Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.03.2025
Share:

By Village Missionary Movement

Friday, 28-Mar-2025

ಧೈನಂದಿನ ಧ್ಯಾನ(Kannada) – 28.03.2025

 

ಸೆರೆವಾಸವನ್ನು ಬದಲಾಯಿಸುವ ದೇವರು 

 

"ಚೀಯೋನಿನಿಂದ ಇಸ್ರಾಯೇಲ್ಯರಿಗೆ ರಕ್ಷಣೆಯು ಬೇಗನೆ ಬರಲಿ. ಯೆಹೋವನು ದುರವಸ್ಥೆಯಿಂದ ತಪ್ಪಿಸಿದಾಗ ಆತನ ಪ್ರಜೆಗಳಾಗಿರುವ ಯಾಕೋಬವಂಶದವರು ಉಲ್ಲಾಸಗೊಳ್ಳುವರು; ಇಸ್ರಾಯೇಲ್ಯರು ಹರ್ಷಿಸುವರು." - ಕೀರ್ತನೆ 14:7 

 

ಈ ಲೌಕಿಕ ಜೀವನದಲ್ಲಿ, ನಾವು ವಿವಿಧ ತೊಂದರೆಗಳು ಮತ್ತು ಯಾತನೆಗಳಿಂದ ಬಳಲುತ್ತೇವೆ ಮತ್ತು ಈ ಯಾತನೆಗಳು ಯಾವಾಗ ಕೊನೆಗೊಳ್ಳುತ್ತವೆ ಎಂದು ನಾವು ಸಂಕಟಪಡುತ್ತೇವೆ. ಪ್ರತಿಯೊಂದು ಪಾಡೂ ಒಂದು ಸೆರೆವಾಸದಂತೆ ಕಾಣುತ್ತಿದೆ. ವೃದ್ಧರಿಗೆ ಅನಾರೋಗ್ಯದ ಸೆರೆವಾಸ, ಅಸಹಾಯಕರಿಗೆ ಅಭದ್ರತೆಯ ಸೆರೆವಾಸ, ಹೆತ್ತವರಿಗೆ ಮಕ್ಕಳ ಅವಿಧೇಯತೆ ಎಂಬುದು ಒಂದು ಜೈಲಿನಂತೆ ತೋರುತ್ತದೆ. ಯೌವನಸ್ಥ ಮಕ್ಕಳಿಗೆ ಅನೇಕ ರೀತಿಯ ಸೆರೆವಾಸಗಳು, ಮದ್ಯಪಾನ, ಮಾದಕ ವಸ್ತುಗಳಿಗೆ ದಾಸರಾಗಿರುವಂತಹ ಸೆರೆವಾಸ. ಲೆಕ್ಕವಿಲ್ಲದಷ್ಟು ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ವಾಟ್ಸಾಪ್, ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ವೆಬ್ ಮತ್ತು ಅಪ್ಲಿಕೇಶನ್‌ಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಗಂಡ ಮತ್ತು ಹೆಂಡತಿಯ ಮಧ್ಯದಲ್ಲಿ ಬೇರ್ಪಡುವ ಕಾರ್ಯಗಳು, ಒಟ್ಟಿಗೆ ವಾಸಿಸಲು ಸಾಧ್ಯವಾಗದ ಇತರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಸೆರೆವಾಸದಲ್ಲಿದ್ದಾರೆ. ಮಕ್ಕಳ ಶಿಕ್ಷಣ, ಮದುವೆ ಇತ್ಯಾದಿಗಳನ್ನು ಸಾಲವಿಲ್ಲದೆ ಹೇಗೆ ನಿರ್ವಹಿಸುವುದು ಎಂಬ ಸೆರೆವಾಸ ಹೀಗೆ ಹೇಳಿಕೊಂಡೇ ಹೋಗಬಹುದು. ಇವುಗಳಿಂದ ಮುಕ್ತಿ ಪಡೆಯುವುದು ಹೇಗೆ? ಇವುಗಳಿಗೆ ಪರಿಹಾರವಾದರೂ ಏನು? ಈ ಸೆರೆವಾಸವನ್ನು ಬದಲಾಯಿಸಲು ಕರ್ತನಿಂದ ಮಾತ್ರವೇ ಸಾಧ್ಯ. 

 

ಯೋಸೇಫನು ಐಗುಪ್ತದಲ್ಲಿ 13 ವರ್ಷಗಳ ಕಾಲ ಸೆರೆವಾಸ ಅನುಭವಿಸಿದರು. ದೇವರು ಅವನನ್ನು ಹಾಗೆಯೇ ಬಿಟ್ಟು ಬಿಟ್ಟರಾ? ಇಲ್ಲವಲ್ಲಾ, ಅವನ ಸೆರೆವಾಸವನ್ನು ಸರಿಯಾದ ಸಮಯದಲ್ಲಿ ಬದಲಾಯಿಸಿದರು ಮತ್ತು ಫರೋಹನ ನಂತರ ಆ ದೇಶದ ಆಡಳಿತಗಾರನನ್ನಾಗಿ ಹೆಚ್ಚಿಸಿದರಲ್ಲಾ. ತಕ್ಕ ಸಮಯದಲ್ಲಿ ಅವನನ್ನು ಹೆಚ್ಚಿಸಿದರು. ಅದಕ್ಕೆ ತಾಳ್ಮೆ ಮತ್ತು ದೇವರಲ್ಲಿ ನಂಬಿಕೆ ಬೇಕು. ಯೋಬನನ್ನು ನೋಡಿ, ಸೈತಾನನ ಶೋಧನೆಯಿಂದ ಅವನ ಎಲ್ಲಾ ಆಸ್ತಿಗಳು ಒಂದೇ ದಿನದಲ್ಲಿ ನಾಶವಾದವು; ಅವನ 10 ಮಕ್ಕಳೂ ಒಂದೇ ದಿನದಲ್ಲಿ ಸತ್ತರು. ಎಷ್ಟು ಭಯಾನಕ ನೋವು ಮತ್ತು ಸೆರೆವಾಸವನ್ನು ಅನುಭವಿಸಿದರು? ಅಷ್ಟೇ ಅಲ್ಲ, ಅವನ ಇಡೀ ದೇಹವು ಹುಣ್ಣುಗಳಿಂದ ಆವೃತವಾಗಿತ್ತು, ಒಂದು ಚಿಪ್ಪು ತೆಗೆದುಕೊಂಡು ಅವುಗಳನ್ನು ಕೆರೆದುಕೊಳ್ಳುತ್ತಿದ್ದರು. ಅವನ ಹೆಂಡತಿಯೂ ಸಹ ದೇವರನ್ನು ಶಪಿಸಿ, ಪ್ರಾಣ ಬಿಡುವಂತೆ ಒತ್ತಾಯಿಸಿದಳು. ಯೋಬನು ಸಹಿಸಲಾಗದಂತಹ ಸೆರೆಯಲ್ಲಿದ್ದರು. ಆದಾಗ್ಯೂ, ಆ ಸೆರೆವಾಸ ಮತ್ತು ಯಾತನೆಗಳು ಕೆಲವೇ ದಿನಗಳ ಕಾಲ ಇದ್ದವು. ಶೋಧನೆಯ ದಿನಗಳು ಮುಗಿದ ನಂತರ, ದೇವರು ಯೋಬನನ್ನು ಎರಡರಷ್ಟು ಆಶೀರ್ವದಿಸಿದರು. ಸೌಲನು ಸಹ ಅನೇಕ ವರ್ಷಗಳಿಂದ ದಾವೀದನನ್ನು ಬೆನ್ನಟ್ಟುತ್ತಿದ್ದನು. ಆದರೆ ಕರ್ತನು ದಾವೀದನನ್ನು ಸೌಲನ ಕೈಗೆ ಒಪ್ಪಿಸಲಿಲ್ಲ. ದಾವೀದನ ಸೆರೆವಾಸವನ್ನು ಬದಲಾಯಿಸಿದ ದೇವರು, ದಾವೀದನನ್ನು ಎಲ್ಲಾ ಇಸ್ರಾಯೇಲ್ಯರ ಮೇಲೆ ರಾಜನನ್ನಾಗಿ ಉನ್ನತೀಕರಿಸಿದರು.

        

ಪ್ರಿಯ ಸಹೋದರ ಸಹೋದರಿಯರೇ! ನೀವೂ ಸಹ ಸೆರೆವಾಸದಲ್ಲಿದ್ದೀರಾ? ಕೌಟುಂಬಿಕ ಸಮಸ್ಯೆಗಳು, ಮಕ್ಕಳ ಶಿಕ್ಷಣ, ವೈವಾಹಿಕ ಜೀವನ ಅಥವಾ ಭವಿಷ್ಯದ ಕುರಿತಾದ ಭಯ, ಇಂತಹ ಯಾವುದೇ ರೀತಿಯ ಸೆರೆವಾಸಗಳಾಗಿದ್ದರೂ ದೇವರಿಂದ ಮಾರ್ಪಡಿಸಲು ಸಾಧ್ಯ. ಆತನು ನನ್ನನ್ನು ಬಿಡಿಸಿ ವಿಶಾಲಸ್ಥಳದಲ್ಲಿ ಸೇರಿಸಿದನು; ನನ್ನನ್ನು ಮೆಚ್ಚಿ ರಕ್ಷಿಸಿದನು. ಕೀರ್ತನೆಗಳು 18:19

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಒಂದು ಲಕ್ಷ ಬೈಬಲ್‌ಗಳನ್ನು ಕೊಡುವವರು, ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet holiganbet grandpashabet grandpashabet