Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.01.2025
Share:

By Village Missionary Movement

Saturday, 11-Jan-2025

ಧೈನಂದಿನ ಧ್ಯಾನ(Kannada) – 11.01.2025

 

ವಿಶ್ವ ದಾಖಲೆ

 

"ನನ್ನಲ್ಲಿ ದುಷ್ಟತ ನದ ಮಾರ್ಗ ಉಂಟೇನೋ ನೋಡಿ ನಿತ್ಯವಾದ ಮಾರ್ಗದಲ್ಲಿ ನನ್ನನ್ನು ನಡಿಸು" - ಕೀರ್ತನೆ 139:24

 

ಉಸೇನ್ ಬೋಲ್ಟ್ 2007 ರ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ, ಕೆಲವು ಸೆಕೆಂಡ್‌ಗಳ ಮೊದಲು ಎದ್ದು ಓಡಲು ಪ್ರಯತ್ನಿಸಿದ್ದರಿಂದ, ಅಂದು ನಡೆದ ಸ್ಪರ್ಧೆಯಿಂದ ಅವರನ್ನು ಅನರ್ಹಗೊಳಿಸಿದರು. ನಾನು ಸೋತುಹೋಗಿದ್ದರೂ ಪರವಾಗಿಲ್ಲ. ಆದರೆ ಅನರ್ಹನಾದೆನಲ್ಲಾ ಎಂದು ಅವರು ಭಾವಿಸಿದರು. ಈ ಆಪಾದನೆಯನ್ನು ಬದಲಾಯಿಸಲು, ಮುಂದಿನ ಸ್ಪರ್ಧೆಯಲ್ಲಿ ಚಿನ್ನ ಗೆದ್ದರೆ ಸಾಕಾಗುವುದಿಲ್ಲ, ವಿಶ್ವದಾಖಲೆ ಮಾಡಲೇಬೇಕು ಎಂದು ತರಬೇತಿ ಪಡೆದರು. ನೀನು ಈ ರೀತಿ ತರಬೇತಿ ಪಡೆದರೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎಂದು ಅವರ ವೈದ್ಯರು ಎಚ್ಚರಿಸಿದರು. ಆದರೆ ಮುಂದಿನ ಹಂತದಲ್ಲಿ ಕಠಿಣ ತರಬೇತಿಯಿಂದಾಗಿ ಅವರು ವಿಶ್ವ ದಾಖಲೆ ನಿರ್ಮಿಸಿದರು. ಹಲವು ವರ್ಷಗಳಿಂದ ಆ ದಾಖಲೆಯನ್ನು ಯಾರೂ ಮುರಿಯಲಾಗಲಿಲ್ಲ. ತಪ್ಪು ಮಾಡಿ ಅನರ್ಹಗೊಂಡ ವ್ಯಕ್ತಿಯೊಬ್ಬರು ಕಠಿಣ ಪರಿಶ್ರಮದಿಂದ ವಿಶ್ವದಾಖಲೆ ಮಾಡಿದ್ದಾರೆ.

  

ಸತ್ಯವೇದದಲ್ಲಿಯೂ ಸಹ, ದಾವೀದನು ಎಲ್ಲರೂ ಯುದ್ಧರಂಗದಲ್ಲಿ ಇರುವಾಗ, ಉಪ್ಪರಿಗೆಯಲ್ಲಿ ಓಡಾಡಿ ಕಣ್ಣುಗಳ ಕಾಮಕ್ಕೆ ಬಿದ್ದರು. ಅವರಿಂದ ದೇವರ ಪ್ರಸನ್ನತೆಯನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ಅದರಿಂದಾಗಿ ಅವರು ದೇವರ ಸಮ್ಮುಖವನ್ನು ಬಿಟ್ಟು ಬಿಡದೇ, ಗಟ್ಟಿಯಾಗಿ ನಿರಂತರವಾಗಿ ಅವರನ್ನು ಹಿಡಿದುಕೊಂಡು ಬೇಡಿಕೊಂಡರು. ಕೀರ್ತನೆ 51 ರಲ್ಲಿ ಅವರ ಕೂಗನ್ನು ನೋಡುತ್ತೇವೆ. ಹನ್ನೊಂದನೆಯ ವಾಕ್ಯದಲ್ಲಿ ನಿನ್ನ ಸಮ್ಮುಖದಿಂದ ನನ್ನನ್ನು ಹೊರಗೆ ಹಾಕಬೇಡ; ನಿನ್ನ ಪರಿಶುದ್ಧಾತ್ಮನನ್ನು ನನ್ನಿಂದ ತೆಗೆದುಕೊಳ್ಳಬೇಡ ಎಂದು ಹೇಳುತ್ತಾರೆ. ತಾನು ಪಾಪ ಮಾಡಿದ್ದನ್ನು ಒಪ್ಪಿಕೊಂಡು, ದೇವರ ಕರುಣೆಗಾಗಿ ಬೇಡಿಕೊಳ್ಳುತ್ತಾರೆ. ನಾನು ನನ್ನ ತಾಯಿಯ ಗರ್ಭದಲ್ಲಿ ರೂಪುಗೊಂಡಾಗಿನಿಂದ ಪಾಪಿ, ನೀನೋ ಪರಿಶುದ್ಧನು, ಪರಿಶುದ್ಧತೆಯನ್ನು ಬಯಸುವವನು, ನನ್ನನ್ನು ಶುದ್ಧೀಕರಿಸಿ ಎಂದು ಬೇಡಿಕೊಳ್ಳುತ್ತಾರೆ. ದಾವೀದನಂತೆ, ನಾವು ಅವರ ಬಳಿಗೆ ಹೋಗಿ ನಮ್ಮ ಪಾಪವನ್ನು ಒಪ್ಪಿಕೊಂಡು ಬೇಡಿಕೊಳ್ಳಬೇಕು. ನಾವು ಪಾಪ ಮಾಡಿದ್ದೇವೆ ಎಂಬ ಭಾವನೆಯನ್ನು ಕೊಡುವವರೇ ಅವರು. ನಾವು ಆ ಭಾವನೆಯನ್ನು ಮಂದಗೊಳಿಸದೆ, ಆ ಭಾವನೆಯಿಂದ ಅವರು ನಮ್ಮನ್ನು ತೊಳೆದು ಶುದ್ಧೀಕರಿಸುವಂತೆ ಆತನ ಪಾದವನ್ನು ಹಿಡಿದುಕೊಳ್ಳಬೇಕು. ಯಾಕಂದರೆ ಆತನೊಬ್ಬನೇ ಪರಿಶುದ್ಧ ಮಾಡುವ ಕರ್ತನು.

 

ಇದನ್ನು ಓದುತ್ತಿರುವ ದೇವರ ಮಕ್ಕಳೇ, ನಿನ್ನ ತಪ್ಪುಗಳಿಂದಾಗಿ ಈ ಲೋಕದ ಜನರು ನಿನ್ನನ್ನು ತಿರಸ್ಕರಿಸಿರಬಹುದು. ಇನ್ನು ಅಷ್ಟೇ, ನಾನು ಬದುಕುವುದು ವ್ಯರ್ಥ ಎಂದು ಭಾವಿಸಿ ನೀವು ಪ್ರಲಾಪಿಸುತ್ತಿರಬಹುದು. ಉಸೇನ್, ನಾನು ಅನುಭವಿಸಿದ ಅವಮಾನದಿಂದ ನಾನು ಎಂದಿಗೂ ಓಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದರೆ ವಿಶ್ವದಾಖಲೆ ಮಾಡುತ್ತಿರಲಿಲ್ಲ. ಅಂತೆಯೇ, ಮನುಷ್ಯರಾದ ನಾವು ಪಾಪ ಮಾಡುವುದು ಸಹಜ. ಆದರೆ ಅದರಲ್ಲಿಯೇ ಇದ್ದು ಬಿಡಬಾರದು. ದೇವರು ಪಾಪವನ್ನು ದ್ವೇಷಿಸುತ್ತಾರೆ ಮತ್ತು ಪಾಪಿಗಳನ್ನು ಪ್ರೀತಿಸುತ್ತಾರೆ ಆದ್ದರಿಂದ ನೀವು ಪಾಪದೊಂದಿಗೆ ಬದುಕಬೇಕಾಗಿಲ್ಲ. ಪಾಪವನ್ನು ಒಪ್ಪಿಕೊಳ್ಳಿ. ಆತನು ನಿಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಲು ಮತ್ತು ನಿಮ್ಮನ್ನು ನಿತ್ಯಜೀವನದ ದಡದಲ್ಲಿ ಸೇರಿಸಲು ಶಕ್ತನಾಗಿದ್ದಾರೆ.  

- Mrs. ತವಮಣಿ ವೈರವೇಲ್

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿ ಮತ್ತು ಯೂಟ್ಯೂಬ್‌ನಲ್ಲಿ ಗುಣಪಡಿಸುವ ಆರಾಧನೆಯನ್ನು ವೀಕ್ಷಿಸುವ ಜನರು ದೈವೀಕವಾದ ಸ್ವಸ್ಥತೆಯನ್ನು ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet matbet giriş holiganbet holiganbet güncel holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet grandpashabet holiganbet grandpashabet grandpashabet grandpashabet perabet perabet giriş padişahbet padişahbet giriş grandpashabet grandpashabet grandpashabet grandpashabet grandpashabet meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş