By Village Missionary Movement
Saturday, 24-May-2025ಧೈನಂದಿನ ಧ್ಯಾನ(Kannada) – 24.05.2025
ಪ್ರಯಾಸಕ್ಕೆ ಪ್ರತಿಫಲ ಉಂಟು
"...ನೀನು ಯಾವಾತನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳ ಬಂದಿಯೋ ಆ ಇಸ್ರಾಯೇಲ್‍ದೇವರಾದ ಯೆಹೋವನು ನಿನಗೆ ಉತ್ತಮವಾದ ಪ್ರತಿಫಲವನ್ನು ಅನುಗ್ರಹಿಸಲಿ ಎಂದು ಉತ್ತರಕೊಟ್ಟನು" - ರೂತಳು 2:12
ಒಬ್ಬ ರಾಜನು ತನ್ನ ರಥದಲ್ಲಿ ಕಾಡಿನ ಮೂಲಕ ಪ್ರಯಾಣಿಸುತ್ತಿದ್ದನು. ಆ ದಾರಿಯಲ್ಲಿ ಕಾಡಿನಲ್ಲಿ ವಾಸಿಸುತ್ತಿದ್ದ ಎರಡು ಕುದುರೆಗಳು ಅಲ್ಲಿಗೆ ಬಂದವು. ಕೆಲವು ದಿನಗಳಲ್ಲಿ, ರಾಜನ ಸೇವಕನು ಕುದುರೆಗಳನ್ನು ಅರಮನೆಗೆ ಕರೆದೊಯ್ದು ತರಬೇತಿ ನೀಡಿದರು. ತರಬೇತಿ ಕಷ್ಟಕರವಾಗಿದ್ದದರಿಂದ ಒಂದು ಕುದುರೆ ಸಹಿಸಲು ಸಾಧ್ಯವಾಗದೆ ತಪ್ಪಿಸಿಕೊಂಡಿತು. ಕೆಲವು ದಿನಗಳ ಕಾಲ ಮಳೆ ಬಾರದೆ ಹುಲ್ಲು ಒಣಗಿ ಹೋಯಿತು. ಕುದುರೆಯ ದೇಹವು ತೆಳ್ಳಗಾಯಿತು. ಆದರೆ ಅರಮನೆಯಲ್ಲಿದ್ದ ಇನ್ನೊಂದು ಕುದುರೆ ತುಂಬಾ ಸಂತೋಷವಾಗಿ ಪುಷ್ಟಿಯಾಗಿತ್ತು. ಕಠಿಣ ತರಬೇತಿಗೆ ತನ್ನನ್ನು ಅರ್ಪಿಸಿಕೊಂಡದ್ದರಿಂದ ಸುಖವಾದ ಬಾಳನ್ನು ಪಡೆಯಿತು.
ಸತ್ಯವೇದದಲ್ಲಿ, ಶದ್ರಕ್ ಮೇಷಕ್ ಅಬೇದೆನೆಗೋ ಎಂಬವರು ಜ್ಞಾನ, ಬುದ್ಧಿವಂತಿಕೆ ಮತ್ತು ಉತ್ತಮ ಮೈಕಟ್ಟು ಹೊಂದಿದ್ದ ವ್ಯಕ್ತಿಗಳಾಗಿದ್ದರು. ಅವರು ತಮ್ಮ ದೇವರಿಗೆ ಮಾತ್ರ ತಲೆಬಾಗಿ, ಆತನೊಬ್ಬನಿಗೇ ಆರಾಧನೆ ಸಲ್ಲಿಸಿ ಬದುಕಲು ಉದ್ದೇಶಿಸಿದರು. ಇದಕ್ಕೆ ಬೆಂಕಿಯ ಕುಲುಮೆಯಂತಹ ಕಷ್ಟಗಳು ಎದುರಾದವು. ದೇವರು ತಮ್ಮನ್ನು ಇದರಿಂದ ಬಿಡಿಸಲು ಸಮರ್ಥನೆಂದೂ, ಬದುಕುಳಿಯದಿದ್ದರೂ ಪರವಾಗಿಲ್ಲ ಎಂದು ಹೇಳುತ್ತಾ ಅವರು ದೃಢವಾಗಿ ನಿಂತರು. ಪರಿಣಾಮವಾಗಿ, ಆ ರಾಜ್ಯದಲ್ಲಿ ರಾಜನಿಂದ ಹಿಡಿದು ಜನರವರೆಗೆ ಎಲ್ಲರೂ ದೇವರನ್ನು ತಿಳಿದುಕೊಂಡರು. ಅವರು ಉರಿಯುತ್ತಿರುವ ಕುಲುಮೆಗೆ ಹೆದರಿ ಹಿಂದೆ ಸರಿದಿದ್ದರೆ, ಆ ರಾಜ್ಯವು ಕರ್ತನನ್ನು ತಿಳಿದುಕೊಳ್ಳುತ್ತಿರಲಿಲ್ಲ. ಹೌದು, ಕಷ್ಟಗಳು ಮತ್ತು ಶೋಧನೆಗಳ ಎದುರಿನಲ್ಲಿಯೂ ಹಿಂದೆ ಸರಿಯದೆ, ಕರ್ತನಿಗಾಗಿ ದೃಢವಾಗಿ ನಿಲ್ಲುವವರ ಅವಶ್ಯಕತೆ ಇಂದಿಗೂ ಇದೆ. ಯೇಸು ಕ್ರಿಸ್ತನು ಭೂಮಿಯ ಮೇಲೆ ಜೀವಿಸಿದಾಗ, "ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ ಎಂದು ಹೇಳಿದರು. ಲೋಕವನ್ನು ಜಯಿಸಿದ ಕ್ರಿಸ್ತನು, ತನ್ನ ಮಕ್ಕಳಾದ ನಮ್ಮಲ್ಲಿ ವಿಜಯದ ಶಕ್ತಿಯನ್ನು ಇಟ್ಟಿದ್ದಾರೆ. ಆದ್ದರಿಂದ, ಈ ಜಗತ್ತಿನಲ್ಲಿ ಬರುವ ದುಃಖ, ನೋವು, ಶೋಧನೆಗಳು ಮತ್ತು ಕಾಯಿಲೆಗಳನ್ನು ನಾವು ಸಹ ಜಯಿಸಬಹುದು ಎಂದು ಅವರು ನಮ್ಮನ್ನು ಧೈರ್ಯಪಡಿಸುತ್ತಿದ್ದಾರೆ.
ಇದನ್ನು ಓದುತ್ತಿರುವ ಪ್ರಿಯರೇ! ಈ ಲೌಕಿಕ ಜೀವನದಲ್ಲಿ ಕ್ರಿಸ್ತನಿಗಾಗಿ ಏನನ್ನೂ ಸಹಿಸಿಕೊಳ್ಳಲು ಸಿದ್ಧರಾಗಿರುವವರು ನಕ್ಷತ್ರಗಳಂತೆ ಹೊಳೆಯುತ್ತಿದ್ದಾರೆ. ಹಿಂಸೆಯ ನಡುವೆಯೂ ಅನೇಕ ಮಿಷನರಿಗಳು ಕ್ರಿಸ್ತನ ಪರವಾಗಿ ದೃಢವಾಗಿ ನಿಂತರು. ನಾವು ಸಹ ಕ್ರಿಸ್ತನಿಗಾಗಿ ಧೈರ್ಯದಿಂದ ನಿಲ್ಲೋಣ. ಅದಕ್ಕಾಗಿ ಕ್ರಯಧನವನ್ನು ಕೊಡಲು ನಮ್ಮನ್ನು ಸಮರ್ಪಿಸೋಣ. ಈ ಲೋಕದಲ್ಲಿ ನಾವು ಕ್ರಿಸ್ತನಿಗಾಗಿ ಪಡುವ ಎಲ್ಲಾ ಪ್ರಯಾಸಗಳಿಗೂ ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಪ್ರತಿಫಲ ಉಂಟು ಎಂಬುದನ್ನು ನಾವು ಎಂದಿಗೂ ಮರೆಯಲೇಬಾರದು. ಆದ್ದರಿಂದ ಬಳಲಿ ಹೋಗದೆ ಉತ್ಸಾಹದಿಂದ ಓಡೋಣ. ಹಲ್ಲೇಲೂಯಾ.
- Sis.ಎಸ್ತೇರ್ ಸೆಲ್ವಿ
ಪ್ರಾರ್ಥನಾ ಅಂಶ:
ಮಕ್ಕಳು VBS ಸೇವೆಯ ಮೂಲಕ ಕ್ರಿಸ್ತನ ಪ್ರೀತಿಯನ್ನು ಮಾತ್ರವಲ್ಲದೆ ಸದ್ಗುಣಗಳನ್ನು ಸಹ ಕಲಿಯುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482