Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.10.2024
Share:

By Village Missionary Movement

Friday, 25-Oct-2024

ಧೈನಂದಿನ ಧ್ಯಾನ(Kannada) – 25.10.2024

 

ಧನ್ಯರು

 

"ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದ ಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು" - ಕೀರ್ತನೆ 1:2

 

ಅಮೆರಿಕದಲ್ಲಿ ನಾಸ್ತಿಕರಿಗಾಗಿ ಕೂಟವೊಂದನ್ನು ತನ್ನ ಸ್ನೇಹಿತರೊಬ್ಬರು ಆಯೋಜಿಸುತ್ತಿದ್ದಾರೆಂದು ತಿಳಿದ ಅವರ ಸ್ನೇಹಿತರು ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, "ಸ್ನೇಹಿತನೇ! ನೀನು ಹುಟ್ಟಿನಿಂದ ಕ್ರೈಸ್ತನಾದರೂ ನಾಸ್ತಿಕರಿಗಾಗಿ ಕೂಟವನ್ನು ನಾಯಕತ್ವ ವಹಿಸಿ ಮುನ್ನಡೆಸುತ್ತಿರುವುದನ್ನು ತಿಳಿದು ವೇದನೆ ಪಡುತ್ತೇನೆ", ಎಂದರು. ಅದಕ್ಕೆ ಆ ನಾಸ್ತಿಕ ಸ್ನೇಹಿತ, "ಸ್ನೇಹಿತನೇ! ನೀನು ಕೂಡ ಬಾ ನಾನು ಏತಕ್ಕಾಗಿ ನಾಸ್ತಿಕನಾದೆ ಎಂಬುದನ್ನು ವಿವರಿಸುತ್ತೇನೆ" ಎಂದರು. ಕ್ರೈಸ್ತ ಮಿತ್ರನೂ ನಾಸ್ತಿಕ ಸ್ನೇಹಿತನನ್ನು ಖುದ್ದಾಗಿ ಮಾತನಾಡಿಸಲು ಹೋದರು. ನಾಸ್ತಿಕ ಗೆಳೆಯನು ನಾಸ್ತಿಕ ವಿಚಾರಗಳಿರುವ ಪುಸ್ತಕಗಳನ್ನು ಜೋಡಿಸುತ್ತಿದ್ದರು. ಅವರು ಅಲ್ಲಿ ತನ್ನ ಸ್ನೇಹಿತನನ್ನು ನೋಡಿದಾಗ, ಬೈಬಲ್ ಅನ್ನು ಎಲ್ಲಾ ನಾಸ್ತಿಕ ಪುಸ್ತಕಗಳ ಕೆಳಗೆ ಇರಿಸಿ, ಸ್ನೇಹಿತನೇ! ಪುಸ್ತಕಗಳನ್ನು ಮೇಲಿನಿಂದ ಕೆಳಕ್ಕೆ ಪೇರಿಸಿಟ್ಟಿದ್ದೇನೆ. ಮೇಲಿನ ನಾಸ್ತಿಕ ಗ್ರಂಥವೇ ಶ್ರೇಷ್ಠ ಎಂದರು. ಕ್ರೈಸ್ತ ಸ್ನೇಹಿತ ಹೇಳಿದರು ಗೆಳೆಯ! ನೀನು ಜೋಡಿಸಿರುವುದು ಸರಿಯಾಗಿಯೇ ಇದೆ, ಎಲ್ಲಾ ಪುಸ್ತಕಗಳು ಸತ್ಯವೇದದ ಆಧಾರದ ಮೇಲೆಯೇ ಬರೆಯಲ್ಪಟ್ಟಿದೆ. ಕೂಡಲೇ ನಾಸ್ತಿಕ ಮಿತ್ರನು ಕೆಳಗಿದ್ದ ಸತ್ಯವೇದವನ್ನು ಮೇಲಿಟ್ಟರು. ಕೂಡಲೇ ಕ್ರೈಸ್ತ ಮಿತ್ರನು ನಾಸ್ತಿಕ ಗೆಳೆಯನ ಕಡೆ ನೋಡಿ, "ಸತ್ಯವೇದದ ಮಹತ್ವವನ್ನು ನೋಡುದ್ರಾ? ಒಂದು ಸೆಕೆಂಡಿನಲ್ಲಿ ಬೈಬಲ್ ಎಲ್ಲಾ ಪುಸ್ತಕಗಳಿಗಿಂತ ಮೊದಲನೆಯ ಪುಸ್ತಕ ಎಂದು ನೀವೇ ಒಪ್ಪಿಕೊಂಡುಬಿಟ್ರಿ" ಎಂದರು.

 

ನಾಸ್ತಿಕ ಸ್ನೇಹಿತನು, ಕ್ರೈಸ್ತ ಸ್ನೇಹಿತನ ಸತ್ಯವೇದದ ಜ್ಞಾನಕ್ಕಿಂತಲೂ ಲೌಕಿಕ ಜ್ಞಾನ ಮತ್ತು ವಾಕ್ಚಾತುರ್ಯವನ್ನು ತಿಳಿದುಕೊಂಡು ತನ್ನ ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಂಡು, "ನಾನು ಸೋತಿದ್ದೇನೆ, ನಾನು ಸೋತಿದ್ದೇನೆ" ಎಂದು ಹೇಳಿ ನಾಸ್ತಿಕರ ಕೂಟವನ್ನು ರದ್ದುಗೊಳಿಸಿದರು. ಸತ್ಯವೇದವು ತನ್ನ ಸ್ನೇಹಿತನನ್ನು ಕದಲಿಸಿದ್ದನ್ನು ನೆನೆಸಿ, ಕ್ರೈಸ್ತ ಸ್ನೇಹಿತನು ಸಂತೋಷಪಟ್ಟರು.

 

ಸತ್ಯವೇದದ ಮಹತ್ವವನ್ನು ಅನ್ವೇಷಿಸಲು ಸಾಧ್ಯವಿಲ್ಲ. ಸತ್ಯವೇದದ ತಳಹದಿಯ ಮೇಲೆ ನಮ್ಮ ಜೀವನ ಕಟ್ಟಿಕೊಂಡರೆ ಅದು ಕದಲಿಸಲ್ಪಡದೇ ಲೌಕಿಕ ಬಯಕೆಗಳಿಂದ ತೊರೆಯಲ್ಪಡದಾಗಿಯೂ ಕಾಣಲ್ಪಡುತ್ತದೆ. ಆದ್ದರಿಂದ ನಿಮ್ಮ ಜೀವನವು ಸತ್ಯವೇದಕ್ಕೆ ವಿಧೇಯವಾಗಿರಲಿ. ಕಡೇ ದಿವಸಗಳಲ್ಲಿ ದೇವರ ಮಾತುಗಳು ಸಿಗದ ಕ್ಷಾಮ ಕಾಲವು ಬರುತ್ತದೆ. ನಿಮ್ಮ ಮಾತುಗಳು ನನಗೆ ಸಂತೋಷವೂ ನನ್ನ ಹೃದಯಕ್ಕೆ ಆನಂದವೂ ಆಗಿದೆ ಎಂದು ಪ್ರವಾದಿಯಾದ ಯೆರೆಮೀಯನು ಹೇಳುತ್ತಾರೆ. ನಾವೂ ಸಹ ಸತ್ಯವೇದವನ್ನು ಪ್ರೀತಿಸೋಣ, ಪ್ರತಿದಿನ ಆಸಕ್ತಿಯಿಂದ ಓದೋಣ ಮತ್ತು ದೇವರ ವಾಕ್ಯವನ್ನು ಹೊರುವ ಭಾಗ್ಯವನ್ನು ಹೊಂದುವ ಕತ್ತೆಯಾಗಿ ಮಾರ್ಪಡೋಣ. ಹೆಮ್ಮೆ ಪಡೋಣ. ಆಮೆನ್.

- S. ಸಮುವೇಲ್ ಮೋರಿಸ್

 

ಪ್ರಾರ್ಥನಾ ಅಂಶ:

ಹಸ್ತಪ್ರತಿ ಸೇವೆಯ ಮೂಲಕ ಹಸ್ತಪ್ರತಿಯನ್ನು ಸ್ವೀಕರಿಸಿದವರು ರಕ್ಷಣೆ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet