By Village Missionary Movement
Monday, 28-Apr-2025ಧೈನಂದಿನ ಧ್ಯಾನ(Kannada) – 28.04.2025
ಪ್ರಾರ್ಥನೆಯನ್ನು ಸರಿಮಾಡಿರಿ
"...ನೀವು ಪ್ರಾರ್ಥನೆ ಮಾಡುವಾಗ ಅನ್ಯರು ಮಾಡುವಂತೆ ವ್ಯರ್ಥವಾದದ್ದನ್ನು ಪದೇಪದೇ ಹೇಳ ಬೇಡಿರಿ..." - ಮತ್ತಾಯ 6:7
ಒಬ್ಬ ವ್ಯಕ್ತಿ ತನ್ನ ಹೆಂಡತಿ ಮತ್ತು ಕಣ್ಣುಕಾಣದ ಹೆತ್ತವರೊಂದಿಗೆ ವಾಸಿಸುತ್ತಿದ್ದರು. ಅವರಿಗೆ ಮಕ್ಕಳಿಲ್ಲ. ವಾಸಿಸಲು ಮನೆ ಇಲ್ಲ. ಒಂದು ದಿನ, ಅವರು ಕಟ್ಟಿಗೆ ಕಡಿಯಲು ಕಾಡಿಗೆ ಹೋದಾಗ, ಒಬ್ಬ ದೇವತೆ ಅವರ ಮುಂದೆ ಕಾಣಿಸಿಕೊಂಡು, ನಿನಗೆ ಯಾವ ವರ ಬೇಕು ಕೇಳು. ಆದರೆ ಒಂದೇ ಒಂದು ವರ ಮಾತ್ರ ಎಂದಿತು. ಮಗು, ಮನೆ, ಹೆತ್ತವರಿಗೆ ಕಣ್ಣು ಏನು ಕೇಳಬೇಕೆಂದು ಯೋಚಿಸಿದ ನಂತರ, ನನ್ನ ಹೆತ್ತವರು ನಮ್ಮ ಮನೆಯ ಮಹಡಿಯ ಮೇಲೆ ನಿಂತು ನಮ್ಮ ಮಕ್ಕಳು ಅಂಗಳದಲ್ಲಿ ಆಟವಾಡುವುದನ್ನು ನೋಡಬೇಕೆಂದು ಕೇಳಿದನು. ಮೂರೂ ಕಾರ್ಯಗಳು ಒಂದೇ ವರದಲ್ಲಿ ಈಡೇರಿದವು.
ಇದು ಒಂದು ತಮಾಷೆಯ ಕಥೆಯೇ. ಅದೇ ರೀತಿ ನಾವು ಸಹ ಪ್ರಾರ್ಥನೆಯಲ್ಲಿ ವ್ಯರ್ಥವಾದ ಮಾತುಗಳನ್ನು ಬಳಸದೆ ಬುದ್ಧಿವಂತಿಕೆಯಿಂದ ಪ್ರಾರ್ಥಿಸಬೇಕೆಂದು ಹೇಳುತ್ತಿದ್ದಾರೆ. ಸೊಲೊಮೋನನು ಜನರನ್ನು ಮುನ್ನಡೆಸಲು ದೇವರಲ್ಲಿ ಜ್ಞಾನವನ್ನು ಕೇಳುತ್ತಾರೆ. ನಮ್ಮ ದೇವರು ಪ್ರಾರ್ಥನೆಯನ್ನು ಕೇಳುವಾತನು. ನಾವು ಕೇಳುವುದಕ್ಕಿಂತಲೂ ಹೆಚ್ಚಾಗಿ ಮಾಡುವಾತನು. ಆದ್ದರಿಂದ, ಕೇಳದ ಐಶ್ವರ್ಯವನ್ನು ಮತ್ತು ಜ್ಞಾನವನ್ನೂ ಕೊಡುತ್ತಾರೆ. ಅದೇ ರೀತಿ, ಎಲೀಯನು ಆಸಕ್ತಿಯಿಂದ ಪ್ರಾರ್ಥಿಸುತ್ತಾರೆ. ಮೂರು ವರ್ಷ ಆರು ತಿಂಗಳು ಭೂಮಿಯ ಮೇಲೆ ಮಳೆ ಬೀಳಲಿಲ್ಲ. ನಾವು ನಮ್ಮ ವಿಷಯಗಳನ್ನು ದೇವರಿಗೆ ತಿಳಿಸಬೇಕು. ಅದಕ್ಕಾಗಿ ಹೆಚ್ಚು ಪರಿಭಾಷೆಯನ್ನು ಬಳಸುವ ಅಗತ್ಯವಿಲ್ಲ. ಅವರು ನಮ್ಮ ಪರಿಸ್ಥಿತಿ ಮತ್ತು ನೆನಪುಗಳನ್ನು ತಿಳಿದಿದ್ದಾರೆ. ನಾವು ಆಸಕ್ತಿಯಿಂದ ಪ್ರಾರ್ಥಿಸಿದಾಗ, ದೇವರು ಪ್ರಾರ್ಥನೆಯನ್ನು ಕೇಳುವುದು ಮಾತ್ರವಲ್ಲದೆ ನಾವು ಪ್ರಾರ್ಥಿಸುವುದಕ್ಕಿಂತಲೂ ಊಹಿಸುವುದಕ್ಕಿಂತಲೂ ಹೆಚ್ಚಾದ ಕಾರ್ಯಗಳನ್ನು ಮಾಡಿ ಉತ್ತರಿಸುವವರು ಎಂದು ನಾವು ನೋಡುತ್ತೇವೆ. ಎಲೀಯನು ಪರಲೋಕದಿಂದ ಬೆಂಕಿಯನ್ನು ಇಳಿಸಲು ಮೂರು ಗಂಟೆಗಳ ಕಾಲ ಪ್ರಾರ್ಥಿಸಲಿಲ್ಲ. ಕೆಲವು ನಿಮಿಷಗಳು ಮಾತ್ರವೇ ಪ್ರಾರ್ಥಿಸಿದರು. ಬೆಂಕಿ ಬಂದು ಯಜ್ಞವೇದಿಕೆಯ ಮೇಲಿದ್ದದ್ದನ್ನು ಮತ್ತು ಸುತ್ತಮುತ್ತಲಿನ ನೀರನ್ನು ಹೀರಿಬಿಟ್ಟಿತು. ಅಂದರೆ, ತಿಂದುಬಿಟ್ಟಿತು.
ಇಂದು ನಮ್ಮ ಪ್ರಾರ್ಥನೆ ಹೇಗಿದೆ? ಒಂದು ಕ್ಷಣ ಯೋಚಿಸೋಣ. ನಾವು ದೀರ್ಘಕಾಲ ಪ್ರಾರ್ಥಿಸಬೇಕೆಂದು ವ್ಯರ್ಥವಾದ ಪದಗಳನ್ನು ಬಳಸುತ್ತಿದ್ದೇವೆಯೇ? ನಾವು ಸಂಕ್ಷಿಪ್ತವಾಗಿ, ಜ್ಞಾನವಾಗಿ ಮತ್ತು ಆಸಕ್ತಿಯಿಂದ ಪ್ರಾರ್ಥಿಸೋಣ. ಹನ್ನಳು ದೇವರಿಗಾಗಿ ಮಗುವನ್ನು ಬೇಡಿಕೊಂಡು ಸಮುವೇಲನನ್ನು ಹೆತ್ತಳು. ಅದೇ ರೀತಿ, ನಮ್ಮ ಪ್ರಾರ್ಥನೆಗಳು ದೇವರ ಒಳಿತಿಗಾಗಿ ಮತ್ತು ದೇವರ ರಾಜ್ಯದ ನಿರ್ಮಾಣಕ್ಕಾಗಿ ಇರಲಿ. ಪ್ರಾರ್ಥನಾ ಕೂಟವನ್ನು ನಡೆಸಲು ಮನೆಯನ್ನು ಕೊಡಿ ಎಂದು ಕೇಳಿ ನಾವು ಪಡೆದುಕೊಂಡ ಮನೆಯಲ್ಲಿ ತಿಂಗಳಿಗೊಮ್ಮೆಯಾದರೂ ನಮ್ಮ ನೆರೆಹೊರೆಯವರೊಂದಿಗೆ ಒಟ್ಟುಗೂಡಿ ಪ್ರಾರ್ಥಿಸೋಣ. ಸುವಾರ್ತೆ ಸಾರಲು ದ್ವಿಚಕ್ರ ವಾಹನಬೇಕೆಂದು ಕೇಳಿ, ಪಡೆದುಕೊಂಡ ವಾಹನದಲ್ಲಿ ವಾರಕ್ಕೊಮ್ಮೆಯಾದರೂ ಹತ್ತಿರದ ಹಳ್ಳಿಗಳಿಗೆ ಹೋಗಿ ಸುವಾರ್ತೆ ಸಾರೋಣ. ದೇವರ ಆಶೀರ್ವಾದ ಪಡೆಯೋಣ.
- Mrs. ಐಡಾ ಕಿಂಗ್ ಡೇವಿಡ್
ಪ್ರಾರ್ಥನಾ ಅಂಶ:
ನಮ್ಮ ಸೇವಾ ಕ್ಷೇತ್ರಗಳಲ್ಲಿ ಅಗತ್ಯವಿರುವ ಒಂದು ಲಕ್ಷ ಜನರಿಗೆ ಸತ್ಯವೇದಗಳನ್ನು ಕೊಡಲ್ಪಡಲು ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482