Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.05.2025
Share:

By Village Missionary Movement

Monday, 26-May-2025

ಧೈನಂದಿನ ಧ್ಯಾನ(Kannada) – 26.05.2025

 

ತಾಳ್ಮೆಯ ಪ್ರತಿರೂಪ

 

"...ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ..." - ಮತ್ತಾಯ 11:29

 

ಚೆನ್ನೈನಲ್ಲಿ ಒಂದು ಕ್ಯಾಥೋಲಿಕ್ ಧ್ಯಾನ ಆಶ್ರಮವಿದೆ. ಇದು ಅನೇಕ ಕೊಠಡಿಗಳನ್ನು ಹೊಂದಿದೆ. ಕ್ಯಾಥೋಲಿಕ್ ಬಿಷಪ್‌ಗಳು ಕೆಲವೊಮ್ಮೆ ಅಲ್ಲಿಗೆ ಬಂದು ಏಕಾಂಗಿಯಾಗಿ ಧ್ಯಾನ ಮಾಡುತ್ತಾರೆ. ಎಫ್‌ಎಂಪಿಬಿ ಸಹೋದರ ಪ್ಯಾಟ್ರಿಕ್ ಜಾಸ್ವಾ ಕೂಡ ಎರಡು ಅಥವಾ ಮೂರು ದಿನಗಳವರೆಗೆ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದು ಮಿಷನರಿ ಕೆಲಸದ ಸ್ಥಳಗಳಿಗೆ ಹೋಗಲು ಸಾಧ್ಯವಾಗದಿದ್ದಾಗ ಅಲ್ಲಿ ಪ್ರಾರ್ಥಿಸುತ್ತಿದ್ದರು. ಒಮ್ಮೆ, ಅವರು ಅಲ್ಲಿ ತಂಗಿದ್ದಾಗ, ಬನಿಯನ್ ಮತ್ತು ಲುಂಗಿಯನ್ನು ಧರಿಸಿದ ಒಬ್ಬ ವ್ಯಕ್ತಿ ಪ್ರತಿದಿನ ಕೋಣೆಯನ್ನು ಸ್ವಚ್ಛಗೊಳಿಸಿ, ಹಳೆಯ ನೀರನ್ನು ಬದಲಾಯಿಸಿ ಹೊಸ ನೀರನ್ನು ಇಡುತ್ತಿದ್ದರು. ಪ್ಯಾಟ್ರಿಕ್ ಅಣ್ಣ ಅವರಿಗೆ ಧನ್ಯವಾದ ಹೇಳಿ, "ಇಲ್ಲಿ ನೀವು ಏನಾಗಿದ್ದೀರಿ?" ಎಂದು ಕೇಳಿದರಂತೆ. "ನಾನು ಲೊಯೊಲಾ ಕಾಲೇಜಿನ ಪ್ರಾಂಶುಪಾಲನಾಗಿದ್ದೇನೆ. ಕೆಲವೊಮ್ಮೆ ಇಲ್ಲಿಗೆ ಬಂದು ಆಶ್ರಮದ ಸೇವೆ ಮಾಡಲು ನನ್ನನ್ನು ಅರ್ಪಿಸಿಕೊಂಡಿದ್ದೇನೆ" ಎಂದರಂತೆ. ಕಾಲೇಜಿನ ಪ್ರಾಂಶುಪಾಲರಾಗಿದ್ದರೂ, ಅವರ ಶಿಕ್ಷಣ, ಸ್ಥಾನಮಾನ, ಪದವಿ ಇದ್ಯಾವುದನ್ನೂ ಲೆಕ್ಕಿಸದೆ, ಆಶ್ರಮದಲ್ಲಿ ಕೆಲಸ ಮಾಡುವ ಅವರ ಸಮರ್ಪಣೆ ಪ್ಯಾಟ್ರಿಕ್ ಜಸ್ವಾ ಅವರನ್ನು ಬಹಳವಾಗಿ ಪ್ರಭಾವಿಸಿತು.  

 

ನಾವು ಯೋಹಾನ 13 ನೇ ಅಧ್ಯಾಯದಲ್ಲಿ ನೋಡಿದಾಗ, ಯೇಸು ತನ್ನ 12 ಶಿಷ್ಯರೊಂದಿಗೆ ಇದ್ದಾರೆ. ಇದ್ದಕ್ಕಿದ್ದಂತೆ, ಅವರು ಶಿಷ್ಯರ ಪಾದಗಳನ್ನು ತೊಳೆಯಲು ಸಿದ್ಧರಾದರು. ಎಂತಹ ತಾಳ್ಮೆಯ ಸಂಕೇತ. ಕರ್ತನಾದ ಯೇಸು ನಮ್ಮನ್ನು ಏನನ್ನೂ ಮಾಡಲು ಒತ್ತಾಯಿಸುವ ದೇವರಲ್ಲ. 12 ಜನ ಶಿಷ್ಯರು ನೋಡುವಂತೆ ತಾನು ಶಿಷ್ಯರ ಪಾದಗಳನ್ನು ತೊಳೆದರು. ಶಿಷ್ಯರು ಸಹ ಯೇಸು ಮಾಡಿದ್ದನ್ನು ನೋಡುತ್ತಲೇ ಇದ್ದರು.

 

ಇದನ್ನು ಓದುತ್ತಿರುವ ಸ್ನೇಹಿತರೇ! ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿದ್ದೇನೆ ಎಂದು ಯೇಸುಕ್ರಿಸ್ತನು ಹೇಳುತ್ತಾರೆ. ಕ್ರೈಸ್ತ ಜೀವನದಲ್ಲಿ ತಾಳ್ಮೆಯನ್ನು ಧರಿಸಿಕೊಳ್ಳೋಣ. ತಾಳ್ಮೆಯಿಂದಿರುವವರು ಮಾತ್ರವೇ ಆಶೀರ್ವಾದಗಳನ್ನು ಪಡೆಯುತ್ತಾರೆ. ಆತನು ದೀನರಿಗೆ ಕೃಪೆಯನ್ನು ಅನುಗ್ರಹಿಸುತ್ತಾನೆಂದು ಸತ್ಯವೇದವು ಹೇಳುತ್ತದೆ. ನಾವು ಸಹ ಯೇಸುವಿನಂತೆ ಪ್ರತಿದಿನವೂ ತಾಳ್ಮೆಯಿಂದಿರಲು ಕಲಿಯೋಣ. ಯೇಸುವಿನೊಂದಿಗಿದ್ದ ಶಿಷ್ಯರು ತಾಳ್ಮೆಯಿಂದ ಇದ್ದುದರಿಂದಲೇ ಅವರು ಪ್ರಪಂಚದಾದ್ಯಂತ ಉಪಯೋಗಿಸಲ್ಪಟ್ಟರು. ನಾವು ಕೂಡ ಈ ಲೋಕಕ್ಕೆ ಉಪ್ಪಾಗಿ ಮತ್ತು ಬೆಳಕಾಗಿ ಮಾರ್ಪಡಬೇಕಾದರೆ, ನಮಗೆ ಖಂಡಿತವಾಗಿಯೂ ತಾಳ್ಮೆ ಬೇಕು!

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

VBS ಸೇವೆಯ ಮೂಲಕ ಭೇಟಿಯಾದ ಮಕ್ಕಳು ಕ್ರಿಸ್ತನ ಪ್ರೀತಿಯಿಂದ ತುಂಬಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş holiganbet giriş çarkbet çarkbet giriş