Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.05.2021
Share:

By Village Missionary Movement

Tuesday, 11-May-2021

ಧೈನಂದಿನ ಧ್ಯಾನ(Kannada) – 11.05.2021

ಪ್ರಾರ್ಥಸುವಂತಹ ತಾಯಿ

“ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು." - ಜ್ಞಾನೋಕ್ತಿ 22: 6

ಜಾನ್ ವೆಸ್ಲಿ ಇಂಗ್ಲೆಂಡ್‌ನಲ್ಲಿ ಮೆಥೋಡಿಸ್ಟ್ ಚರ್ಚ್ ಅನ್ನು ಪ್ರಾರಂಭಿಸಿದರು.  ಅವರ ಉಪದೇಶಗಳ ಮೂಲಕ ಇಂಗ್ಲೆಂಡ್‌ನ ಎಲ್ಲಾ ಪ್ರಾಂತ್ಯಗಳಲ್ಲಿ ಪ್ರಬಲವಾದ ಉಜ್ಜೀವನವು ಉಂಟಾಯಿತು.  ನಡೆಯಲಿರುವ ರಕ್ತಸಿಕ್ತ ಕ್ರಾಂತಿಯಿಂದ ಇಂಗ್ಲೆಂಡ್ ಅನ್ನು ರಕ್ಷಿಸಲು ಇದೇ ಕಾರಣ ಎಂದು ಲೆಗ್ಗಿ ಎಂಬ ಇತಿಹಾಸಕಾರ ಹೇಳುತ್ತಾರೆ.  ಜಾನ್ ವೆಸ್ಲಿಯವರ ಸೇವೆಯ ಯಶಸ್ಸಿಗೆ ಅವರ ತಾಯಿ ಸೂಸನ್ನಾ ರವರೇ ಕಾರಣ.  ಒಮ್ಮೆ ಅವರ ಬಾಲ್ಯದಲ್ಲಿ ಅವರ ಮನೆಯಲ್ಲಿ ದೊಡ್ಡ ಬೆಂಕಿ ಅವಘಡ ಸಂಭವಿಸಿತು.  ಆ ತಾಯಿಯ ಪ್ರಾರ್ಥನೆಯಿಂದ ಎಲ್ಲಾ ಮಕ್ಕಳು ಉಳಿಸಲ್ಪಟ್ಟರು.  ಜಾನ್ ವೆಸ್ಲಿಯನ್ನು ಅತ್ಯಂತ ನಿರ್ಣಾಯಕ ಸಮಯದಲ್ಲಿ ಪ್ರಾರ್ಥನೆಯ ಸಹಾಯದಿಂದ ಉಳಿಸಲಾಯಿತು.  ಆದ್ದರಿಂದ ಅವರ ತಾಯಿ ಅವರಿಗೆ ದೇವರ ಸೇವೆ ಮಾಡಲು ಕಲಿಸಿದರು.  ಸೂಸನ್ನಾ ತನ್ನ ಮಗ ಜಾನ್ ವೆಸ್ಲಿಗೆ ತನ್ನ ಬಳಿ ಇದ್ದ ಶಿಕ್ಷಣ, ಶಿಸ್ತು ಮತ್ತು ದೇವರ ಮೇಲಿನ ಭಕ್ತಿಯನ್ನು ಉಣಿಸಿ ಬೆಳೆಸಿದರು.  ಸುಸನ್ನಾ ಅವರ ಮನೆಯಲ್ಲಿ ಮಕ್ಕಳು ಮಾತನಾಡಲು ಕಲಿತ ತಕ್ಷಣ, ಅವರಿಗೆ ಮೊಟ್ಟ ಮೊದಲು ಕರ್ತನ ಪ್ರಾರ್ಥನೆಯನ್ನು ಕಲಿಸಲಾಯಿತು.  ಅವರು ಆ ಪ್ರಾರ್ಥನೆಯನ್ನು ಬೆಳಿಗ್ಗೆ ಮತ್ತು ರಾತ್ರಿ ಮಾಡಲು ಅಭ್ಯಾಸ ಮಾಡಿಸಿದ್ದರು.  ಅವರು ಪ್ರತಿ ಮಗುವಿನೊಂದಿಗೆ ಪ್ರತಿ ವಾರ ಒಂದೊಂದು ಗಂಟೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು.  ಆ ತಾಯಿಯು ಮಾಡಿದ ಪ್ರಾರ್ಥನೆಗಳು, ಕುಟುಂಬದಲ್ಲಿ ಅವಳು ಹೊಂದಿದ್ದ ಜವಾಬ್ದಾರಿ,  ತಾಳ್ಮೆ ಇವೆಲ್ಲವೂ ಮುಂದಿನ ದಿನಗಳಲ್ಲಿ  ಇಂಗ್ಲೆಂಡ್‌ ದೇಶಕ್ಕೇ ಆಶೀರ್ವಾದಕರವಾದ ಸೇವಕನನ್ನು ಕರೆತಂದಿತು.

ಸತ್ಯವೇದದಲ್ಲಿ 1ಸಮುವೇಲನ ಪುಸ್ತಕದಲ್ಲಿ ಅನ್ನಳ ಬಗ್ಗೆ ಓದುತ್ತೇವೆ.  ಅನ್ನಳ ಪ್ರಾರ್ಥನೆ,  ಭಯಭಕ್ತಿ, ನಂಬಿಕೆ ತುಂಬಿದ ಜೀವನ, ಮುಂದಿನ ದಿನಗಳಲ್ಲಿ ಸಮುವೇಲನು ಪ್ರವಾದಿಯಾಗಿ ಕಾಣಿಸಿಕೊಳ್ಳಲು ಕಾರಣವಾಗಿತ್ತು.  ಅನ್ನಳು ದೇವರ ಬಳಿ ಪ್ರಾರ್ಥಿಸಿ ಸಮುವೇಲನನ್ನು ಪಡೆದುಕೊಂಡಳು.  ಬಾಲ್ಯದಲ್ಲಿ ಅವಳು ಅವನಿಗೆ ನೀಡಿದ ತರಬೇತಿಯು ದೇವಾಲಯದಲ್ಲಿ ಕೆಲಸ ಮಾಡಲು ತನ್ನನ್ನು ತೊಡಗಿಸಿಕೊಳ್ಳಲು ಸಹಾಯ ಮಾಡಿತು.

ಕ್ರಿಸ್ತನಲ್ಲಿ ಪ್ರಿಯರೇ!  ನಿಮ್ಮ ಮಕ್ಕಳನ್ನು ಕರ್ತನಲ್ಲಿ ಬೆಳೆಸಲು ನೀವು ಎಷ್ಟು ಶ್ರಮಿಸುತ್ತಿದ್ದೀರಿ?  ನೀನು ನಿನ್ನ ದೇವರ ಸತ್ಯವೇದವನ್ನು ಮರೆತಿದ್ದೀಯ, ಆದ್ದರಿಂದ ನಾನು ನಿಮ್ಮ ಮಕ್ಕಳನ್ನು ಮರೆತುಬಿಡುತ್ತೇನೆ ಎಂದು ನಾವು ಹೋಶೇಯ 4: 6 ರಲ್ಲಿ ಓದುತ್ತೇವೆ.  ಸತ್ಯವೇದವನ್ನು ಓದಲು, ಅದರಂತೆ ನಡೆಯಲು, ಅದನ್ನು ಮಕ್ಕಳಿಗೆ ಕಲಿಸಿಕೊಡಲು, ಅವರಿಗಾಗಿ ಆಸಕ್ತಿಯಿಂದ ಪ್ರಾರ್ಥಿಸಲು ನಾವು ಪ್ರತಿದಿನ ಪ್ರಯತ್ನಿಸೋಣ.  ಜಾನ್ ವೆಸ್ಲಿಯವರ ತಾಯಿಯಂತೆ ಪ್ರಾರ್ಥನೆ, ಜವಾಬ್ದಾರಿ, ತಾಳ್ಮೆ, ದೈವಭಕ್ತಿಯುಳ್ಳವರಾಗಿ  ಮಾರ್ಪಡೋಣ.  ಕರ್ತನು  ಖಂಡಿತವಾಗಿಯೂ ನಿಮ್ಮನ್ನು,  ನಿಮ್ಮ ಮಕ್ಕಳನ್ನು ಅಂತ್ಯಕಾಲದ ಉಜ್ಜೀವನದಲ್ಲಿ ಕರ್ತನು ಉಪಯೋಗಿಸುತ್ತಾರೆ, ಆಮೆನ್.
-    P.  ಶಿವ

ಪ್ರಾರ್ಥನಾ ಅಂಶ:-
ಅನಾರೋಗ್ಯದಲ್ಲಿರುವ ನಮ್ಮ ಮಿಷನರಿಗಳಿಗೆ  ದೇವರು ಪರಿಪೂರ್ಣವಾದ ಸ್ವಸ್ಥತೆಯನ್ನು ದಯಪಾಲಿಸುವಂತೆ  ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey cratosroyalbet grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş https://tr.holiganbet-30temmuz.art/ çarkbet çarkbet giriş