Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.05.2025
Share:

By Village Missionary Movement

Wednesday, 07-May-2025

ಧೈನಂದಿನ ಧ್ಯಾನ(Kannada) – 07.05.2025

 

ಭಾರವನ್ನು ಹಾಕಿಬಿಡು

 

"ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ;..." - ಮತ್ತಾಯ 11:28

 

ಒಂದು ಶಿಕ್ಷಕರು ವಿದ್ಯಾರ್ಥಿಗಳ ಬಳಿ ಒಂದು ಪ್ರಶ್ನೆ ಕೇಳಿದರು. ಅವರು ತನ್ನ ಕೈಯಲ್ಲಿದ್ದ ಗಾಜಿನ ಲೋಟವನ್ನು ನೀರಿನಿಂದ ತುಂಬಿಸಿ, ಈ ಗಾಜಿನ ಲೋಟದ ತೂಕ ಎಷ್ಟಿರಬಹುದು ಎಂದು ಕೇಳಿದರು. ಅದಕ್ಕೆ ವಿದ್ಯಾರ್ಥಿಗಳು ಹಲವು ಉತ್ತರಗಳನ್ನು ನೀಡಿದರು. ಆದರೆ ಆ ಶಿಕ್ಷಕರು ಏನು ಹೇಳಿದರು ಗೊತ್ತಾ? ನಾನು ಆ ಲೋಟವನ್ನು ಎಷ್ಟು ಹೊತ್ತು ಇಟ್ಟುಕೊಂಡಿರುತ್ತೇನೋ ಅದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದರು. ನೀವು ಅದನ್ನು 5 ನಿಮಿಷಗಳ ಕಾಲ ಇಟ್ಟುಕೊಂಡರೆ ಅದು ತುಂಬಾ ಕಷ್ಟಕರವಾಗುವುದಿಲ್ಲ. ಅರ್ಧ ಗಂಟೆ ಹಾಗೆಯೇ ಬಿಟ್ಟರೆ ಕೈ ನೋಯುತ್ತದೆ. ನೀವು ಅದನ್ನು 1 ಗಂಟೆ ಹಾಗೆಯೇ ಬಿಟ್ಟರೆ, ನಿಮ್ಮ ಕೈ ಮರಗಟ್ಟುತ್ತದೆ ಮತ್ತು ನೋವಿನಿಂದ ಕೂಡುತ್ತದೆ. ಅದನ್ನು ಕೆಳಗೆ ಇಟ್ಟರೆ ಸಾಕು ಎಂದು ತೋರುತ್ತದೆ. ಅದೇ ರೀತಿ, ನಮ್ಮ ಮನಸ್ಸಿನಲ್ಲಿ ಚಿಂತೆಗಳು ಮತ್ತು ಭಾರಗಳು ಹೆಚ್ಚಾಗುವಾಗ, ಹೊರಲು ಸಾಧ್ಯವಾಗದೆ ಹೆಣಗಾಡುತ್ತೇವೆ. ಯಾರಿಗಾದರೂ ಹೇಳಿ ಸಾಂತ್ವನ ಪಡೆಯಲು ಓಡುತ್ತೇವೆ. ಜನರು ನಮ್ಮ ಕಷ್ಟಗಳನ್ನು ಕೇಳುತ್ತಾರೆ. ಕೆಲವು ಜನರು ಸಹಾಯ ಮಾಡಲು ಬಯಸುತ್ತಾರೆ ಆದರೆ ಅವರಿಗೆ ಸಾಧ್ಯವಾಗುವುದಿಲ್ಲ. ಕೆಲವರು ಅದನ್ನು ಕೇಳಿ ಸಂತೋಷಪಡುತ್ತಾರೆ ಮತ್ತು ನಮ್ಮ ಬೆನ್ನ ಹಿಂದೆ ಹೋಗಿ ಇತರರಿಗೆ ಹೇಳುತ್ತಾರೆ. 

 

ನಮಗೆ ಒಬ್ಬ ತಂದೆ ಇದ್ದಾರೆ. ಅವರು ನಮ್ಮ ಭಾರಗಳನ್ನು ಹೊರಲು ತನ್ನ ಬಳಿಗೆ ನಮ್ಮನ್ನು ಕರೆಯುತ್ತಿದ್ದಾರೆ. ಅವರು ಯಾರಿಗೂ ಹೇಳಿ ಆನಂದಿಸುವವರಲ್ಲ. ನಮ್ಮೊಂದಿಗೆ ಸೇರಿ ಕಣ್ಣೀರು ಸುರಿಸುವ ನಮ್ಮ ಒಳ್ಳೆಯ ಸ್ನೇಹಿತ. ಆತನ ಬಳಿ ನಮ್ಮ ಭಾರಗಳನ್ನು ಕೊಡುವಾಗ ಅವರು ಅದನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ನಮಗೆ ವಿಶ್ರಾಂತಿ ನೀಡುವ ಒಳ್ಳೆಯ ತಂದೆ. ನಮ್ಮ ಭಾರಗಳನ್ನು ಅವರ ಬಳಿ ಕೊಟ್ಟುಬಿಟ್ಟು ನಾವು ಆತನಿಗೆ ಕೃತಜ್ಞತೆ ಹೇಳಿ ಸ್ತುತಿಸುತ್ತಾ ಇರುವಾಗ, ಅದರ ಪರಿಹಾರವನ್ನು ಅವರೇ ನೋಡಿಕೊಳ್ಳುತ್ತಾರೆ.  

  

ಸತ್ಯವೇದದಲ್ಲಿ, ಮಕ್ಕಳಿಲ್ಲದ ಹನ್ನ ಎಂಬ ಮಹಿಳೆ ಇದ್ದಳು. ತನ್ನ ಈ ಕೊರತೆಯಿಂದ ಅವಳು ದುಃಖಿತಳಾಗಿ ಕಣ್ಣೀರು ಸುರಿಸಿದಳು. ಆಕೆಯ ಗಂಡ ಆಕೆಯನ್ನು ಸಮಾಧಾನಪಡಿಸಿದರೂ ಆಕೆಗೆ ಸಮಾಧಾನವಾಗಲಿಲ್ಲ. ಒಂದು ದಿನ ದೇವಾಲಯಕ್ಕೆ ಹೋದಾಗ ದುಃಖದಿಂದ ಅವಳ ಗಂಟಲು ಕಟ್ಟಿಕೊಂಡು ಹೇಳಲು ಮಾತುಬಾರದೇ ತನ್ನ ಹೃದಯದಲ್ಲಿನ ಭಾರವನ್ನೆಲ್ಲಾ ದೇವರ ಮುಂದೆ ಸುರಿದುಬಿಟ್ಟಳು. ಅದಾದ ನಂತರ ಅವಳು ಎಂದಿಗೂ ದುಃಖಿತಳಾಗಿ ಕಾಣಲಿಲ್ಲ. ಕರ್ತನು ಅವಳ ಪ್ರಾರ್ಥನೆಯನ್ನು ಕೇಳಿ ಅವಳಿಗೆ ಸಂತಾನ ಭಾಗ್ಯವನ್ನು ದಯಪಾಲಿಸಿದರು. 

 

ಆದುದರಿಂದ ಪ್ರಿಯರೇ, ನಾವು ಸಹ ನಮ್ಮ ಹೃದಯದಲ್ಲಿರುವ ಭಾರಗಳು, ಚಿಂತೆಗಳು ಮತ್ತು ಕಷ್ಟಗಳನ್ನು ನಮ್ಮ ತಂದೆಯಾದ ಯೇಸು ಕ್ರಿಸ್ತನ ಪಾದಗಳ ಮೇಲೆ ಇಟ್ಟು, ದುಃಖವಿಲ್ಲದೆ ದೇವರನ್ನು ಸ್ತುತಿಸಿದಾಗ ಒಳ್ಳೆಯ ಫಲಿತಾಂಶಗಳನ್ನು ಕಾಣುತ್ತೇವೆ. ಈ ನಿಮಿಷದಿಂದಲೇ ನಾವು ಅದನ್ನು ಮಾಡೋಣವಾ?

- Mrs. ಶೀಲಾ ಜಾನ್

 

ಪ್ರಾರ್ಥನಾ ಅಂಶ:

ನಮ್ಮಿಂದ VBS ಪುಸ್ತಕಗಳನ್ನು ತೆಗೆದುಕೊಂಡು ಹೋದವರು, ಅದನ್ನು ಹಳ್ಳಿಯ ಮಕ್ಕಳನ್ನು ಸರಿ ಮಾಡಲು ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet