Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.05.2021 (Kids Special)
Share:

By Village Missionary Movement

Sunday, 16-May-2021

ಧೈನಂದಿನ ಧ್ಯಾನ(Kannada) – 16.05.2021 (Kids Special)

Jesus ಸ್ನೇಹಿತನಾಗಿ ಬಂದರು

"ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು” - ಯೋಹಾನ 15:14
 
 Hai ಪುಟಾಣಿಗಳೇ!  ನಿಮಗೆ ನಿಜವಾಗಿಯೂ ಸ್ನೇಹಿತರೆಂದರೆ ಇಷ್ಟತಾನೇ!  Friends ಜೊತೆ ಜಾಲಿಯಾಗಿ ಆಟವಾಡಬಹುದು, ಮಾತನಾಡಬಹುದು ಮತ್ತು ನಗಬಹುದು. ಸಮಯ  ಹೋಗೋದೇ ತಿಳಿಯೋದಿಲ್ಲ ಅಲ್ವಾ?  School- ನಲ್ಲಿ, ಬೀದಿಯಲ್ಲಿ, ಪಕ್ಕದ ಮನೆ, ಎದುರು ಮನೆ ಹೀಗೆ ಬಹಳ ಜನ ಸ್ನೇಹಿತರಿದ್ದಾರೆ ತಾನೇ!  ಅವರೆಲ್ಲರೂ ಯೇಸಪ್ಪನನ್ನು  ತಿಳಿದುಕೊಳ್ಳಲು ನೀವು ಏನು ಮಾಡಿದ್ದೀರಿ.  ರಾಜೇಶ್ವರಿ ಏನು ಮಾಡಿದಳೆಂಬ ಕಥೆಯನ್ನು ಕೇಳೋಣವಾ?

 ಒಂದು ಹಳ್ಳಿಯಲ್ಲಿ ಗೋಮತಿ ಎಂಬ ಒಂದು ಹುಡುಗಿ ಇದ್ದಳು.  ಅವಳೊಂದಿಗೆ ಆಟವಾಡಲು ಯಾರೂ ಇಲ್ಲ.  ಪಕ್ಕದ ಮನೆಯ ದಿವ್ಯಾಳನ್ನು ಆಟವಾಡಲು ಕರೆಯೋಣವೆಂದು ಭಾವಿಸಿ ಹೋದಳು, ದಿವ್ಯಾ ಹೇಳಿದಳು, “ನನ್ನ ತಾಯಿ ಅಂಗಡಿಗೆ ಹೋಗಿದ್ದಾರೆ.  ನನ್ನ ಪುಟ್ಟ ತಮ್ಮನನ್ನು ನೋಡಿಕೊಳ್ಳಬೇಕೆಂದು  ಹೇಳಿದ್ದಾರೆ  ನಾನು ಆಟ ಆಡಲು ಬರಲು ಸಾಧ್ಯವಿಲ್ಲ ”  ಎಂದು ಹೇಳಿಬಿಟ್ಟಳು.  ಸರಿ, ಮುಂದಿನ ಬೀದಿಯಲ್ಲಿರುವ ಮಾರೀಸ್ವರಿಯ ಮನೆಗೆ ಹೋಗೋಣ ಎಂದು ಯೋಚಿಸಿ ಗೋಮತಿ ಅಲ್ಲಿಗೆ ಹೋದಳು.  ನೀವು ಕೂಡ ಒಂಟಿಯಾಗಿದ್ದರೆ ಬೇಜಾರಾಗ್ತಿದೆ ಎಂದು Friends ನ್ನು ಹುಡುಕಿ ಹೋಗುತ್ತಿದ್ದೀರ?  ಗೋಮತಿಗೂ ನಿಮ್ಮಂತೆಯೇ ಬೇಜಾರಾಗಿತ್ತು.  ಸರಿ, ಗೋಮತಿ ಯಾರ ಮನೆಗೆ ಹೋದಳು ಹೇಳಿ ನೋಡೋಣ.  ಓ .... ನೀವು ಹೇಳಿದ್ದು ಸರಿ.

ಮಾರೀಸ್ವರಿಯ ಮನೆಗೆ ಹೋಗಿ,  "ನನ್ನೊಂದಿಗೆ ಆಟವಾಡಲು ಬರುತ್ತೀಯಾ" ಎಂದು ಕೇಳಿದಳು ಗೋಮತಿ. "ಅಪ್ಪ ಅಮ್ಮ ಪಟ್ಟಣಕ್ಕೆ ಹೋಗುತ್ತಿದ್ದಾರೆ ನಾನು ಕೂಡ ಹೋಗುತ್ತಿದ್ದೇನೆ" ಎಂದು ಹೇಳಿ   ಸುಂದರವಾದ ಹೊಸ ಉಡುಪನ್ನು ಧರಿಸಿ ಹೊರಟುಹೋದಳು.  ಗೋಮತಿ ಚಿಂತಿಸುತ್ತಾ ಮನೆಗೆ ನಡೆದು ಹೋಗುತ್ತಿದ್ದಾಗ, ಎದುರಿಗೆ ಬಂದ ರಾಜೇಶ್ವರಿ,  "ಏಯ್ .... ಗೋಮತಿ, ಎಲ್ಲಿಗೆ ಹೋಗುತ್ತಿದ್ದೀಯ  ಇಂದು ಸುಬಾ ಅಕ್ಕ ಹಾಡು,ಕಥೆ ಹೇಳಿ ಕೊಡಲು ಬಂದಿದ್ದಾರೆ  Games ಎಲ್ಲಾ ನಡೆಸುತ್ತಾರೆ ತುಂಬಾ ಜಾಲಿಯಾಗಿ ಇರುತ್ತದೆ. "ಬರ್ತೀಯಾ" ಎಂದು ಕೇಳಿದಾಗ ಗೋಮತಿ ಸಂತೋಷದಿಂದ ಹೋದಳು.  ಕಥೆಗಳೆಲ್ಲಾ ಹೇಳಿದರು.  "ನಿಮ್ಮ Best Friend Jesus ತಾನೇ.  ಯಾವಾಗಲೂ ನಿಮ್ಮೊಂದಿಗೇ ಇರುತ್ತಾರೆ.  ಯಾರೆಲ್ಲಾ ಯೇಸಪ್ಪಾಗೆ ಸ್ನೇಹಿತರಾಗಲು ಬಯಸುತ್ತೀರ" ಎಂದು ಸುಬಾ ಅಕ್ಕ ಕೇಳಿದಾಗ, ಗೋಮತಿ ಮೊದಲು ಕೈ ಎತ್ತಿದಳು.  ಅವಳು ತನ್ನ ಜೀವನವನ್ನು ಯೇಸಪ್ಪನಿಗೆ ಅರ್ಪಿಸಿದಳು.  ಬಹಳಷ್ಟು ಹೊಸ ಸ್ನೇಹಿತರನ್ನು ನೋಡಿ ಅವರೊಂದಿಗೆ ಮಾತನಾಡುವುದು ಗೋಮತಿಗೆ ತುಂಬಾ ಸಂತೋಷ ತಂದಿತು. ಹೇಳಿಕೊಟ್ಟ ಹಾಡನ್ನು ಹಾಡಿಕೊಂಡೇ ಗೋಮತಿ ಸಂತೋಷದಿಂದ ನಡೆದು ಹೋದಳು. ಆಟವಾಡಲು ಯಾರೂ ಇಲ್ಲ ಎಂದು ಚಿಂತಿಸಿದ  ಗೋಮತಿಗೆ ಬಹಳ Friends ಸಿಕ್ಕಿದರು. ಅಷ್ಟೇ ಅಲ್ಲದೆ Jesus ಅವಳ Best friend ಆಗಿ ಬಂದುಬಿಟ್ಟರು. ಇದಕ್ಕೆಲ್ಲಾ ಯಾರು ಕಾರಣ ಎಂದು ನೆನೆಸುತ್ತೀರ ಪುಟಾಣಿಗಳಾ. ರಾಜೇಶ್ವರಿನೇ.

ತಾನು ಮಾತ್ರ Sunday class ಗೆ ಹೋದರೆ ಸಾಲದು.ತನ್ನ ಹಳ್ಳಿಯಲ್ಲಿರುವ ಎಲ್ಲಾ ಮಕ್ಕಳೂ ಯೇಸುವನ್ನು ತಿಳಿದುಕೊಳ್ಳಬೇಕೆಂದು ಆಸೆಯಿಂದ ಒಂದೊಂದು ಮನೆಗೂ ಹೋಗಿ ಕರೆದಳು. Jesus ಮಾತ್ರವೇ ನಮ್ಮೆಲ್ಲರಿಗೂ ಒಳ್ಳೆಯ friend ಎಂದು ಪರಿಚಯಿಸಲು ರಾಜೇಶ್ವರಿ ಕೂಡ ಸಹಾಯ ಮಾಡಿದಳು ತಾನೇ! ನೀವೂ Jesus ನ್ನು ಪರಿಚಯಿಸುವ ಒಳ್ಳೆಯ Friend ಆಗಬೇಕು.ಸರೀನಾ.
-    A. ಬ್ಯೂಲ

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al Elexbet matbet giriş matbet instagram unban x unban twitter unban palacebet setrabet