Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.11.2024 (Gospel Special)
Share:

By Village Missionary Movement

Friday, 08-Nov-2024

ಧೈನಂದಿನ ಧ್ಯಾನ(Kannada) – 08.11.2024 (Gospel Special)

 

ಕಾಲವು ಮತ್ತು ಅಕ್ಕರೆಯು 

 

"ದುಷ್ಟತನ ಹೆಚ್ಚಾಗುವದರಿಂದ ಬಹಳ ಜನರ ಪ್ರೀತಿಯು ತಣ್ಣಗಾಗುವದು" - ಮತ್ತಾಯ 24:12

  

ಒಬ್ಬ ಯುವಕನು ದೇವರ ಕಾರ್ಯವನ್ನು ಮಾಡಲು ಗಂಗಾನದಿಯ ದಡದಲ್ಲಿ ನಡೆದುಕೊಂಡು ಹೋಗುತ್ತಿದ್ದನು. ಒಬ್ಬ ಮಹಿಳೆ ಅವನನ್ನು ಹಾದುಹೋದಳು. ಅಸ್ವಸ್ಥ ಸಣಕಲು ಮಗುವನ್ನು ಸೊಂಟದ ಮೇಲೆ ಹೊತ್ತುಕೊಂಡು, ಗುಂಡು ಗುಂಡಾಗಿದ್ದ ಮೂರು ವರ್ಷದ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ನಡೆಯುತ್ತಿದ್ದಳು. ಯುವಕನು ಸೇವೆಯನ್ನು ಮುಗಿಸಿ ಹಿಂತಿರುಗುವಾಗ ಪುನಃ ಅದೇ ಮಹಿಳೆ ಎದುರುಬಂದಳು. ಕೈಯಲ್ಲಿ ಹಿಡಿದಿದ್ದ ಸುಂದರವಾದ ಮಗು ಇರಲಿಲ್ಲ. ಯುವಕನು ಮಹಿಳೆಗೆ, “ನಿನ್ನ ಇನ್ನೊಂದು ಮಗು ಎಲ್ಲಿ? ಎಂದು ಕೇಳಿದನು." ಗಂಗಾದೇವಿಗೆ ಕೊಟ್ಟುಬಿಟ್ಟೆನು ಎಂದಳು. ಅವನಿಗೆ ಆಘಾತವಾಯಿತು. "ನಿನ್ನ ತೋಳುಗಳಲ್ಲಿದ್ದ ಮಗುವನ್ನು ಕೊಡಬಹುದಿತ್ತಲ್ಲಾ!" ಎಂದನು. ನನ್ನ ದೇವತೆಗೆ ಉತ್ತಮವಾದದ್ದನ್ನೇ ನೀಡಬೇಕು ಎಂದಳು. ಅವಳಿಗೆ ಯೇಸುಕ್ರಿಸ್ತನ ಶಿಲುಬೆಯ ಯಜ್ಞವನ್ನು ಒತ್ತಿ ಹೇಳಿ ಸುವಾರ್ತೆಯನ್ನು ಹೇಳಿದನು. “ನೀವು ಇದನ್ನು ಮೊದಲೇ ಏಕೆ ಹೇಳಲಿಲ್ಲ. ನನ್ನ ಮಗುವನ್ನು ಕಳೆದುಕೊಂಡೆ” ಎಂದು ಗೋಳಾಡಿದಳು. ತನ್ನ ಅಜ್ಞಾನವನ್ನು ಹೋಗಲಾಡಿಸುವವರು ಯಾರೂ ಇಲ್ಲದ ಕಾರಣ ತನ್ನ ಮಗುವನ್ನು ಕಳೆದುಕೊಂಡಳು.  

  

ನಾವು ಜೀವಿಸುತ್ತಿರುವ ಕಾಲವು ಪ್ರಪಂಚದ ಅಂತ್ಯವಾಗಿದೆ. ಮತ್ತಾಯ 24 ನೇ ಅಧ್ಯಾಯದಲ್ಲಿ ನಿನ್ನ ಬರೋಣಕ್ಕೂ ಲೋಕವು ಅಂತ್ಯವಾಗುವದಕ್ಕೂ ಸೂಚನೆ ಏನು? ಎಂದು ಶಿಷ್ಯರು ಕೇಳಿದ ಪ್ರಶ್ನೆಗೆ ಯೇಸು ಕ್ರಿಸ್ತನು ನೀಡಿದ ಉತ್ತರವೇ ಈ ಅಧ್ಯಾಯದಲ್ಲಿರುವುದು. ದುಷ್ಟತನ ಹೆಚ್ಚಾಗುವದರಿಂದ ಬಹಳ ಜನರ ಪ್ರೀತಿಯು ತಣ್ಣಗಾಗುವದು. (12) ಅಲ್ಲಲ್ಲಿ ಬರಗಳು, ಘೋರವ್ಯಾಧಿಗಳು ಮತ್ತು ಭೂಕಂಪಗಳು ಆಗುವವು. (7) ಸುಳ್ಳು ಪ್ರವಾದನೆ, ಮೋಸ ನಡೆಯುತ್ತದೆ (24). ಹೌದು, ದೇಶದಲ್ಲಿ ಅಧರ್ಮ ಹೆಚ್ಚಾಗುತ್ತಿದೆ ಮತ್ತು ಚಿಕ್ಕ ಮಕ್ಕಳನ್ನೂ ಅತ್ಯಾಚಾರ ಮಾಡುವ ಕ್ರೂರತೆಯನ್ನು ನಾವು ನೋಡುತ್ತಿದ್ದೇವೆ. ತಂದೆ-ತಾಯಿ ಮಕ್ಕಳನ್ನು ಕೊಂದು ಹಾಕುವುದು, ಮಕ್ಕಳೇ ತಂದೆ-ತಾಯಿಯನ್ನು ಕೊಂದಂತಹ ದೌರ್ಜನ್ಯಗಳು ನಡೆಯುತ್ತಿವೆ. ಹೀಗೆ ಇನ್ನೂ ಅನೇಕ ಅಕ್ರಮಗಳನ್ನು ಹೇಳಿಕೊಂಡೇ ಹೋಗಬಹುದು, ಕಾರಣ ಪ್ರೀತಿ ತಣ್ಣಗಾಗಿದೆ. ಅವರಿಗೆ ಪ್ರೀತಿಯ ಯೇಸುವನ್ನು ತಿಳಿಸಬೇಕು. ಇದು ನಮ್ಮ ಕರ್ತವ್ಯ.

 

ಕುರುಬನಿಲ್ಲದ ಕುರಿಗಳಂತೆ ಇದ್ದ ಜನರನ್ನು ಕಂಡು ಯೇಸು ಮನಮರುಗಿ ಅವರಿಗೆ ಅನೇಕ ವಿಷಯಗಳನ್ನು ಬೋಧಿಸಲಾರಂಭಿಸಿದರು (ಮಾರ್ಕ 6:34) ಅದರಂತೆಯೇ, ನಾಶವಾಗುತ್ತಿರುವ ಜನರನ್ನು ನಾವು ನೋಡಿದಾಗ, ಮನಮರುಗಿ ಅವರಿಗೆ ವಿಮೋಚಕನಾದ ಕ್ರಿಸ್ತನನ್ನು ತಿಳಿಸಬೇಕು. ಆಗ ನಾವು ದೇವರ ಆಜ್ಞೆಯನ್ನು ಅನುಸರಿಸುವವರಾಗಿರುತ್ತೇವೆ. ಮೊದಲನೆಯ ಆಜ್ಞೆ ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣ ದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು. ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕೆಂಬದು ಎರಡನೆಯ ಆಜ್ಞೆಯಾಗಿದೆ. ಆದ್ದರಿಂದ ಇತರರು ಆನಂದಮಯವಾದ ಜೀವನವನ್ನು ಹೊಂದಲು ಸುವಾರ್ತೆಯ ಕೆಲಸವನ್ನು ಮಾಡೋಣ. ಕಾಲವನ್ನು ಗ್ರಹಿಸೋಣ! ಇತರರ ಬಗ್ಗೆ ಅಕ್ಕರೆಯುಳ್ಳವರಾಗಿರೋಣ! ವೇಗವಾಗಿ ಕಾರ್ಯನಿರ್ವಹಿಸೋಣ!

- Mrs. ವನಜಾ ಬಾಲ್ ರಾಜ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್ ನಲ್ಲಿ ನಡೆಯುವ ಟ್ಯೂಷನ್ ಸೆಂಟರ್‌ನಲ್ಲಿ ಓದುತ್ತಿರುವ ಮಕ್ಕಳ ಜ್ಞಾನಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet