Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.03.2025
Share:

By Village Missionary Movement

Wednesday, 05-Mar-2025

ಧೈನಂದಿನ ಧ್ಯಾನ(Kannada) – 05.03.2025

 

ಎಂದಿನಂತೆ . . .

 

"ದಾನಿಯೇಲನು... ಅವನು ಮೊದಲು ಮಾಡುತ್ತಿದ್ದ ಪ್ರಕಾರವೇ ದಿನಕ್ಕೆ ಮೂರು ಸಾರಿ ಮೊಣಕಾಲೂರಿ ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ ಸ್ತೋತ್ರವನ್ನೂ ಸಲ್ಲಿಸಿ ದನು" - ದಾನಿಯೇಲ 6:10

 

ಕಾಲೇಜು ರಜೆಯಲ್ಲಿ, ರೀಟಾ ತನ್ನ ಸಂಬಂಧಿಯಾದ ಸ್ಟೆಲ್ಲಾ ಆಂಟಿ ಮನೆಗೆ ಬಂದು ಒಂದು ತಿಂಗಳು ಇದ್ದಳು. ರಜೆ ಮುಗಿಸಿ ಊರಿಗೆ ಹಿಂತಿರುಗುತ್ತಿರುವಾಗ, ಅವಳ ಕಣ್ಣ ಮುಂದೆ ಒಂದು ದೃಶ್ಯ ಮತ್ತೆ ಮತ್ತೆ ಕಾಣಿಸುತ್ತಲೇ ಇತ್ತು. ಸ್ಟೆಲ್ಲಾ ಆಂಟಿ ಮನೆಯಲ್ಲಿ, ಸಂಜೆ ಏಳು ಗಂಟೆಗೆ ಸರಿಯಾಗಿ, ವಿಕ್ಟರ್ ಅಂಕಲ್, ಆಂಟಿ ಮತ್ತು ಚಿಕ್ಕಮ್ಮ ಇವರೆಲ್ಲರೂ ತಮ್ಮ ಕೈಗಳಲ್ಲಿ ಬೈಬಲ್ ಮತ್ತು ಸ್ತೋತ್ರ ಪುಸ್ತಕದೊಂದಿಗೆ ಹಾಲ್ ಗೆ ಬರುವುದು. ಅವರು ಮೂವರೂ ಒಟ್ಟಿಗೆ ಸೇರಿ ಹಾಡು ಹಾಡಿ, ಅಂಕಲ್ ಬೈಬಲ್ ಭಾಗವನ್ನು ಓದಿ ವಿವರಿಸುತ್ತಿದ್ದರು ಮತ್ತು ಮೂವರು ನೆಟ್ಟಗೆ ಮೊಣಕಾಲೂರಿ ಪ್ರಾರ್ಥಿಸುತ್ತಿದ್ದರು. ರೀಟಾ ಕೂಡ ಬರುತ್ತಿದ್ದಳು. ಪ್ರಾರ್ಥನೆಯಲ್ಲಿ ಯಾವುದೇ ಸ್ವಾರ್ಥವಿರುತ್ತಿರಲಿಲ್ಲ. ಅವರು ದೇಶ, ರಾಜ್ಯ, ಆಡಳಿತಗಾರ, ತುಳಿತಕ್ಕೊಳಗಾದವರು, ಸೇವಕರು, ಸೇವೆಗಳು ಮತ್ತು ಬಂಧುಗಳು ಕುಟುಂಬ ಹೀಗೆ ಉತ್ಸಾಹದಿಂದ ಒಬ್ಬೊಬ್ಬರಾಗಿ ಪ್ರಾರ್ಥಿಸುತ್ತಿದ್ದರು. ಈ ಕ್ರಮವಾದ ಕಾರ್ಯವು ರೀಟಾಳಿಗೆ ಒಂದು ಉತ್ತಮ ಅನುಭವವಾಗಿತ್ತು. ಅವಳು ಒಂದು ನಿರ್ಧಾರ ತೆಗೆದುಕೊಂಡೇ ಹೋದಳು.

        

ವರ್ಷಗಳು ಕಳೆದಂತೆ, ರೀಟಾಳ ವಿವಾಹವಾಯಿತು ತನ್ನ ಪತಿ ಮತ್ತು ಮಗುವಿನೊಂದಿಗೆ ತನ್ನ ಆಂಟಿ, ಅಂಕಲ್, ಚಿಕ್ಕಮ್ಮನನ್ನು ನೋಡಲು ಬಂದಳು. ರೀಟಾಗೆ ತುಂಬಾ ಸಂತೋಷವಾಗಿತ್ತು. ಅವಳು ಕಾಯುತ್ತಿದ್ದ ಆ ಸಂಜೆ ಏಳು ಗಂಟೆ ಆದ ಕೂಡಲೇ, ಆ ಮೂವರು ತಮ್ಮ ವೃದ್ಧಾಪ್ಯವನ್ನು ಸಹ ಲೆಕ್ಕಿಸದೆ, ತಮ್ಮ ವೇದ ಪುಸ್ತಕಗಳೊಂದಿಗೆ ತಮ್ಮ ಕೋಣೆಗಳಿಂದ ಹೊರಬಂದರು. ಅದು ರೋಮಾಂಚಕವಾಗಿತ್ತು, ಮತ್ತು ತನ್ನ ಕಣ್ಣುಗಳಲ್ಲಿ ನೀರು ತುಂಬಿತು. ಹೌದು, ಏನೂ ಬದಲಾಗಿಲ್ಲ. ತಮ್ಮ ಪ್ರಾರ್ಥನಾ ಸಮಯವನ್ನು ಎಂದಿನಂತೆ ಪಾಲಿಸುತ್ತಿದ್ದ ಅವರ ಬಳಿ, ರೀಟಾ ತಾನು ಕೂಡ ಅದರಂತೆಯೇ ಆ ಪ್ರಾರ್ಥನಾ ವೇಳಾಪಟ್ಟಿಯನ್ನು ಅನುಸರಿಸುತ್ತಿದ್ದೇನೆ ಎಂದು ಅವರೊಂದಿಗೆ ಹಂಚಿಕೊಂಡಾಗ ಅವರು ರೋಮಾಂಚನಗೊಂಡರು. ದಾನಿಯೇಲನು ಬಾಬೆಲಿನಲ್ಲಿ ಮೊದಲು ಮಾಡಿದಂತೆ, ದಿನಕ್ಕೆ ಮೂರು ಬಾರಿ ಮೊಣಕಾಲೂರಿ ತನ್ನ ದೇವರ ಮುಂದೆ ಪ್ರಾರ್ಥಿಸಿದನು. ಅವರ ಕ್ರಮವಾದ, ಪ್ರಾರ್ಥನಾಪೂರ್ವಕ ಜೀವನವು ಅನೇಕರನ್ನು ಇಸ್ರಾಯೇಲ್ ದೇವರನ್ನು ತಿಳಿದುಕೊಳ್ಳುವಂತೆ ಮಾಡಿತು. ಈ ಹಿರಿಯರು, ದಾನಿಯೇಲ್ ನಂತೆ, ವೃದ್ಧಾಪ್ಯದಲ್ಲಿಯೂ ಎಂದಿನಂತೆ ತಮ್ಮ ಪ್ರಾರ್ಥನಾ ಸಮಯವನ್ನು ಪಾಲಿಸಿದ್ದು ಎಷ್ಟು ಅದ್ಭುತ!  

 

ಹೌದು, ನಮ್ಮ ಜೀವನಶೈಲಿ ಒಂದು ಭಕ್ತಿಯುಳ್ಳ ಪೀಳಿಗೆಯನ್ನು ರೂಪಿಸುವಂತೆ, ಮಾದರಿಯಾಗಿ ಇರಬೇಕು. ತೀತ 2:7 ರ ಪ್ರಕಾರ, "ಎಲ್ಲಾ ವಿಷಯಗಳಲ್ಲಿ ನಿನ್ನನ್ನು ಸತ್ಕಾರ್ಯಗಳ ಮಾದರಿಯಾಗಿ ತೋರಿಸಿಕೊಂಡು," ಎಂಬ ಪೌಲನ ಸಲಹೆಯನ್ನು ನಾವು ನೆನಪಿಸಿಕೊಳ್ಳೋಣ. ನಮ್ಮ ಪ್ರಾರ್ಥನಾ ಜೀವನ ಮತ್ತು ದೈನಂದಿನ ಜೀವನಶೈಲಿ ಇತರರಿಗೆ ಮಾದರಿಯಾಗಿರಲಿ.

- Mrs. ಎಮೀಮಾ ಸೌಂದರರಾಜನ್

 

ಪ್ರಾರ್ಥನಾ ಅಂಶ:

ನಮ್ಮ ಸೇವಾ ಕ್ಷೇತ್ರಗಳಲ್ಲಿ ಅಗತ್ಯವಿರುವ ವ್ಯಕ್ತಿಗಳಿಗೆ ಒಂದು ಲಕ್ಷ ಬೈಬಲ್‌ಗಳು ನೀಡಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino