Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.11.2024 (Kids Special)
Share:

By Village Missionary Movement

Sunday, 17-Nov-2024

ಧೈನಂದಿನ ಧ್ಯಾನ(Kannada) – 17.11.2024 (Kids Special)

 

GOOD MEDICINE 

 

"ಆತನು ನನ್ನ ಬಿನ್ನಹವನ್ನು ತಿರಸ್ಕರಿಸಲಿಲ್ಲ; ನನ್ನ ಮೇಲಿನ ತನ್ನ ದಯೆಯನ್ನು ತಪ್ಪಿಸಿಬಿಡಲಿಲ್ಲ. ದೇವರಿಗೆ ಸ್ತೋತ್ರವಾಗಲಿ."- ಕೀರ್ತನೆ 66:20

 

ಎಂಟನೇ ತರಗತಿ ಓದುತ್ತಿದ್ದ ಪ್ರಭು ಯಾವಾಗಲೂ ದುಃಖದ ಮುಖದೊಂದಿಗೆ ಇರುತ್ತಿದ್ದ. ಶಾಲೆಗೆ ಹೋಗುವಾಗಲೂ, ವಿರಾಮದ ಸಮಯದಲ್ಲೂ ಮತ್ತು ಕ್ರೀಡೆಯ ಸಮಯದಲ್ಲೂ ಅಳುತ್ತಲೇ ಇರುತ್ತಿದ್ದ. ಅವನ ಮುಖದಲ್ಲಿ ಸಂತೋಷವೇ ಇರುತ್ತಿರಲಿಲ್ಲ. ಕೆಲವರು ಇವನನ್ನು ಅಳು ಮುಖದ ಪ್ರಭು ಎಂದೇ ಕರೆಯುತ್ತಿದ್ದರು. ಅದು ಸಹ ಅವನಿಗೆ ದುಃಖವಾಗುತ್ತಿತ್ತು. ಮುದ್ದು ಮಕ್ಕಳೇ! ಯಾರಾದರೂ ಕಷ್ಟದಲ್ಲಿದ್ದಾಗ, ಅವರೊಂದಿಗೆ ಆದರಣೆಯ ಮಾತುಗಳನ್ನೇ ಆಡಬೇಕು. ಇನ್ನೂ ಸ್ವಲ್ಪ ಬೇಸರವಾಗುವ ರೀತಿ ಮಾತಾಡಬಾರದು ಸರೀನಾ ಪುಟಾಣಿಗಳೇ. ಗೇಮ್ಸ್ ಪಿರಿಯಡ್ ಬಂತು. ಎಲ್ಲರೂ ಜಾಲಿಯಾಗಿ ಆಟವಾಡುತ್ತಿದ್ದರು. ಪ್ರಭು ಮಾತ್ರ ಮರದ ಕೆಳಗೆ ದುಃಖದಿಂದ ಕುಳಿತಿದ್ದನು. ಅವನ ಕ್ಲಾಸ್ ಹುಡುಗ ರವಿ, ಪ್ರಭು ಅನ್ನು ನೋಡಿ ಯಾಕೋ ನೀನು ಯಾವಾಗ್ಲೂ ಬೇಸರವಾಗಿ ಇರ್ತೀಯ, ಆಟ ಆಡೋಣ ಬಾ ಎಂದು ಕರೆದನು. ಇಲ್ಲ ನಾನು ಬರಲ್ಲ ನೀನು ಹೋಗಿ ಆಟವಾಡು ಎಂದು ಹೇಳಿಬಿಟ್ಟನು. ರವಿ ಬೇಗ ಹೋಗಿ P. T ಸರ್ ಬಳಿ ಹೋಗಿ ಪ್ರಭು ಅಳುತ್ತಿರುವುದನ್ನು ಹೇಳಿಬಿಟ್ಟನು. ಸರ್ ಮರದ ಕಡೆ ಬಂದರು. ಅವನ ಕಣ್ಣೀರನ್ನು ಒರೆಸಿ ಅವನ ಪಕ್ಕದಲ್ಲಿ ಕುಳಿತರು. ಅವನೊಂದಿಗೆ ಪ್ರೀತಿಯಿಂದ ಮಾತನಾಡಿದರು. ಪ್ರಭು ತನ್ನ ಮನದಾಳದ ನೋವನ್ನು ಹೇಳತೊಡಗಿದ. ಸಾರ್ ನಮ್ಮ ತಂದೆ ದಿನನಿತ್ಯ ಕುಡಿದು ಬಂದು ನನಗೆ ಮತ್ತು ನನ್ನ ತಾಯಿಗೆ ಹೊಡೆಯುತ್ತಾರೆ ಸಾರ್. ಅವರು ಮನೆಗೆ ಹಣ ಕೂಡ ಕೊಡಲ್ಲ ಸಾರ್, ನನ್ನ ತಾಯಿ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ನನಗೆ ಮನೆಗೆ ಹೋಗೋದಕ್ಕೆ ಇಷ್ಟಾನೆ ಇಲ್ಲ ಸಾರ್ ಎಂದು ಬಿಕ್ಕಿ ಬಿಕ್ಕಿ ಅತ್ತನು. ಹೀಗೆ ಅಳುತ್ತಲೇ ಇದ್ದರೆ ಏನೂ ನಡೆಯಲ್ಲ, ಒಂದು ಔಷಧಿ ಕೊಡುತ್ತೇನೆ, ಅದನ್ನು ಉಪಯೋಗಿಸು ಸರಿಯಾಗಿಬಿಡುತ್ತದೆ ಎಂದು ಹೇಳಿದ ಸಾರ್ ಅನ್ನು ಕಣ್ಣುಗಳನ್ನು ಅರಳಿಸಿಕೊಂಡು ನೋಡಿದನು. ಕೊಡಿ ಸಾರ್ ನಮ್ಮ ಅಪ್ಪನಿಗೆ ಕೊಡುತ್ತೇನೆ ಎಂದು ಉತ್ಸುಕತೆಯಿಂದ ಕೇಳಿದ ಪ್ರಭುವಿಗೆ "ಪ್ರಾರ್ಥನೆ" ಎಂಬ ಔಷಧಿಯನ್ನು ಹೇಳಿಕೊಟ್ಟರು. ಪ್ರಭು ಮನೆಗೆ ಹೋಗಿ ಆ ಔಷಧಿಯನ್ನು ಉಪಯೋಗಿಸಿದ.

 

ಕೆಲವೇ ದಿನಗಳಲ್ಲಿ ಅದು ಕೆಲಸ ಮಾಡಲು ಪ್ರಾರಂಭಿಸಿತು. ಅವನು ನಗುಮುಖದಿಂದ ಶಾಲೆಗೆ ಬಂದನು. ಪಿ.ಟಿ ಸರ್ ಕಡೆ ನೋಡಿ ನೀವು ಹೇಳಿದ ಔಷಧಿ ಸೂಪರ್ ಮೆಡಿಸಿನ್ ಸರ್ ಎಂದನು. ಪ್ರತಿನಿತ್ಯ ಉಪಯೋಗಿಸು ಎಂದು ಹೇಳಿಬಿಟ್ಟು ಹೋದರು. ರಾತ್ರಿ ಪ್ರಭು ತನ್ನ ತಂದೆಗಾಗಿ ಕಣ್ಣೀರಿಟ್ಟು ಪ್ರಾರ್ಥಿಸುತ್ತಿದ್ದ. ಪ್ರಾರ್ಥನೆ ಮುಗಿಸಿ ಊಟಕ್ಕೆ ಬಂದಾಗ ತಂದೆ ಅಳುತ್ತಿದ್ದರು. ತಮ್ಮಾ ನಾನು ಎಂದಿಗೂ ದೇವರನ್ನು ಹುಡುಕಲಿಲ್ಲ, ನೀನು ನನಗಾಗಿ ಇಷ್ಟು ಹೊತ್ತು ಪ್ರಾರ್ಥಿಸಿದ್ದನ್ನು ನಾನು ನೋಡಿದೆ. ನಿನ್ನ ಪ್ರಾರ್ಥನೆ ನನ್ನನ್ನು ಬದಲಾಯಿಸಿದೆ. ಇನ್ನು ಮುಂದೆ ನಾನು ಕುಡಿಯುವುದಿಲ್ಲ ಎಂದು ತಂದೆ ಹೇಳಿದ್ದು ಕೇಳಿ ಪ್ರಭು ಮತ್ತು ಅಮ್ಮ ಖುಷಿಪಟ್ಟರು. ಅವರು ಕುಟುಂಬ ಪ್ರಾರ್ಥನೆ ಎಂಬ ಔಷಧಿಯನ್ನು ಬಳಸುವುದನ್ನು ಮುಂದುವರೆಸಿದರು. ಸಂತೋಷ ಮತ್ತು ಶಾಂತಿಯ ಪರಿಮಳವು ಹೊರಹೊಮ್ಮಲು ಪ್ರಾರಂಭಿಸಿತು. ಮುದ್ದು ಪುಟಾಣಿಗಳೇ! ನೀವು ಕೂಡ ನನ್ನ ತಂದೆ ಕುಡಿಯುತ್ತಾರೆ, ಬಡತನವಿದೆ! ಸಾಲದ ಸಮಸ್ಯೆಗಳಿವೆ ಎಂದು ದುಃಖಿತರಾಗಿದ್ದೀರಾ? ಪ್ರಾರ್ಥನೆ ಎಂಬ ಔಷಧಿಯನ್ನು ಬಳಸಿ ಪ್ರಯತ್ನಿಸಿ ನೀವು ಊಹಿಸಲು ಸಾಧ್ಯವಾಗದ ಅದ್ಭುತ ನಡೆಯುತ್ತದೆ. ನಂಬುವುದಾದರೆ ಹಲ್ಲೇಲೂಯ ಹೇಳೋಣ್ವಾ?

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş holiganbet giriş çarkbet çarkbet giriş