Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.10.2024
Share:

By Village Missionary Movement

Thursday, 24-Oct-2024

ಧೈನಂದಿನ ಧ್ಯಾನ(Kannada) – 24.10.2024

 

ಅವರ ದೃಷ್ಟಿಯಲ್ಲಿ ಎಲ್ಲರೂ ಸಮಾನರೇ

 

"ನಿಮ್ಮ ದೇವರಾದ ಕರ್ತನು... ಪರಾಕ್ರಮಿಯೂ ಭಯಂಕರನೂ. ಆತನು ಮುಖದಾಕ್ಷಿಣ್ಯ ನೋಡುವದಿಲ್ಲ,…" - ಧರ್ಮೋಪದೇಶಕಾಂಡ 10:17

  

ಅಜಯ್ ತನ್ನ ಜೀವನದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಪ್ರತಿಷ್ಠಿತ ವಿಶ್ವವಿದ್ಯಾನಿಲಯದಿಂದ M.B.A ಪದವಿ ಪಡೆದ ನಂತರ ಉತ್ತಮ ಉದ್ಯೋಗವನ್ನು ಹುಡುಕುತ್ತಿದ್ದನು. ಕರ್ತನು ಒಂದು ಹಳ್ಳಿಯಲ್ಲಿ ತನ್ನ ಸುವಾರ್ತೆ ಸೇವೆಯನ್ನು ಮಾಡಲು ಆತನನ್ನು ಕರೆದರು. ಸಾಕಷ್ಟು ಮಾನಸಿಕ ಹೋರಾಟದ ನಂತರ, ಅಜಯ್ ದೇವರ ಕರೆಯುವಿಕೆಗೆ ವಿಧೇಯನಾದನು. ಇವನೊಂದಿಗೆ ಸೇವೆ ಮಾಡುವ ಕ್ಲೆಮೆಂಟ್ ಎಂಬ 12 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಕಟ್ಟಡ ಕೆಲಸವನ್ನು ಮಾಡಿದವನು ನೇಮಿಸಲ್ಪಟ್ಟನು.

  

ಇಬ್ಬರೂ ಬೇರೆ ಬೇರೆ ಎಂಬ ಭಾವನೆ ಅಜಯ್ ಗೆ ಏರ್ಪಟ್ಟಿತು. ತಾನೊಂದು ಸರಿಯಾದ ನಿರ್ಧಾರ ತೆಗೆದುಕೊಂಡಂತೆ ಕಾಣಲಿಲ್ಲ. "ಉನ್ನತ ಶಿಕ್ಷಣ ಪಡೆದಿರುವ ನಾನು ಸರಿಯಾದ ವಿದ್ಯಾಭ್ಯಾಸವಿಲ್ಲದ ಕ್ಲೆಮೆಂಟ್ ಜೊತೆ ಸೇರಿ ಹಳ್ಳಿಯಲ್ಲಿ ಸೇವೆ ಮಾಡುವುದು ನನ್ನ ಅರ್ಹತೆಯಲ್ಲ" ಎಂದು ಯೋಚಿಸಿದನು. “ನಾನೇಕೆ ಬೈಬಲ್ ಕಾಲೇಜಿನಿಂದ ಪದವಿ ಪಡೆದು ಅತ್ಯುತ್ತಮ ವಿದ್ಯಾವಂತರ ಮಧ್ಯದಲ್ಲಿ ಸೇವೆಮಾಡಬಾರದು” ಎಂದು ಯೋಚಿಸುತ್ತಾ, ದೇವರ ಚಿತ್ತವನ್ನು ತಿಳಿಯಲು ಮೊಣಕಾಲಿನಲ್ಲಿ ನಿಂತು ಆತನ ಚಿತ್ತವನ್ನು ತಿಳಿಸುವಂತೆ ಪ್ರಾರ್ಥಿಸಿದಾಗ, ದೇವರು ಪೇತ್ರನನ್ನು, ಪೌಲನನ್ನು ಅಜಯ್‌ನ ಮುಂದೆ ತೋರಿಸಿದರು.

     

ಪೇತ್ರನು ಒಬ್ಬ ಸಾಮಾನ್ಯ ಮೀನುಗಾರ. ಪೌಲನ ಶಿಕ್ಷಣವು ಅನೇಕ ವಿಶ್ವವಿದ್ಯಾಲಯದ ಪದವೀಧರರಿಗೆ ಬಹುತೇಕ ಸಮಾನವಾಗಿದೆ. ಇವರಿಬ್ಬರ ನಡುವೆ ಹಲವು ವ್ಯತ್ಯಾಸಗಳಿವೆ. ಆದರೂ ಇಬ್ಬರೂ ಒಂದೇ ರಕ್ಷಣೆಯನ್ನು ಹೊಂದಿದವರಾಗಿ, ಒಂದೇ ಸುವಾರ್ತೆಯನ್ನು ಬೋಧಿಸಿದರು. ಬಹುಶಃ ಪೇತ್ರನು ಪೌಲನ ಶೈಕ್ಷಣಿಕ ಅರ್ಹತೆಗಳು ಮತ್ತು ಪದವಿಗಳ ಬಗ್ಗೆ ತನ್ನೊಳಗೆ ಕೀಳರಿಮೆ ಸಂಕೀರ್ಣವನ್ನು ಹೊಂದಿರಬಹುದು. ಅಂತೆಯೇ, ಯೇಸುವಿನೊಂದಿಗೆ ಪೇತ್ರನ ನೇರ ಅನ್ಯೋನ್ಯತೆಯ ಬಗ್ಗೆ ಪೌಲನು ಅಸೂಯೆಪಟ್ಟಿರಬಹುದು. ಆದರೆ ಅಶಿಕ್ಷಿತ ಪೇತ್ರನು ಸಹ ಕೆಲವು ಸನ್ನಿವೇಶಗಳನ್ನು ಪೌಲನಿಗಿಂತ ಚೆನ್ನಾಗಿ ಅರ್ಥಮಾಡಿಕೊಂಡಿರಬಹುದು. ಹೆಚ್ಚಾದದ್ದೋ, ಕಡಿಮೆಯಾದದ್ದೋ ಎಲ್ಲಾ ಆಲೋಚನೆಗಳು ಕರ್ತನಿಂದ ಹೊರಹೊಮ್ಮುವ ಸಮಾನ ಕರುಣೆಯ ಮುಂದೆ ಏನೂಇಲ್ಲದ್ದೇ.

 

ಯೆಹೂದ್ಯ ಮಾರ್ಗದ ವೈರಾಗ್ಯದೊಂದಿಗೆ ಕ್ರೈಸ್ತರನ್ನು ಕ್ರೂರವಾಗಿ ಹಿಂಸಿಸಿದ ಪೌಲನು ಕರ್ತನ ತಾಳ್ಮೆಯ ಸೇವಕನಾಗಿ ಮಾರ್ಪಟ್ಟಂತೆಯೇ, ಸಂದೇಹ ಪಡುವ ಆತುರ ಬುದ್ಧಿಯುಳ್ಳ ಅವಿದ್ಯಾವಂತ ಪೇತ್ರನು ಮೊದಲನೆಯ ಅಪೊಸ್ತಲರಲ್ಲಿ ಒಬ್ಬನಾದನು. ಹಾಗಾಗಿ ನಾವೆಲ್ಲರೂ ದೇವರ ದ್ರಾಕ್ಷಿತೋಟದಲ್ಲಿ, ಒಂದೇ ರೀತಿಯ ಸಹ ಸೇವಕರೇ ಎಂಬುದನ್ನು ಅಜಯ್ ತಿಳಿದುಕೊಂಡನು. ಯಶಸ್ವಿಯಾಗಿ ಸೇವೆಯಲ್ಲಿ ಮುನ್ನಡೆದನು. ದೇವರೇ! ಲೌಕಿಕ ಸ್ಥಾನಮಾನವನ್ನು ತ್ಯಜಿಸಿ ಸಹ ಸೇವಕರೊಂದಿಗೆ ಸೇರಿ ಉತ್ಸಾಹವಾಗಿ ಸೇವೆ ಮಾಡಲು ಕೃಪೆ ನೀಡು!

- Mrs. ಜಾಸ್ಮಿನ್ ಪಾಲ್ 

 

ಪ್ರಾರ್ಥನಾ ಅಂಶ:

Arise Joshua & Esther ಯೋಜನೆಯಲ್ಲಿ ಎಲ್ಲಾ ಸೇವಕರು ಮತ್ತು ಬೋಧಕರ ಮಕ್ಕಳು ಸೇರಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet matbet giriş holiganbet holiganbet güncel holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet grandpashabet holiganbet grandpashabet grandpashabet grandpashabet perabet perabet giriş padişahbet padişahbet giriş grandpashabet grandpashabet grandpashabet casinolevant grandpashabet meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş