Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.10.2024
Share:

By Village Missionary Movement

Wednesday, 23-Oct-2024

ಧೈನಂದಿನ ಧ್ಯಾನ(Kannada) – 23.10.2024

 

ತೋರು ಬೆರಳು

 

"ನೀತಿಯ ನಿವಿುತ್ತವಾಗಿ ಹಿಂಸೆಯನ್ನು ತಾಳಿಕೊಳ್ಳುವವರು ಧನ್ಯರು;…" - ಮತ್ತಾಯ 5:10

 

1960 ರಲ್ಲಿ, ಫ್ಲೋರೆಸ್ಕೊ ಎಂಬ ಬೋಧಕರ ಮೇಲೆ ಭಯೋತ್ಪಾದಕರು ದಾಳಿ ಮಾಡಿದರು. ತನ್ನೊಂದಿಗಿರುವ ದೇವರು ಮಕ್ಕಳನ್ನು ಮತ್ತು ಸೇವಕರನ್ನು ತೋರಿಸಿಕೊಟ್ಟರೆ ನಿಮ್ಮನ್ನು ಬಿಡುಗಡೆ ಮಾಡುತ್ತೇವೆ ಎಂದು ಜೀವ ತಪ್ಪಿಸಿಕೊಳ್ಳುವ ಅವಕಾಶವನ್ನು ನೀಡಲಾಯಿತು. ಆ ಸೇವಕರು ಅದನ್ನು ನಿರಾಕರಿಸಿದರು.   

ಆ ನಿರಾಕರಣೆಗೆ ಶಿಕ್ಷೆಯಾಗಿ, ಅವರನ್ನು ಬಿಸಿ-ಬೇಯಿಸಿದ ಕಬ್ಬಿಣದ ಸರಳುಗಳಿಂದ ಚುಚ್ಚಲಾಯಿತು ಮತ್ತು ದಿನಗಟ್ಟಲೆ ಹಸಿವಿನಿಂದ ಬಳಲುತ್ತಿದ್ದ ಇಲಿಗಳನ್ನು ಅವರ ಕೋಣೆಯೊಳಕ್ಕೆ ಬಿಡಲಾಯಿತು. ಕುಳಿತುಕೊಳ್ಳಲು ಸಹ ಸಾಧ್ಯವಾಗದೆ ಎರಡು ವಾರಗಳ ಕಾಲ ಸತತವಾಗಿ ನಿಂತು ಇಲಿಗಳನ್ನು ಓಡಿಸಿದರು. ಕೊನೆಗೆ ಆತನ ಎದುರೇ ತನ್ನ 14 ವರ್ಷದ ಮಗನಿಗೆ ಚಿತ್ರಹಿಂಸೆ ನೀಡಿದ್ದಾರೆ. ಇದನ್ನು ನೋಡಿದ ಆ ಬೋಧಕರು ಗೋಳಾಡಿದರು. ಆ ಗೋಳಾಟದ ನಡುವೆಯೂ ಮಗ ಹೇಳಿದ, "ಅಪ್ಪಾ ನನ್ನನ್ನು ಕೊಂದರೂ ಪರವಾಗಿಲ್ಲ, ಆದರೆ ಕ್ರೈಸ್ತರನ್ನು ತೋರಿಸಿಕೊಟ್ಟ ದ್ರೋಹಿಯ ಮಗ ಎಂಬ ಹೆಸರು ನನಗೆ ಬೇಡ" ಎಂದನು. ತನ್ನ ಮಗನನ್ನು ಸಾಯಲು ಕೊಟ್ಟ ನಂತರವೂ ಶಿಲೆಯಾಗಿ ನಿಂತರು ಆ ಸೇವಕರು.   

 

ಸತ್ಯವೇದವು ನಾಶನದ ಮಗನು ಎಂದು ಒಬ್ಬನನ್ನು ಎತ್ತಿ ತೋರಿಸುತ್ತಿದೆ. ಹೌದು, ಅವನೇ ಇಸ್ಕರಿಯೋತ ಯೂದನು. (ಯೋಹಾನ 17:12) ಮೂರುವರೆ ವರ್ಷಗಳ ಕಾಲ ಕ್ರಿಸ್ತನೊಂದಿಗೆ ಇದ್ದವನು, ಸ್ನೇಹಿತನಂತೆ ಪ್ರೀತಿಸಲ್ಪಟ್ಟವನು. ಯೇಸು ಮಾಡಿದ ಅದ್ಭುತಗಳನ್ನು ಮತ್ತು ಸೂಚಕಗಳನ್ನು ಕಣ್ಣಾರೆ ಕಂಡವನು. ಅವರೊಂದಿಗೆ ಊಟ ಮಾಡಿದವನು. ಅವನಿಗೆ ಹೇಗಾದರೂ ಮನಸ್ಸು ಬಂತೋ ಗೊತ್ತಿಲ್ಲಾ ಆ ರಕ್ಷಕನನ್ನು, ಪರಿಶುದ್ಧನನ್ನು, ಯಾವ ದೋಷವಿಲ್ಲದವನನ್ನು ಮೂವತ್ತು ಬೆಳ್ಳಿಯ ನಾಣ್ಯಗಳಿಗೆ ತೋರಿಸಿಕೊಡಲು! ನಂತರ ಅದನ್ನು ತೆಗೆದುಕೊಂಡವನಿಗೆ ಬದುಕುವುದಕ್ಕಾದರೂ ಸಾಧ್ಯವಾಗುತ್ತದಾ? ಅಯ್ಯೋ ಪರಿತಾಪ! ಕರುಳು ಹೊರಬಂದು, ನೇಣುಬಿಗಿದುಕೊಂಡು ಸತ್ತನು. ಮೃತಪಟ್ಟರು. ಆ ಬೆಳ್ಳಿ ನಾಣ್ಯದಿಂದ ಭೂಮಿಯನ್ನು ಖರೀದಿಸಿದರು. ಈ ಭೂಮಿಯನ್ನು ಇಂದಿಗೂ "ರಕ್ತ ಭೂಮಿ" ಎಂದು ಕರೆಯಲಾಗುತ್ತದೆ. ಅಪೊಸ್ತಲ 1:18. 

        

ನನಗೆ ಪ್ರಿಯವಾದವರೇ! ನಮ್ಮ ಸ್ಥಿತಿ ಏನು? ಇಸ್ಕರಿಯೋತ ಯೂದನಂತೆ ಕ್ಷುಲ್ಲಕ ಲಾಭಗಳಿಗಾಗಿ ನಾವು ನಮ್ಮ ತೋರು ಬೆರಳಿನಿಂದ ಇತರರನ್ನು ದೂಷಿಸಿ ಹಿಂಸಿಸುತ್ತಿದ್ದೇವಾ? ಅಥವಾ ನೀತಿಯ ನಿಮಿತ್ತವಾಗಿ ಹಿಂಸೆಯನ್ನು ಸಹಿಸುತ್ತಿದ್ದೇವಾ? ಇತರರ ಕಡೆಗೆ ಬೆರಳು ತೋರಿಸಿ ಅಪರಾಧ ಹೊರಿಸುವಾಗ, ಒಂದು ಬೆರಳು ಮತ್ತೊಬ್ಬರನ್ನು, ಹೆಬ್ಬೆರಳು ನಮ್ಮ ಸೃಷ್ಟಿಕರ್ತನನ್ನು, ಉಳಿದ ಮೂರು ಬೆರಳುಗಳು ನಮ್ಮನ್ನು ತೋರಿಸುತ್ತಿವೆ ಎಂಬುದನ್ನು ನಾವು ನಿಧಾನವಾಗಿ ಅರಿತುಕೊಂಡರೆ, ದೇವರ ನ್ಯಾಯ ತೀರ್ಪಿನಿಂದ ತಪ್ಪಿಸಿಕೊಳ್ಳಬಹುದು. ದೇವರ ಕರುಣೆ ನಮ್ಮ ಮೇಲೆ ಇರಲಿ!

- Sis. ಮಂಜುಳಾ

 

ಪ್ರಾರ್ಥನಾ ಅಂಶ:

ನಮ್ಮ ಯುವ ಶಿಬಿರದಲ್ಲಿ ಅಭಿಷೇಕವನ್ನು ಹೊಂದಿಕೊಂಡ ಯೌವನಸ್ಥರು ಪ್ರತಿದಿನ ಅದರಲ್ಲಿ ಬೆಳೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet