Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.01.2025
Share:

By Village Missionary Movement

Saturday, 04-Jan-2025

ಧೈನಂದಿನ ಧ್ಯಾನ(Kannada) – 04.01.2025

 

ಅದ್ಭುತ ಬೇಕಾ?

 

"...ಹಾಳಾಗಿದ್ದ ಅಲ್ಲಿನ ಯೆಹೋವವೇದಿಯನ್ನು ತಿರಿಗಿ ಕಟ್ಟಿಸಿದನು" - 1 ಅರಸುಗಳು 18:30

  

ಬೋಧಕರಾದ ಪಾಲ್ ಯಾಂಗಿಚ್ಚೋ ಅವರ ಸೇವೆಯ ಆರಂಭಿಕ ದಿನಗಳಲ್ಲಿ, ಒಂದುದಿನ ಭಾನುವಾರದ ಆರಾಧನೆಯಲ್ಲಿ ದೇವರ ನಡೆಸುವಿಕೆಯನ್ನು ಪ್ರಸನ್ನತೆಯನ್ನು ಅನುಭವಿಸದ ಕಾರಣ ಸೋತುಹೋದ ಹಾಗೆ ಭಾವಿಸಿದರು. ಹಾಡುಗಳು, ಆರಾಧನೆ, ಸಾಕ್ಷಿಗಳು, ಸಂದೇಶ ಎಲ್ಲವೂ ಉಪ್ಪಿಲ್ಲದೆ ಸಪ್ಪೆಯಾಗಿತ್ತು. ಬೋಧಕರಿಗೆ ತುಂಬಾ ದುಃಖವಾಗಿತ್ತು. ಆರಾಧನೆ ಮುಗಿಸಿ ಜನರೆಲ್ಲರು ಹೊರಟು ಹೋದರು. ಬೋಧಕರಿಗೆ ಮನೆಗೆ ಹೋಗಲು ಮನಸ್ಸಿಲ್ಲ. ಆಲಯದಲ್ಲೇ ಕುಳಿತುಬಿಟ್ಟರು. ಆಗ ಗೂನಿಯಾಗಿದ್ದ ಒಬ್ಬ ವ್ಯಕ್ತಿಯು ಬೋಧಕರ ಬಳಿ ಪ್ರಾರ್ಥಿಸಿಕೊಳ್ಳಲು ದೇವಾಲಯಕ್ಕೆ ಬಂದನು. ಬೋಧಕರು ಪ್ರಾರ್ಥನೆ ಮಾಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಅವನು ಮನೋವೇದನೆಯಿಂದ ಕೇಳಿಕೊಂಡದ್ದರಿಂದ ಬೋಧಕರು ಪ್ರಾರ್ಥಿಸಿದರು. ಯಾವುದೇ ಬದಲಾವಣೆಯೂ ಇಲ್ಲ. ಇದರಿಂದ ಬೋಧಕರು ತೀವ್ರ ಖಿನ್ನತೆಗೆ ಒಳಗಾದರು. ಅವರು ನೇರವಾಗಿ ಆಲ್ಡರ್ಗೆ ಹೋದರು. ದೇವರ ಬಳಿ ತನ್ನನ್ನು ತಗ್ಗಿಸಿಕೊಂಡು ತುಂಬಾ ಮನನೊಂದು ಕಣ್ಣೀರಿಟ್ಟು ಪ್ರಾರ್ಥಿಸಿದರು. ಆಗ ಪವಿತ್ರಾತ್ಮನು ತನ್ನನ್ನು ಬಲದಿಂದ ತುಂಬಿಸಿದ್ದನ್ನು ಗ್ರಹಿಸಿದರು. ಪುನಃ ಆ ಗೂನಿಯಾದ ವ್ಯಕ್ತಿಗಾಗಿ ಪ್ರಾರ್ಥಿಸಿದಾಗ, ಆ ಕ್ಷಣದಲ್ಲೇ ಅವನು ನೇರವಾಗಿ ನಿಂತು ಪರಿಪೂರ್ಣ ಗುಣವನ್ನು ಪಡೆದನು. ಆಲಯದಲ್ಲಿ ಅಡಗಿ ಕುಳಿತಿದ್ದ ಮೂವರು ಕಳ್ಳರು ಇದನ್ನು ನೋಡುತ್ತಿದ್ದರು. ಈ ಅದ್ಬುತವನ್ನು ಕಂಡು ಅವರು ನಡುಗುತ್ತಾ ತಮ್ಮ ಜೀವನವನ್ನು ದೇವರಿಗೆ ಅರ್ಪಿಸಿದರು. ಹೌದು, ಬೋಧಕರು ತನ್ನ ಹೃದಯವನ್ನು ದೇವರ ಬಳಿ ಸರಿಮಾಡಲು ಅರ್ಪಿಸಿದಾಗ ಅದ್ಭುತಗಳು ನಡೆದವು.

        

ಇದರಂತೆಯೇ, ಸತ್ಯವೇದದಲ್ಲಿಯೂ, 1 ಅರಸುಗಳು 18 ನೇ ಅಧ್ಯಾಯದಲ್ಲಿ, ಹಾಳಾಗಿದ್ದ ಯೆಹೋವವೇದಿಯನ್ನು ಎಲೀಯನು ತಿರಿಗಿ ಕಟ್ಟಿಸಿದರು. ಅದರ ನಂತರವೇ ಆಕಾಶದಿಂದ ಬೆಂಕಿ ಇಳಿಯುವ ಅದ್ಭುತ ನಡೆಯಿತು. ಅಲ್ಲಿದ್ದ ಜನರು ಅದನ್ನು ಕಂಡು "ಯೆಹೋವನೇ ದೇವರು, ಯೆಹೋವನೇ ದೇವರು" ಎಂದು ಕೂಗಿದರು. ದೇಶವು ಕರ್ತನ ಕಡೆಗೆ ತಿರುಗಿತು.

 

ಹೌದು, ಪ್ರಿಯರೇ! ನಮ್ಮ ಜೀವನದಲ್ಲಿಯೂ ಹಾಳುಬಿದ್ದಿರುವ ಪ್ರಾರ್ಥನಾ ಜೀವನ, ಸತ್ಯವೇದ ಧ್ಯಾನ, ದೇವರೊಂದಿಗಿನ ಸಂಬಂಧದಂತಹ ಕೊರತೆಯುಳ್ಳ ಕಾರ್ಯಗಳನ್ನು ಸರಿಪಡಿಸುವಾಗ, ಖಂಡಿತವಾಗಿಯೂ ದೇವರು ಅದ್ಭುತವನ್ನು ಮಾಡುತ್ತಾರೆ. ಆ ಅದ್ಭುತದ ಮೂಲಕ ಅನ್ಯಜನರು ಖಂಡಿತವಾಗಿಯೂ ಕರ್ತನೇ ದೇವರೆಂದು ಕಂಡುಕೊಳ್ಳುವರು. ಎಲೀಯನ ಮೂಲಕವೂ ಮತ್ತು ಪಾಲ್ ಯಾಂಗಿಚ್ಚೋ ರವರ ಮೂಲಕವಾಗಿಯೂ ಅದ್ಭುತಗಳನ್ನು ಮಾಡಿದ ದೇವರು ನಿಮ್ಮ ಮೂಲಕವೂ ಅದ್ಭುತಗಳನ್ನು ಮಾಡಲು ಶಕ್ತನಾಗಿದ್ದಾರೆ. ಆಮೆನ್.

- Bro. ಶಿವ ಪಳನಿಸ್ವಾಮಿ

 

ಪ್ರಾರ್ಥನಾ ಅಂಶ:

Arise Joshua & Esther ಯೋಜನೆಯ ಮೂಲಕ ನಡೆಯುವ Google meet prayer ಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet