Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.04.2025
Share:

By Village Missionary Movement

Saturday, 05-Apr-2025

ಧೈನಂದಿನ ಧ್ಯಾನ(Kannada) – 05.04.2025

 

ಜೇನುನೊಣ

 

"ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ;..." - ಮಾರ್ಕ 14:8

 

ನೊಬೆಲ್ ಪ್ರಶಸ್ತಿಯನ್ನು ಪಡೆದ ಒಂದು ಮಹಿಳೆಯ ಬಳಿ, ವರದಿಗಾರರು ಹೀಗೆ ಕೇಳಿದರು, ನೀವು ಸಮಾಜಕ್ಕಾಗಿ ಮಾಡುವ ಕೆಲಸಗಳ ಮೂಲಕ ಈ ಲೋಕವನ್ನು ಮಾರ್ಪಡಿಸಲು ಸಾಧ್ಯವಾ ಎಂದು. ಆ ಮಹಿಳೆ ಅವರಿಗೆ ಒಂದು ಕಥೆಯನ್ನು ಹೇಳಿದಳು. ಒಂದು ದೊಡ್ಡ ಕಾಡು ಬೆಂಕಿಗೆ ಆಹುತಿಯಾಯಿತು. ಅಲ್ಲಿನ ಪಕ್ಷಿಗಳು ಮತ್ತು ಪ್ರಾಣಿಗಳು ಹತ್ತಿರದ ನದಿದಡಕ್ಕೆ ಹೋಗಿಬಿಟ್ಟವು. ಆದರೆ ಪಕ್ಷಿಗಳಲ್ಲಿ ಅತ್ಯಂತ ಚಿಕ್ಕದಾದ ಒಂದು ಜೇನುನೊಣ, ನದಿಯಿಂದ ನೀರನ್ನು ತನ್ನ ಬಾಯಲ್ಲಿ ತಂದು ಉರಿಯುತ್ತಿದ್ದ ಕಾಡಿನ ಮೇಲೆ ಸುರಿಯುತ್ತಿತ್ತು. ಇದನ್ನು ನೋಡಿದ ಇತರ ಪಕ್ಷಿಗಳು, "ನೀನು ಸುರಿಯುವ ನೀರಿನಿಂದಲೇ ಈ ಕಾಡಿನ ಬೆಂಕಿ ನಂದಿಸಲ್ಪಡುತ್ತದಾ, ಹಾ! ಹಾ! ಎಂದು ನಗುತ್ತಾ ಗೇಲಿ ಮಾಡಿದವು. ಅದಕ್ಕೆ ಆ ಜೇನುನೊಣ ಹೇಳಿತು, "ಇದನ್ನು ನಂದಿಸಲು ಸಾಧ್ಯವಿಲ್ಲ ಎಂದು ನನಗೂ ಗೊತ್ತು! ಆದರೆ ಈ ಕಾಡು ಇಷ್ಟು ದಿನ ನನಗೆ ಎಷ್ಟೋ ಒಳ್ಳೆಯ ಕಾರ್ಯಗಳನ್ನು ಮಾಡಿದೆ. ಆದ್ದರಿಂದ ನಾನು ಈ ಕಾಡಿಗೆ ನನ್ನ ಕೈಲಾದಷ್ಟು ಸಹಾಯ ಮಾಡಬೇಕಲ್ಲಾ" ಎಂದಿತು. ಆ ಮಹಿಳೆ ಈ ಕಥೆಯನ್ನು ಹೇಳಿ, "ನಾನು ಸಹ ಲೋಕವನ್ನು ಹಾಗೆಯೇ ಬದಲಾಯಿಸಲು ಸಾಧ್ಯವಿಲ್ಲ, ಆದರೆ ಅದಕ್ಕಾಗಿ ನನ್ನಿಂದ ಸಾಧ್ಯವಾದಷ್ಟು ಮಾಡುತ್ತೇನೆ" ಎಂದು ಹೇಳಿದಳು. 

 

ಸತ್ಯವೇದದಲ್ಲಿ, ಯೆರೂಸಲೇಮಿನ ಗೋಡೆಗಳು ಕೆಡವಲ್ಪಟ್ಟಿವೆ ಎಂದು ಕೇಳಿದಾಗ, ನೆಹೆಮಿಯ ಬಹಳವಾಗಿ ದುಃಖಿಸಿದರು, ಉಪವಾಸ ಮಾಡಿದರು, ಪ್ರಾರ್ಥಿಸಿದರು ಮತ್ತು ನಂತರ ರಾಜನೊಂದಿಗೆ ಮಾತನಾಡಿದರು. ನಾನು ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತು. ಆದರೆ ಅವರ ಹೃದಯವು ಯೆರೂಸಲೇಮಿಗಾಗಿ ಬಡಿಯುತ್ತಿತ್ತು. ದೇವರು ಜೊತೆ ಇದ್ದರು. ಅದನ್ನು ನಿರ್ಮಿಸಲು ಅವರು ತುಂಬಾ ಶ್ರಮಿಸಿದರು. ದೇವರು ಅದಕ್ಕೆ ಸಹಾಯ ಮಾಡಿದರು. ಗೋಡೆಯನ್ನು 52 ದಿನಗಳಲ್ಲಿ ಪೂರ್ಣಗೊಳಿಸಲಾಯಿತು. 

 

ನನಗೆ ಪ್ರಿಯವಾದವರೇ! ಇಂದು ನಮ್ಮ ಮನಸ್ಥಿತಿ ಹೇಗಿದೆ? ನಮ್ಮ ದೇಶದ ಯುವಜನರ ದುಃಸ್ಥಿತಿಯ ಬಗ್ಗೆ ನಾವು ಕೇಳುತ್ತಿದ್ದೇವೆ. ಅದಕ್ಕಾಗಿ ನಮ್ಮ ಪ್ರಯತ್ನವೇನು? ನನ್ನ ಕುಟುಂಬ ಮತ್ತು ನಾನು ಕರ್ತನನ್ನು ಸ್ವೀಕರಿಸಿದ್ದೇವೆ. ಅದು ಸಾಕು ಎಂದು ನೀವು ಭಾವಿಸುತ್ತಿದ್ದೀರಾ? ಯೇಸು ಕ್ರಿಸ್ತನಿಂದ ಪ್ರಯೋಜನಗಳು ಮತ್ತು ರಕ್ಷಣೆಯನ್ನು ಉಚಿತವಾಗಿ ಪಡೆದ ನಾವು ಯೇಸುವಿಗಾಗಿ ಏನು ಮಾಡಲಿದ್ದೇವೆ? ನಮ್ಮ ಸ್ವಂತ ಪ್ರಯತ್ನಗಳಿಂದ ನಾವು ಲೋಕವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಜೇನುನೊಣದಂತೆ, ನಾವು ಸಹ ನಮ್ಮಿಂದ ಸಾಧ್ಯವಾದಷ್ಟು ಮಾಡಲು ಬದ್ಧರಾಗಿದ್ದೇವೆ ಎಂಬುದನ್ನು ಮರೆಯಬಾರದು.

- Mrs. ಅನಿತಾ ಅಳಗರಸ್ವಾಮಿ

 

ಪ್ರಾರ್ಥನಾ ಅಂಶ:

ಒಂದು ಮಿಷನ್ ಶಾಲೆಯನ್ನು ನಿರ್ಮಿಸಲು ಅನುಮತಿ ಪಡೆಯಲು, ಅಧಿಕಾರಿಗಳ ಕಣ್ಣುಗಳಲ್ಲಿ ದಯೆ ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet esbet sonbahis tambet grandpashabet betgit mercurecasino