Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.05.2021
Share:

By Village Missionary Movement

Sunday, 09-May-2021

ಧೈನಂದಿನ ಧ್ಯಾನ(Kannada) – 09.05.2021

ನಿಮ್ಮಿಂದ ಸಾಧ್ಯ

"...ಬಲಹೀನರಿಗೆ ಸಹಾಯಕೊಡು ವವನು ನಮ್ಮ ದೇವರಾದ ಕರ್ತನೇ, ನಮಗೆ ಸಹಾಯ ಕೊಡು;...” - 2 ಪೂರ್ವಕಾಲ. 14:11

 ಸುಂದರವಾದ ಹಚ್ಚ ಹಸಿರಾದ ಚಹಾ ತೋಟಗಳುಳ್ಳ ಬೆಟ್ಟದ ಸೀಮೆಯಲ್ಲಿ  ಐರೀನ್ ನ ಮನೆಯಿತ್ತು.  ಐರೀನ್ ಯಾವಾಗಲೂ ನಾನು  ಬಲಹೀನಳೆಂದು ಹೇಳಿಕೊಳ್ಳುತ್ತಿದ್ದಳು.  ಅವಳು ನನಗೆ ತೋಳು ನೋವು, ಕಾಲು ನೋವು, ಹೊಟ್ಟೆ ನೋವು ಎಂದು ಅಳುತ್ತಲೇ ಇದ್ದಳು.  ಒಂದು ದಿನ ಇವಳ ತಾಯಿ ಚಹಾ ತೋಟದಲ್ಲಿ ಕೆಲಸಕ್ಕೆ ಹೊರಟು ಹೋದರು.  ಐರೀನ್ ಮಾತ್ರ ಒಂಟಿಯಾಗಿದ್ದಳು.  ತಾಯಿಗೆ ಸಹಾಯ ಮಾಡುವ ಆಲೋಚನೆಯಿಂದ ಅವಳು ಮನೆ ಕಸ ಗುಡಿಸಲು ಪ್ರಾರಂಭಿಸಿದಳು.  ಅವಳ ಮನೆಯಲ್ಲಿ ಮೂರು ಕೊಠಡಿಗಳು ಇದ್ದವು, ಎರಡು ಕೊಠಡಿಗಳನ್ನು  ಗುಡಿಸಿದ ಕೂಡಲೇ  ಐರೀನ್ ಅಯ್ಯೋ  ಕೈ ನೋವು!  ಎಂದು ಕುಳಿತು ಬಿಟ್ಟಳು.  ಪಾತ್ರೆಗಳನ್ನು ತೊಳೆಯುತ್ತೇನೆಂದು ತೆಗೆದುಕೊಂಡು ಡಮಾಲ್, ಡುಮಿಲ್ ಎಂದು ಎತ್ತಿ ಹಾಕಿದಳು.  ಆ ಸಮಯದಲ್ಲಿ ಅವಳ ಅಜ್ಜಿ ಅವಳನ್ನು ನೋಡಲು ಬಂದರು.

ಏನು ಐರೀನ್ ಪಾತ್ರೆ ತೊಳೆಯುತ್ತೇನೆ ಎಂದು ಎಲ್ಲವನ್ನೂ ಒಡೆದು ಹಾಕಬೇಡ !  ನಿನ್ನಿಂದ ಸಾಧ್ಯವಾಗದಿದ್ದರೆ, Rest ತಗೋ ಎಂದು ಹೇಳಿದರು.  ಐರೀನ್ ತನ್ನ ಕೋಣೆಗೆ ಹೋಗಿ ಅತ್ತಳು.  ನನಗೆ ಯಾವ  ಕೆಲಸವನ್ನೂ ಮಾಡಲು ಸಾಧ್ಯವಾಗಲಿಲ್ಲ.  ನಾನು ತುಂಬಾ ಬಲಹೀನಳಾಗಿದ್ದೇನೆ. ‌ ನಾನು ಯಾರಿಗೂ ಪ್ರಯೋಜನವಿಲ್ಲ ಎಂದು ಅವಳು ಅಳಲು ಪ್ರಾರಂಭಿಸಿದಳು. ಆಗ ಗೋಡೆಯ ಮೇಲಿರುವ ಜೇಡವೊಂದು ಅಳುತ್ತಾ ಮಾತನಾಡುತ್ತಿದ್ದ ಐರೀನ್‌ನನ್ನು ನೋಡಿ, ಮಾತನಾಡುತ್ತಿದ್ದ ಹಾಗೆ ಇತ್ತು.  “ನಾನು ದುರ್ಬಲವಾದ ಪುಟ್ಟ ಕೀಟವಾಗಿದ್ದರೂ, ನನ್ನ  ಗೂಡನ್ನು ನಾನೇ ಕಟ್ಟಿಕೊಳ್ಳುತ್ತೇನೆ.  ನಾನು ಯಾವುದರ ಬಗ್ಗೆಯೂ ಚಿಂತಿಸುವುದಿಲ್ಲ.  ಅದು ಎಷ್ಟು ದೊಡ್ಡ ಅರಮನೆಯಾಗಿದ್ದರೂ ನಾನು ಅಲ್ಲಿಗೆ ಹೋಗಿ ನನ್ನ ಮನೆ ಕಟ್ಟಿಬಿಡುತ್ತೇನೆ.  ನೀನು ನನ್ನಂತೆಯೇ ಆತ್ಮವಿಶ್ವಾಸದಿಂದಿರು, ನೀನು ಏನು ಬೇಕಾದರೂ ಮಾಡಲು ಸಾಧ್ಯ  ಸಂತೋಷದಿಂದ ಬದುಕಲು ಅಭ್ಯಾಸ ಮಾಡಿಕೊ" ಎಂದು ಜೇಡ ಹೇಳಿದಂತೆ ಇತ್ತು.

ಐರೀನ್ ಯೋಚಿಸಲು ಪ್ರಾರಂಭಿಸಿದಳು.  ಜೇಡವು ಕೂಡ ಸಂತೋಷವಾಗಿ ಅದರ ಕೆಲಸವನ್ನು ಮಾಡಿಕೊಳ್ಳುತ್ತಿದೆ ಯೇಸಪ್ಪಾ ನನಗೆ ಬಲವನ್ನು ದಯಪಾಲಿಸಿ,  ಜೇಡದ ಮೂಲಕ ನನ್ನೊಂದಿಗೆ ನೀವು ಮಾತನಾಡಿದ್ದಕ್ಕಾಗಿ ಸ್ತೋತ್ರ ಎಂದು ಪ್ರಾರ್ಥಿಸಿಬಿಟ್ಟು,  ಮನೆಯನ್ನು ಸ್ವಚ್ಛ ಮಾಡಿ, ಅಮ್ಮ ಒಗೆದಿಟ್ಟಿದ್ದ ಎಲ್ಲಾ ಬಟ್ಟೆಗಳನ್ನು ಮಡಿಚಿಟ್ಟಳು.  ಅವಳ ಅಮ್ಮನಿಗೆ ಅದನ್ನು ನಂಬಲು ಸಾಧ್ಯವಾಗಲೇ ಇಲ್ಲ.  ಕೈ ನೋವು, ಕಾಲು ನೋವು ಎಲ್ಲವೂ ಹಾರಿಹೋಯಿತು.  ಐರೀನ್ ಸಂತೋಷವಾಗಿ ಇಷ್ಟೊಂದು ಕೆಲಸ ಮಾಡಿರುವುದನ್ನು ನೋಡಿ ಅಮ್ಮಾ ತುಂಬಾ ಸಂತೋಷಪಟ್ಟರು.  ಜೇಡವು ತನ್ನ ಬೆರಳುಗಳಿಂದ Shake hands ಕೊಡುತ್ತಿರುವ ಹಾಗೆ ಗ್ರಹಿಸಿದಳು ಐರೀನ್.  ನನಗೆ ಉತ್ತಮ ಪಾಠ ಕಲಿಸಿಕೊಟ್ಟಿದ್ದಕ್ಕಾಗಿ ಧನ್ಯವಾದ ಎಂದು ಹೇಳಿದಳು ಐರೀನ್. 

ಪ್ರೀತಿಯ ಪುಟಾಣಿಗಳೇ! ನೀವು ಕೂಡ ನಾನು  ಬಲಹೀನಳಾಗಿದ್ದೇನೆ  ನಾನು ಏನೂ ಮಾಡಲು ಸಾಧ್ಯವಿಲ್ಲ ಎಂದು ನೀವು ಯೋಚಿಸುತ್ತಿದ್ದೀರಾ?  ಇಲ್ಲವೇ ಇಲ್ಲ.  ನಿಮ್ಮ ಬಲಹೀನತೆಯನ್ನು ಬದಲಾಯಿಸಲು ಯೇಸಪ್ಪ ಇದ್ದಾರೆ.  ಐರೀನ್ ನಂತೆ ಪ್ರಾರ್ಥಿಸಿ, ನಿಮ್ಮಿಂದ ಎಲ್ಲವೂ ಸಾಧ್ಯ ಎಂದು ನಂಬಿರಿ.  ಯೇಸು ನಿಮಗೆ ಸಹಾಯ ಮಾಡಲು ಶಕ್ತನಾಗಿದ್ದಾರೆ.  ಚಿಂತಿಸಬೇಡಿ, Be happy children.
-    Mrs.  ಅನ್ಬುಜೋತಿ ಸ್ಟಾಲಿನ್

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey cratosroyalbet grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş https://tr.holiganbet-30temmuz.art/ çarkbet çarkbet giriş