Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.03.2025
Share:

By Village Missionary Movement

Tuesday, 04-Mar-2025

ಧೈನಂದಿನ ಧ್ಯಾನ(Kannada) – 04.03.2025

 

ಹಣದ ಆಸೆ ಬೇಡ

 

"ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ..." - 1 ತಿಮೊ. 6:10

 

ಒಬ್ಬ ಉದ್ಯಮಿಗೆ ಅನೇಕ ಕೆಲಸಗಾರರಿದ್ದರು. ಅವರು ಅವರಲ್ಲಿ ಒಬ್ಬರಿಗೆ ಕ್ಯಾಷಿಯರ್ ಜವಾಬ್ದಾರಿಯನ್ನು ನೀಡಿದ್ದರು. ಅವರ ವ್ಯವಹಾರ ದಿನೇ ದಿನೇ ಬೆಳೆದಂತೆ ಹಣವು ಹೆಚ್ಚಾಯಿತು. ಕ್ಯಾಷಿಯರ್ ನ ಹಣದ ಹರಿವು ಹೆಚ್ಚಾಯಿತು. ಸ್ವಲ್ಪ ಸ್ವಲ್ಪವಾಗಿ ಅವರು ಹಣವನ್ನು ಎತ್ತಿಕೊಳ್ಳಲು ಪ್ರಾರಂಭಿಸಿದರು. ಕೊನೆಗೆ, ಉದ್ಯಮಿಗೆ ಇದರ ಬಗ್ಗೆ ತಿಳಿಯಿತು. ಅವರು ಏನನ್ನೂ ಕೇಳದೆ ಅವರನ್ನು ಕೆಲಸದಿಂದ ತೆಗೆದುಹಾಕಿದರು. ನಿರುದ್ಯೋಗಿ ಕ್ಯಾಷಿಯರ್ ಕೆಲವು ದಿನಗಳ ಕಾಲ ಕದ್ದ ಹಣದಿಂದ ಜೀವನ ಸಾಗಿಸುತ್ತಿದ್ದ. ದಿನಗಳು ಕಳೆದಂತೆ ಹಣದ ಅವಶ್ಯಕತೆ ಹೆಚ್ಚಾಯಿತು, ಮತ್ತು ಅವರು ತನ್ನ ಖರ್ಚುಗಳನ್ನು ಸರಿದೂಗಿಸಲು ಸಾಲ ಮಾಡಿದರು. ಕೊನೆಗೆ ಸಾಲ ಹೆಚ್ಚಾದಾಗ, ಅದನ್ನು ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡರು.

         

ನೀವು ಮೇಲೆ ನೋಡಿದ ಕ್ಯಾಷಿಯರ್ ಒಳ್ಳೆಯ ಕೆಲಸದೊಂದಿಗೆ ಆರಾಮದಾಯಕ ಜೀವನ ನಡೆಸುತ್ತಿದ್ದರು. ಎಲ್ಲಿಯವರೆಗು, ಇನ್ನೂ ಇನ್ನೂ ಹಣ ಬೇಕು ಎಂದು ನೆನೆಸದೆ ಇದ್ದನೋ ಅಲ್ಲಿಯವರೆಗೆ ಅವನಿಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಯಾವಾಗ ಹಣದ ಆಸೆ ಬಂತೋ ಆ ಕ್ಷಣದಿಂದಲೇ ಅವರ ಬದುಕು ಕತ್ತಲಾಗಲು ಪ್ರಾರಂಭಿಸಿತು. ಅವನ ಹಣದ ಆಸೆ ಅವನನ್ನು ದುಃಖಕ್ಕೆ ದೂಡಿದೆ. ಅದೇ ರೀತಿ, ಬೈಬಲ್‌ನಲ್ಲಿ, ಯೇಸು ಕ್ರಿಸ್ತನಿಗೂ ಒಬ್ಬ ಖಜಾಂಚಿ ಇದ್ದನು. ಅವನ ಹೆಸರು ಇಸ್ಕರಿಯೋತ ಯೂದ. ಅವರು ಅವನಿಗೆ ಕಾಣಿಕೆಗಳ ಚೀಲವನ್ನು ಕೊಟ್ಟಿಟ್ಟಿದ್ದರು. ಅವನು ಯೇಸುವಿನೊಂದಿಗೆ ಸಂತೋಷದಿಂದ ಮತ್ತು ಆರೋಗ್ಯವಾಗಿ ವಾಸಿಸುತ್ತಿದ್ದನು. ಯಾವುದೇ ಕಷ್ಟ ಅಥವಾ ಅವಶ್ಯಕತೆಯಿಲ್ಲದೆ ದಿನಗಳು ಶಾಂತಿಯುತವಾಗಿ ಕಳೆದವು. ಯಾವಾಗ ಅವನಿಗೆ ಹಣದ ಆಸೆ ಬಂತೋ ಆಗ ತನ್ನ ಸ್ವಂತ ಗುರುವನ್ನೇ ತೋರಿಸಿಕೊಟ್ಟು ಹಣವನ್ನು ಸಂಪಾದಿಸಿದನು. ಅವನು ಸಂಪಾದಿಸಿದ ಹಣ ಅವನಿಗೆ ಸಹಾಯ ಮಾಡಿತೇ? ಅಂದರೆ ಇಲ್ಲ. ಬದಲಾಗಿ, "ನಾನು ಈ ತಪ್ಪು ಮಾಡಿಬಿಟ್ಟೆನೇ" ಎಂದು ಭಾವಿಸಿ ನೇಣು ಬಿಗಿದುಕೊಂಡು ಸತ್ತನು (ಆತ್ಮಹತ್ಯೆ ಮಾಡಿಕೊಂಡನು). ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ ಎಂದು ವಾಕ್ಯ ಹೇಳುತ್ತದೆ. ಹಣದ ಆಸೆ ನಮ್ಮನ್ನು ರೂಪಿಸುತ್ತದೆ. ಇದು ಅನೇಕ ರೀತಿಯ ದುಃಖಗಳನ್ನು ತರುತ್ತದೆ.  

 

ಬೈಬಲ್‌ನಲ್ಲಿ ಅನನೀಯ ಮತ್ತು ಸಪ್ಫೈರಳು ಎಂಬ ದಂಪತಿಗಳಿದ್ದಾರೆ. ಇವರು ಸೇವೆಗೆ ಭೂಮಿಯನ್ನು ಮಾರಿ ಕೊಡಲು ನಿರ್ಧರಿಸಿದರು, ಹಾಗೆ ಮಾರಿದರು ಕೂಡ. ಆದರೆ ಭೂಮಿಯನ್ನು ಮಾರಿ ಹಣ ಪಡೆದ ನಂತರ, ಗಂಡ ತನ್ನ ಹೆಂಡತಿಯೊಂದಿಗೆ ಒಂದು ಪಾಲನ್ನು ಎತ್ತಿಟ್ಟುಕೊಳ್ಳುತ್ತಾನೆ. ಇದರ ಅರ್ಥವೇನು? ಇದರ ಅರ್ಥ ಕೇವಲ ಹಣದ ಆಸೆ. ಅವರು ಮೋಸ ಮಾಡುವುದಲ್ಲದೆ, ಹಣದ ದುರಾಸೆಯಿಂದ ಸುಳ್ಳು ಸಹ ಹೇಳಿದರು. ಫಲಿತಾಂಶವು ತುಂಬಾ ದುರದೃಷ್ಟಕರವಾಗಿತ್ತು. ಇಬ್ಬರೂ ಒಟ್ಟಿಗೆ ಸತ್ತರು. ಹಣವು ಅವಶ್ಯವೇ! ಹಣ ಎಲ್ಲದಕ್ಕೂ ಸಹಾಯ ಮಾಡುತ್ತದೆ, ಆದರೆ ಹಣದ ಆಸೆ ಮಾತ್ರ ನಮಗೆ ಎಂದಿಗೂ ಬರಬಾರದು. ಅದು ಅನೇಕ ಕೆಟ್ಟ ವಿಷಯಗಳನ್ನು ತಂದುಬಿಡುತ್ತದೆ. ಎಚ್ಚರಿಕೆ! ಕರ್ತನು ತಾನೇ ನಿಮ್ಮನ್ನು ಆಶೀರ್ವದಿಸಲಿ! ಆಮೆನ್!

- Pr. S.A. ಇಮ್ಮಾನುವೇಲ್

 

ಪ್ರಾರ್ಥನಾ ಅಂಶ:

ನಮ್ಮ ಶಾಖಾ ಕಚೇರಿಗಳಲ್ಲಿ ನಡೆಯುತ್ತಿರುವ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban holiganbet setrabet marsbahis giriş vaycasino giriş