Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.06.2025
Share:

By Village Missionary Movement

Wednesday, 04-Jun-2025

ಧೈನಂದಿನ ಧ್ಯಾನ(Kannada) – 04.06.2025

 

ಅನಾಥರು

 

"...ದೇವರು ದಿಕ್ಕಿಲ್ಲದವರಿಗೆ ತಂದೆಯೂ ವಿಧವೆಯರಿಗೆ ಸಹಾಯಕನೂ ಆಗಿದ್ದಾನೆ" - ಕೀರ್ತನೆ 68:5

 

ಇಂದು ನಾವು ಅನಾಥರನ್ನು, ಅಂದರೆ ದಿಕ್ಕಿಲ್ಲದವರು ಮತ್ತು ನಿರ್ಗತಿಕರನ್ನು ನೋಡುತ್ತೇವೆ. ಈ ಶತಮಾನದಲ್ಲಿ, ಅನಾಥಾಶ್ರಮಗಳು ಮತ್ತು ನರ್ಸಿಂಗ್ ಹೋಂಗಳು ಹಿಂದೆಂದಿಗಿಂತಲೂ ಹೆಚ್ಚು ಹೆಚ್ಚುತ್ತಿರುವುದನ್ನು ನಾವು ನೋಡಬಹುದು. ಹುಟ್ಟಿನಿಂದ ಮತ್ತು ಪರಿಸ್ಥಿತಿಯಿಂದ ನಿರ್ಗತಿಕರಾಗಿರುವವರು ಅನೇಕರಿದ್ದಾರೆ. ಸತ್ಯವೇದವು 44 ಕಡೆ ಅನಾಥರ ಬಗ್ಗೆ ಉಲ್ಲೇಖಿಸಿದೆ. ನಮ್ಮ ದೇವರು ಅನಾಥರಿಗೆ ತಂದೆಯಾಗಿ ಕಾಣುತ್ತಿದ್ದಾರೆ.

 

"ಅಡಾಪ್ಟೆಡ್ ಫಾರ್ ಲೈಫ್" ಪುಸ್ತಕದ ಲೇಖಕ ರಸೆಲ್ ಮೂರ್ ಒಮ್ಮೆ ಅನಾಥ ಮಕ್ಕಳ ದತ್ತು ಕೇಂದ್ರವನ್ನು ಪ್ರವೇಶಿಸಿದಾಗ, ಅಲ್ಲಿ ದೊಡ್ಡ ಮೌನವಿತ್ತು. ತೊಟ್ಟಿಲಲ್ಲಿ ಮಲಗಿದ್ದ ಒಂದೇ ಒಂದು ಮಗುವೂ ಅಳುತ್ತಿರಲಿಲ್ಲ. ಅವುಗಳಿಗೆ ಏನೂ ಅಗತ್ಯವಿಲ್ಲದ ಕಾರಣವಲ್ಲ, ಅವುಗಳು ಅತ್ತರೂ ಯಾರೂ ಆ ಮಕ್ಕಳನ್ನು ಗಮನಿಸುವುದಿಲ್ಲ ಎಂಬುದರಿಂದ ಆ ಮಕ್ಕಳು ತೊಟ್ಟಿಲಲ್ಲಿ ಮೌನವಾಗಿದ್ದವು. ವಿಚಾರಿಸಿ ಲಾಲಿಸಲು ಯಾರೂ ಇಲ್ಲದ ಸ್ಥಿತಿಯಲ್ಲಿರುವ ಆ ಅಸಹಾಯಕ ಮಕ್ಕಳನ್ನು ನೋಡಲು ಬನ್ನಿ ಎಂದು ಈ ಬರಹಗಾರ ಹೇಳುತ್ತಾರೆ. 

 

2 ಸಮುವೇಲ 4:4 ರಲ್ಲಿ, ನಾವು ಮೆಫೀಬೋಶೆತ್ ಬಗ್ಗೆ ಓದುತ್ತೇವೆ. ಅವರು ಸೌಲನ ಮಗನಾದ ಯೋನಾತಾನನ ಮಗ. ಇವರು ಎರಡೂ ಕಾಲು ನಡೆಯಲು ಸಾಧ್ಯವಾಗದ ಕುಂಟನಾಗಿ ಕಾಣಲ್ಪಟ್ಟರು. ತಾಯಿ ತಂದೆಯನ್ನು ಕಳೆದುಕೊಂಡು ಒಂಟಿಯಾಗಿ ಕೈಬಿಡಲ್ಪಟ್ಟ ಸ್ಥಿತಿಯಲ್ಲಿದ್ದ ಮೆಫೀಬೋಶೆತನನ್ನು ಅರಸನಾದ ದಾವೀದನು ಪೋಷಿಸುತ್ತಾ ಬಂದರು. ಅರಸನಾದ ದಾವೀದನು ಅವನಿಗೆ ಉತ್ತಮ ಜೀವನವನ್ನು ಒದಗಿಸಿದನು, ಅವನು ತನ್ನ ಅರಮನೆಯಲ್ಲಿ ವಾಸಿಸಲು ಮತ್ತು ಪ್ರತಿದಿನ ತನ್ನೊಂದಿಗೆ ಊಟ ಮಾಡಲು ಅವಕಾಶ ಮಾಡಿಕೊಟ್ಟರು. ದಾವೀದನ ಕಾಳಜಿಯುಳ್ಳ ಹೃದಯವನ್ನು ನೋಡಿರಿ!

 

ಪ್ರಿಯರೇ, ದಿಕ್ಕಿಲ್ಲದ ಜನರನ್ನು ಹುಡುಕಿ ಅವರನ್ನು ವಿಚಾರಿಸಲು ನಮ್ಮ ದೇವರು ಇಷ್ಟಪಡುತ್ತಿದ್ದಾರೆ. ಮತ್ತು ಅಪೊಸ್ತಲನಾದ ಯಾಕೋಬನು ತನ್ನ ಪತ್ರಿಕೆಯಲ್ಲಿ, "ದಿಕ್ಕಿಲ್ಲದವರು, ವಿಧವೆಯರು ಅನುಭವಿಸುವ ಉಪದ್ರವದಲ್ಲಿ ಅವರನ್ನು ವಿಚಾರಿಸುವುದು, ಲೋಕದಿಂದ ತನಗೆ ಯಾವುದೇ ಕಲ್ಮಶಗಳು ಅಂಟಿಕೊಳ್ಳದಂತೆ ತನ್ನನ್ನು ಕಾಪಾಡಿಕೊಳ್ಳುವುದೇ ತಂದೆಯಾದ ದೇವರ ಮುಂದೆ ಕಳಂಕವಿಲ್ಲದ ನಿರ್ಮಲವಾದ ಭಕ್ತಿಯಾಗಿದೆ" ಎಂದು ಬರೆಯುತ್ತಾರೆ. ನಮ್ಮ ಸುತ್ತಲಿರುವ ಅನಾಥರಿಗಾಗಿ ಪ್ರಾರ್ಥಿಸೋಣ. ಕರುಣೆಯಿಂದ ನಮಗೆ ಸಾಧ್ಯವಾದಷ್ಟು ಅವರಿಗೆ ಸಹಾಯ ಮಾಡೋಣ. ಕರ್ತನು ನಮ್ಮನ್ನು ಆಶೀರ್ವದಿಸಲಿ.

- P.ಜಾಕೋಬ್ ಶಂಕರ್

 

ಪ್ರಾರ್ಥನಾ ಅಂಶ:

50 ಸ್ಥಳಗಳಲ್ಲಿ ಹೊಸದಾಗಿ ಟ್ಯೂಷನ್ ಕೇಂದ್ರಗಳು ಆರಂಭಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet