Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.04.2025
Share:

By Village Missionary Movement

Thursday, 03-Apr-2025

ಧೈನಂದಿನ ಧ್ಯಾನ(Kannada) – 03.04.2025

 

ಪ್ರಾರ್ಥನೆಯನ್ನು ಕೇಳುವಾತನು

 

"ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು" - ಕೀರ್ತನೆ 65:2

 

ನನ್ನ ಜೊತೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಸಹೋದರನು 25 ವರ್ಷಗಳಿಂದ ತನ್ನ ಸ್ನೇಹಿತನ ರಕ್ಷಣೆಗಾಗಿ ಪ್ರಾರ್ಥಿಸುತ್ತಿದ್ದರು. ಇದ್ದಕ್ಕಿದ್ದಂತೆ, ಅವರ ಮನಸ್ಸಿನಲ್ಲಿ, ನಾವು ಇಷ್ಟು ವರ್ಷಗಳಿಂದ ಪ್ರಾರ್ಥಿಸುತ್ತಿದ್ದೇವೆ, ಇನ್ನೆಲ್ಲಿ ರಕ್ಷಣೆ ಹೊಂದುತ್ತಾರೆ? ಎಂದು ಯೋಚಿಸಿ, ಸ್ನೇಹಿತನಿಗಾಗಿ ಪ್ರಾರ್ಥಿಸುವುದನ್ನು ನಿಲ್ಲಿಸಿಬಿಟ್ಟರು. ಆದರೆ ಒಂದು ದಿನ, ಚೆನ್ನೈನಲ್ಲಿ ಅವರು ಯಾರಿಗಾಗಿ ಪ್ರಾರ್ಥಿಸಿದ್ದರೋ ಆ ಸ್ನೇಹಿತನನ್ನು ಕಂಡರು, ಅವರು ರಕ್ಷಣೆ ಹೊಂದಿದ್ದರು. ಆತನ ಬಳಿ ನೀವು ಯಾವಾಗ ರಕ್ಷಣೆ ಹೊಂದಿದಿರಿ? ಎಂದು ಕೇಳಿದಾಗ, ಅದು ಕೆಲವು ವರ್ಷಗಳ ಹಿಂದೆ ಎಂದು ಉತ್ತರಿಸಿದರು. 

 

ಯೋಚಿಸಿ ನೋಡಿ, ನಮ್ಮ ದೇವರು ಪ್ರಾರ್ಥನೆಯನ್ನು ಕೇಳುವವನು ಮಾತ್ರವಲ್ಲ, ಮಾಂಸವಾದ ಎಲ್ಲರೂ ಆತನ ಬಳಿಗೆ ಬರುತ್ತಾರೆ ಎಂದು ಉತ್ತರವನ್ನು ಸಹ ಹೇಳಲಾಗುತ್ತಿದೆ. ನಾವು ಇತರರ ರಕ್ಷಣೆಗಾಗಿ ಯಾವ ಮಟ್ಟಿಗೆ ನಂಬಿಕೆಯಿಂದ ಪ್ರಾರ್ಥಿಸುತ್ತೇವೋ, ಆ ಮಟ್ಟಿಗೆ ದೇವರು ಕಾರ್ಯ ಮಾಡಲು ಸಾಧ್ಯ. ಮೊದಲನೆಯದಾಗಿ, ನಮ್ಮ ದೇವರು ಪ್ರಾರ್ಥನೆಯನ್ನು ಕೇಳುವವರು ಎಂದು ನಾವು ನಂಬಿದರೆ, ನಾವು ಖಂಡಿತವಾಗಿಯೂ ಪ್ರಾರ್ಥಿಸಲು ಪ್ರಾರಂಭಿಸುತ್ತೇವೆ. ನಾವು ನಂಬಿಕೆಯಿಲ್ಲದೆ ಕರ್ತನಿಗೆ ಪ್ರಾರ್ಥಿಸಿದರೆ, ಆ ಪ್ರಾರ್ಥನೆ ವ್ಯರ್ಥ ಎಂದು ಸತ್ಯವೇದವು ಹೇಳುತ್ತದೆ. ಮತ್ತು ಮತ್ತಾಯ 21:22 ರಲ್ಲಿ ನೀವು ನಂಬಿಕೊಂಡು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನೆಲ್ಲಾ ಹೊಂದುವಿರಿ ಎಂದು ಓದುತ್ತೇವೆ. ಆದ್ದರಿಂದ, ನಾವು ಆತನ ಬಳಿ ಪ್ರಾರ್ಥಿಸುವಾಗ, ನಮ್ಮ ಪ್ರಾರ್ಥನೆಯು ನಂಬಿಕೆಯ ಪ್ರಾರ್ಥನೆಯಾಗಿರಬೇಕು. ಅದೇ ಸಮಯದಲ್ಲಿ, ದೇವರು ಎಂತಹ ವ್ಯಕ್ತಿ ಮತ್ತು ಅವರು ಎಷ್ಟು ಶಕ್ತಿಶಾಲಿ ಎಂಬುದರ ಅರಿವಿನೊಂದಿಗೆ ನಾವು ಪ್ರಾರ್ಥಿಸಬೇಕು. ತನ್ನ ಸೇವಕನಿಗಾಗಿ ಪ್ರಾರ್ಥಿಸುತ್ತಿದ್ದ ಶತಾಧಿಪತಿಯು ಕರ್ತನು ಎಷ್ಟು ಶಕ್ತಿಶಾಲಿ ಎಂದು ಅರಿತು, "ಕರ್ತನೇ, ಒಂದು ಮಾತು ಹೇಳು! ನನ್ನ ಸೇವಕನು ಸ್ವಸ್ಥವಾಗುತ್ತಾನೆ" ಎಂದು ಹೇಳಿದರು. ಇದು ನಮ್ಮ ಪ್ರಾರ್ಥನೆಯೂ ಆಗಿರಬೇಕು. ಖಂಡಿತವಾಗಿಯೂ ಕರ್ತನು ನಮ್ಮ ಪ್ರಾರ್ಥನೆಗಳಿಗೆ ಉತ್ತರಿಸುತ್ತಾರೆ. 

 

ಯಾವಾಗಲೂ ಬೇಸರಗೊಳ್ಳದೆ ಪ್ರಾರ್ಥಿಸಬೇಕು ಎಂಬುದರ ಕುರಿತು, ದೇವರು ಒಂದು ಸಾಮ್ಯವನ್ನು ಹೇಳಿದರು. ಲೂಕ 18:1-8 ರ ವರೆಗೂ ಇರುವ ಸತ್ಯವೇದ ಭಾಗದಲ್ಲಿ, ಅನ್ಯಾಯವಾಗಿ ತೀರ್ಪುಮಾಡುವ ನ್ಯಾಯಾಧಿಪತಿಯ ಬಳಿ ಸತತವಾಗಿ ಸತತವಾಗಿ ಮೊರೆಯಿಡುವ ಮಹಿಳೆಗೆ ಅಂತಿಮವಾಗಿ ನ್ಯಾಯ ಸಿಗುತ್ತದೆ. ಅದೇರೀತಿ ದೇವರಾದುಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡುವಲ್ಲಿ ಆತನು ಅವರ ವಿಷಯದಲ್ಲಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ? ಅವರಿಗೆ ಬೇಗ ನ್ಯಾಯ ತೀರಿಸುವರು. "ಕೇಳುವ ಪ್ರತಿಯೊಬ್ಬನೂ ಹೊಂದಿಕೊಳ್ಳುವನು, ಹುಡುಕುವವನಿಗೆ ಸಿಗುವುದು, ತಟ್ಟುವವನಿಗೆ ತೆರೆಯಲ್ಪಡುವುದು." ಹಲ್ಲೇಲೂಯ!

- P. V. ವಿಲಿಯಮ್ಸ್

 

ಪ್ರಾರ್ಥನಾ ಅಂಶ:

ವಟ್ಟಾರ ಎಳುಪುದಲ್ ಪ್ರಾರ್ಥನಾ ದಿನದಂದು ಅನೇಕರು ಹೊಸದಾಗಿ ಭಾಗವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet