By Village Missionary Movement
Tuesday, 03-Jun-2025ಧೈನಂದಿನ ಧ್ಯಾನ(Kannada) – 03.06.2025
ಬೀದಿಗೆ ಬಾ
"ಚದರಿಹೋದವರು ಅಲ್ಲಲ್ಲಿ ಹೋಗಿ ಸುವಾರ್ತಾವಾಕ್ಯವನ್ನು ಸಾರುತ್ತಿದ್ದರು" - ಅಪೊಸ್ತಲ 8:4
ಒಮ್ಮೆ ಸಮುದ್ರದಲ್ಲಿ ಸಿಲುಕಿ ತವಕಿಸುತ್ತಿದ್ದವರನ್ನು ರಕ್ಷಿಸಲು 'ಜೀವರಕ್ಷಕ ರಕ್ಷಣಾ ತಂಡ'ವನ್ನು ರಚಿಸಲಾಯಿತು. ಆರಂಭಿಕ ದಿನಗಳಲ್ಲಿ, ಆ ರಕ್ಷಣಾ ತಂಡದ ಕೆಲಸವು ನಿಸ್ವಾರ್ಥ ಮತ್ತು ಅದ್ಭುತವಾಗಿತ್ತು. ಒಂದು ಕಾಲದಲ್ಲಿ, ಅವರು ದೊಡ್ಡ ಕಟ್ಟಡಗಳನ್ನು ನಿರ್ಮಿಸಿದರು ಮತ್ತು ಗೋಡೆಗಳ ಮೇಲೆ ತಮ್ಮ ಸಾಧನೆಗಳ ಚಿತ್ರಗಳನ್ನು ನೇತುಹಾಕಿದರು, ತಮ್ಮನ್ನು ಹೆಮ್ಮೆಪಡಿಸಿಕೊಂಡರು. ಆರಂಭಿಸಲ್ಪಟ್ಟ ಉದ್ದೇಶ ಬದಲಾಯಿತು. ಬಹುತೇಕ ಇಂದಿನ ಚರ್ಚುಗಳು ಹೀಗೆಯೇ ಕಾಣಲ್ಪಡುತ್ತಿವೆ.
ಪಾಪದಲ್ಲಿಯೂ ಮತ್ತು ಶಾಪದಲ್ಲಿಯೂ ಸಿಲುಕಿಕೊಂಡು ನೇರವಾಗಿ ನರಕಕ್ಕೆ ಹೋಗುವ ಜನರಿಗೆ ಸುವಾರ್ತೆಯನ್ನು ಸಾರುವ ಬದಲು, ಇಂದಿನ ಚರ್ಚುಗಳು ಆ ದಿನಗಳಲ್ಲಿ ಅವರು ಮಾಡಿದ್ದರ ಬಗ್ಗೆ ಹೆಮ್ಮೆಪಡುವ ಪ್ರದರ್ಶನ ಸಭಾಂಗಣಗಳಾಗಿ ಕಂಡುಬರುತ್ತಿವೆ. ಜನರನ್ನು ಹುಡುಕಲು ಮತ್ತು ಸುವಾರ್ತೆಯನ್ನು ಸಾರಲು ನಾವು ಹಳ್ಳಿಗಳು ಮತ್ತು ಬೀದಿಗಳಿಗೆ ಹೋಗಬೇಕೆಂದು ಕರ್ತನು ನಿರೀಕ್ಷಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕರ್ತನು ನನ್ನ ಹೃದಯದಲ್ಲಿ ಪದೇ ಪದೇ ಪ್ರಭಾವ ಬೀರುತ್ತಿರುವ ಸಂದೇಶ ಇದು. ಅನ್ಯಜನರೊಂದಿಗೆ ಯೇಸುವಿನ ಬಗ್ಗೆ ಮಾತನಾಡಲು ಚರ್ಚುಗಳು ಬೀದಿಗಳಿಗೆ ಹೋಗಬೇಕು. ಬೀದಿಗಳಿಗೆ ಹೋಗಲು ಇಷ್ಟವಿಲ್ಲದ ಚರ್ಚುಗಳನ್ನು (ಕ್ರೈಸ್ತರನ್ನು) ಕರ್ತನೇ ಬೀದಿಗೆ ತಂದು ಬಿಡುತ್ತಾರೆ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಸುವಾರ್ತೆಯನ್ನು ಸಾರುವುದು ನಮ್ಮ ಕರ್ತವ್ಯ. "ನಾನು ಸುವಾರ್ತೆಯನ್ನು ಸಾರದಿದ್ದರೆ ನನಗೆ ಅಯ್ಯೋ" ಎಂಬ ಪೌಲನ ಮಾತುಗಳನ್ನು ನಾವು ಮರೆಯಬಾರದು.
(1 ಕೊರಿಂಥ. 9:16)
ಆದಿ ಸಭೆಗಳಲ್ಲಿ, ಸುವಾರ್ತೆಯನ್ನು ಸಾರಬೇಕಾಗಿದ್ದ ಕ್ರೈಸ್ತರು ಅದನ್ನು ಮರೆತವರಾಗಿ ಪ್ರಾರ್ಥಿಸುವುದು ಮತ್ತು ಸತ್ಯವೇದವನ್ನು ಬೋಧಿಸುವುದರ ಮೇಲೆ ಮಾತ್ರವೇ ಗಮನಹರಿಸಿದರು. ಕರ್ತನು ಅವರನ್ನು ಚದುರಿಸಿ ಅನ್ಯಜನರನ್ನು ಭೇಟಿಯಾಗಲು ಮತ್ತು ಸುವಾರ್ತೆಯನ್ನು ಸಾರಲು ಕಳುಹಿಸಿದರು ಎಂದು ನಾವು ಮೇಲಿನ ವಚನದಲ್ಲಿ ನೋಡಬಹುದು. ಹೌದು, ಆದಿ ಸಭೆಗಳು ಸ್ಥಾಪನೆಯಾದ ದಿನಗಳಲ್ಲಿ, ಅವರು ಹೊರಗಿನ ಜನರನ್ನು ಭೇಟಿಯಾಗುವುದಕ್ಕಿಂತ ನಾಲ್ಕು ಗೋಡೆಗಳ ಒಳಗೆ ಇರುವ ಕ್ರೈಸ್ತರಿಗೆ ಪ್ರಸಂಗ ಮಾಡುವುದನ್ನೇ ವಿಶೇಷವಾಗಿ ಯೋಚಿಸಿದರು. ಪರಿಣಾಮವಾಗಿ, ಸಭೆಗಳಿಗೆ ತೀವ್ರ ಕಿರುಕುಳ ಬಂದಿತು ಮತ್ತು ಸಭೆಗಳು ಚದುರಿಹೋದವು. ಚದುರಿಹೋದವರು ಎಲ್ಲೆಡೆ ಅಲೆದಾಡಿ ಸುವಾರ್ತೆಯನ್ನು ಸಾರಿದರು.
ಕರ್ತನು, ನಾವು ಜನರನ್ನು ನೇರವಾಗಿ ಭೇಟಿಯಾಗಿ ಸೇವೆ ಮಾಡಬೇಕು ಎಂಬುದನ್ನೇ ಬಯಸುತ್ತಿದ್ದಾರೆ ಎಂದು ಸತ್ಯವೇದ ನಮಗೆ ಹೇಳುತ್ತಿದೆ. ಅನ್ಯ ಜನರನ್ನು ಭೇಟಿಯಾಗದೆ ಕ್ರೈಸ್ತರಿಗೆ ಮಾತ್ರ ಸೇವೆ ಸಲ್ಲಿಸುವ ಚರ್ಚುಗಳನ್ನು ಬೀದಿಗಳಿಗೆ ತರಲು ದೇವರು ಸಿದ್ಧರಿದ್ದಾರೆ. ನಾವು ಹಳ್ಳಿಗಳಲ್ಲಿ ಮತ್ತು ಬೀದಿಗಳಲ್ಲಿ ಮನೆಯಿಂದ ಮನೆಗೆ ಹೋಗಿ ತನ್ನ ಪ್ರೀತಿಯ ಸುವಾರ್ತೆಯನ್ನು ಘೋಷಿಸಬೇಕೆಂದು ದೇವರು ನಿರೀಕ್ಷಿಸುತ್ತಿದ್ದಾರೆ. ಅದನ್ನು ಮಾಡುವಂತೆ ನಮ್ಮನ್ನು ಸಮರ್ಪಿಸೋಣವಾ?
- Bro. ಡೇವಿಡ್ ಗಣೇಶನ್
ಪ್ರಾರ್ಥನಾ ಅಂಶ:
ಮಿಷನರಿ ಮಕ್ಕಳ ಶೈಕ್ಷಣಿಕ ಅಗತ್ಯಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482