Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.04.2025
Share:

By Village Missionary Movement

Monday, 07-Apr-2025

ಧೈನಂದಿನ ಧ್ಯಾನ(Kannada) – 07.04.2025

 

ಗೋಡೆ ಸರಿಮಾಡಲು.

 

"...ನಾವು ಇನ್ನು ಮೇಲೆ ನಿಂದೆಗೊಳಗಾಗಿರದ ಹಾಗೆ ಯೆರೂಸಲೇಮಿನ ಗೋಡೆಯನ್ನು ಕಟ್ಟುವ ಬನ್ನಿರಿ" - ನೆಹೆಮಿಯಾ 2:17

 

ಒಂದು ಮನೆಗೆ ಸುತ್ತುಗೋಡೆ ಬಹಳ ಅಗತ್ಯ. ಅದೇ ರೀತಿ, ಒಂದು ಗೋಡೆ ಮಾತ್ರ ನಗರಕ್ಕೆ ರಕ್ಷಣೆ ನೀಡಬಲ್ಲದು. ಶತ್ರುಗಳು ಸುಲಭವಾಗಿ ಒಳಗೆ ಪ್ರವೇಶಿಸದಂತೆಯೂ, ದಾಳಿ ಮಾಡದಂತೆಯೂ ಮತ್ತು ನಷ್ಟವನ್ನುಂಟುಮಾಡದಂತೆಯೂ ಗೋಡೆ ಸಹಾಯ ಮಾಡುತ್ತದೆ. 

 

ಗೋಡೆಯು ತುಂಬಾ ಮುಖ್ಯ! ಇಷ್ಟು ಮುಖ್ಯವಾದ ಯೆರೂಸಲೇಮಿನ ಗೋಡೆಗಳು ಕೆಡವಲ್ಪಟ್ಟಿವೆ ಎಂದು ಕೇಳಲ್ಪಟ್ಟ ನೆಹೆಮಿಯ, ಅತ್ತು, ಕೆಲವು ದಿವಸ ದುಃಖಿಸಿ ಉಪವಾಸಮಾಡಿ, ಪರಲೋಕದ ದೇವರ ಮುಂದೆ ಪ್ರಾರ್ಥನೆ ಮಾಡಿದರು. ನೆಹೆಮಿಯನು ಪ್ರಾರ್ಥಿಸಿದಾಗ, ದೇವಾಧಿ ದೇವರ ದಯೆಯೂ ರಾಜನ ದಯೆಯೂ ಸಿಕ್ಕಿತು. ಆಗ ನೆಹೆಮಿಯನು ತನ್ನ ಜನರಿಗೆ, ಬಿದ್ದಹೋಗಿರುವ ಗೋಡೆಯನ್ನು ಸರಿಮಾಡಲು 'ಎದ್ದು ಕಟ್ಟೋಣ ಬನ್ನಿರಿ' ಎಂದು ಒಂದು ಕರೆಯುವಿಕೆಯನ್ನು ಕೊಟ್ಟರು. ಪ್ರತಿಯೊಬ್ಬರೂ ತಮ್ಮ ಮನೆಗಳ ಎದುರಿನ ಗೋಡೆಯ ಭಾಗವನ್ನು ದುರಸ್ತಿ ಮಾಡಿ ಕಟ್ಟಿದರು. ಗೋಡೆಯನ್ನು ಸರಿಪಡಿಸಿದರು. ನೆಹೆಮಿಯನು ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಗೋಡೆಯನ್ನು ನಿರ್ಮಿಸಲಾಯಿತು. ಕೆಲವು ಶತ್ರುಗಳು ಇದನ್ನು ತಡೆಯಲು ಪ್ರಯತ್ನಿಸಿದರು. ಅವರ ಪ್ರಯತ್ನಗಳು ವ್ಯರ್ಥವಾಯಿತು. ಏಕೆಂದರೆ ದೇವರ ಹಸ್ತವು ನೆಹೆಮಿಯ ಮತ್ತು ಅವನ ಜನರೊಂದಿಗೆ ಇತ್ತು. 

 

ನನ್ನ ಪ್ರೀತಿಯ ದೇವರ ಮಕ್ಕಳೇ! ನಿಮ್ಮ ವೈಯಕ್ತಿಕ ಜೀವನದ ಗೋಡೆಯು ಬಿದ್ದುಹೋದಂತೆ ಕಾಣುತ್ತಿದೆಯೇ? ಅದು ನಿಮ್ಮ ಆಧ್ಯಾತ್ಮಿಕ ಜೀವನವೋ, ಕುಟುಂಬ ಜೀವನವೋ ಅಥವಾ ಸೇವೆಯ ಜೀವನವೋ? ಯಾವುದು ಕೆಡವಲ್ಪಟ್ಟಂತೆ ಕಾಣುತ್ತಿದೆ? ಇಂದು ದೇವಾಧಿ ದೇವರ ದಯೆಯನ್ನೂ, ಸಹಾಯವನ್ನೂ ಪಡೆಯಿರಿ. ಓ ದೇವರೇ! ನಮ್ಮಿಂದ ಇದು ಖಂಡಿತ ಸಾಧ್ಯವಿಲ್ಲ. ಆದರೆ ನೀವು ಅದನ್ನು ಸರಿಪಡಿಸಲು ಸಾಧ್ಯ. ನಾನು ಗೋಡೆಯಿಲ್ಲದ ನಗರದಂತೆ ಕಾಣುತ್ತಿದ್ದೇನೆ. ನೀವೆ ನಮ್ಮ ಆಧ್ಯಾತ್ಮಿಕ ಜೀವನದ ಗೋಡೆಯನ್ನು ಸರಿಪಡಿಸಬೇಕೆಂದು ಪ್ರಾರ್ಥಿಸೋಣ. ಹೌದು, "ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಿದ್ದಾನೆ" ಎಂದು ಸತ್ಯವೇದವು ನಮಗೆ ಎಚ್ಚರಿಕೆ ನೀಡುತ್ತಿದೆ. ಆದ್ದರಿಂದ, ಬಿದ್ದುಹೋಗಿರುವ ನಮ್ಮ ಕಾರ್ಯಗಳನ್ನು ಸರಿಪಡಿಸಲು ನಾವು ಪ್ರತಿದಿನ ಜಾಗರೂಕರಾಗಿರೋಣ. ಸರಿಮಾಡಲ್ಪಟ್ಟ ಜೀವನವು ಅನೇಕರಿಗೆ ಪ್ರಯೋಜನವಾಗಿ ಮಾರ್ಪಡುತ್ತದೆ. ಹಲ್ಲೇಲೂಯಾ!  

- Mrs. ಹೆಪ್ಸಿಬಾ ಇಮ್ಮಾನುವೇಲ್ 

 

ಪ್ರಾರ್ಥನಾ ಅಂಶ:

ಮಿಷನರಿ ಕೊಠಡಿಗಳನ್ನು ನಿರ್ಮಿಸಲು 2 ಲಕ್ಷ ರೂಪಾಯಿಗಳನ್ನು ಕೊಟ್ಟು ಬೆಂಬಲಿಸುವ ಪಾಲುದಾರರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler meritking meritking giriş meritking güncel giriş alobet alobet giriş nakitbahis Betpark milanbahis nakitbahis online casino online casino perabet perabet giriş perabet perabet giriş bahsegel jojobet perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz