Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.05.2025
Share:

By Village Missionary Movement

Friday, 02-May-2025

ಧೈನಂದಿನ ಧ್ಯಾನ(Kannada) – 02.05.2025

 

ಬಾಯಿ ತೆರೆಯಲ್ಪಟ್ಟ ಕತ್ತೆ

 

"ಗುಣಗುಟ್ಟದೆ ಯೂ ವಿವಾದವಿಲ್ಲದೆಯೂ ಎಲ್ಲವನ್ನು ಮಾಡಿರಿ" - ಫಿಲಿಪ್ಪಿ 2:14

 

ನಾವು ಸಾಮಾನ್ಯವಾಗಿ ಇತರರನ್ನು "ಕತ್ತೆಗಳು" ಎಂದು ಕರೆಯುತ್ತೇವೆ. ಆದರೆ ಕತ್ತೆಗಳಿಂದಲೂ ನಾವು ಕಲಿಯಬಹುದಾದ ವಿಷಯಗಳಿವೆ. ಇಂದು ನಾವು ಪ್ರವಾದಿಯಾದ ಬಿಳಾಮನ ಕತ್ತೆಯನ್ನು ನೋಡೋಣ. ಅರಸನಾದ ಬಾಲಾಕನು ಇಸ್ರಾಯೇಲ್ ಜನರನ್ನು ಶಪಿಸುವಂತೆ ಪ್ರವಾದಿಯಾದ ಬಿಳಾಮನನ್ನು ಆಹ್ವಾನಿಸುತ್ತಾರೆ. ಪ್ರವಾದಿ ದೇವರನ್ನು ವಿಚಾರಿಸುತ್ತಾರೆ. ದೇವರು ಹೋಗಬೇಡ ಎಂದು ಹೇಳುತ್ತಾರೆ. ಅವರು ಅರಸನು ಕಳುಹಿಸಿದ ಜನರ ಬಳಿ ನಾನು ಬರುವುದಿಲ್ಲ ಎಂದು ಹೇಳುತ್ತಾರೆ. ಅರಸನು ಮತ್ತೆ ಘನವಂತರನ್ನು ಕಳುಹಿಸುತ್ತಾರೆ. ಪ್ರವಾದಿಯಾದ ಬಿಳಾಮನು ದೇವರು ಒಪ್ಪಲಿಲ್ಲ ಎಂದು ಹೇಳಿ ಕಳುಹಿಸುವ ಬದಲು ಪುನಃ ದೇವರ ಬಳಿ ವಿಚಾರಿಸುತ್ತಾರೆ. ದೇವರು ಕೋಪದಿಂದ ಹೋಗು ಅನ್ನುತ್ತಾರೆ. 

 

ಪ್ರವಾದಿಯು ತನ್ನ ಕತ್ತೆಯ ಮೇಲೆ ಹತ್ತಿ ಹೋಗುತ್ತಾರೆ. ದಾರಿಯಲ್ಲಿ ಒಬ್ಬ ದೇವದೂತನು ಬಿಚ್ಚಿದ ಕತ್ತಿಯನ್ನು ಹಿಡಿದುಕೊಂಡು ನಿಂತಿರುವುದನ್ನು ಕತ್ತೆ ಕಂಡಿತು. ತಕ್ಷಣವೇ ಕತ್ತೆ ದಾರಿತಪ್ಪಿ ಹೊಲಕ್ಕೆ ಹೋಯಿತು. ಪ್ರವಾದಿಯು ಕತ್ತೆಯನ್ನು ಹೊಡೆದರು. ನಂತರ, ಎರಡೂ ಬದಿಗಳಲ್ಲಿ ಗೋಡೆಯಿಂದ ಸುತ್ತುವರಿದ ದ್ರಾಕ್ಷಿತೋಟದ ಮೂಲಕ ಹಾದು ಹೋಗುವಾಗ, ದೇವದೂತನು ತನ್ನ ಬಿಚ್ಚಿದ ಕತ್ತಿಯನ್ನು ಹಿಡಿದುಕೊಂಡು ನಿಂತರು. ಈಗ ಕತ್ತೆ ನೋಡಿ ಪ್ರವಾದಿಯ ಕಾಲನ್ನು ಸ್ವಲ್ಪ ಗೋಡೆಗೆ ತಾಕಿಸಿತು. ಪ್ರವಾದಿಯು ಬೆತ್ತದಿಂದ ಕತ್ತೆಯನ್ನು ಹೊಡೆದರು. ಕರ್ತನು ಕತ್ತೆಯ ಬಾಯಿ ತೆರೆದರು. ಕತ್ತೆಯು ಗೊಣಗದೆ ನಿಧಾನವಾಗಿ ನಾನು ನಿಮ್ಮ ಬಳಿ ಹೀಗೆ ಎಂದಾದರೂ ನಡೆದುಕೊಂಡದ್ದುಂಟಾ? ಎಂದಿತು. ಪ್ರವಾದಿಯ ಜೀವವನ್ನು ಉಳಿಸಲು ಕತ್ತೆ ಒಳ್ಳೆಯದು ಮಾಡಿತು ಮತ್ತು ಹಾನಿಯನ್ನು ಅನುಭವಿಸಿತು. ದೇವರು ಕತ್ತೆಯ ಬಾಯಿ ತೆರೆದು ಮಾತನಾಡಲು ಅವಕಾಶ ನೀಡಿದಾಗ, ಅದು ಗೊಣಗುತ್ತಾ, ದೂರು ಹೇಳುತ್ತಾ, ತನ್ನ ಯಜಮಾನನನ್ನು ದೂಷಿಸಿರಬಹುದು. ಆದರೆ ಇದ್ಯಾವುದನ್ನೂ ಮಾಡದೆ ತಾಳ್ಮೆಯಿಂದ ನಾನು ಎಂದಾದರೂ ಹೀಗೆ ಮಾಡಿದ್ದುಂಟಾ? ಎಂದು ಕೇಳಿತು. ತಕ್ಷಣ ಕರ್ತನೇ ಮಾತನಾಡುತ್ತಾರೆ. ಅಲ್ಲಿ, ಕರ್ತನು ಮೊದಲು ಕತ್ತೆಗಾಗಿ ನ್ಯಾಯ ಕೇಳುತ್ತಾರೆ.

 

ಪ್ರಿಯರೇ! ನಿಮ್ಮ ಮನೆ ಮತ್ತು ಕೆಲಸದ ಸ್ಥಳದಲ್ಲಿ ಪ್ರಾಮಾಣಿಕರಾಗಿರುವುದರಿಂದ ಕಷ್ಟವನ್ನು ಅನುಭವಿಸುತ್ತಿದ್ದೇನೆ ಎಂದು ಹೇಳುತ್ತೀರಾ? ದೇವರು ಒಂದು ದಿನ ನಿಮ್ಮ ಸತ್ಯವನ್ನು ಬಹಿರಂಗಪಡಿಸುತ್ತಾರೆ. "ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು (ಜ್ಞಾನೋಕ್ತಿ 28:20) ಎಂಬ ವಚನದ ಪ್ರಕಾರ ನೀವು ಪರಿಪೂರ್ಣ ಆಶೀರ್ವಾದಗಳನ್ನು ಪಡೆಯುವಿರಿ. ನೀವು ನನ್ನ ಪರವಾದ ನ್ಯಾಯವನ್ನು ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ ಎಂದು ಪ್ರಲಾಪಿಸುತ್ತಿದ್ದೀರಾ? ನೀವು ನಿಮ್ಮ ಹೃದಯದಲ್ಲಿ ಗೊಣಗುತ್ತಾ ದೂರುತ್ತಿದ್ದೀರಾ? ಇಂದೇ ಗೊಣಗುವುದು ಮತ್ತು ದೂರುವುದನ್ನು ನಿಲ್ಲಿಸಿ. ನಿಮ್ಮನ್ನು ನೋಡುವ ದೇವರು ನಿಮಗೆ ನಡೆಯುವ ಹಾನಿಯನ್ನು ಸಹ ನೋಡುತ್ತಾರೆ. ಅವರು ನಿಮಗಾಗಿ ವ್ಯಾಜ್ಯವಾಡುವರು.ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ (1 ಪೇತ್ರ 5:7) ಎಂಬ ವಾಕ್ಯದ ಪ್ರಕಾರ ಅವರ ಮೇಲೆ ಹಾಕಿಬಿಟ್ಟು ಮೌನವಾಗಿರಿ. ನೀವು ಮಾತನಾಡಬೇಕಾದ ವಿಷಯಗಳನ್ನು ದೇವರು ನಿಮಗಾಗಿ ಮಾತನಾಡುತ್ತಾರೆ. ತಾಳ್ಮೆಯಿಂದಿರಿ, ಕರ್ತನು ನಿಮಗಾಗಿ ವ್ಯಾಜ್ಯವಾಡುತ್ತಾರೆ.

- Bro. K.ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಇಂದು ನಡೆಯುತ್ತಿರುವ ಯುವ ಶಿಬಿರಕ್ಕೆ ಅಗತ್ಯವಾಗಿರುವ 35 ಲಕ್ಷ ರೂಪಾಯಿಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş holiganbet giriş çarkbet çarkbet giriş