರಿಯು ತನಗೆ ಇಷ್ಟಬಂದಂತೆ ಹೊರಟುಹೋದ ಹಾಗೆ, ಹಿರಿಯ ಮಗನು ತನ್ನ ಸ್ನೇಹಿತರು, ಲೌಕಿಕ ಸಂತೋಷಕ್ಕಾಗಿ ಮನೆಬಿಟ್ಟು ಹೊರಟುಹೋದ ಹಾಗೆ, ನಾವು ಕೆಲವು ಮಾಯ ರೂಪವಾದ ಪ್ರೀತಿಗಳನ್ನು ಕಂಡು ಪರಲೋಕ ತಂದೆಯಾಗಿರುವ ಯೇಸುವನ್ನು ಬಿಟ್ಟು ಅವರ ಪ್ರಸನ್ನತೆಯನ್ನು ಬಿಟ್ಟು, ಅವರು ನಮ್ಮ ಮೇಲೆ ಇಟ್ಟಿರುವ ಯೋಜನೆಯನ್ನು ಬಿಟ್ಟು ದೂರ ಹೋಗಿ ಎಲ್ಲೋ  ಹೋಗುತ್ತಿದ್ದೇವಾ? ಒಂದು ಕ್ಷಣ ನಿಂತು ಯೋಚಿಸೋಣ. ನಮ್ಮ ಪರಲೋಕದ ತಂದೆ, ತಾಯಿಯ ಗರ್ಭದಲ್ಲಿ ರೂಪಿಸಲ್ಪಟ್ಟಾಗಿನಿಂದ ಇಂದಿನವರೆಗೂ ಉತ್ತಮವಾಗಿ ನಿಮ್ಮನ್ನು ಪರಾಮರ್ಶಿಸುತ್ತಾ, ಕಾಪಾಡುತ್ತಾ,ಅವಶ್ಯಕತೆಗಳನ್ನು ಪೂರೈಸಿದರು ಎಂಬುದನ್ನು ಯೋಚಿಸಿ ನೋಡಿರಿ. ಅವರ ಬಳಿಗೆ ತಿರುಗಿ ಬನ್ನಿರಿ. ಪರಲೋಕದ ತಂದೆ ಇಂದು ನಿಮ್ಮನ್ನು ಅಂಗೀಕರಿಸಲು, ಅದೇ ರೀತಿಯ ಪ್ರೀತಿಯೊಂದಿಗೆ ನಿಮ್ಮನ್ನು ಪ್ರೀತಿಸಲು ಆತುರದಿಂದ ಇದ್ದಾರೆ. ಇರುವ ಸ್ಥಿತಿಯಲ್ಲೇ ಬನ್ನಿರಿ ಎರಡು ಕೈಗಳನ್ನು ಚಾಚಿ ಕಾಯುತ್ತಿದ್ದಾರೆ.
-    J. ಎಬಿನೇಜರ್

ಪ್ರಾರ್ಥನಾ ಅಂಶ:-
ವಿವಾಹಕ್ಕಾಗಿ ಕಾಯುತ್ತಿರುವ ಮಿಷನರಿ ಮಕ್ಕಳ ವಿವಾಹ ಕಾರ್ಯಕ್ಕಾಗಿ, ಸಂತಾನ ಭಾಗ್ಯಕ್ಕಾಗಿ ಕಾದಿರುವ ಮಿಷನರಿ ದಂಪತಿಗಳಿಗಾಗಿ ದೇವರು ಅವರಿಗೆ ಅದ್ಭುತವನ್ನು ಮಾಡುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet