Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.11.2024
Share:

By Village Missionary Movement

Friday, 01-Nov-2024

ಧೈನಂದಿನ ಧ್ಯಾನ(Kannada) – 01.11.2024

 

ನಿನಗೆ ಗೊತ್ತಿರುವುದನ್ನು ಹೇಳು

 

"ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು" - ಮಾರ್ಕನು 13:10

 

ನಾನು ದೇವರನ್ನು ಅಂಗೀಕರಿಸಿದ ಹೊಸದರಲ್ಲಿ, ದೇವರು ಅಳುತ್ತಿರುವಂತೆ ನಾನು ದರ್ಶನದಲ್ಲಿ ನೋಡಿದೆ. ನಾನು ಅವರ ಕಣ್ಣೀರು ಒರೆಸಲು ಹತ್ತಿರದ ಹಳ್ಳಿಗೆ ಹೋಗಿ ದೇವರು ನನಗೆ ಮಾಡಿದ ಉಪಕಾರವನ್ನು ಹೇಳಿ, ಆತನು ಒಳ್ಳೆಯವನು ಎಂದು ಪ್ರಕಟಿಸುತ್ತಾ ಬಂದೆನು. ಒಂದು ದಿನ ಒಂದು ಅಕ್ಕ "ಲಡ್ಡು ಯಾಕೆ ಅಮ್ಮ ಸಿಹಿಯಾಗಿದೆ?" ಎಂಬ ಹಾಡನ್ನು ಮಕ್ಕಳಿಗೆ ಕಲಿಸಿಕೊಟ್ಟರು. ಹಾಡು ಮುಗಿದ ನಂತರ "ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿದುಕೊಳ್ಳಿರಿ ಎಂಬ ವಾಕ್ಯವನ್ನೂ ಕಲಿಸಿಕೊಟ್ಟರು. ಹಾಡು ಸರಳವಾಗಿದ್ದರಿಂದ ನಾನು ಸಹ ಕಲಿತುಕೊಂಡೆ. ನನ್ನ ಹೃದಯದಲ್ಲಿ ಒಂದೇ ಸಂತೋಷ. ಏಕೆಂದರೆ ನನಗೆ ಒಂದು ಹಾಡು ಮತ್ತು ವಾಕ್ಯ ತಿಳಿದುಬಿಡ್ತು. ಈಗ ಮರುದಿನ ಎಲ್ಲೇ ಸೇವೆಗೆ ಹೋದರೂ ಮಕ್ಕಳನ್ನು ಕೂರಿಸಿಕೊಂಡು ಲಡ್ಡು ಹಾಡು, ಕಥೆ, ವಾಕ್ಯ ಹೇಳಿಕೊಡುತ್ತಿದ್ದೆ. ಅಂದು ಸೇವೆ ಮುಗಿಸಿ ಮನೆಗೆ ಬಂದಾಗ ಒಂದೇ ಖುಷಿ.

     

ಪ್ರಿಯರೇ! ನಿಮಗೆ ಎಷ್ಟು ಹಾಡುಗಳು ಮತ್ತು ಕಥೆಗಳು ಗೊತ್ತು? ಬೈಬಲ್‌ನಲ್ಲಿ ಎಷ್ಟು ಘಟನೆಗಳು ನಿಮಗೆ ತಿಳಿದಿವೆ? ನೀವು ಎಷ್ಟು ಬಾರಿ ಸತ್ಯವೇದವನ್ನು ಓದಿದ್ದೀರಿ? ಆದರೆ ನೀವು ಅದನ್ನು ಇತರರೊಂದಿಗೆ ಹಂಚಿಕೊಂಡಿದ್ದೀರಾ? ನಾವು ಇತರರಿಗೆ ಯೇಸುವಿನ ಪ್ರೀತಿಯನ್ನು ತಿಳಿಸಲು ವಿಫಲವಾದರೆ, ನಾವು ಅವರ ಕುರಿತು ದೇವರಿಗೆ ಲೆಕ್ಕಕೊಡಬೇಕು. ದೇವರು ಫಿಲಿಪ್ಪನನ್ನು ಅರಣ್ಯಕ್ಕೆ ಕರೆದೊಯ್ಯುತ್ತಾರೆ. ಅಲ್ಲಿಗೆ ರಥ ಬರುತ್ತದೆ. ಅದರಲ್ಲಿ ಹತ್ತು ಎಂದು ದೇವರು ಹೇಳುತ್ತಾರೆ. ಹಿಂದೆ ಹೋಗಿ ಫಿಲಿಪ್ಪನು ಏರುತ್ತಾನೆ. ಅಲ್ಲಿ ಯೆಶಾಯನ ಗ್ರಂಥವನ್ನು ಓದಲಾಗುತ್ತದೆ, ಅದು ಮಂತ್ರಿಗೆ ಅರ್ಥವಾಗುವುದಿಲ್ಲ. ತಕ್ಷಣವೇ ಫಿಲಿಪ್ಪನು ದೇವರು ತನ್ನನ್ನು ಕರೆತಂದ ಉದ್ದೇಶವನ್ನು ತಿಳಿದುಕೊಂಡನು ಮತ್ತು ಅವನಿಗೆ ತಿಳಿದಿದ್ದನ್ನು ಹೇಳಿದನು. ದೇವರು ಮಂತ್ರಿಯ ಹೃದಯದಲ್ಲಿ ಕ್ರಿಯೆ ಮಾಡಿದರು. ಅವರು ದೇವರನ್ನು ಸ್ವೀಕರಿಸಿದರು .ಫಿಲಿಪ್ಪನು ದೀಕ್ಷಾಸ್ನಾನ ಕೊಟ್ಟರು. ದೇವರು ತಕ್ಷಣ ಅವರನ್ನು ಬೇರೆ ಸ್ಥಳಕ್ಕೆ ಕರೆದುಕೊಂಡು ಹೋದರು. ಅದೇ ರೀತಿ ನಿಮ್ಮ ಮನೆಯ ಹತ್ತಿರ ದೇವರನ್ನು ತಿಳಿಯದವರು ಇದ್ದರೆ, ದೇವರ ಬಗ್ಗೆ ತಿಳಿಸಲು ದೇವರು ನಿಮ್ಮನ್ನು ಅಲ್ಲಿ ಇರಿಸಿದ್ದಾರೆ. ಅವರ ಇಚ್ಛೆಯನ್ನು ಮಾಡಿರಿ. ಸುವಾರ್ತೆ ಸಾರುವುದು ಹೇಗೆ ಎಂದು ನಿಮಗೆ ತಿಳಿದಿಲ್ಲ ಎಂದು ಯೋಚಿಸಬೇಡಿ. ದೇವರು ನಿಮಗೆ ಮಾಡಿರುವುದನ್ನು ನಿಮಗೆ ತಿಳಿದಿರುವುದನ್ನು ಇತರರಿಗೆ ತಿಳಿಸಿ. ಕ್ರಿಯೆ ಮಾಡುವವರು ದೇವರು.

   

ಸುವಾರ್ತಾಬೋಧನೆಯು ಪ್ರತಿಯೊಬ್ಬ ಕ್ರೈಸ್ತನ ಕರ್ತವ್ಯವಾಗಿದೆ. ಅದು ಮಾತ್ರವಲ್ಲದೆ ಲೋಕದ ಕಟ್ಟಕಡೆಯವರೆಗೆ ಹೋಗಿರಿ. ಇಗೋ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ವಾಗ್ದಾನ ಕೊಡುತ್ತಿದ್ದಾರೆ. ನೀವು ಹೋಗುವಾಗ ಮಾತ್ರವೇ ಆ ವಾಗ್ದಾನವು ನಿಮಗೆ ಸ್ವಂತವಾಗುತ್ತದೆ. ಕ್ರಿಸ್ಮಸ್ ವೇಳೆಗೆ 25,000 ಹಳ್ಳಿಗಳಿಗೆ ಭೇಟಿ ನೀಡಲು ಯೋಜನೆ ಹಾಕಿ ಹೊರಟಿದ್ದೇವೆ. ಇಂತಹ ಭಾರವುಳ್ಳ ನೀವು ಸಹ ನಮ್ಮೊಂದಿಗೆ ಸೇರಿ ಸುವಾರ್ತೆ ಸಾರಬಹುದು. ವಾರದಲ್ಲಿ ಎರಡು ದಿನ, ಶನಿವಾರ ಮತ್ತು ಭಾನುವಾರದಂದು ನೀವು ನಮ್ಮೊಂದಿಗೆ ಸೇರಿ ಸುವಾರ್ತೆ ಸೇವೆಯನ್ನು ಮಾಡಬಹುದು. ಬನ್ನಿ ದೇವರ ಆಶೀರ್ವಾದವನ್ನು ಪಡೆದುಕೊಳ್ಳಿರಿ.

- Bro. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಈ ತಿಂಗಳ ಸೇವೆಗಳಿಗಾಗಿ ಮತ್ತು ಸೇವಕರ ಸೌಖ್ಯಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet