Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.04.2025
Share:

By Village Missionary Movement

Tuesday, 01-Apr-2025

ಧೈನಂದಿನ ಧ್ಯಾನ(Kannada) – 01.04.2025

 

ನಮ್ಮೊಂದಿಗೆ ಪ್ರಯಾಣಿಸುವ ಕರ್ತನು

 

"...ನಾನು ನಿನ್ನೊಂದಿಗೆ ಇರುವೆನು ಎಂದು ಹೇಳಿದನು" - ಆದಿಕಾಂಡ 31:3

 

ಒಮ್ಮೆ ನಾನು ಸೇವೆಯ ಅವಶ್ಯಕತೆಗಳು ಮತ್ತು ಇಕ್ಕಟ್ಟುಗಳಿಂದ ದಣಿದಿದ್ದೆ. ನಾನು ಇನ್ನು ಮುಂದೆ ಯಾವುದೇ ಹೊಸ ಯೋಜನೆಗಳನ್ನು ಜಾರಿಗೆ ತರಬಾರದು ಎಂದು ನಿರ್ಧರಿಸಿದೆ. ಆಗ ದೇವರು ನನ್ನೊಂದಿಗೆ ಮಾತನಾಡಿದರು. ಸಭಾಮಂದಿರದ ನಾಯಕನಾದ ಯಾಯೀರನು ತನ್ನ ಮಗಳಿಗಾಗಿ ಪ್ರಾರ್ಥಿಸಿದಾಗ, ನಾನು ಅವನೊಂದಿಗೆ ಪ್ರಯಾಣಿಸಿದೆ, ಅವನ ಕೊರತೆಗಳನ್ನು ನೀಗಿಸಿದೆ ಮತ್ತು ಅವನ ಅಗತ್ಯವನ್ನು ಪೂರೈಸಿದೆ. ನೀನು ಸಾವಿರಾರು ಯುವಜನರಿಗಾಗಿ ಪ್ರಾರ್ಥಿಸುವಾಗ ನಾನು ನಿನ್ನೊಂದಿಗೆ ಪ್ರಯಾಣಿಸುವುದಿಲ್ಲವೇ? ನಿನ್ನ ಅಗತ್ಯಗಳನ್ನು ಪೂರೈಸುವುದಿಲ್ಲವೇ? ಎಂದು ಹೇಳಿದರು. ನನ್ನ ಆಯಾಸ ತಕ್ಷಣವೇ ಮಾಯವಾಯಿತು ಮತ್ತು ನಾನು ಉತ್ಸುಕನಾದೆ. 

 

ಮಾರ್ಕನು 5 ನೇ ಅಧ್ಯಾಯದಲ್ಲಿ, ಸಭಾಮಂದಿರದ ನಾಯಕನಾದ ಯಾಯೀರನು ಯೇಸುವಿನ ಬಳಿಗೆ ಬಂದು ತನ್ನ ಮಗಳಿಗಾಗಿ ಬೇಡಿಕೊಳ್ಳುತ್ತಾ, "ನನ್ನ ಮಗಳು ಸಾಯುವ ಅವಸ್ಥೆಯಲ್ಲಿದ್ದಾಳೆ, ನೀವು ಬಂದು ಅವಳ ಮೇಲೆ ಕೈ ಇಟ್ಟರೆ ಬದುಕುವಳು" ಎಂದು ಹೇಳುತ್ತಾರೆ. ಯೇಸು ಕ್ರಿಸ್ತನು ತಕ್ಷಣವೇ ಯಾಯೀರನ ಜೊತೆ ಹೋಗಲು ಒಪ್ಪುತ್ತಾರೆ. ಹೋಗುವ ದಾರಿಯಲ್ಲಿ, ರಕ್ತ ಕುಸುಮ ರೋಗದಿಂದ ಬಳಲುತ್ತಿರುವ ಮಹಿಳೆಗೆ ಒಂದು ಅದ್ಭುತವನ್ನು ಮಾಡುತ್ತಾರೆ ಅದರಿಂದ ಪ್ರಯಾಣವು ಸ್ವಲ್ಪ ಸಮಯದವರೆಗೆ ತಡವಾಗುತ್ತದೆ. ಆದರೆ ಯಾಯೀರನು ಯೇಸು ಕ್ರಿಸ್ತನು ನನ್ನೊಂದಿಗೇ ಬರುತ್ತಿದ್ದಾರೆ. ಅವರು ಹೇಳಿದ್ದನ್ನು ಮಾಡೇ ಮಾಡುತ್ತಾರೆ ಎಂಬ ದೃಢನಿಶ್ಚತೆಯಲ್ಲಿ ಧೈರ್ಯವಾಗಿದ್ದರು. ಪ್ರಯಾಣ ವಿಳಂಬವಾದಾಗ, ಅವರ ಮಗಳು ಸತ್ತುಹೋದಳೆಂಬ ಸುದ್ದಿ ಬರುತ್ತದೆ. ಆಗ ಯೇಸು ಯಾಯೀರನನ್ನು ನೋಡಿ ನಂಬಿಕೆ ಮಾತ್ರ ಇರಲಿ ಎಂದು ಹೇಳಿ, ಅವನ ಮನೆಗೆ ಹೋಗುತ್ತಾರೆ. ತನ್ನ ಮಗಳನ್ನು ಮತ್ತೆ ಬದುಕಿಸುತ್ತಾರೆ.  

 

ಇಂದು ಲೋಕದಲ್ಲಿ ನಮ್ಮೊಂದಿಗೆ ಯಾರು ಪ್ರಯಾಣಿಸುತ್ತಾರೆ? ನಮ್ಮನ್ನು ಯಾರು ನಂಬುತ್ತಾರೆ? ಆದರೆ ಯೇಸು ನಮ್ಮೊಂದಿಗೆ ಪ್ರಯಾಣಿಸಲು ಉತ್ಸುಕರಾಗಿದ್ದಾರೆ. ಅವರು ನಮ್ಮೊಂದಿಗೆ ಪ್ರಯಾಣಿಸುವಾಗ, ನಾವು ಇತರರ ಬಗ್ಗೆ ತಾಳ್ಮೆ, ಪ್ರೀತಿ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳುತ್ತೇವೆ. ನಾವು ನಮ್ಮ ಸ್ವಂತ ವಿಷಯಗಳಿಗಿಂತ ಇತರರ ವ್ಯವಹಾರಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಮತ್ತು ನಮ್ಮ ನಂಬಿಕೆ ಹೆಚ್ಚಾಗುತ್ತದೆ. ಯೇಸುವಿನೊಂದಿಗೆ ಪ್ರಯಾಣಿಸುತ್ತಿದ್ದ ಕೆಲವೇ ಗಂಟೆಗಳಲ್ಲಿ ಯಾಯೀರನಿಗೆ ಇದೆಲ್ಲವೂ ಅರ್ಥವಾಯಿತು. ಇಂದು ಕ್ರೈಸ್ತರೆಂದು ಹೇಳಿಕೊಳ್ಳುವ ನಮಗೆ ಯೇಸುವಿನೊಂದಿಗೆ ಪ್ರಯಾಣಿಸುವ ಅನುಭವವಿದೆಯೇ? ನೀವು ಸಹ ನಿಮ್ಮ ಜೀವನದ ಪ್ರಯಾಣದಲ್ಲಿ ಯೇಸುವಿನೊಂದಿಗೆ ನಡೆಯುತ್ತಿದ್ದೀರಾ? ಹಾಗಾದರೆ, ನಿಮಗೆ ಇತರರ ಕೊರತೆಗಳು ಮತ್ತು ಅಗತ್ಯಗಳು ಕಾಣುತ್ತಿವೆಯೇ? ಯಾಯೀರನು ರಕ್ತ ಕುಸುಮ ರೋಗದಿಂದ ಬಳಲುತ್ತಿದ್ದ ಮಹಿಳೆಯ ಅಗತ್ಯವನ್ನು ಅರಿತುಕೊಂಡು ತಾಳ್ಮೆಯಿಂದ ಕಾಯುತ್ತಿದ್ದಾರೆ. ಇತರರಿಗಾಗಿ, ಇತರರ ಅಗತ್ಯಗಳಿಗಾಗಿ ದೇವರ ಪಾದಗಳಲ್ಲಿ ಪ್ರಾರ್ಥಿಸಿರಿ. 

 

ಪ್ರಿಯರೇ! ನಮ್ಮ ಸೇವೆಯಲ್ಲಿ, ಹಳ್ಳಿಗಳಲ್ಲಿರುವ ಚಿಕ್ಕ ಮಕ್ಕಳು ಮತ್ತು ಯುವಕರು ರಕ್ಷಣೆಹೊಂದಲು ಸೇವೆ ಮಾಡುತ್ತಿರುವ ಸೇವಕರಿಗಾಗಿ ಪ್ರಾರ್ಥಿಸುವ ಪ್ರಾರ್ಥನಾ ಗುಂಪುಗಳು ಬೇಕಾಗಿವೆ. ನೀವು ಒಬ್ಬರು ಅಥವಾ ಇಬ್ಬರನ್ನು ನಿಮ್ಮೊಂದಿಗೆ ಸೇರಿಸಿಕೊಂಡು ಪ್ರಾರ್ಥಿಸಬಹುದು. ತನ್ನ ಮಗಳಿಗಾಗಿ ಬೇಡಿಕೊಂಡ ಯಾಯೀರನೊಂದಿಗೆ ಪ್ರಯಾಣಿಸಿದ ಕರ್ತನು ನಿಮ್ಮೊಂದಿಗೂ ಪ್ರಯಾಣಿಸುತ್ತಾರೆ ಮತ್ತು ನೀವು ಅನೇಕ ಯುವಕರು ಮತ್ತು ಸೇವೆಗಳಿಗಾಗಿ ಪ್ರಾರ್ಥಿಸುವಾಗ ನಿಮ್ಮ ಅಗತ್ಯಗಳನ್ನು ಪೂರೈಸುತ್ತಾರೆ. ನೀವು ಈ ರೀತಿ ಪ್ರಾರ್ಥಿಸಲು ಬಯಸಿದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ದೇವರು ನಿಮ್ಮನ್ನು ಆಶೀರ್ವದಿಸಲಿ.   

- Bro. K. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಈ ತಿಂಗಳ ಸೇವೆಗಳಲ್ಲಿ ಕರ್ತನ ಹಸ್ತವು ಜೊತೆ ಇದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler meritking meritking giriş meritking güncel giriş alobet alobet giriş nakitbahis Betpark milanbahis nakitbahis online casino online casino perabet perabet giriş perabet perabet giriş bahsegel jojobet perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz