Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.05.2021
Share:

By Village Missionary Movement

Saturday, 01-May-2021

ಧೈನಂದಿನ ಧ್ಯಾನ(Kannada) – 01.05.2021

ಕಾಪಾಡುವ ದೇವರು

"ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು;..." - ಯೆಶಾಯ 41:10

ಕಳೆದ ವರ್ಷದ ಅನೇಕ ತಿಂಗಳು ನಾವು ಕೊರೋನಾ ಎಂಬ ವ್ಯಾಧಿಯ ಆಪತ್ತು ಅದರ ನಿಮಿತ್ತವಾಗಿ ಲಾಕ್ ಡೌನ್, ಆರ್ಥಿಕ ಪರಿಸ್ಥಿತಿಯು ಕುಗ್ಗಿ ಹೋಗಿ ಬಹುದೊಡ್ಡ ಬಾಧೆಗಳನ್ನು ಅನುಭವಿಸಿ ದಾಟಿ ಬಂದಿದ್ದೇವೆ. ಪುನಃ ಕೊರೋನಾ 2 ನೇ ಅಲೆ, 3 ನೇ ಅಲೆ ಎಂದು ಪ್ರಪಂಚವನ್ನೇ ಈ ವ್ಯಾಧಿಯು ಅಲುಗಾಡಿಸುತ್ತಿದೆ. ಯಾವಾಗ ಈ ವೇದನೆಯು ತೀರಿ ಹೋಗುತ್ತದೋ? ಮುಂದೆ ಏನು ನಡೆಯುತ್ತದೋ ಎಂಬ ಭಯ ಮಾನವ ಕುಲವನ್ನೇ ಬೆಚ್ಚಿಬೀಳಿಸುತ್ತಿದೆ.

ಪುನಃ ಲಾಕ್ ಡೌನಾ? ಎಂದು ಜನರು ಹೆದರುತ್ತಿದ್ದಾರೆ. ಇನ್ನೂ ಕೆಲವು ವರ್ಷಗಳು ಈ ವ್ಯಾಧಿಯು ಇದ್ದೇ ಇರುತ್ತದೆ, ಇದರೊಂದಿಗೆ ಜೀವಿಸಲು ಅಭ್ಯಾಸ ಮಾಡಿಕೊಳ್ಳಿರಿ ಎಂದು ಹೇಳಲ್ಪಡುತ್ತಿದೆ. ಚುಚ್ಚುಮದ್ದು, ಮಾಸ್ಕ್ ಮತ್ತು ಸಂರಕ್ಷಣೆಯ ವಿಧಾನಗಳನ್ನು ಪಾಲಿಸಬೇಕಾಗಿರುವುದು ಖಂಡಿತವೆಂದು ಸರ್ಕಾರವು ಘೋಷಿಸುತ್ತಿದೆ. ಆದರೂ ಜನರ ಬಳಿ ಒಂದು ರೀತಿಯ ಭೀತಿ, ಚಿಂತೆ ನಮ್ಮ ಜೀವನ ಏನಾಗುತ್ತದೋ? ಎಂಬ ಭಯ, ಯಾವಾಗ ನಮ್ಮ ದೇಶ ಸಹಜ ಸ್ಥಿತಿಗೆ ಬರುತ್ತದೆಂಬ ಕಾತುರ, ಮನೋವೇದನೆ, ಟೆನ್ಶನ್ ಕಾಣುತ್ತಲೇ ಇದೆ.

ಲೋಕವನ್ನೇ ಸ್ವಂತ ಮಾಡಿಕೊಳ್ಳಬೇಕೆಂದು ಬಯಸಿದ ನೆಪೋಲಿಯನ್ ಯುದ್ಧದಲ್ಲಿ ಬ್ರಿಟನ್ ಬಳಿ ಸೋಲನ್ನು ಕಂಡು ಸೇನೆಯಿಂದ ಹಿಡಿಯಲ್ಪಟ್ಟು ಆಫ್ರಿಕಾ ಸೆರೆಮನೆಯಲ್ಲಿ ಬಂಧಿಸಲ್ಪಟ್ಟರು. ಬಹಳ ಮನೋ ದುಃಖದಿಂದ ತನ್ನ ಜೀವನವನ್ನು ಒಂಟಿಯಾಗಿ ಸಾಗಿಸಿದರು. ಆತನನ್ನು ನೋಡಲು ಬಂದ ಒಬ್ಬ ಸ್ನೇಹಿತನು ಚೆಸ್ ಬೋರ್ಡ್ ಒಂದನ್ನು ಆತನ ಕೈಗೆ ಕೊಟ್ಟು ಇದು ನಿಮ್ಮ ಆಲೋಚನೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು. ಬಹಳ ಒತ್ತಡದಲ್ಲಿದ್ದ ನೆಪೋಲಿಯನ್ ಅದನ್ನು ಲೆಕ್ಕಿಸಲಿಲ್ಲ. ಕೆಲವು ದಿನಗಳ ನಂತರ ರೋಗದಿಂದ ಮರಣಹೊಂದಿದರು. ನಂತರದ ದಿನಗಳಲ್ಲಿ ಫ್ರಾನ್ಸ್ ದೇಶದಲ್ಲಿ ಇರುವ ಎಕ್ಸಿಬಿಷನ್ ನಲ್ಲಿ ಆತನು ಉಪಯೋಗಿಸಿದ ಆ ಚೆಸ್ ಬೋರ್ಡನ್ನು ಜನರ ಮುಂದೆ ಹರಾಜಿಗೆ ಇಟ್ಟರು. ಅದನ್ನು ಪರಿಶೀಲಿಸಿದಾಗ ಆ ಸೆರೆಮನೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಇರುವ ದಾರಿಯು ನಂತರ ಕಾಣಿಸಿತು. ಒತ್ತಡದ ನಿಮಿತ್ತವಾಗಿ ನೆಪೋಲಿಯನ್ ಅದನ್ನು ಗಮನಿಸಲಿಲ್ಲ.

ನಮ್ಮ ದೇವರು ನಮ್ಮ ಕೈಯಲ್ಲಿ ಬೆಲೆಯುಳ್ಳ ಬೈಬಲ್ ನ್ನು ನಮ್ಮ ಸಂರಕ್ಷಣೆಗಾಗಿ ಕೊಟ್ಟಿದ್ದಾರೆ. ಚಿಂತೆ, ಭಯ ಉಂಟಾದಾಗ ಅದನ್ನು ತೆರೆದು ಓದಲು ಮರೆತು ಹೋಗಬೇಡಿರಿ. ಪ್ರಿಯರೇ! ಬೈಬಲ್ ವಾಕ್ಯಗಳು  ಉತ್ತಮವಾದ ಔಷಧಿ, ಸಂರಕ್ಷಣೆ, ಆರೋಗ್ಯ ಎಲ್ಲವೂ ಬೆರೆತಿರುವಂತದ್ದು ಆದ್ದರಿಂದ ಪ್ರತಿದಿನವೂ ಬೈಬಲ್ ನ್ನು ಓದಿ, ಧ್ಯಾನಿಸೋಣ. ಈ ವ್ಯಾಧಿಯ ಬಗ್ಗೆ ಭಯಪಡಬೇಕಾದ ಅವಶ್ಯಕತೆಯಿಲ್ಲ. ಕಾಪಾಡುವ ದೇವರು ನಿಮ್ಮೊಂದಿಗೂ ನಿಮ್ಮ ಕುಟುಂಬದವರೊಂದಿಗೂ ಇದ್ದಾರೆ. ದೇವರ ಪ್ರಸನ್ನತೆ ನಿಮ್ಮನ್ನು ಆವರಿಸಲಿ. ಆಮೆನ್!
-    Mrs. ಸರೋಜಾ ಮೋಹನ್ ದಾಸ್

ಪ್ರಾರ್ಥನಾ ಅಂಶ:-
ಈ ತಿಂಗಳೆಲ್ಲಾ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet