By Village Missionary Movement
Tuesday, 26-Nov-2024ಧೈನಂದಿನ ಧ್ಯಾನ(Kannada) – 26.11.2024 (Gospel Special)
ಸಂಗೀತದ ಮೂಲಕ ಸುವಾರ್ತೆ
"…ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವದನ್ನು ಕಂಡೆನು" - ಪ್ರಕಟಣೆ 7:9
ಒಬ್ಬ ಮಿಷನರಿ ನಾಗಾಲ್ಯಾಂಡ್ ಜನರ ನಡುವೆ ಸೇವೆ ಮಾಡಲು ಬಯಸಿದನು. ಆಗಿನ ಬ್ರಿಟಿಷ್ ಸರ್ಕಾರ ಅವರನ್ನು ತಡೆದಿತ್ತು. ಪೊಲೀಸರು ಭದ್ರತೆಯೊಂದಿಗೆ ತೆರಳುವಂತೆ ಸೂಚಿಸಿದರು. ಹಾಗೆ ಹೋದರೆ ಸುವಾರ್ತೆ ಸಾರುವುದು ಸಫಲವಾಗದು ಎಂದು ಭಾವಿಸಿ ಒಂದು ಕೈಯಲ್ಲಿ ಸತ್ಯವೇದ, ಇನ್ನೊಂದು ಕೈಯಲ್ಲಿ ಸಂಗೀತ ವಾದ್ಯ ಹಿಡಿದು ನಾಗಾಲ್ಯಾಂಡ್ ಪ್ರವೇಶಿಸಿದರು. ನಾಗಾಲ್ಯಾಂಡ್ ಜನರು ಓಡೋಡಿ ಬಂದು ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ಅವನ ಸುತ್ತಲೂ ನಿಂತು, "ವಿಕ್ಟೋರಿಯಾ ಮಹಾರಾಣಿಯ ಕೂಲಿಯವನೇ, ಹಿಂತಿರುಗಿ ಹೋಗಿಬಿಡು" "ಒಂದು ಹೆಜ್ಜೆ ಮುಂದಿಟ್ಟರೂ ಪ್ರಾಣಕ್ಕೇ ಅಪಾಯ" ಎಂದು ಬೆದರಿಸಿದರು. ಮಿಷನರಿಯು ನಗುಮೊಗದಿಂದ ವಾದ್ಯವನ್ನು ಎತ್ತಿಕೊಂಡು ನಾಗಾ ಭಾಷೆಯಲ್ಲಿ ಹಾಡಲು ಪ್ರಾರಂಭಿಸಿದರು. ನಾಗಾಲ್ಯಾಂಡ್ ಜನರು ತಮ್ಮ ದೊಣ್ಣೆಗಳನ್ನು ಎಸೆದು ಸಂಗೀತಕ್ಕೆ ಮಾರುಹೋದರು. ಹಾಡು ಮುಗಿದ ನಂತರ "ಇನ್ನೊಂದು ಹಾಡು ಹಾಡಿ" ಎಂದರು. ಅವರು ಹಾಡಿದರು, ಮತ್ತು ಸಂತೋಷಗೊಂಡ ನಾಗಾಲ್ಯಾಂಡ್ ಜನರು ಅವರನ್ನು ಕರೆದೊಯ್ದರು, "ನಮ್ಮ ಊರಿಗೆ ಬಂದು ಎಲ್ಲರಿಗೂ ಈ ಹಾಡನ್ನು ಕಲಿಸಿ" ಎಂದು ಹೇಳಿದರು. ಸೇವೆಗೆ ದಾರಿ ತೆರೆಯಲಾಯಿತು. ಅನೇಕರು ಕ್ರಿಸ್ತನನ್ನು ಅಂಗೀಕರಿಸಿದರು.
ಸತ್ಯವೇದದಲ್ಲಿ ಯೋಹಾನ 4 ನೇ ಅಧ್ಯಾಯದಲ್ಲಿ ಯೇಸು ಕ್ರಿಸ್ತನು ಸಮಾರ್ಯ ಸ್ತ್ರೀಯ ಬಳಿ "ಕುಡಿಯುವುದಕ್ಕೆ ನೀರು ಕೊಡು" ಎಂದು ಕೇಳಿ, ಅವಳೊಂದಿಗೆ ಸಂಭಾಷಣೆ ನಡೆಸುತ್ತಾರೆ. ಅವಳ ಅನುಚಿತ ಜೀವನವನ್ನು ನಯವಾಗಿ ಸೂಚಿಸುವ ಮೂಲಕ ಮತ್ತು ಅವಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅವಳ ಆಧ್ಯಾತ್ಮಿಕ ಕಣ್ಣುಗಳನ್ನು ತೆರೆದರು. ನೀರು ತೆಗೆದುಕೊಳ್ಳಲು ಬಂದ ಅವಳು ಕೊಡವನ್ನು ಅಲ್ಲಿಯೇ ಬಿಟ್ಟು ಊರೊಳಕ್ಕೆ ಹೋಗಿ, "ಅಲ್ಲಿ ಒಬ್ಬನಿದ್ದಾನೆ, ನಾನು ಇದುವರೆಗೆ ಮಾಡಿದ್ದನ್ನೆಲ್ಲಾ ನನಗೆ ಹೇಳಿದನು; ಬಂದು ಅವನನ್ನು ನೋಡಿರಿ; ಬರತಕ್ಕ ಕ್ರಿಸ್ತನು ಅವನೇ ಏನೋ? ಎಂದು ಹೇಳಿದಳು. ಆ ಊರಿನವರು ಯೇಸುಕ್ರಿಸ್ತನ ಬಳಿಗೆ ಹೊರಟು ಬಂದರು. ಉಪದೇಶವನ್ನು ಕೇಳಿದರು. ಯೇಸು ಕ್ರಿಸ್ತನು ಎರಡು ದಿನಗಳ ಕಾಲ ಅಲ್ಲಿಯೇ ಇದ್ದನು. ನೀನು ನಮ್ಮಲ್ಲಿ ಇರಬೇಕೆಂದು ಆತನನ್ನು ಬೇಡಿಕೊಂಡರು. ಯೇಸುಕ್ರಿಸ್ತನು ಎರಡು ದಿವಸ ಅವರಲ್ಲೇ ಇದ್ದನು. ಅನೇಕ ಸಮಾರ್ಯದವರು ಆತನಲ್ಲಿ ನಂಬಿಕೆ ಇಟ್ಟರು. ತಪ್ಪು ಜೀವನ ನಡೆಸಿದ ಮಹಿಳೆ, ಊರಿನವರಿಗೆ ಹೆದರಿ, ಮಧ್ಯಾಹ್ನ ನೀರು ತರಲು ಬಂದವಳು ಯೇಸು ಕ್ರಿಸ್ತನನ್ನು ಭೇಟಿಯಾದ ಕೂಡಲೇ, ಧೈರ್ಯವಾಗಿ ಊರೊಳಕ್ಕೆ ಹೋದಳು,, ನಾಚಿಕೆಯಿಲ್ಲದೆ ತನ್ನನ್ನು ತಾನೇ ಸಾಕ್ಷಿ ಹೇಳಿಕೊಳ್ಳುತ್ತಾ ಆ ಊರಿನವರನ್ನು ಯೇಸುವಿನ ಬಳಿಗೆ ಕೊಂಡೊಯ್ದಳು ಎಂಬುದಾದರೆ, ಇತರರನ್ನು ಕ್ರಿಸ್ತನ ಕಡೆಗೆ ನಡೆಸುವುದು ಎಷ್ಟು ಅವಶ್ಯಕವಾದ, ನಮ್ಮ ಮೇಲಿರುವ ಕರ್ತವ್ಯ!
ನಾವು ಪ್ರಕಟನೆಯಲ್ಲಿ ಓದುವಂತೆ, ಯಜ್ಞದ ಕುರಿಯಾದಾತನ ಮುಂದೆ ಸಕಲ ಜನಾಂಗಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ ನಿಂತರು ಎಂದು ನೋಡುತ್ತೇವೆ. ಯೆಹೂದ್ಯರು ಅಸಹ್ಯ ಪಡುವ ಸಮಾರ್ಯದವರಿಗೂ ಅವಶ್ಯ. ಹಾಗಾಗಿ ಇಷ್ಟ-ಅನಿಷ್ಟಗಳನ್ನು ಬದಿಗಿಟ್ಟು ಎಲ್ಲರನ್ನೂ ಪ್ರೀತಿಸಿ. ದೇವರು ನಮಗೆ ನೀಡಿದ ಪ್ರತಿಭೆಗೆ ಅನುಗುಣವಾಗಿ ಎಲ್ಲರಿಗೂ ಸುವಾರ್ತೆ ಸಾರೋಣ.
- Mrs. ವನಜಾ ಬಾಲರಾಜ್
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್‌ನಲ್ಲಿ ನಡೆಯುವ ಆಸ್ಪತ್ರೆ ಸೇವೆಗಳ ಮೂಲಕ ಪ್ರಯೋಜನ ಪಡೆಯುವ ಜನರು ಕರ್ತನನ್ನು ಅರಿತುಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482