Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.12.2024
Share:

By Village Missionary Movement

Tuesday, 03-Dec-2024

ಧೈನಂದಿನ ಧ್ಯಾನ(Kannada) – 03.12.2024

 

ಪ್ರಯಾಣಗಳು ಮುಂದುವರಿಯುತ್ತವೆ

 

"ಯೆಹೋವನ ದೂತನು ಎರಡನೆಯ ಸಾರಿ ಬಂದು ಅವನನ್ನು ತಟ್ಟಿ ಅವನಿಗೆ - ಎದ್ದು ಊಟಮಾಡು; ನೀನು ನಿನ್ನ ಶಕ್ತಿ ಮೀರುವಷ್ಟು ಪ್ರಯಾಣಮಾಡಬೇಕಾಗಿದೆ ಅಂದನು" - 1 ಅರಸುಗಳು 19:7

  

ಗ್ಯಾಟ್ನರ್ ಟೇಲರ್ ಕಪ್ಪು ಜನಾಂಗದವರು. 1918 ರಲ್ಲಿ ಲೂಸಿಯಾನದಲ್ಲಿ ಒಬ್ಬ ಗುಲಾಮನ ಮೊಮ್ಮಗನಾಗಿ ಜನಿಸಿದವರು. ವರ್ಣಭೇದ ನೀತಿಯನ್ನು ವಿರೋಧಿಸಿ ಅಮೇರಿಕನ್ ಬೋಧಕರ ನಾಯಕ ಎಂದು ಪರಿಗಣಿಸಲ್ಪಟ್ಟ ಬೋಧಕ. ನ್ಯೂಯಾರ್ಕ್ ನಗರದಲ್ಲಿ ದೊಡ್ಡ ಸಭೆಯನ್ನು ನಡೆಸಿದರು. ಜಾತಿವಾದದ ವಿರುದ್ಧ ಸಮಾನತೆಗಾಗಿ ಹೋರಾಡಿದರು. ವಿಶ್ವದ ಅತ್ಯಂತ ಜನಪ್ರಿಯ ಸುವಾರ್ತಾಬೋಧಕ.

       

ತನ್ನ 89ರ ಹರೆಯದಲ್ಲಿ ಆರೋಗ್ಯ ಸಮಸ್ಯೆಯಿಂದಾಗಿ ಅನೇಕ ಕಡೆ ಸುವಾರ್ತೆಗೆ ತೆರಳಲು ಸಾಧ್ಯವಾಗಲಿಲ್ಲ. ಅಸೋಸಿಯೇಟೆಡ್ ಪ್ರೆಸ್‌ ಗೆ ಸಂಬಂಧಿಸಿದ ರಾಚೆಲ್ ಜೋಲ್ ಎಂಬವರ ಬಳಿ ಮಾತನಾಡುವಾಗ, "ನಾನು ಎಲ್ಲವನ್ನೂ ಕಳೆದುಕೊಂಡಂತೆ ಸೋತು ಹೋಗಿದ್ದೇನೆ" ಎಂದು ಹೇಳಿದರು. ಆದರೆ ನಂತರ ಎಲ್ಲದಕ್ಕೂ ಒಂದು ಕಾಲ ಮತ್ತು ಸಮಯ ಇದೆ. ಅವುಗಳನ್ನು ನಾವು ಎಷ್ಟರ ಮಟ್ಟಿಗೆ ಉಪಯೋಗಿಸಿದ್ದೇವೆ ಎಂಬುದೇ ಮುಖ್ಯ ಎಂದು ನಂಬಿಕೆಯಿಂದ ಹೇಳಿದರು. ತನ್ನ ಸೇವೆಯ ದಿನಗಳು ಮುಗಿಯಲಿಲ್ಲ. ಇನ್ನೂ ಮುಂದುವರೆಯಬೇಕೆಂದು ಬಯಸಿ, ಬಲಹೀನತೆಯ ದಿನಗಳಲ್ಲಿಯೂ ಉತ್ಸಾಹದಿಂದ ತಮ್ಮ ಓಟವನ್ನು ಪೂರ್ಣಗೊಳಿಸಿದರು. 

