Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.05.2021
Share:

By Village Missionary Movement

Monday, 03-May-2021

ಧೈನಂದಿನ ಧ್ಯಾನ(Kannada) – 03.05.2021

ತಂದೆಯ ಪ್ರೀತಿ

"ದೇವರು ಲೋಕವನ್ನು ಎಷ್ಟೋ ಪ್ರೀತಿಮಾಡಿ ತನ್ನ ಒಬ್ಬನೇ ಮಗನನ್ನು ಕೊಟ್ಟನು;” - ಯೋಹಾನ 3:16

ಅಮೆರಿಕದ ಮಿಚಿಗನ್‌ನಲ್ಲಿ ರಿಕ್ವಾನ್ ಪೀಕ್-ಮೇರಿ ಎಂಬ ದಂಪತಿಗಳಿಗೆ ಮ್ಯಾಡಿಸನ್ ಎಂಬ ಮಗಳು ಜನಿಸಿದಳು.  ಅವಳು ಮೆದುಳು ಮತ್ತು ನರಗಳ ಹಾನಿಯಿಂದ ಬಳಲುತ್ತಿದ್ದದರಿಂದ ಹಾಸಿಗೆಯಲ್ಲೇ  ಇರುವಂತಹ ಪರಿಸ್ಥಿತಿ ಉಂಟಾಗಿತ್ತು.  ಧೂಮಪಾನ ಮತ್ತು ಮದ್ಯದ ಚಟಕ್ಕೆ ಸಿಲುಕಿದ್ದ ರೀಕ್, ತನ್ನ ಮಗಳಿಗಾಗಿ ದೀರ್ಘಕಾಲ ಜೀವಿಸಬೇಕೆಂದು ನಿರ್ಧರಿಸಿದನು, ಆದ್ದರಿಂದ ಅವನು ಈ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ ಓಟ ಪಂದ್ಯದಲ್ಲಿ ಭಾಗವಹಿಸಲು  ತರಬೇತಿಯನ್ನು ಪ್ರಾರಂಭಿಸಿದನು.  ಅದಕ್ಕೆ ತಮ್ಮ ಅಂಗವಿಕಲ ಮಗಳನ್ನು ಸಹ ಇದಕ್ಕೆ ಜೋಡಿ ಸೇರಿಸಿಕೊಂಡರು.  ಹಾಸಿಗೆಯಲ್ಲಿ ಮಲಗಿರುವಾಗ ಅವಳು ಹೇಗೆ ಓಡಬಲ್ಲಳು?  ಆದ್ದರಿಂದ ಅವನು ಅವಳಿಗೆ ವಿಶೇಷ ಟ್ರೈಸಿಕಲ್ ಮತ್ತು ದೋಣಿ ಸಿದ್ಧಪಡಿಸಿದನು.  ಅವನು ಓಡುವಾಗ ಅವಳನ್ನು ತ್ರಿಚಕ್ರ ವಾಹನದಲ್ಲಿ ಮಲಗಿಸಿ, ಅದನ್ನು ತಳ್ಳಿಕೊಂಡು ಓಡುತ್ತಿದ್ದನು.  ಅವನು ಈಜುತ್ತಿರುವಾಗ ಅವಳನ್ನು ದೋಣಿಯಲ್ಲಿ ಮಲಗಿಸಿ  ದೋಣಿಯ ಹಗ್ಗವನ್ನು ತನ್ನೊಂದಿಗೆ ಎಳೆದುಕೊಂಡೇ ಈಜುತ್ತಿದ್ದರು.  ಅವರು ಬೈಸಿಕಲ್ ಸವಾರಿ ಮಾಡುವಾಗ ಟ್ರೈಸಿಕಲ್ ಅನ್ನು ಬೈಸಿಕಲ್ ನ ಹಿಂಭಾಗಕ್ಕೆ ಜೋಡಿಸಿಕೊಳ್ಳುತ್ತಿದ್ದರು.  ಇಲ್ಲಿಯವರೆಗೆ ಇಬ್ಬರು ಒಟ್ಟಿಗೆ ಎಪ್ಪತ್ತಕ್ಕೂ ಹೆಚ್ಚು ಪಂದ್ಯಗಳಲ್ಲಿ ಸ್ಪರ್ಧಿಸಿದ್ದಾರೆ.  ಕೆಲವೊಮ್ಮೆ ಅವನು ಓಡುವಾಗ ಅವಳನ್ನು ಹೊತ್ತುಕೊಂಡು ಓಡುತ್ತಿದ್ದನು.

ಒಮ್ಮೆ ಸೈಕ್ಲಿಂಗ್, ಈಜು ಮತ್ತು ಓಟದಂತಹ ಮೂರನ್ನು ನಿರ್ದಿಷ್ಟ ದೂರಕ್ಕೆ ಒಂದರ ನಂತರ ಒಂದನ್ನು ಮಾಡಲು ಅವರು  ತಮ್ಮ ಮಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದರು.  ಅವರ ಅಂಗವಿಕಲ ಮಗಳ ಬಗ್ಗೆ ಅವರ ತೋರಿಸಿದ ಸಹಾನುಭೂತಿ ಮತ್ತು ಕಾಳಜಿಯನ್ನು ನೋಡಿದ ಪತ್ರಕರ್ತರು ಮತ್ತು ವೀಕ್ಷಕರು ಅವರನ್ನು "ಈ ಶತಮಾನದ ಅತ್ಯುತ್ತಮ ತಂದೆ" ಎಂದು ಕರೆದರು ಮತ್ತು "ನೀವು ಇದನ್ನು ಏಕೆ ಮಾಡುತ್ತಿದ್ದೀರಿ?"  ಎಂದು ಕೇಳಿದರು.  ಅದಕ್ಕೆ ಅವರು ಹೀಗೆ ಹೇಳಿದರು, “ನನ್ನ ಮಗಳು ಹೊರಗಿನ ಗಾಳಿಯನ್ನು  ಮತ್ತು ಗಾಳಿಗೆ ಅವಳ  ಕೂದಲು ಹಾರುವುದನ್ನು, ತಲೆ ಕೂದಲು ಹಾರಿ ಬಂದು ಅವಳ ಮುಖದ ಮೇಲೆ ಬೀಳುವುದನ್ನು ತುಂಬಾ ಇಷ್ಟಪಡುತ್ತಾಳೆ. ಅವಳು ನನ್ನ ಹೃದಯ, ನಾನು ಅವಳ ಕಾಲಿನಂತೆ ಓಡುತ್ತೇನೆ.  ನನಗಿಂತ ಹೆಚ್ಚಾಗಿ ಅವಳು ಅನೇಕರ ಜೀವನವನ್ನು ಮಾರ್ಪಡಿಸಿದ್ದಾಳೆ.  ನಾವಿಬ್ಬರೂ ಒಟ್ಟಿಗೆ ಸೇರಿ ಉತ್ತಮ ತಂಡವಾಗಿದ್ದೇವೆ” ಎಂದರು. ಈ ಹೃದಯ ಸ್ಪರ್ಶಿಸುವ ಪ್ರತ್ಯುತ್ತರ ಅನೇಕರ ಜೀವನವನ್ನು ಮುಟ್ಟಿತು.  ಪ್ರಪಂಚದ ಹೆತ್ತವರಾದ ನಾವು ನಮ್ಮ ಮಕ್ಕಳನ್ನು ಇಷ್ಟು ಹೆಚ್ಚು ಮಟ್ಟಿಗೆ  ಪ್ರೀತಿಸುವುದಾರೆ, ನಮ್ಮಪರಲೋಕದ ತಂದೆ ನಮ್ಮ ಮೇಲೆ ಇಟ್ಟಿರುವ ವಾತ್ಸಲ್ಯ ಎಷ್ಟು ದೊಡ್ಡದು?  ಅವರು ತನ್ನ ಒಬ್ಬನೇ ಮಗನೆಂಬುದನ್ನೂ ಲೆಕ್ಕಿಸದೆ ಆತನನ್ನು ನಮಗಾಗಿ ಈ ಲೋಕಕ್ಕೆ ಕಳುಹಿಸಿ, ಶಿಲುಬೆಯಲ್ಲಿ ಸಾಯಲು ಒಪ್ಪಿಸಿಕೊಟ್ಟರೇ!

ಅವರ ಪ್ರೀತಿಗೆ ಪ್ರತಿಯಾಗಿ ನಾವು ಅವರನ್ನು ಪ್ರೀತಿಸಬೇಕಲ್ಲವೇ?  ನಾವು ಆತನನ್ನು ಪ್ರೀತಿಸಿದರೆ, "ನಾನು ಅವಳ ಪಾದದಂತೆ ನಡೆಯುತ್ತೇನೆ" ಎಂದು ತಂದೆಯು ಹೇಳಿದಂತೆ, ನಾವು ಕರ್ತನ ಕಾಲಾಗಿ, ಹೇಳಲಾಗದಿರುವ ಸ್ಥಳಗಳಿಗೆ ಹೋಗಲು, ನಾವು ಅವರ ಬಾಯಾಗಿದ್ದು  ಸಂಕಟದಲ್ಲಿ ಪಾಡುಗಳ ಮಧ್ಯದಲ್ಲಿ ಇರುವವರಿಗೆ ಸಹಾಯ ಮಾಡಬೇಕಲ್ಲವೇ?  ಅನೇಕರ ಜೀವನವನ್ನು ಮುಟ್ಟಲು ಕರ್ತನು ನಮ್ಮನ್ನು ಆರಿಸಿಕೊಂಡಿದ್ದಾರೆ.  ನಮ್ಮ ಪ್ರೀತಿ ಮತ್ತು ನಮ್ಮ ಸಾಂತ್ವನದ ಮಾತುಗಳಿಂದ ನಾವು ಇತರರನ್ನು ಸ್ಪರ್ಶಿಸುತ್ತಿದ್ದೇವಾ?  ನಾವು ಅವರನ್ನು ಕರ್ತನ ಬಳಿಗೆ ಕರೆತರೋಣವೇ? ಕ್ರಿಸ್ತನ ಪ್ರೀತಿಯನ್ನು ಘೋಷಿಸೋಣವೇ?  ಯೋಚಿಸೋಣ! ಮತ್ತು ಅದರಂತೆ ಮಾಡೋಣ!
-    Bro. ಹನೀಶ್ ಸಾಮುವೇಲ್

ಪ್ರಾರ್ಥನಾ ಅಂಶ:-
ನಮ್ಮ ಪ್ರತಿಯೊಬ್ಬ ಮಿಷನರಿಗಳನ್ನು ಕರ್ತನು ತಮ್ಮ ರಕ್ತಕೋಟೆಯೊಳಗೆ ಬಚ್ಚಿಟ್ಟುಕೊಂಡು ಕಾಪಾಡಿ ನಡೆಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet grandpashabet betgit radissonbet