By Village Missionary Movement
Friday, 23-May-2025ಧೈನಂದಿನ ಧ್ಯಾನ(Kannada) – 23.05.2025
ಯುದ್ಧವು ಯೆಹೋವನದು
"ಯೆಹೋವನೇ ನಿಮಗಾಗಿ ಯುದ್ಧಮಾಡುವನು; ನೀವಂತು ಸುಮ್ಮನೇ ಇರ್ರಿ ಎಂದು ಹೇಳಿದನು" - ವಿಮೋಚನಕಾಂಡ. 14:14
ಒಂದು ದಿನ ನಾನು ಕಾರಿನಲ್ಲಿ ಹೋಗುತ್ತಿದ್ದೆ. ಒಂದು ಕೆಲಸದ ನಿಮಿತ್ತವಾಗಿ ಕಾರನ್ನು ಪಕ್ಕಕ್ಕೆ ನಿಲ್ಲಿಸಿದೆ. ಇದ್ದಕ್ಕಿದ್ದಂತೆ, ಯಾರೋ ಕಾರಿನ ಕಿಟಕಿ ಬಡಿಯುವ ಸದ್ದು ಕೇಳಿಸಿತು. ಹಿಂತಿರುಗಿ ನೋಡಿದಾಗ, ಅಲ್ಲಿ ಭಯಂಕರವಾಗಿ, ಕೋಪಗೊಂಡ ವ್ಯಕ್ತಿಯೊಬ್ಬರು ನಿಂತಿದ್ದರು. ಯಾರಪ್ಪಾ ಈ ವ್ಯಕ್ತಿ , ಇಷ್ಟು ಎತ್ತರವಾಗಿ, ಪೊಲೀಸ್ ಸಮವಸ್ತ್ರ ಕೂಡ ಧರಿಸಿಲ್ಲ ಅಂತ ನಾನು ಯೋಚಿಸುತ್ತಿರುವಾಗಲೇ, ಅವರು ಕಾರಿನ ಬಾಗಿಲು ತೆರೆಯಲು ಪ್ರಯತ್ನಿಸಿದರು. ಏನೆಂದು ಕೇಳಲು ನಾನು ಬಾಗಿಲು ಸ್ವಲ್ಪ ತೆರೆದೆ. ನಂತರ ಅವರ ಬಾಯಿಂದ ಭಯಾನಕ, ಕೋಪದ ಶಬ್ದ ಬಂದಿತು. ಆದರೆ ಯಾವುದೇ ಮಾತು ಬರಲಿಲ್ಲ. ಒಂದೆರಡು ಸೆಕೆಂಡುಗಳಲ್ಲಿ, ಅವರು ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ಅರಿವಾಯಿತು. ಅವರು ಪದೇ ಪದೇ ಬಾಗಿಲು ತೆರೆಯಲು ಪ್ರಯತ್ನಿಸಿದರು ಹೇಗೋ ಕಾರಿನ ಕೀಯನ್ನು ಎತ್ತಿಕೊಂಡು ಬಿಟ್ಟರು.
ರಸ್ತೆಯಲ್ಲಿದ್ದವರೆಲ್ಲರೂ ನಿಂತು ನಮ್ಮಿಬ್ಬರನ್ನು ನೋಡುತ್ತಿದ್ದರು. ನಾನು ಕೀಯನ್ನು ಕೇಳಿದಾಗ ಅವರು ನನ್ನನ್ನು ಹೊಡೆಯಲು ಕೈ ಎತ್ತಿದರು. ಅವರು ಸೈತಾನನಿಂದ ಬಂಧಿಸಲ್ಪಟ್ಟಿದ್ದಾರೆಂದು ನನಗೆ ಸ್ಪಷ್ಟವಾಗಿ ಗ್ರಹಿಸಲು ಸಾಧ್ಯವಾಯಿತು. ನಮ್ಮಿಬ್ಬರಿಗೂ ಕಾಣದ ಒಂದು ಶಕ್ತಿ ಅವರನ್ನು ದೂರ ತಳ್ಳಿತು. ಅವರ ಕಣ್ಣುಗಳಲ್ಲಿ ಭಯವಿತ್ತು. ಅವರು ನನ್ನನ್ನು ಹೊಡೆಯಲು ಸಾಧ್ಯವಾಗದ ಕಾರಣ ಕೋಪಗೊಂಡು ಕೀಯನ್ನು ರಸ್ತೆಗೆ ಎಸೆದರು. ಇಷ್ಟೆಲ್ಲದರ ಹೊರತಾಗಿಯೂ, ನಾನು ಪವಿತ್ರಾತ್ಮನ ಸಮಾಧಾನವನ್ನು ಸಂಪೂರ್ಣವಾಗಿ ಅನುಭವಿಸಿದೆ. ಆಗ ಅವರ ಕೈಗಳಿಂದ ರಕ್ತ ತೊಟ್ಟಿಕ್ಕುವುದನ್ನು ನಾನು ನೋಡಿದೆ. ಆದರೆ ನನ್ನ ದೇಹದಲ್ಲಿ ಒಂದೇ ಒಂದು ಚಿಕ್ಕ ಗಾಯವೂ ಇಲ್ಲ. ಹೌದು, ದೇವರು ನಮಗಾಗಿ ಯುದ್ಧ ಮಾಡುತ್ತಾರೆ.
ಸತ್ಯವೇದದಲ್ಲಿ, ಅರಸನಾದ ಹಿಜ್ಕೀಯನ ಆಳ್ವಿಕೆಯ ಸಮಯದಲ್ಲಿ (2 ಅರಸುಗಳು 18:5), ಇವನು ಇಸ್ರಾಯೇಲ್ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದನು. ಯೆಹೂದ್ಯರಲ್ಲಿ ಇವನಿಗೆ ಸಮಾನನಾದ ಅರಸನು ಮುಂಚೆಯೂ ತರುವಾಯವೂ ಇರಲಿಲ್ಲ. ಅಶ್ಶೂರದ ಅರಸನಾದ ಸನ್ಹೇರೀಬನು ದೊಡ್ಡ ಸೈನ್ಯದೊಂದಿಗೆ ಅವನಿಗೆ ವಿರುದ್ಧವಾಗಿ ಬಂದನು. ಅವನು ಹಿಜ್ಕೀಯನನ್ನು ನಿಂದಿಸಿ ಕರ್ತನನ್ನು ದೂಷಿಸಿದನು. ಹಿಜ್ಕೀಯ ಮತ್ತು ಅವನ ಜನರು ಮೌನವಾಗಿದ್ದರು (2 ಅರಸುಗಳು 18:36). ಆ ರಾತ್ರಿ, ಕರ್ತನ ದೂತನು ಅಶ್ಶೂರ್ಯರ ಸೈನ್ಯದ ವಿರುದ್ಧ ಹೊರಟು 1,85,000 ಜನರನ್ನು ಸಂಹರಿಸಿದನು. ಸನ್ಹೇರೀಬನು ನಾಚಿಕೆಯಿಂದ ಹಿಂದೆ ಸರಿದನು. ತನ್ನ ಸ್ವಂತ ಮಗನಿಂದಲೇ ಸನ್ಹೇರೀಬನು ಕೊಲೆಯಾದನು.
ಹೌದು, ಪ್ರಿಯರೇ, ಯುದ್ಧವು ಯೆಹೋವನದೇ. "ನಾನು ಇಕ್ಕಟ್ಟಿನ ದಾರಿಯಲ್ಲಿ ನಡೆಯುವಾಗ ನನ್ನನ್ನು ಚೈತನ್ಯಗೊಳಿಸುವಿ; ನನ್ನ ಶತ್ರುಗಳ ಕೋಪಕ್ಕೆ ವಿರೋಧವಾಗಿ ನಿನ್ನ ಕೈ ಚಾಚುವಿ; ನಿನ್ನ ಬಲಗೈ ನನ್ನನ್ನು ರಕ್ಷಿಸುವದು" (ಕೀರ್ತನೆ 138:7) ಎಂಬ ವಾಕ್ಯದ ಪ್ರಕಾರ ಕರ್ತನು ನಮ್ಮನ್ನು ರಕ್ಷಿಸುತ್ತಿದ್ದಾರೆ. ಯೇಸು ನಮ್ಮನ್ನು ಪ್ರೀತಿಸುತ್ತಿದ್ದಾರೆ. ಆಮೆನ್.
- Dr. ಸ್ಟೀಫನ್ ಲೈಸಾಂಡರ್
ಪ್ರಾರ್ಥನಾ ಅಂಶ:
VBS ಗೆ ಹಾಜರಾಗುವ ಎಲ್ಲಾ ಮಕ್ಕಳ ಹೃದಯಗಳು ತೆರೆಯಲ್ಪಡುವಂತೆ ಮತ್ತು ಮಾನಸಾಂತರ ಹೊಂದುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482