Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.04.2025
Share:

By Village Missionary Movement

Saturday, 26-Apr-2025

ಧೈನಂದಿನ ಧ್ಯಾನ(Kannada) – 26.04.2025

 

ದಯೆ

 

"ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ" - ಫಿಲಿಪ್ಪಿ 2:4

 

ವಿಲಿಯಂ ಪ್ಯಾಸ್ಟ್ರೋ ಎಂಬ ಯುವಕ ಆಸ್ಟ್ರೇಲಿಯಾದಲ್ಲಿ ಓಟಗಾರ. ಕ್ರೀಡಾ ಕ್ಷೇತ್ರದಲ್ಲಿ ಹೇಗಾದರೂ ಸಾಧಿಸಬೇಕೆಂಬ ಛಲ ಅವರಿಗಿತ್ತು. ಆದರೆ ಅವರ ಕುಟುಂಬದ ಪರಿಸ್ಥಿತಿಯಿಂದಾಗಿ ತರಬೇತಿ ಶೂಗಳನ್ನು ಖರೀದಿಸಲು ಸಹ ಅವರಿಗೆ ಸಾಧ್ಯವಾಗಲಿಲ್ಲ. ಅನೇಕ ಓಟದ ತರಬೇತುದಾರರನ್ನು ಭೇಟಿಯಾಗಿ ಸಹಾಯ ಕೇಳಿದರೂ, ಯಾರೂ ಸಹಾಯ ಮಾಡಲು ಮುಂದೆ ಬರಲಿಲ್ಲ, ಯಾವ ರೀತಿಯೂ ದಯೆ ತೋರಿಸಲಿಲ್ಲ. ಆದಾಗ್ಯೂ, ಅವರು ತಮ್ಮ ಪ್ರಯತ್ನಗಳನ್ನು ಬಿಡಲಿಲ್ಲ ಮತ್ತು ತರಬೇತುದಾರರನ್ನು ಭೇಟಿ ಮಾಡಿ ಸಹಾಯ ಕೇಳುವುದನ್ನು ಮುಂದುವರೆಸಿದರು. ಕೊನೆಗೆ ಒಬ್ಬ ತರಬೇತುದಾರ ಅವರಿಗೆ ಸಹಾಯ ಮಾಡಲು ಮುಂದಾದರು. ವಿಲಿಯಂ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಚೆನ್ನಾಗಿ ಓಡಿ, ಪ್ರಥಮ ಸ್ಥಾನ ಗಳಿಸಿದರು. ತನಗೆ ದೊರೆತ ಬಹುಮಾನವನ್ನು ನೀಡುವ ಮೂಲಕ ತರಬೇತುದಾರರ ದಯೆ ಮತ್ತು ಸಹಾಯಕ್ಕಾಗಿ ಧನ್ಯವಾದ ಅರ್ಪಿಸಿದರು.

       

ಕರ್ತನಾದ ಯೇಸು ಕ್ರಿಸ್ತನು ಭೂಮಿಯ ಮೇಲಿನ ತನ್ನ ದಿನಗಳಲ್ಲಿ ಅನೇಕರಿಗೆ ದಯೆ ತೋರಿಸಿದರು. ಆತನು ಅನೇಕರ ಕಾಯಿಲೆಗಳನ್ನು ಗುಣಪಡಿಸಿದರು. ಕುಂಟರನ್ನು ನಡೆಯುವಂತೆ ಮಾಡಿದರು. ಕುರುಡರಿಗೆ ದೃಷ್ಟಿ ಬರುವಂತೆ ಮಾಡಿದರು. ಗುಣಪಡಿಸಲಾಗದ ರೋಗಗಳನ್ನು ಸಹ ಗುಣಪಡಿಸಿದರು, ಅನೇಕ ಅದ್ಭುತಗಳು ಮತ್ತು ಸೂಚಕಕಾರ್ಯಗಳನ್ನು ಮಾಡಿದರು. ಆತನನ್ನು ಶಿಲುಬೆಗೇರಿಸುವುದಕ್ಕೆ ಮುಂಚಿನ ದಿನಗಳಲ್ಲಿ, ಶಿಷ್ಯರಲ್ಲಿ ಒಬ್ಬನು ಮಹಾಯಾಜಕನ ಸೇವಕನ ಕಿವಿಯನ್ನು ಕತ್ತರಿಸಿದನು. ಆಗ ಯೇಸು, ಇಷ್ಟಕ್ಕೆ ನಿಲ್ಲಿಸಿ ಎಂದು ಹೇಳಿ ಅವನ ಕಿವಿಯನ್ನು ಮುಟ್ಟಿ ಅವನನ್ನು ಗುಣಪಡಿಸಿದರು. ನಮ್ಮ ಹೃದಯಗಳು ಯೇಸು ಕ್ರಿಸ್ತನಂತೆ ಕರುಣೆಯಿಂದ ತುಂಬಿರಬೇಕು. ಆ ಮೂಲದಿಂದಲೇ ಪ್ರೀತಿ, ಕರುಣೆ, ದಯೆ ಮತ್ತು ಕಾಳಜಿ ಎಲ್ಲವೂ ಬುಗ್ಗೆಯಂತೆ ಹರಿಯುತ್ತವೆ.

         

ಇದನ್ನು ಓದುತ್ತಿರುವ ಪ್ರಿಯರೇ! ಇತರರಿಗೆ ಒಳ್ಳೆಯದನ್ನು ಮಾಡುವುದು ದೇವರು ನಮ್ಮಿಂದ ನಿರೀಕ್ಷಿಸುವ ಫಲ. ಯೇಸು ಭೂಮಿಯ ಮೇಲೆ ಜೀವಿಸುತ್ತಿದ್ದ ದಿನಗಳಲ್ಲಿ ಉಪಕಾರಗಳನ್ನು ಮಾಡುತ್ತಾ ಸಂಚರಿಸುತ್ತಿದ್ದರು. "ನೀವು ಯಾವ ಅಳತೆಯಿಂದ ಅಳೆಯುತ್ತೀರೋ, ಅದೇ ಅಳತೆಯಿಂದ ನಿಮಗೂ ಅಳೆಯಲ್ಪಡುವುದು" ಎಂದು ವಚನ ಹೇಳುತ್ತದೆ. ಹಾಗಾಗಿ ನಾವು ಇತರರಿಗೆ ಹೆಚ್ಚು ದಯೆ ತೋರಿಸಿದಷ್ಟೂ, ಯೇಸು ನಮಗೆ ಹೆಚ್ಚು ದಯೆ ತೋರಿಸುತ್ತಾರೆ. ನಾವು ಪಡೆದಿರುವ ರಕ್ಷಣೆ ಆತನ ಕೃಪೆಯಿಂದಾಗಿದೆ. ಆತನ ದಯೆಯನ್ನು ಪಡೆದ ನಂತರ, ನಾವು ಇತರರಿಗೆ ದಯೆ ತೋರಿಸಲು ಮರೆಯಬಾರದು. ಆಗ ನಮಗೆ ದೇವರಿಂದ ಹೇರಳವಾದ ಕೃಪೆ ದೊರೆಯುತ್ತದೆ.

- Mrs. ರೂಬಿ ಅರುಣ್

 

ಪ್ರಾರ್ಥನಾ ಅಂಶ:

ಪ್ರತಿ ತಾಲೂಕಿನಲ್ಲಿ ಮಕ್ಕಳ ಶಿಬಿರಗಳು ಮತ್ತು ಯುವ ಶಿಬಿರಗಳು ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet matbet giriş holiganbet holiganbet güncel holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet grandpashabet holiganbet grandpashabet grandpashabet grandpashabet perabet perabet giriş padişahbet padişahbet giriş grandpashabet grandpashabet grandpashabet casinolevant grandpashabet meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş