Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.04.2025
Share:

By Village Missionary Movement

Wednesday, 02-Apr-2025

ಧೈನಂದಿನ ಧ್ಯಾನ(Kannada) – 02.04.2025

 

ಜಾಣ್ಮೆ

 

"...ಸ್ವಸ್ಥಚಿತ್ತರಾಗಿದ್ದು ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ..." - 1 ಪೇತ್ರ 1:13

 

ಪ್ರಸಿದ್ಧ ಇಂಗ್ಲೀಷ್ ಧರ್ಮೋಪದೇಶಕ ಸ್ಪರ್ಜನ್ (1834-1892) ಪೂರ್ಣ ಹೃದಯದಿಂದ ಕೊನೆ ಉಸಿರಿರುವವರೆಗೂ ದೇವರಿಗಾಗಿ ಜೀವಿಸಿದರು. ಅವರು 19 ನೇ ವಯಸ್ಸಿನಲ್ಲಿ ಬೋಧಕದರು. ಶೀಘ್ರದಲ್ಲೇ ಅವರು ದೊಡ್ಡ ಸುವಾರ್ತಾ ಸಭೆಯಲ್ಲಿ ಬೋಧಿಸಿದರು. ಅವರೇ ತಮ್ಮ ಎಲ್ಲಾ ಧರ್ಮೋಪದೇಶಗಳನ್ನು ಸಂಕಲಿಸಿ ಅವುಗಳನ್ನು 63 ಪುಸ್ತಕಗಳಾಗಿ ಹೊರಬಿಟ್ಟರು. ಅವರು ವಿವಿಧ ಉಪನ್ಯಾಸಗಳು, ಪ್ರಾರ್ಥನೆಯ ಕುರಿತಾದ ಪುಸ್ತಕಗಳು ಮತ್ತು ಇತರ ಅನೇಕ ಕೃತಿಗಳನ್ನು ಸಹ ನೀಡಿದ್ದಾರೆ. ಅವರು ವಾರಕ್ಕೆ ಆರು ಪುಸ್ತಕಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಅವರ ಒಂದು ಸಂದೇಶದಲ್ಲಿ, "ಏನನ್ನೂ ಮಾಡದಿರುವುದೇ ಪಾಪದಲ್ಲೇ ಅತ್ಯಂತ ದೊಡ್ಡ ಪಾಪ. ಅದು ಅನೇಕ ಜನರ ಮೇಲೆ ಪರಿಣಾಮ ಬೀರುತ್ತದೆ. ಇದು ಕ್ರೂರ ಸ್ವಭಾವ. ದೇವರೇ, ಏನೂ ಮಾಡದೇ ಇರುವ ಈ ಪಾಪದಿಂದ ನಮ್ಮನ್ನು ರಕ್ಷಿಸು" ಎಂದು ಅವರು ಬೋಧಿಸಿದರು. ಬೋಧಕರಾದ ಸ್ಪರ್ಜನ್ ಬಗ್ಗೆ ಮಾತನಾಡುವಾಗ, ಅವರ ಸ್ನೇಹಿತರು ಅವರನ್ನು ಬಹಳ ಬುದ್ಧಿವಂತ ವ್ಯಕ್ತಿ ಎಂದು ಬಣ್ಣಿಸುತ್ತಾರೆ. 

 

ಇಂದಿನ ಧ್ಯಾನದಲ್ಲಿ ನಾವು ಜಾಣ್ಮೆಯ ಬಗ್ಗೆ ಓದುತ್ತೇವೆ. ಸ್ಪರ್ಜನ್ ನಂತಹ ಅನೇಕ ದೇವಪುರುಷರು ದೇವರ ಆತ್ಮದ ಸಹಾಯದಿಂದ ಅಸಾಧಾರಣ ಜೀವನವನ್ನು ನಡೆಸಿದ್ದಾರೆ. ಜಾಣ್ಮೆ, ಅಂದರೆ ಸ್ಪಷ್ಟ ಮನಸ್ಸು, ಸಾರ್ವಜನಿಕ ಜೀವನದಲ್ಲಿ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ಬಹಳ ಅವಶ್ಯಕ. “ಮೂರ್ಖನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ಹೆಜ್ಜೆಗಳನ್ನು ಚೆನ್ನಾಗಿ ಗಮನಿಸುವನು” ಎಂದು ಸೊಲೊಮೋನನು ಬರೆಯುತ್ತಾರೆ. ಸ್ವಸ್ಥಬುದ್ಧಿಯುಳ್ಳವರು ತಮ್ಮ ನಡತೆಯ ಮೇಲೆ, ಅಂದರೆ ಜೀವನದಲ್ಲಿ ಒಳ್ಳೆಯವರಾಗಿ ಕಾಣುವುದಿಲ್ಲ. ಪೇತ್ರನು ತನ್ನ ಪತ್ರಿಕೆಯಲ್ಲಿ ಬರೆಯುವಾಗ, ಸ್ವಸ್ಥಚಿತ್ತರಾಗಿರುವುದರ ಕುರಿತು ಮೂರು ವಿಭಿನ್ನ ಸ್ಥಳಗಳಲ್ಲಿ ಸಲಹೆಯನ್ನು ನೀಡುತ್ತಾರೆ. (1:13,4:7,5:8)  

 

ಸತ್ಯವೇದದಲ್ಲಿ ಬುದ್ಧಿಯುಳ್ಳ ಕನ್ಯೆಯರು, ಬುದ್ಧಿಯಿಲ್ಲದ ಕನ್ಯೆಯರು ಎಂದು ಎರಡು ಗುಂಪುಗಳ ಬಗ್ಗೆ ಓದುತ್ತೇವೆ. ಬುದ್ಧಿವಂತರು ಮದಲಿಂಗನ ಆಗಮನಕ್ಕೆ ಸಿದ್ಧರಾಗಿದ್ದರು ಮತ್ತು ಸ್ಪಷ್ಟ ಮನಸ್ಸಿನವರಾಗಿದ್ದರು. ಬುದ್ಧಿಯಿಲ್ಲದವರೋ ಅಸಡ್ಡೆಯಿಂದ ಸೋಮಾರಿಗಳಾಗಿ ಕಾಣಲ್ಪಟ್ಟರು. ಪರಿಣಾಮವಾಗಿ, ಅವರು ಕೃಪೆಯನ್ನು ಕಳೆದುಕೊಂಡರು. ಹೌದು, ಸೋಮಾರಿಗಳು, ಅಜಾಗರೂಕರು ಮತ್ತು ನಿದ್ರೆಯಲ್ಲಿ ಮುಳುಗಿರುವವರಿಗೆ ಸ್ಪಷ್ಟ ಮನಸ್ಸು ಇರುವುದಿಲ್ಲ. "ಸ್ವಸ್ಥಚಿತ್ತರಾಗಿದ್ದು ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ ನಿಮಗೆ ದೊರೆಯುವ ಕೃಪೆಯ ಮೇಲೆ ನಿಮ್ಮ ಭರವಸೆಯನ್ನು ಸಂಪೂರ್ಣವಾಗಿ ಇಡಿರಿ" ಎಂಬ ಪೇತ್ರನ ಮಾತುಗಳನ್ನು ನಾವು ನೆನಪಿಸಿಕೊಳ್ಳೋಣ.

 

ಕ್ರಿಸ್ತನಲ್ಲಿ ಪ್ರಿಯರೇ, "ನಾವು ಹುಟ್ಟಿದ್ದೇವೆ, ಬದುಕಿದ್ದೇವೆ, ಸತ್ತಿದ್ದೇವೆ" ಎಂಬ ಮನಸ್ಥಿತಿಯಲ್ಲಿ ಬದುಕುವ ಬದಲು, ಸ್ಪಷ್ಟ ಮನಸ್ಸಿನಿಂದ ಬದುಕಲು, ಜೀವನವನ್ನು ಅರ್ಥಪೂರ್ಣ ಮತ್ತು ಸುಂದರವಾಗಿಸಲು ಶ್ರಮಿಸೋಣ. ದೇವರು ನಮಗೆ ಸಹಾಯ ಮಾಡಲು ಸಮರ್ಥರಾಗಿದ್ದಾರೆ. 

- Bro. ಜಾಕೋಬ್ ಶಂಕರ್

 

ಪ್ರಾರ್ಥನಾ ಅಂಶ:

ಲೆಂಟ್ ದಿನಗಳ ಸಭೆಗಳಲ್ಲಿ ದೇವರು ನಮ್ಮ ಸೇವಕರನ್ನು ಶಕ್ತಿಯುತವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler meritking meritking giriş meritking güncel giriş alobet alobet giriş nakitbahis Betpark milanbahis nakitbahis online casino online casino perabet perabet giriş perabet perabet giriş bahsegel jojobet perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz