Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.04.2025 (Kids Special)
Share:

By Village Missionary Movement

Sunday, 20-Apr-2025

ಧೈನಂದಿನ ಧ್ಯಾನ(Kannada) – 20.04.2025 (Kids Special)

 

"ಸತ್ತವನಾದೆನು, ಮತ್ತು ಇಗೋ ಯುಗಯುಗಾಂತರಗಳಲ್ಲಿಯೂ ಬದುಕುವವನಾಗಿದ್ದೇನೆ;…" - ಪ್ರಕಟಣೆ. 1:18

 

ಯೇಸು ಪುನರುತ್ಥಾನರಾದರು 

  

ಭಾನುವಾರ ಮುಂಜಾನೆಯ ವೇಳೆ. ಎಲ್ಲೆಡೆ ಕತ್ತಲೆ! ಆ ಸಮಯದಲ್ಲಿ, ಮಗ್ದಲದ ಮರಿಯಳು ಎಂಬ ಅಕ್ಕ ಮತ್ತು ಇತರ ಕೆಲವು ಮಹಿಳೆಯರು ಎಲ್ಲೋ ಆತುರದಿಂದ ಹೋಗುತ್ತಿದ್ದರು. ಅವರ ಮುಖಗಳು ದುಃಖದಿಂದ ಕೂಡಿದ್ದವು, ಅತ್ತು ಅತ್ತು ಅವರ ಕಣ್ಣುಗಳು ಊದಿಕೊಂಡಿದ್ದವು. ಮರಿಯಳ ಕೈಯಲ್ಲಿದ್ದ ಸುಗಂಧ ದ್ರವ್ಯವು ಪರಿಮಳವನ್ನು ಹೊರಸೂಸುತ್ತಿತ್ತು. ಅವರು ವೇಗವಾಗಿ ಸಮಾಧಿಯೊಳಗೆ ಪ್ರವೇಶಿಸಿದರು. ಈ ಕತ್ತಲೆಯ ಸಮಯದಲ್ಲಿ ಭಯವಿಲ್ಲದೆ ಸಮಾಧಿಗೆ ಏಕೆ ಹೋಗುತ್ತಿದ್ದಾರೆ ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ? ಅವರು ಎರಡು ದಿನಗಳ ಹಿಂದೆ ಶಿಲುಬೆಯಲ್ಲಿ ಮರಣ ಹೊಂದಿದ ಯೇಸುಕ್ರಿಸ್ತನ ಸಮಾಧಿಗೆ ಹೋಗಿ ಸುಗಂಧದ್ರವ್ಯವನ್ನು ಹಚ್ಚಲು ಹೋದರು.

  

ಅವರು ಯೇಸುವಿನ ಸಮಾಧಿಯ ಬಳಿಗೆ ಬಂದಾಗ ದಿಗ್ಭ್ರಮೆಗೊಂಡು ನಿಂತರು. ಏನು ನಡೆಯಿತು ಗೊತ್ತಾ? ಭೂಮಿಯು ಬಹು ನಡುಗುವಂತೆ ಒಬ್ಬ ದೇವದೂತನು ಆಕಾಶದಿಂದ ಇಳಿದು ಬಂದರು. ಸಮಾಧಿಯನ್ನು ಮುಚ್ಚಿದ್ದ ಕಲ್ಲನ್ನು ಉರುಳಿಸಿ ಅದರ ಮೇಲೆ ಕುಳಿತುಕೊಂಡರು. ಅವರನ್ನು ಕಂಡು ಭಯದಲ್ಲಿ ನಡುಗುತ್ತಿದ್ದ ಅಕ್ಕನವರನ್ನೆಲ್ಲಾ ನೋಡಿದ ಆ ದೇವದೂತನು "ಹೆದರಬೇಡಿರಿ ಶಿಲುಬೆಗೆ ಹಾಕಲ್ಪಟ್ಟಿದ್ದ ಯೇಸುವನ್ನು ಹುಡುಕುತ್ತೀರೆಂದು ಬಲ್ಲೆನು. ಅವರು ಸಮಾಧಿಯಲ್ಲಿ ಇಲ್ಲ. ಜೀವಂತವಾಗಿ ಎದ್ದಿದ್ದಾರೆ; ಬನ್ನಿ, ಆತನು ಮಲಗಿದ್ದ ಸ್ಥಳವನ್ನು ಬೇಕಾದರೆ ನೋಡಿರಿ; ಎಂದು ಹೇಳಿದರು. ಅವರು ಸಮಾಧಿಯೊಳಗೆ ನೋಡಿದಾಗ ಯೇಸು ಅಲ್ಲಿ ಇಲ್ಲ.

 

ಅವರು ಒಂದೆಡೆ ಭಯಭೀತರಾಗಿದ್ದರೂ, ಯೇಸು ಸತ್ತವರೊಳಗಿಂದ ಎದ್ದಿದ್ದಾನೆಂದು ಬಹಳ ಸಂತೋಷಪಟ್ಟರು. ಅವರು ತಕ್ಷಣವೇ ಶಿಷ್ಯರಿಗೆ ಈ Good News ಅನ್ನು ಹೇಳೋಣ ಎಂದು ವೇಗವಾಗಿ ಓಡಿದರು. ಅವರು ಹೋಗುತ್ತಿರುವಾಗ ಯೇಸು ಅವರ ಎದುರಿಗೆ ಬಂದು ನಿಮಗೆ "ಶುಭವಾಗಲಿ" ಅಂದರು. ಅವರು, "ಅಯ್ಯೋ, ಅದು ದೆವ್ವವಾಗಿರಬಹುದೋ!" ಎಂದು ಭಯಭೀತರಾಗಿ ನಡುಗುತ್ತಾ ಆತನ ಬಳಿಗೆ ಬಂದು, ಆತನ ಪಾದಗಳನ್ನು ಹಿಡಿದು ಯೇಸುವಿಗೆ ನಮಸ್ಕರಿಸಿದರು. ಹೃದಯಗಳು ಸಂತೋಷದಿಂದ ತುಂಬಿ ತುಳುಕುತ್ತಿರಲು, ಕಣ್ಣುಗಳಲ್ಲಿ ಆನಂದದ ಕಣ್ಣೀರು ತುಂಬಿರಲು, ಅವರು ದುಃಖದಿಂದ ಅಳುತ್ತಿದ್ದ ಶಿಷ್ಯರ ಬಳಿಗೆ ಓಡಿಹೋಗಿ, ನಿಟ್ಟುಸಿರು ಬಿಡುತ್ತಾ, "ಯೇಸು ಸತ್ತವರೊಳಗಿಂದ ಎದ್ದಿದ್ದಾರೆ" ಎಂದು ಹೇಳಿದರು. ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ!

  

ಪ್ರೀತಿಯ ತಮ್ಮ ತಂಗಿ! ಇವತ್ತು ಯಾವ ದಿನ ಅಂತ ನಿಮಗೆ ಗೊತ್ತಾ? ಈಸ್ಟರ್! ಹಾಗಂದರೆ, ಸತ್ತುಹೋದ ಯೇಸಪ್ಪ ಜೀವಂತವಾಗಿ ಎದ್ದ ದಿನ. ಹೌದು, ಜಗತ್ತಿನ ಎಲ್ಲಾ ಸಮಾಧಿಗಳು ಮುಚ್ಚಲ್ಪಟ್ಟಿವೆ. ಆದರೆ ಒಂದೇ ಒಂದು ಸಮಾಧಿ ಮಾತ್ರವೇ ತೆರೆಯಲ್ಪಟ್ಟಿದೆ. ಅದು ಯೇಸು ಕ್ರಿಸ್ತನ ಸಮಾಧಿ ಮಾತ್ರವೇ. ಹೌದು, ಯೇಸು ಇಂದಿಗೂ ಜೀವಂತವಾಗಿದ್ದಾರೆ. ಅವರು ಜೀವಂತವಾಗಿರುವುದು ಮಾತ್ರವಲ್ಲ, ನಾವು ಒಟ್ಟುಗೂಡಿದ ಈ ಸ್ಥಳದಲ್ಲಿ ನಮ್ಮ ನಡುವೆಯೂ ಇದ್ದಾರೆ. ಎಂತಹ ಮಹಾ ಸಂತೋಷ! ಹೌದು, ನಾವು ಆರಾಧಿಸುವ ದೇವರು ಪುನರುತ್ಥಾನನಾದ ದೇವರು. ಹಲ್ಲೇಲೂಯಾ!

- Mrs. ಎಬನ್ ಸಂತೋಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet holiganbet grandpashabet grandpashabet