Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.01.2025
Share:

By Village Missionary Movement

Thursday, 23-Jan-2025

ಧೈನಂದಿನ ಧ್ಯಾನ(Kannada) – 23.01.2025

 

ನಿತ್ಯ ಮಾರ್ಗದಲ್ಲಿ ನನ್ನನ್ನು ನಡೆಸು.

 

"ನನ್ನಲ್ಲಿ ದುಷ್ಟತ ನದ ಮಾರ್ಗ ಉಂಟೇನೋ ನೋಡಿ ನಿತ್ಯವಾದ ಮಾರ್ಗದಲ್ಲಿ ನನ್ನನ್ನು ನಡಿಸು" - ಕೀರ್ತನೆ 139:24

 

ದಾವೀದನು ತನ್ನ ಆಧ್ಯಾತ್ಮಿಕ ಜೀವನವನ್ನು ಸರಿಮಾಡಲು ನಿರ್ಧರಿಸಿದರು. ದಾವೀದನಂತಹ ಆರಾಧನೆಯ ವೀರನು ಒಬ್ಬನೂ ಇಲ್ಲ. ಅವರಂತೆ ಕರ್ತನನ್ನು ಮುಂದಿಟ್ಟು ನಡೆಯುವವರು ಒಬ್ಬರೂ ಇಲ್ಲ. ದೇವರ ನಾಮದ ನಿಮಿತ್ತವಾಗಿ ವೈರಾಗ್ಯವನ್ನು ತೋರಿದವರು ಅವರಂತೆ ಬೇರೆ ಯಾರೂ ಇಲ್ಲ. ಇಂತಹ ವ್ಯಕ್ತಿಯು ತನ್ನ ಆಧ್ಯಾತ್ಮಿಕ ಜೀವನದಲ್ಲಿ ಬತ್ಷೆಬಳ ಬಳಿ ಬಿದ್ದುಹೋದರು. ಇದರಿಂದಾಗಿ ಅವರು ದೇವರ ಕೋಪಕ್ಕೆ ಗುರಿಯಾದರು. ಪಾಪದಲ್ಲಿ ಬಿದ್ದವರು ಪಾಪದಲ್ಲಿಯೇ ಜೀವಿಸುವುದನ್ನು ಮುಂದುವರೆಸಲಿಲ್ಲ. ಅವರು ತನ್ನ ಜೀವನವನ್ನು ದೇವರಿಗೆ ಒಪ್ಪಿಸಿ ಅದನ್ನು ಸರಿಪಡಿಸಲು ಬಯಸಿದರು. ಆ ಸಮಯದಲ್ಲಿ ಹಾಡಲಾದ ಹಾಡುಗಳಲ್ಲಿ 51ನೇ ಕೀರ್ತನೆಯೂ ಒಂದು. ಅದರಲ್ಲಿ ಅವರು ಮೊರೆಯಿಡುವುದನ್ನು ನೋಡಬಹುದು. "ನನ್ನ ಅಕ್ರಮದಿಂದ ನನ್ನನ್ನು ಪೂರ್ಣವಾಗಿ ತೊಳೆ; ನನ್ನ ಪಾಪದಿಂದ ನನ್ನನ್ನು ಶುದ್ಧಿಮಾಡು" ಎಂದು ಬೇಡಿಕೊಳ್ಳುತ್ತಾರೆ. 

 

"ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನ ಪಡಿಸು. ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ; ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ. ನಿನ್ನ ರಕ್ಷಣಾನಂದವನ್ನು ನಾನು ತಿರಿಗಿ ಅನುಭವಿಸುವಂತೆ ಮಾಡು; ನನ್ನಲ್ಲಿ ಸಿದ್ಧಮನಸ್ಸನ್ನು ಹುಟ್ಟಿಸಿ ನನಗೆ ಆಧಾರನಾಗು" ಎಂದು ತನ್ನ ಜೀವನವನ್ನು ನೂತನ ಪಡಿಸುವಂತೆ ವಿಜ್ಞಾಪನೆ ಮಾಡಿದರು. ಪ್ರೀತಿಯ ದೇವ ಜನರೇ, ಕಳೆದ 2024 ರ 12 ತಿಂಗಳುಗಳನ್ನು ದಾಟಿ ಬಂದಿರುವ ಮಕ್ಕಳೇ! ನಿಮ್ಮ ಆಧ್ಯಾತ್ಮಿಕ ಜೀವನದ ಸ್ಥಿತಿ ಹೇಗಿದೆ. ವೇದನೆಯನ್ನು ಉಂಟುಮಾಡುವ ಕಾರ್ಯಗಳು ನಿಮ್ಮಲ್ಲಿವೆಯೇ? ದಾವೀದನು ಹೇಳುತ್ತಾರೆ. ಕೀರ್ತ. 139:23 "ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. ನನ್ನಲ್ಲಿ ದುಷ್ಟತ ನದ ಮಾರ್ಗ ಉಂಟೇನೋ ನೋಡು" ದಾವೀದನ ಬಯಕೆ ತನ್ನ ಜೀವನವನ್ನು ದೇವರಿಗೆ ಒಪ್ಪಿಸಿ, ಅದನ್ನು ನವೀಕರಿಸುವುದು. ತನ್ನ ಜೀವನವನ್ನು ನವೀಕರಿಸುವುದರಿಂದ ಮಾತ್ರ ನಮಗೆ ದೇವರ ಕೃಪೆ ಮತ್ತು ಸಹಾಯ ಸಿಗುತ್ತದೆ ಎಂದು ಹೇಳುತ್ತಾ ಅವರು ದೇವರಲ್ಲಿ ಈ ವಿಜ್ಞಾಪನೆಯನ್ನು ಮಾಡಿದರು.

 

ನನ್ನ ಪ್ರೀತಿಯ ದೇವರ ಮಕ್ಕಳೇ! ಇಂದು ನಿಮ್ಮ ಜೀವನ ಸರಿಯಾಗಿದೆಯೇ? ಬದುಕು ಇನ್ನೂ ಸರಿಹೋಗಿಲ್ಲವೇ? ಈ ಹೊಸ ವರ್ಷವನ್ನು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯ ವರ್ಷವನ್ನಾಗಿ ಮಾಡಲು, ದಾವೀದನು ಮಾಡಿದಂತೆ ನಿಮ್ಮ ಜೀವನವನ್ನು ದೇವರಿಗೆ ಒಪ್ಪಿಸಿ, ನನ್ನ ಜೀವನವನ್ನು ಸರಿಪಡಿಸಿ ಹೊಸ ಜೀವನವನ್ನು ನಡೆಸಲು ನನಗೆ ಸಹಾಯ ಮಾಡಿ ಎಂದು ದೇವರನ್ನು ಕೇಳಿಕೊಳ್ಳಿರಿ. ಕೃಪೆಯುಳ್ಳ ದೇವರು ನಿಮ್ಮ ಜೀವನವನ್ನು ಖಂಡಿತವಾಗಿಯೂ ಹೊಸದು ಮಾಡಿಕೊಡುತ್ತಾರೆ! ಆಮೆನ್! ಹಲ್ಲೇಲೂಯಾ!

- Rev. S.A. ಇಮ್ಮಾನುವೇಲ್

 

ಪ್ರಾರ್ಥನಾ ಅಂಶ:

ವೆಲ್ಲೂರಿನಲ್ಲಿ ನಡೆಯುವ ಯೌವನಸ್ಥರ ಶಿಬಿರಕ್ಕೆ ದೇವರು ಉತ್ತಮ ಹವಾಮಾನವನ್ನು ಒದಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino