By Village Missionary Movement
Sunday, 24-Nov-2024ಧೈನಂದಿನ ಧ್ಯಾನ(Kannada) – 24.11.2024 (Gospel Special)
SHINNING STAR
"…ಅನೇಕರನ್ನು ನೀತಿಯ ಕಡೆಗೆ ತಿರುಗಿಸಿದ ವರು ನಕ್ಷತ್ರಗಳ ಹಾಗೆಯೂ ಎಂದೆಂದಿಗೂ ಪ್ರಕಾಶಿಸುವರು" - ದಾನಿಯೇಲ 12:3
ಭಾನುವಾರ ಎಂದರೇನೆ ತುಂಬಾ ಸಂತೋಷ. ತುಂಬಾ ಜಾಲಿಯಾಗಿ ಸಂತೋಷವಾಗಿ ಇರುತ್ತೀರ ಅಲ್ವಾ? O.k. ಆ ಸಂತೋಷದ ನಿಜವಾದ ಕಥೆಯನ್ನು ಕೇಳೋಣ್ವಾ? ಇಂಗ್ಲೆಂಡಿನ ಒಂದು ಕ್ರೈಸ್ತ ಕುಟುಂಬದಲ್ಲಿ ಇಬ್ಬರು ಮಕ್ಕಳಿದ್ದರು. ಜಾನ್ ಟಕ್ಕರ್, ಸಾರಾ ಟಕ್ಕರ್. ಈ ಸಾರಾ ಟಕ್ಕರ್ ಇತರ ಮಕ್ಕಳಂತೆ ಓಡಿ ಆಟವಾಡಲು ಮತ್ತು ಶಾಲೆಗೆ ಹೋಗಲು ಸಾಧ್ಯವಿಲ್ಲ. ಅವರು ವೀಲ್ ಚೇರ್ ನಲ್ಲೇ ಕುಳಿತಿರುತ್ತಿದ್ದರು. ಅವಳು ಮನೆಯಿಂದಲೇ ಶಿಕ್ಷಣ ಪಡೆದಳು. ಆಕೆಯ ಪೋಷಕರು ಅವಳನ್ನು ವೀಲ್ ಚೇರ್ ನಲ್ಲಿ ಆಲಯಕ್ಕೆ ಮಾತ್ರ ಕರೆದುಕೊಂಡು ಹೋಗುತ್ತಿದ್ದರು. ಸಾರಾ ಟಕ್ಕರ್ ಗೆ 20 ವರ್ಷವಾದಾಗ, ಜಾನ್ ಟಕ್ಕರ್ ಕೂಡ ಬೆಳೆದಿರುತ್ತಾರಲ್ವಾ! ಅವರು ಭಾರತದ ಪಾಳಯಂಕೋಟ್ಟೈ ಪ್ರಾಂತ್ಯದಲ್ಲಿ ಮಿಷನರಿಯಾಗಿ ಸೇವೆ ಮಾಡಲು ಬಂದರು. ಆಗ ಫೋನ್ ಇರಲಿಲ್ಲ. ನಿಮ್ಮ ಕೈಯಲ್ಲಿ ಯಾವಾಗಲೂ ಫೋನ್ ಇರುತ್ತದೆ. ಅದರಲ್ಲೂ ರಜೆಯ ದಿನಗಳಲ್ಲಿ ನಿಮ್ಮ ಫೋನ್ ಅನ್ನು ಕೆಳಗೆ ಇಡೋದಕ್ಕೆ ಮನಸ್ಸೇ ಬರೋದಿಲ್ಲ, ಹಾಗೆ ಅಲ್ವಾ ಪುಟಾಣಿಗಳೇ. ಫೋನ್ ನಿಂದಾಗಿ ಎಷ್ಟು ಮಕ್ಕಳು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ ಗೊತ್ತಾ? ನೀನು ಎಚ್ಚರವಾಗಿರು ಪೋಷಕರ ಮಾತನ್ನು ಕೇಳು ಮಿತವಾಗಿ ಬಳಸು O.k.ನಾ.
ಜಾನ್ ಟಕ್ಕರ್ ತನ್ನ ಸಹೋದರಿಗೆ ಪತ್ರಗಳನ್ನು ಬರೆಯುವುದು ಅಭ್ಯಾಸ. ಹಾಗೆ ಬರೆಯುವಾಗ ಭಾರತದಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗುವುದಿಲ್ಲ, ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಬಿಡುತ್ತಾರೆ, ಹೆಣ್ಣುಮಕ್ಕಳು ಓದುವುದು ಕುಟುಂಬಕ್ಕೆ ಅವಮಾನ ಎಂದು ಭಾವಿಸುತ್ತಾರೆ ಎಂದು ಪತ್ರ ಬರೆದಿದ್ದರು. ತನ್ನ ಸಹೋದರನ ಪತ್ರವನ್ನು ಓದಿದ ನಂತರ, ಸಾರಾ ಟಕ್ಕರ್ ತನ್ನ ಕೋಣೆಗೆ ಹೋಗಿ ತುಂಬಾ ಭಾರದಿಂದ ಅತ್ತು ಪ್ರಾರ್ಥಿಸಿದರು. "ನಾನು "ಭಾರತಕ್ಕೆ ಹೋಗಿ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಲು ಆಸೆ ಆದರೆ ನಾನು ಅಂಗವಿಕಲಳಾಗಿದ್ದೇನೆ" ಎಂದು ಸುಮ್ಮನೆ ಇರದೆ, ಯೋಚಿಸಿದಳು. ತನ್ನ ಒಡವೆಗಳನ್ನು ಮಾರಿ ಹಣ ತೆಗೆದುಕೊಂಡಳು, ಸಂಬಂಧಿಕರೊಂದಿಗೆ ಮಾತನಾಡಿ ಸಹಾಯ ಮಾಡುವಂತೆ ಕೇಳಿದಳು. ತನ್ನ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡುವವರ ಬಳಿ ಗಿಫ್ಟ್ ಬೇಡ ಎಂದು ಹೇಳಿ ಹಣ ತೆಗೆದುಕೊಂಡಳು. ಅವಳು ಸಂಪೂರ್ಣ ಹಣವನ್ನು ತನ್ನ ಸಹೋದರನಿಗೆ ಕಳುಹಿಸಿ, ಪಾಳಯಂಕೋಟ್ಟೈ ನಲ್ಲಿ ಹೆಣ್ಣು ಮಕ್ಕಳು ಓದುವುದಕ್ಕಾಗಿ ಶಾಲೆಯೊಂದನ್ನು ಪ್ರಾರಂಭಿಸಲು ಬಳಸುವಂತೆ ಕೇಳಿಕೊಂಡಳು. ಶಾಲೆಯ ನಂತರ, ಒಂದು ಕಾಲೇಜನ್ನು ಸಹ ನಿರ್ಮಿಸಲಾಯಿತು, ಅದು ಇಂದಿಗೂ ಪಾಳಯಂಕೋಟ್ಟೈನಲ್ಲಿ ಸಾರಾ ಟಕ್ಕರ್ ಕಾಲೇಜು ಎಂದು ಇದೆ.
ಪ್ರೀತಿಯ ಮುದ್ದು ಪುಟಾಣಿಗಳೇ, ತನ್ನ ಕೊರತೆಗಳನ್ನು ನೆನೆಸಿ ಸೋತು ಹೋಗದೆ ಸಾಧಿಸಬೇಕೆಂದು ಭಾವಿಸಿ ಸಾಧಿಸಿದ ಮಹಿಳೆಯೇ ಸಾರಾ ಟಕ್ಕರ್. ಸಾರಳ ಹಾಗೆ ನೀನು ಸಹ ಹೊಳೆಯಲು ಬಯಸುತ್ತೀಯಾ? ನಿನ್ನ ಕೊರತೆಯನ್ನು ಮರೆತು ಇತರರ ಕೊರತೆಯ ಬಗ್ಗೆ ಯೋಚಿಸಿ ಒಳ್ಳೆಯದನ್ನು ಮಾಡಿ ನೋಡು. ನೀನು ಸಹ ಮಿನುಗುವ ನಕ್ಷತ್ರವಾಗುವುದು ಖಚಿತ.
- Mrs. ಅನ್ಬುಜ್ಯೋತಿ ಸ್ಟಾಲಿನ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482