Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.11.2024 (Gospel Special)
Share:

By Village Missionary Movement

Thursday, 07-Nov-2024

ಧೈನಂದಿನ ಧ್ಯಾನ(Kannada) – 07.11.2024 (Gospel Special)

 

ಮನುಷ್ಯರ ದಯೆ  

 

"ಯೇಸು ಜ್ಞಾನದಲ್ಲಿಯೂ ದೇಹದ ಬೆಳವಣಿಗೆ ಯಲ್ಲಿಯೂ ದೇವರ ಮತ್ತು ಮನುಷ್ಯರ ದಯೆಯಲ್ಲಿಯೂ ವೃದ್ಧಿಯಾದನು" - ಲೂಕ 2:52

 

54 ವರ್ಷಗಳ ಕಾಲ ಸ್ವಿಟ್ಜರ್ಲೆಂಡ್‌ನಲ್ಲಿ ಅತ್ಯುತ್ತಮ ಮಿಷನರಿಯಾಗಿ ಕೆಲಸ ಮಾಡಿದ 'ಮಾಲಾಮೊಯ್' ಎಂಬವರು ಜನರೊಂದಿಗೆ ತಮ್ಮ ಜೀವನವನ್ನು ಬೆರೆಸಿಕೊಂಡವರು. ನಂತರ ಇವರು ಆಫ್ರಿಕನ್ ದೇಶಗಳಲ್ಲಿಯೂ ಸೇವೆ ಮಾಡಿದವರು, ಮಿಷನರಿಗಳಲ್ಲಿ ಬಹಳ ಪ್ರಮುಖರಾಗಿದ್ದರು. ಏಕೆ ಇವರಿಗೆ ಮಾತ್ರ ಇಷ್ಟೊಂದು ಮುಖ್ಯತ್ವ? ಏಕೆಂದರೆ ಇವರು ಎಲ್ಲೆಲ್ಲಿಗೆಲ್ಲಾ ಸುವಾರ್ತೆಯನ್ನು ಕೊಂಡೊಯ್ಯುತ್ತಿದ್ದರೋ ಅಲ್ಲಿನ ಜನರೊಂದಿಗೆಲ್ಲಾ ಬೆರೆತುಬಿಡುತ್ತಿದ್ದರು. ಮಾಡಿದ ಸೇವೆಯಲ್ಲಿ ಸಮರ್ಪಣೆ ಮತ್ತು ಸಂತೋಷವನ್ನು ಕಂಡುಕೊಂಡರು. ಯಾವ ಸೇವಾಕ್ಷೇತ್ರದಲ್ಲಿ ಕೆಲಸ ಮಾಡಿದರೂ ತಾಯಂದಿರ ಜತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಈ ಎಲ್ಲಾ ಕಾರ್ಯಗಳು ಇವರ ಸುವಾರ್ತೆ ಸೇವೆಗೆ ಹೆಚ್ಚು ಬೆಂಬಲವಾಗಿತ್ತು. ಇದಕ್ಕೆ ಇನ್ನೊಂದು ಬಹುಮುಖ್ಯ ಕಾರಣವೂ ಇದೆ. ಅದೇನೆಂದರೆ ಇವರಿಗೆ ಸಿಕ್ಕಿದ "ಮನುಷ್ಯರ ದಯೆಯೇ". ಆಫ್ರಿಕನ್ ದೇಶದಲ್ಲಿ ಡೋರಿಕಾ ಎಂಬ ಮಹಿಳೆಯ ಸಹಾಯದಿಂದ ಅವರು ದೇಶದ ಅನೇಕ ಭಾಗಗಳಿಗೆ ಸುವಾರ್ತೆಯನ್ನು ಕೊಂಡೊಯ್ದರು. ಅವರು ಆಫ್ರಿಕನ್ ನಾಯಕರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡರು. ಅವರು ಅಲ್ಲಿ 'ಬೆತೆಲ್ ಸ್ಟೇಷನ್' ಎಂಬ ಮಿಷನರಿ ನೆಲೆಯನ್ನು ನಿರ್ಮಿಸಿದರು.   

 

ಯೇಸುಕ್ರಿಸ್ತನು ಹುಟ್ಟಿ ಬೆಳೆಯುವಾಗಲೇ ಅವರಿಗೆ ಮನುಷ್ಯರ ದಯೆ ದೊರೆಯಿತು. ಸೇವೆ ಮಾಡಿದಾಗ, ಮತ್ತಾಯ ಎಂಬ ಸುಂಕದವನು, ಕಾನಾನ್ಯನಾದ ಸೀಮೋನನು ಮತ್ತು ಮೀನುಗಾರನಾದ ಪೇತ್ರನು ಎಲ್ಲರೂ ಆತನನ್ನು ಹಿಂಬಾಲಿಸಿದರು. ಇವರೆಲ್ಲರು ಯೇಸುವಿನ ಶಿಷ್ಯರಾಗಿಯೂ ಇದ್ದರು. ಶಾಸ್ತ್ರಿಗಳ ಮತ್ತು ಫರಿಸಾಯರ ಮನೆಗಳಿಗೆ ಹೋಗಿ ಬೋಧಿಸಿದರು. ಇವರು ಯೇಸುವನ್ನು ತಮ್ಮ ಮನೆಗೆ ಆಹ್ವಾನಿಸುವಷ್ಟು ಮಟ್ಟಿಗೆ ಮನಸ್ಸುಳ್ಳವರಾಗಿದ್ದರು. ಮತ್ತು ಯೆಹೂದ್ಯರಿಗೆ ಅಸಹ್ಯವಾಗಿದ್ದ ಸಮಾರ್ಯ ದೇಶದಲ್ಲಿಯೂ ಅವರು ಸುವಾರ್ತೆಯನ್ನು ಸಾರಿದರು. ಅವರು ಆತನನ್ನು ಪ್ರೀತಿಯಿಂದ ಸ್ವೀಕರಿಸಿದರು. ಇದರಂತೆ ನೀವು ಸಹ ಎಲ್ಲರೊಂದಿಗೂ ಬೆರೆಯುವ ಸ್ವಭಾವವುಳ್ಳವರಾ ? ನಿಮ್ಮೊಂದಿಗೆ ಮಾತನಾಡುವ ಯಾವುದೇ ಜನರನ್ನು ನೀವು ಸ್ನೇಹಿತರಾಗಿ ಪರಿವರ್ತಿಸುವವರಾ? ನೀವು ಅನೇಕ ಸ್ನೇಹಿತರನ್ನು ಹೊಂದಿದ್ದೀರಾ? ಹಾಗಾದರೆ ಕರ್ತನೇ ನಿಮಗೆ ಈ ಕೃಪೆಯನ್ನು ಆಜ್ಞಾಪಿಸಿದ್ದಾರೆ. ಆದ್ದರಿಂದ ಆತನೇ ಕಾರ್ಯಗಳನ್ನು ನೆರವೇರಿಸುತ್ತಾರೆ. ಧೈರ್ಯದಿಂದ ಆತನ ಸುವಾರ್ತೆಯನ್ನು ಸಾರಿರಿ. ನೀವು ಮನುಷ್ಯರ ದಯೆ ಮತ್ತು ಸಹಾನುಭೂತಿಯನ್ನು ಪಡೆದಾಗ, ಅದನ್ನು ಸುವಾರ್ತೆ ಸಾರಲು ದೇವರು ನೀಡಿದ ಅವಕಾಶವಾಗಿ ಬಳಸಿ.

 

ಪ್ರೀತಿಯ ದೇವರ ಮಕ್ಕಳೇ! ನಾವು ಸಹ ಆಯಾ ಸ್ಥಳದಲ್ಲಿರುವ ಜನರ ಬೆಂಬಲದಿಂದ ಮತ್ತು ಮನುಷ್ಯ ದಯೆಯಿಂದ ಸುವಾರ್ತೆಯನ್ನು ಸಾರುವ ಮೂಲಕ ಜನರನ್ನು ಸಂಪಾದಿಸಿಕೊಳ್ಳೋಣ! ಸುವಾರ್ತಾ ಸೇವೆಗೆ ಹೋಗುವ ಸ್ಥಳಗಳನ್ನು ಮತ್ತು ಸಂಸ್ಕೃತಿಗಳನ್ನು ಪರಿಗಣಿಸಿ ಜನರೊಂದಿಗೆ ಜನರಾಗಿ ಬದುಕಿ ತೋರಿಸಿ, ಕ್ರಿಸ್ತನ ಪ್ರೀತಿಯನ್ನು ಮಾತುಗಳಲ್ಲಿಯೂ, ಕ್ರಿಯೆಗಳಲ್ಲಿಯೂ ತೋರಿಸಿ ಮುಂಬರುವ ದಿನಗಳಲ್ಲಿ ಸುವಾರ್ತೆ ಸೇವೆಯನ್ನು ಮಾಡೋಣ.

- Mrs.ಪ್ರಿಸ್ಕಿಲ್ಲಾ ಥಿಯೋಫಿಲಸ್

 

ಪ್ರಾರ್ಥನಾ ಅಂಶ:

ಸುವಾರ್ತೆ ಶಿಬಿರಗಳನ್ನು ನಡೆಸಲು ತಮ್ಮ ಮನೆಗಳನ್ನು ತೆರೆದುಕೊಡುವವರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet