Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.05.2021
Share:

By Village Missionary Movement

Friday, 14-May-2021

ಧೈನಂದಿನ ಧ್ಯಾನ(Kannada) – 14.05.2021

ಪಾಪದ ಕ್ರೂರತೆ

"ಆಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ." - ಯಾಕೋಬ1:15

ಒಂದು ಯೌವನಸ್ಥ  ಹುಡುಗಿಯಿಂದ ದೇವರ ಸೇವಕರಿಗೆ ಫೋನ್ ಕರೆ ಬಂತು.  ಅವಳು ಹೀಗೆ ಹೇಳಲು ಪ್ರಾರಂಭಿಸಿದಳು, "ನಾನು ನಿಮ್ಮ ದೈವ ಸಂದೇಶವನ್ನು ಇಷ್ಟವಾಗಿ ಟಿವಿಯಲ್ಲಿ ನೋಡುತ್ತಿದ್ದೆನು.  ಆದರೆ ನಾನು ಈಗ ನಿಮ್ಮ ಸಂದೇಶವನ್ನು ನೋಡಲು ಬಯಸುವುದಿಲ್ಲ.  ನನ್ನ ಹೃದಯದಲ್ಲಿ ಶಾಂತಿ ಇಲ್ಲ, ನನ್ನ ಹೃದಯವು ಕಲ್ಲಾಗಿ ಬಿಟ್ಟಿದೆ.  ಅದು ದಯೆಯಿಲ್ಲದ ಹೃದಯವಾಗಿಬಿಟ್ಟಿತು. ನಾನು ನನ್ನ ತಾಯಿಯನ್ನು ಒದ್ದು ಕೆಳಕ್ಕೆ ತಳ್ಳಿ ಬಿಟ್ಟೆನು.  ಅವರು ಈಗ ನಡೆಯಲು ಸಾಧ್ಯವಾಗದೆ ಇದ್ದಾರೆ.  ಕೆಲವು ದಿನಗಳಿಂದ ನನ್ನನ್ನು ಕಂಡರೆ ನನಗೇ ಇಷ್ಟವಾಗುತ್ತಿಲ್ಲ.  ಅಯ್ಯಾ, ನಾನು ಈಗ ದೊಡ್ಡ ಪಾಪಿಯಾಗಿ  ಬದಲಾಗಿಬಿಟ್ಟೆನು"  ಎಂದಳು. ನಂತರ "ಕಾರಣವೇನು?"   ಎಂದು ಸೇವಕರು ಕೇಳಿದಾಗ,  “ನಾನು ಈಗ ಸಾಮಾಜಿಕ ಜಾಲತಾಣಕ್ಕೆ ದಾಸಿಯಾಗಿಬಿಟ್ಟಿದ್ದೇನೆ.  ಒಂದು ದಿನ ನಾನು ಫೇಸ್‌ಬುಕ್‌ನಲ್ಲಿ ಹೊಸ ಖಾತೆಯನ್ನು ಪ್ರಾರಂಭಿಸಿ, ಅನೇಕ ಕರೆಗಳನ್ನು ಸ್ವೀಕರಿಸಿದೆನು.  ನನ್ನ ಜೀವನವು ಒಂದು ತಿರುವು ಪಡೆದುಕೊಂಡಿತು.  ನಾನು ಅದಕ್ಕೆ ಹೆಚ್ಚು ಸಮಯ ಕಳೆಯಲು ಪ್ರಾರಂಭಿಸಿದೆ. ಆಗಿನಿಂದ ಬೈಬಲ್ ಓದಲು, ಪ್ರಾರ್ಥಿಸಲು ಇಷ್ಟವಿಲ್ಲ.  ನಿಮ್ಮ ಸಂದೇಶವನ್ನು ಈಗ ನೋಡುತ್ತಿಲ್ಲ.  ನನ್ನ ತಾಯಿ ನನ್ನನ್ನು ಏಕೆ ಹೀಗೆ ತುಂಬಾ ಬದಲಾಗಿಬಿಟ್ಟೆ ಎಂದು ಕೇಳಿದ್ದಕ್ಕೇನೆ ನಾನು ಅವರನ್ನು ಒದ್ದುಬಿಟ್ಟೆನು.  ಅವರು ಸೊಂಟದ ಮೇಲೆ ನಡೆಯಲು ಸಾಧ್ಯವಾಗದಷ್ಟು ಗಾಯಗೊಂಡರು.  ಅವರು ಅಳುತ್ತಾ, "ನೀನು ಯಾಕೆ ಪ್ರಾರ್ಥನೆ ಮಾಡಲಿಲ್ಲ, ಬೈಬಲ್  ಓದಲಿಲ್ಲ"  ಎಂದು ಮತ್ತೇ ಮತ್ತೇ ಕೇಳಿದರು.  ಅವರ ನೋವನ್ನು ನೋಡಿ ನನಗೆ ಅಳೂ ಕೂಡ ಬರಲಿಲ್ಲ ನನ್ನ ಹೃದಯವು ಕಲ್ಲಾಗಿ ಬಿಟ್ಟಿದೆ.  ನಾನು ಈ ರೀತಿ ಬದಲಾಗಿಬಿಟ್ಟೆನೇ ಎಂದು ನನ್ನ ಬಗ್ಗೆ ವೇದನೆಪಡುತ್ತಿದ್ದೇನೆ.  ಅಯ್ಯಾ, ದಯವಿಟ್ಟು ನನಗಾಗಿ ಪ್ರಾರ್ಥಿಸಿ” ಎಂದು ಹೇಳಿದಳು.

ಯೇಸುಕ್ರಿಸ್ತನ ಶಿಷ್ಯನಾದ  ಇಸ್ಕರಿಯೋತ ಯೂದನೊಳಗೆ ಸ್ವಲ್ಪ ಸ್ವಲ್ಪವಾಗಿ ಹಣದ ಆಸೆ ಬಂದು ಕೊನೆಗೆ ಯೇಸುಕ್ರಿಸ್ತನನ್ನೇ ತೋರಿಸಿಕೊಡುವಂತ ಮಟ್ಟಿಗೆ ಅವನ  ಪಾಪವು ಬೆಳೆದು ಬಿಟ್ಟಿತು.  ಅವನ ಹೃದಯವು ಕಠಿಣವಾಗಿ ಕಲ್ಲಾಗಿಬಿಟ್ಟಿತು. ಪ್ರೀತಿಯ ತಮ್ಮ- ತಂಗಿ ನಿಮ್ಮ ಜೀವನದ ಸ್ಥಿತಿ ಏನು?  ಇದರಲ್ಲೇನಿದೆ ಎಂದುಕೊಂಡು ಹುಡುಗಾಟವಾಗಿ ನೀವು Phone ನಲ್ಲಿ ಮಾಡುವ ಒಂದು ಮೆಸೇಜ್, ಒಂದು ಸಣ್ಣ ಸಂಪರ್ಕ, ನಿಮ್ಮ ಆಲೋಚನೆಗಳು, ನಿಮ್ಮ ಭವಿಷ್ಯದ ಮಹತ್ವಾಕಾಂಕ್ಷೆಯ ದಿಕ್ಕನ್ನೇ ಬದಲಾಯಿಸುತ್ತದೆ ಎಂಬುದನ್ನು ಮರೆಯಬೇಡ!  ಸಣ್ಣ ಪಾಪವೇ ತಾನೇ ಎಂದು ಪ್ರಾರಂಭಿಸಿ  ಇಂಟರ್ನೆಟ್ ಗೇಮ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಫೇಸ್‌ಬುಕ್, ಚಾಟ್, ಸ್ನೇಹ, ಇದೆಲ್ಲವೂ  ಪಾಪವೇನಲ್ಲ ಎಂದು ನೆನೆಸುತ್ತೇವೆ.  ಇದರಲ್ಲಿ ಏನು ಪಾಪವಿದೆ?  ಎಂದು ನಿರ್ಲಕ್ಷ್ಯವಾಗಿ ನೆನೆಸಿ ಈ ಪಾಪದಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ.  ಕೆಲವರು ನೇರವಾಗಿ ಆತ್ಮಹತ್ಯೆಗೆ ಹೋಗುತ್ತಾರೆ. ಆದಿಕಾಂಡ 4: 7 ರಲ್ಲಿ  ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಿಲಲ್ಲಿ ಹೊಂಚಿಕೊಂಡಿರುವದು; ಎಂದು ಸತ್ಯವೇದವು ಹೇಳುತ್ತದೆ.  ನಾವು ಆ ಬಲೆಗೆ ಬಿದ್ದಾಗ ನಾವು ಪುನಃ ಮೇಲೆ ಎದ್ದೇಳಲು  ಸಾಧ್ಯವಾಗದಂತೆ ಬಿದ್ದು ಹೋಗುತ್ತೇವೆ. ಆದ್ದರಿಂದ ನಾವು ಪ್ರತಿದಿನ ಪ್ರಾರ್ಥನೆ ಮಾಡಲು ಮತ್ತು ಸತ್ಯವೇದವನ್ನು ಧ್ಯಾನಿಸಲು ನಿರ್ಧರಿಸೋಣ.  ದೇವರೇ ನಮ್ಮೆಲ್ಲರನ್ನೂ ಯಾವುದೇ ರೀತಿಯ ಮಾಯಾ ಬಲೆಗೆ ಬೀಳದಂತೆ ರಕ್ಷಿಸಲಿ.
-    P.V. ವಿಲಿಯಮ್ಸ್

ಪ್ರಾರ್ಥನಾ ಅಂಶ:-
ಮೇ 14, 15, ಮತ್ತು 16 ರಂದು ಮಿಷನರಿ ಮಕ್ಕಳಿಗಾಗಿ ನಡೆಯುವಂತಹ  ಯೆಹೋಶುವ ಶಿಬಿರದಲ್ಲಿ ಅನೇಕ ಮಿಷನರಿಗಳ ಮಕ್ಕಳು  ಪಾಲ್ಗೊಳ್ಳುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey cratosroyalbet grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş https://tr.holiganbet-30temmuz.art/ çarkbet çarkbet giriş