Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.05.2021
Share:

By Village Missionary Movement

Saturday, 08-May-2021

ಧೈನಂದಿನ ಧ್ಯಾನ(Kannada) – 08.05.2021

ನಾವು ಸ್ವೀಕರಿಸಲ್ಪಡುತ್ತೇವಾ?

“ಆಮೇಲೆ ದೇವರು ಅವನನ್ನು ತೆಗೆದುಹಾಕಿ ದಾವೀದನನ್ನು ಅವರ ಮೇಲೆ ಅರಸನನ್ನಾಗಿ ಮಾಡಿ …”  - ಅಪೊಸ್ತಲ. 13:22

ಸತ್ಯವೇದದಲ್ಲಿ  ಕರ್ತನು ಸೌಲನನ್ನು ರಾಜ್ಯದಿಂದ ಹೊರಗೆ ಹಾಕಿ ದಾವೀದನನ್ನು ಆ ರಾಜ್ಯಕ್ಕೆ ಪ್ರವೇಶಿಸುವಂತೆ ಮಾಡಿದನೆಂದು ನಮಗೆ ತಿಳಿದಿದೆ.  ಇದಕ್ಕೆ ಅನೇಕ ಕಾರಣಗಳಿಗೆ ಆದರೆ ಇಂದು ಎರಡು ಕಾರಣಗಳನ್ನು ಮಾತ್ರ ನೋಡೋಣ.

ದೇವರ ಹೃದಯಕ್ಕೆ ತಕ್ಕವನಾಗಿದ್ದ, ದಾವೀದನು ಇತರರ ತ್ಯಾಗವನ್ನು ಗೌರವಿಸುವ ಮನಸ್ಸನ್ನು ಹೊಂದಿದ್ದನು.  ಒಂದು ಬಾರಿ ಇಸ್ರಾಯೇಲಿಗೆ ವಿರುದ್ಧವಾಗಿ ಫಿಲಿಷ್ಟಿಯರ ಸೈನ್ಯವು ಬೆತ್ಲೆಹೇಮ್ ನಲ್ಲಿದ್ದಾಗ, ದಾವೀದನಿಗೆ ಬೆತ್ಲೆಹೇಮಿನ ದ್ವಾರದ ಬಳಿಯಿರುವ ಬಾವಿಯ ನೀರಿನ ಮೇಲೆ ಬಾಯಾರಿಕೆಯಾಯಿತು.  ಕೂಡಲೇ ದಾವೀದನೊಂದಿಗಿದ್ದ ಮೂವರು ಪ್ರಬಲರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನೀರನ್ನು ತರಲು ಫಿಲಿಷ್ಟಿಯರ ಪಾಳಯಕ್ಕೆ ಹೋದರು.  ದಾವೀದನು ಅವರ ತ್ಯಾಗವನ್ನು ನೆನೆಸಿ ತಾನು ಆ ನೀರನ್ನು ಕುಡಿಯದೇ ಕರ್ತನಿಗೆಂದು ಸುರಿದು ಅದನ್ನು ಕುಡಿಯಲಿಲ್ಲ;  ಆದರೆ ಸೌಲನು, ಗೊಲ್ಯಾತನನ್ನು ಸೋಲಿಸಿದ ದಾವೀದನು ತನ್ನ ಪ್ರಾಣವನ್ನೂ ಲೆಕ್ಕಿಸದೆ ಧೈರ್ಯದಿಂದ ಹೋಗಿದ್ದನ್ನು, ಸೌಲನು ಸರಿಯಾದ ರೀತಿಯಲ್ಲಿ ಘನಪಡಿಸಲೂ ಇಲ್ಲ.  ಬದಲಾಗಿ, ಅವನು ದಾವೀದನ ಜೀವವನ್ನು ತೆಗೆಯಲು ಆತುರಗೊಂಡನು.

ಸೌಲ ಮತ್ತು ದಾವೀದನ ನಡುವೆ ಇದ್ದ ಮತ್ತೊಂದು ವಿಶಿಷ್ಟ ಗುಣವೆಂದರೆ ಅವರು ದೇವರ ಅಭಿಷಿಕ್ತರೊಂದಿಗೆ ವ್ಯವಹರಿಸಿದ ವಿಧಾನ.  ಕರ್ತನೇ ಸೌಲನನ್ನು ದಾವೀದನ ಕೈಗೆ ಒಪ್ಪಿಸಿ ಕೊಟ್ಟಿದ್ದರೂ, ದಾವೀದನು ಅವನ ಮೇಲೆ ಕೈ ಹಾಕುವ ಧೈರ್ಯ ಮಾಡಲಿಲ್ಲ.  ಆದರೆ ಕರ್ತನ ಯಾಜಕನಾದ ಅಹಿಮೆಲೆಕನು ಸೌಲನನ್ನು ಬೇಡಿಕೊಂಡಾಗ ಅವನು ಅವನನ್ನು ಮತ್ತು ಅವನ ಜೊತೆಯಲ್ಲಿದ್ದ 85 ಯಾಜಕರನ್ನು ಕತ್ತಿಯ ಅಂಚಿನಿಂದ ಹೊಡೆದು ಸಾಯಿಸಿದನು.  ನೋಡಿರಿ, ಇವರಿಬ್ಬರ ನಡುವೆ ಇರುವ ಮನಸ್ಥಿತಿಯನ್ನು ಎಂತದ್ದಾಗಿದೆ!  ಹೌದು, ಸೌಲನನ್ನು ರಾಜ್ಯದಿಂದ ಉರುಳಿಸಲಾಯಿತು, ದಾವೀದನು ಮಾತ್ರ ರಾಜನಾಗಿ ಪಟ್ಟಾಭಿಷೇಕ ಮಾಡಲ್ಪಟ್ಟನು.

ದೇವರ ಮಕ್ಕಳೇ!  ನಮ್ಮ ಜೀವನ ದೇವರಿಂದ ಸ್ವೀಕರಿಸಲ್ಪಡುವುದು, ತಳ್ಳಲ್ಪಡುವುದು ನಾವು ದೇವರಿಗೆ ಭಯಪಟ್ಟು ನಡೆಯುವ ವಿಧಾನದಲ್ಲೇ ಇದೆ. ನಾವು ಇತರರ ಸಮರ್ಪಣೆಯನ್ನು ತ್ಯಾಗವನ್ನು ಗೌರವಿಸುತ್ತೇವೆಯೇ ಅಥವಾ ನಾವು ಮಾಡುವ ಕೆಲಸವೇ   ದೊಡ್ಡದಾಗಿ ಕಾಣುತ್ತಿದೆಯೇ?   ದೇವರ ಅಭಿಷೇಕವನ್ನೋ, ಅಥವಾ ಅಭಿಷಿಕ್ತರನ್ನೋ ನಾವು ಕೇವಲವಾಗಿ ಮಾತನಾಡುತ್ತಿದ್ದೇವಾ?  ಯೋಚಿಸೋಣ.  ಸೌಲನಂತೆ  ಧೈರ್ಯ, ಮತ್ತು ಕಾಠಿಣ್ಯವು ನಮಗೆ ಬೇಡ.  ನಾವು ದಾವೀದನಂತೆ ಜೀವಿಸಿ  ಖಚಿತವಾದ ಕೃಪೆಗಳನ್ನು ಪಡೆದುಕೊಳ್ಳೋಣ.
-    K. ಬೆಂಜಮಿನ್ ಬ್ರೈಟ್

ಪ್ರಾರ್ಥನಾ ಅಂಶ:-
ಮಿಷನರಿಗಳ ಪತ್ನಿಯರಾದ ನಿರೋಷಾ, ಸೂಸನ್ನಾಳ್, ಮತ್ತು ರಾಜಕುಮಾರಿ ಎಂಬವರಿಗೆ ಸುಖಕರವಾದ ಹೆರಿಗೆಯನ್ನು  ದೇವರು ದಯಪಾಲಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey cratosroyalbet grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş https://tr.holiganbet-30temmuz.art/ çarkbet çarkbet giriş