 

ಇಂದಿನ ಸತ್ಯವೇದಭಾಗದಲ್ಲಿ ಪ್ರವಾದಿಯಾದ ಎಲೀಯನು, ತನ್ನ ಮನಸ್ಸಿನಲ್ಲಿ ತಾನೊಂದು ಕೊನೆಯ ಹಂತದಲ್ಲಿರುವುದಾಗಿ ಯೋಚಿಸುತ್ತಿದ್ದರು. ದೇವರು ಎಲೀಯನ ಬಳಿ, "ನೀನು ಇನ್ನೂ ಬಹಳ ದೂರ ಹೋಗಬೇಕಾಗಿದೆ" ಎಂದು ಹೇಳಿದರು ಮತ್ತು ಅವನ ಸೇವೆಯನ್ನು ಮುಂದುವರಿಸಲು ಅವನನ್ನು ಬಲಪಡಿಸಿದರು. ಆದಿಕಾಂಡ 28ನೇ ಅಧ್ಯಾಯದಲ್ಲಿ ಯಾಕೋಬನ ಬಳಿ ದೇವರು ಹೀಗೆ ವಾಗ್ದಾನಮಾಡಿದರು. ನಾನು ನಿನಗೆ ಹೇಳಿದ್ದನ್ನೆಲ್ಲಾ ನೆರವೇರಿಸಿದ ಹೊರತು ಬಿಡುವದಿಲ್ಲ ಅಂದನು. ನಮ್ಮ ಕರ್ತನು ನಂಬಿಗಸ್ತನು. ಮೋಶೆಯು ದೇವರ ಬಗ್ಗೆ ಮಾತನಾಡುವಾಗ, ದೇವರೇ ನಿಮಗೆ ಶಾಶ್ವತವಾದ ಆಶ್ರಯ ಎಂದು ಹೇಳುತ್ತಾರೆ. ಕಾಲಗಳನ್ನು ಯುಗಗಳನ್ನು ಮೀರಿ ಕಾಣಲ್ಪಡುವ ನಮ್ಮ ದೇವರು ಈ ಸಂದೇಶವನ್ನು ಓದುತ್ತಿರುವ ನಿಮ್ಮನ್ನು ಎಲ್ಲಾ ದಿನಗಳಲ್ಲಿಯೂ ನಡೆಸಲು ಶಕ್ತರಾಗಿದ್ದಾರೆ.

 

ದೇವರು ನಮ್ಮಲ್ಲಿ ಪ್ರಾರಂಭಿಸಿರುವ ಒಳ್ಳೆಯ ಕಾರ್ಯಗಳು ಮತ್ತು ಆತನಿಗಾಗಿ ನಾವು ಮಾಡಿದ ಸಂಕಲ್ಪಗಳು ಮುಗಿದಿಲ್ಲ. ಅದು ಈಡೇರುವವರೆಗೂ ಮುಂದುವರೆಯಬೇಕು. ನಮ್ಮಲ್ಲಿ ಒಳ್ಳೆಯ ಕೆಲಸವನ್ನು ಪ್ರಾರಂಭಿಸಿದವನು ಯೇಸುಕ್ರಿಸ್ತನ ಅಂತ್ಯದವರೆಗೂ ಅದನ್ನು ನಿರ್ವಹಿಸಲು ಸಮರ್ಥನೆಂದು ನಾವು ನಂಬೋಣ. ದೇವರ ಸಹಾಯದೊಂದಿಗೆ ಕಳೆದ ದಿನಗಳ ಕಹಿ ಅನುಭವಗಳನ್ನು ಮರೆತುಬಿಡಿ. ನಿಮ್ಮ ಪ್ರಯಾಣಗಳು ಸುಖಕರವಾಗಿರಲಿ.

- Bro. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

25,000 ಹಳ್ಳಿಗಳಿಗೆ ಸುವಾರ್ತೆ ಸಾರುವ ಯೋಜನೆಯಲ್ಲಿ ನಮ್ಮೊಂದಿಗೆ ಬಂದಿರುವ ಸಭೆಯವರು ಮತ್ತು ಸೇವಕರು ಆಶೀರ್ವಾದ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet grandpashabet betgit radissonbet